ಬಾಂಬೆ ಬೇಗಮ್ಸ್ ಚಿತ್ರಕ್ಕೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ನೋಟಿಸ್

|

Updated on: Mar 13, 2021 | 4:10 PM

ಚಿಕ್ಕ ಮಕ್ಕಳು ಮಾದಕ ವಸ್ತು ಸೇವನೆ ಮಾಡುವ ದೃಶ್ಯಗಳು ಯುವ ಜನತೆಯಲ್ಲಿ ತಪ್ಪು ಸಂದೇಶ ಬಿತ್ತುತ್ತವೆ. ಇಂತಹ ದೃಶ್ಯಗಳನ್ನು ಹೊಂದಿರುವ ಸರಣಿಗಳನ್ನು ಪ್ರಸಾರ ಮಾಡಬಾರದು ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಭಿಪ್ರಾಯ ವ್ಯಕ್ತಪಡಿಸಿದೆ.

ಬಾಂಬೆ ಬೇಗಮ್ಸ್ ಚಿತ್ರಕ್ಕೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ನೋಟಿಸ್
ಐವರು 'ಬೇಗಮ್ಸ್'ಗಳ ಪೈಕಿ ಕನ್ನಡತಿ ಆಧ್ಯಾ ಆನಂದ್ ಕೂಡ ಒಬ್ಬರಾಗಿದ್ದಾರೆ ಎಂಬುದು ವಿಶೇಷ.
Follow us on

ದೆಹಲಿ: ನೆಟ್​ಫ್ಲಿಕ್ಸ್​ನ ಬಾಂಬೆ ಬೇಗಮ್ಸ್ (Bombay Begums) ವೆಬ್ ಸರಣಿಯ ಪ್ರಸಾರವನ್ನು ನಿಲ್ಲಿಸಲು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನಿನ್ನೆ ಸೂಚನೆ ಸೂಚನೆ ನೀಡಿದೆ. ಮಕ್ಕಳನ್ನು ಅನುಚಿತವಾಗಿ ತೋರಿಸಲಾಗಿದೆ ಎಂದು ದೂರಿರುವ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ( NCPCR) ನೆಟ್​ಫ್ಲಿಕ್ಸ್​ಗೆ ನೋಟಿಸ್ ಜಾರಿಗೊಳಿಸಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕಾರ್ಯನಿರ್ವಹಿಸುತ್ತದೆ.

ಬಾಂಬೆ ಬೇಗಮ್ಸ್​ನಲ್ಲಿ ಮಕ್ಕಳನ್ನು ಸಮಂಜಸವಾಗಿ ಬಿಂಬಿಸಿಲ್ಲ ಎಂದು ದೂರಿರುವ NCPCR ವೆಬ್ ಸರಣಿಯಲ್ಲಿ ಮಕ್ಕಳು ಮಾದಕ ವಸ್ತುಗಳ ಸೇವನೆ ಮಾಡುವ ದೃಶ್ಯಗಳಿವೆ. ಈ ದೃಶ್ಯಗಳ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದು, ತಕ್ಷಣ ವೆಬ್ ಸರಣಿಯ ಪ್ರಸಾರ ನಿಲ್ಲಿಸಲು ತಾಕೀತು ನೀಡಿದೆ. ಅಲ್ಲದೇ ನಿನ್ನೆ ನೀಡಿರುವ ನೋಟಿಸ್​ಗೆ 24 ಗಂಟೆಗಳಲ್ಲಿ ಉತ್ತರ ನೀಡುವಂತೆಯೂ ಸೂಚಿಸಲಾಗಿದೆ.

ಚಿಕ್ಕ ಮಕ್ಕಳು ಮಾದಕ ವಸ್ತು ಸೇವನೆ ಮಾಡುವ ದೃಶ್ಯಗಳು ಯುವ ಜನತೆಯಲ್ಲಿ ತಪ್ಪು ಸಂದೇಶ ಬಿತ್ತುತ್ತವೆ. ಇಂತಹ ದೃಶ್ಯಗಳನ್ನು ಹೊಂದಿರುವ ಸರಣಿಗಳನ್ನು ಪ್ರಸಾರ ಮಾಡಬಾರದು ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಭಿಪ್ರಾಯ ವ್ಯಕ್ತಪಡಿಸಿದೆ. ಬಾಂಬೆ ಬೇಗಮ್ಸ್ ಕಳೆದ ವಾರವಷ್ಟೇ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಯಾಗಿತ್ತು. ಮುಂಬೈನ ಆಧುನಿಕ ಜಗತ್ತಿನಲ್ಲಿ ಮಹಿಳೆಯರು ಒಗ್ಗಿಕೊಳ್ಳುವ ಕಥೆಯನ್ನು ಹೊಂದಿರುವ ಈ ವೆಬ್ ಸರಣಿಯು ಐವರು ಮುಖ್ಯ ಕಥಾ ನಾಯಕಿಯರನ್ನು ಹೊಂದಿತ್ತು. ​

ಬಾಂಬೆ ಬೇಗಮ್ಸ್​ನಲ್ಲಿ ಇದ್ದಾರೆ ಕನ್ನಡತಿ!

ಮಾರ್ಚ್ 8ರ ಮಹಿಳಾ ದಿನದಂದು ನೆಟ್‌ಫ್ಲಿಕ್ಸ್ ನಲ್ಲಿ (Netflix) ಬಿಡುಗಡೆಗೊಳ್ಳಲಿರುವ ‘ಬಾಂಬೆ ಬೇಗಮ್ಸ್’ ಸರಣಿಯಲ್ಲಿ ಕನ್ನಡತಿಯೊಬ್ಬರು ಕಾಣಿಸಿಕೊಂಡಿದ್ದಾರೆ.  ‘ಬಾಂಬೆ ಬೇಗಮ್ಸ್’ನ (Bombay Begums) ಟ್ರೇಲರ್ ಬಿಡುಗಡೆಗೊಂಡಿದ್ದು,‘ಶಾಯ್ ಇರಾನಿ’ಯಾಗಿ ಉತ್ತರ ಕನ್ನಡ ಮೂಲದ ಆಧ್ಯಾ ಅನಂದ್ ನಟಿಸಿದ್ದಾರೆ. ಸಿಂಗಾಪುರ್‌ನಲ್ಲಿನ ಹಲವು ಜಾಹೀರಾತು, ಚಲನಚಿತ್ರ, ಕಿರುಚಿತ್ರ ಹಾಗೂ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದ್ದ ಉತ್ತರ ಕನ್ನಡ ಮೂಲದ ಆಧ್ಯಾ ಆನಂದ್, ಬಾಲಿವುಡ್ ನಿರ್ದೇಶಕಿ ಅಲಂಕೃತ ಶ್ರೀವಾಸ್ತವ ಅವರ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ‘ಬಾಂಬೆ ಬೇಗಮ್ಸ್’ ಸರಣಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಆಧುನಿಕ ಮುಂಬೈನ ಐವರು ವಿವಿಧ ಕ್ಷೇತ್ರದ ಮಹಿಳೆಯರ ಸುತ್ತ ಹೆಣೆದುಕೊಂಡಿರುವ ‘ಬಾಂಬೆ ಬೇಗಮ್ಸ್’ನಲ್ಲಿ ಪೂಜಾ ಭಟ್, ಶಹಾನಾ ಗೋಸ್ವಾಮಿ, ಅಮೃತಾ ಸುಭಾಷ್, ಪ್ಲಬಿತಾ ಬೋರ್‌ಠಾಕೂರ್ ಸೇರಿದಂತೆ ಐವರು ಮುಖ್ಯ ಭೂಮಿಕೆಯಲ್ಲಿದ್ದಾರೆ. ಐವರು ‘ಬೇಗಮ್ಸ್’ಗಳ ಪೈಕಿ ಕನ್ನಡತಿ ಆಧ್ಯಾ ಆನಂದ್ ಕೂಡ ಒಬ್ಬರಾಗಿದ್ದಾರೆ ಎಂಬುದು ವಿಶೇಷ.

ಸಿಂಗಾಪುರ್ ನಲ್ಲಿ ನೆಲೆಸಿರುವ ಉತ್ತರ ಕನ್ನಡ ಮೂಲದ ಪ್ರಿಯಾ ನಾಯಕ ಹಾಗೂ ಆನಂದ್ ನಾಯಕ ಅವರ ಪುತ್ರಿಯಾಗಿರುವ ಆಧ್ಯಾ ಹುಟ್ಟಿದ್ದು ಮಡಿಕೇರಿಯಲ್ಲಾದರೂ ಬೆಳೆದಿದ್ದು ಸಿಂಗಾಪುರ್‌ನಲ್ಲಿ. ತಮ್ಮ 7ನೇ ವಯಸ್ಸಿನಲ್ಲೇ ಆ್ಯಕ್ಟಿಂಗ್, ಮಾಡೆಲಿಂಗ್, ಡ್ಯಾನ್ಸಿಂಗ್ ಹಾಗೂ ಬ್ಯಾಡ್ಮಿಂಟನ್‌ನಲ್ಲಿ ಆಸಕ್ತಿ ತೋರಿದ ಈಕೆ, ಸಿಂಗಾಪುರ್ ನಲ್ಲಿ ರಂಗಭೂಮಿ ತರಬೇತಿ ಹಾಗೂ ಬಾಲಿವುಡ್ ನ ಅನುಪಮ್ ಖೇರ್ ಮತ್ತು ಅತುಲ್ ಮೊಂಗಿಯಾ ಅವರ ಇನ್ ಸ್ಟಿಟ್ಯೂಟ್ ನಲ್ಲೂ ತರಬೇತಿ ಪಡೆದಿದ್ದಾರೆ. ಪ್ರತಿಷ್ಠಿತ ಕೇನ್ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್- 2017ರಲ್ಲಿ ಪ್ರದರ್ಶನ ಕಂಡಿದ್ದ ‘ಎ ಯೆಲ್ಲೋ ಬರ್ಡ್’ ಸಿನೇಮಾ, ‘ಒನ್ ಅವರ್ ಟು ಡೇಲೈಟ್’, ‘ಸ್ಕೈಸಿಟಿ’ಯಂಥ ಕಿರುಚಿತ್ರಗಳಲ್ಲಿ ಕೂಡ ನಟಿಸಿದ್ದರು.

ಇದನ್ನೂ ಓದಿ:Explainer | ಒಟಿಟಿಯವರಿಗೆ ಕನ್ನಡದ ಮೇಲೇಕೆ ನಿರ್ಲಕ್ಷ್ಯ? ಯಾರನ್ನು ದೂಷಿಸೋದು?