AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

75 ರೂ. ಟಿಕೆಟ್​ ಆಫರ್​: ಟಿಕೆಟ್ ಕಾಯ್ದಿರಿಸಲು ಮುಗಿಬಿದ್ದ ಪ್ರೇಕ್ಷಕರು; ಬಹುತೇಕ ಶೋಗಳು ಸೋಲ್ಡ್​ಔಟ್

ಇತ್ತೀಚೆಗೆ ತೆರೆಗೆ ಬಂದ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ನಟನೆಯ ‘ಬ್ರಹ್ಮಾಸ್ತ್ರ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಈ ಚಿತ್ರಕ್ಕೆ 75 ರೂಪಾಯಿ ಟಿಕೆಟ್ ಆಫರ್ ವರದಾನವಾಗಿದೆ.

75 ರೂ. ಟಿಕೆಟ್​ ಆಫರ್​: ಟಿಕೆಟ್ ಕಾಯ್ದಿರಿಸಲು ಮುಗಿಬಿದ್ದ ಪ್ರೇಕ್ಷಕರು; ಬಹುತೇಕ ಶೋಗಳು ಸೋಲ್ಡ್​ಔಟ್
TV9 Web
| Edited By: |

Updated on:Sep 22, 2022 | 8:36 PM

Share

ಒಟಿಟಿ (OTT) ವ್ಯಾಪ್ತಿ ಹೆಚ್ಚಿದ ನಂತರದಲ್ಲಿ ಸಿನಿಮಾ ನೋಡಲು ಥಿಯೇಟರ್​ಗೆ ಹೋಗುವವರ ಸಂಖ್ಯೆ ಸ್ವಲ್ಪ ಕಡಿಮೆ ಆಗಿದೆ ಎಂಬುದು ಕೆಲವರ ವಾದ. ಬಾಲಿವುಡ್​ನ ದೊಡ್ಡದೊಡ್ಡ ಸಿನಿಮಾಗಳು ಮಕಾಡೆ ಮಲಗುತ್ತಿರುವುದು ನೋಡಿದರೆ ಇದು ಹೌದೆನ್ನಿಸುತ್ತದೆ. ಟಿಕೆಟ್ ದರ ಹೆಚ್ಚಿಗೆ ಇರುವುದೂ ಕೂಡ ಇದಕ್ಕೆ ಕಾರಣ ಇರಬಹುದು ಎಂದು ಕೆಲವರು ವಾದ ಮಂಡಿಸಿದ್ದಿದೆ. ಈ ವಾದಕ್ಕೆ ಪುಷ್ಟಿ ನೀಡುವಂತಿದೆ 75 ರೂಪಾಯಿ ಟಿಕೆಟ್ ದರದ ಆಫರ್. ರಾಷ್ಟ್ರೀಯ ಸಿನಿಮಾ ದಿನವನ್ನು ಸೆಪ್ಟೆಂಬರ್ 23ರಂದು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಲ್ಟಿಪ್ಲೆಕ್ಸ್​ನಲ್ಲಿ (Multiplex) ಟಿಕೆಟ್ ದರವನ್ನು 75 ರೂಪಾಯಿಗೆ ಇಳಿಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರೇಕ್ಷಕರು ಮುಗಿಬಿದ್ದು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಹಲವು ಸಿನಿಮಾಗಳ ಶೋಗಳ ಟಿಕೆಟ್​ಗಳು ಸೋಲ್ಡ್​ಔಟ್ ಆಗಿದೆ.

ಇತ್ತೀಚೆಗೆ ತೆರೆಗೆ ಬಂದ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ನಟನೆಯ ‘ಬ್ರಹ್ಮಾಸ್ತ್ರ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಈ ಚಿತ್ರಕ್ಕೆ 75 ರೂಪಾಯಿ ಟಿಕೆಟ್ ಆಫರ್ ವರದಾನವಾಗಿದೆ. ಶುಕ್ರವಾರ (ಸೆಪ್ಟೆಂಬರ್ 23) ಪ್ರೇಕ್ಷಕರು ಮುಗಿಬಿದ್ದು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಬೆಂಗಳೂರು, ಮುಂಬೈ, ದೆಹಲಿ ಸೇರಿ ಬಹುತೇಕ ಎಲ್ಲಾ ಕಡೆಗಳಲ್ಲಿ ಈ ಚಿತ್ರದ ಶೋಗಳು ಸೋಲ್ಡ್​ಔಟ್ ಆಗಿದೆ. ಅಲ್ಲದೆ, ಶೋಗಳನ್ನು ಹೆಚ್ಚಿಸುವ ಕೆಲಸ ಆಗುತ್ತಿದೆ. ಹೀಗಾಗಿ, ಸಿನಿಮಾ ಸೆಪ್ಟೆಂಬರ್ 23ರಂದು ಬಾಕ್ಸ್ ಆಫೀಸ್​ನಲ್ಲಿ ‘ಬ್ರಹ್ಮಾಸ್ತ್ರ’ ಬಂಗಾರದ ಬೆಳೆ ತೆಗೆಯುವ ಸಾಧ್ಯತೆ ಇದೆ. ಅನೇಕ ದಾಖಲೆಗಳು ಕೂಡ ನಿರ್ಮಾಣ ಆಗುವ ನಿರೀಕ್ಷೆ ಇದೆ.

‘ಗುರು ಶಿಷ್ಯರು’ ಸಿನಿಮಾ ಸೆಪ್ಟೆಂಬರ್ 23ರಂದು ತೆರೆಗೆ ಬರುತ್ತಿದೆ. ಈ ಚಿತ್ರಕ್ಕೂ ಮಲ್ಟಿಪ್ಲೆಕ್ಸ್​ನಲ್ಲಿ 75 ರೂಪಾಯಿ ಟಿಕೆಟ್ ದರ ನಿಗದಿ ಮಾಡಲಾಗಿದೆ. ಇದರಿಂದ ಚಿತ್ರದ ಕಲೆಕ್ಷನ್​​ಗೆ ಕೊಂಚ ಹೊಡೆತ ಆಗಬಹುದು ಎನ್ನಲಾಗುತ್ತಿದೆ. ಧನಂಜಯ್ ನಟನೆಯ ‘ಮಾನ್ಸೂನ್ ರಾಗ’ ಸೇರಿ ಅನೇಕ ಚಿತ್ರಗಳ ಟಿಕೆಟ್​ಗಳು ವೇಗವಾಗಿ ಬುಕ್ ಆಗುತ್ತಿದೆ.

ಇದನ್ನೂ ಓದಿ: Ranbir Kapoor: 650 ಕೋಟಿ ರೂ. ಬಜೆಟ್​ನಲ್ಲಿ ಸಿದ್ಧವಾಯ್ತಾ ‘ಬ್ರಹ್ಮಾಸ್ತ್ರ’? ಲಾಸ್​ ಎಂದವರಿಗೆ ರಣಬೀರ್​ ಕೊಟ್ರು ಉತ್ತರ

ಹಾಲಿವುಡ್​ನ ‘ಅವತಾರ್​ 2’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ಕಾರಣಕ್ಕೆ ‘ಅವತಾರ್​’ ಸಿನಿಮಾ ರೀ-ರಿಲೀಸ್ ಆಗುತ್ತಿದೆ. ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಶುಕ್ರವಾರ ಸರಿಯಾದ ಸಮಯ ಎಂಬಂತಾಗಿದೆ. ಈ ಚಿತ್ರದ ಟಿಕೆಟ್ ಬೆಲೆ ಕೂಡ ಸೆಪ್ಟೆಂಬರ್ 23ರಂದು 75 ರೂಪಾಯಿ ಇದೆ. ಹೀಗಾಗಿ, ಈ ಚಿತ್ರದ ಬಹುತೇಕ ಟಿಕೆಟ್​​ಗಳು ಆನ್​ಲೈನ್​ನಲ್ಲಿ ಮಾರಾಟವಾಗಿದೆ.

Published On - 7:59 pm, Thu, 22 September 22

Follow Us
TV9 Web
TV9 Web

TV9 Kannada

Read More
ಹಾವೇರಿಯಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಎಮರ್ಜೆನ್ಸಿ ಲ್ಯಾಂಡಿಂಗ್
ಹಾವೇರಿಯಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಎಮರ್ಜೆನ್ಸಿ ಲ್ಯಾಂಡಿಂಗ್
ಹಾಸನ ಡಿಸಿ ವಿರುದ್ಧ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಜೆಡಿಎಸ್ ದೂರು
ಹಾಸನ ಡಿಸಿ ವಿರುದ್ಧ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಜೆಡಿಎಸ್ ದೂರು
25 ಲಕ್ಷ ರೂ. ಲಂಚ ಪಡೆದು ತಹಸೀಲ್ದಾರ್ ವಂಚಿಸಿದ ಆರೋಪ
25 ಲಕ್ಷ ರೂ. ಲಂಚ ಪಡೆದು ತಹಸೀಲ್ದಾರ್ ವಂಚಿಸಿದ ಆರೋಪ
ರಸ್ತೆ ಗುಂಡಿ ಮುಚ್ಚಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದ ನಟ ವಿನೋದ್ ರಾಜ್
ರಸ್ತೆ ಗುಂಡಿ ಮುಚ್ಚಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದ ನಟ ವಿನೋದ್ ರಾಜ್
KPSC ಹಗರಣ: ಸಾಹುಕಾರ್, ಕನ್ನಾಳೆ ಜಾಮೀನು ಅರ್ಜಿ ವಜಾ; ಗೀತಾಗೆ ಜಾಮೀನು
KPSC ಹಗರಣ: ಸಾಹುಕಾರ್, ಕನ್ನಾಳೆ ಜಾಮೀನು ಅರ್ಜಿ ವಜಾ; ಗೀತಾಗೆ ಜಾಮೀನು
ಮಂಜ ಬಂದಿದ್ದೆ, ಮತ್ತೆ ರದ್ದಾಯ್ತು ಟಾಸ್ಕ್: ವಿಡಿಯೋ
ಮಂಜ ಬಂದಿದ್ದೆ, ಮತ್ತೆ ರದ್ದಾಯ್ತು ಟಾಸ್ಕ್: ವಿಡಿಯೋ
ಕರಡಿ ಬೆನ್ನಟ್ಟಿದ ಹುಲಿರಾಯ: ಅಪರೂಪದ ದೃಶ್ಯ ಕಣ್ತುಂಬಿಕೊಂಡ ಸಫಾರಿಗರು
ಕರಡಿ ಬೆನ್ನಟ್ಟಿದ ಹುಲಿರಾಯ: ಅಪರೂಪದ ದೃಶ್ಯ ಕಣ್ತುಂಬಿಕೊಂಡ ಸಫಾರಿಗರು
ನಾನು 100 ವರ್ಷ ಬದುಕಬೇಕು ಎಂದ ಸಿದ್ದರಾಮಯ್ಯ
ನಾನು 100 ವರ್ಷ ಬದುಕಬೇಕು ಎಂದ ಸಿದ್ದರಾಮಯ್ಯ
ಡಿಸಿಯೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ರು: ಜೆಡಿಎಸ್​​ ಶಾಸಕ ಆಕ್ರೋಶ
ಡಿಸಿಯೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ರು: ಜೆಡಿಎಸ್​​ ಶಾಸಕ ಆಕ್ರೋಶ
ಹಾಸನಾಂಬೆ ದರ್ಶನೋತ್ಸವ ಸಂಪನ್ನ: ಶಾಸ್ತ್ರೋಕ್ತವಾಗಿ ಗರ್ಭಗುಡಿ ಬಾಗಿಲು ಬಂದ್
ಹಾಸನಾಂಬೆ ದರ್ಶನೋತ್ಸವ ಸಂಪನ್ನ: ಶಾಸ್ತ್ರೋಕ್ತವಾಗಿ ಗರ್ಭಗುಡಿ ಬಾಗಿಲು ಬಂದ್