ವಿವಾದದಲ್ಲಿ ಸಿಲುಕಿ ಸುದ್ದಿ ಆದ ಸೆಲೆಬ್ರಿಟಿಗಳು ಇವರೇ ನೋಡಿ..

ಚಿತ್ರ ವಿಚಿತ್ರ ಕಾರಣಕ್ಕೆ ಸೆಲೆಬ್ರಿಟಿಗಳು ಟ್ರೋಲ್ ಆಗುತ್ತಾರೆ. ಈ ಸಾಲಿನಲ್ಲಿ ದಕ್ಷಿಣ ಭಾರತದ ಅನೇಕ ಸ್ಟಾರ್​​ಗಳು ಇದ್ದಾರೆ. ಅವರು ನೀಡುವ ಹೇಳಿಕೆಗಳು ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿದ್ದಿದೆ. ಆ ಸಾಲಿನಲ್ಲಿ ನಯನತಾರಾ ಮೊದಲಾದವರು ಇದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ವಿವಾದದಲ್ಲಿ ಸಿಲುಕಿ ಸುದ್ದಿ ಆದ ಸೆಲೆಬ್ರಿಟಿಗಳು ಇವರೇ ನೋಡಿ..
ವಿವಾದದಲ್ಲಿ ಸಿಲುಕಿ ಸುದ್ದಿ ಆದ ಸೆಲೆಬ್ರಿಟಿಗಳು ಇವರೇ ನೋಡಿ..
Edited By:

Updated on: Oct 03, 2023 | 10:00 AM

ಸೆಲೆಬ್ರಿಟಿಗಳಿಗೂ ವಿವಾದಕ್ಕೂ ಎಲ್ಲಿಲ್ಲದ ನಂಟು. ಅವರು ಮಾಡಿಕೊಳ್ಳುವ ವಿವಾದಗಳು ಒಂದೆರಡಲ್ಲ. ಅವರನ್ನು ಸೆಲೆಬ್ರಿಟಿಗಳು ಗಮನಿಸುತ್ತಾ ಇರುತ್ತಾರೆ. ಚಿತ್ರ ವಿಚಿತ್ರ ಕಾರಣಕ್ಕೆ ಅವರು ಟ್ರೋಲ್ ಆಗುತ್ತಾರೆ. ಈ ಸಾಲಿನಲ್ಲಿ ದಕ್ಷಿಣ ಭಾರತದ ಅನೇಕ ಸ್ಟಾರ್​​ಗಳು ಇದ್ದಾರೆ. ಅವರು ನೀಡುವ ಹೇಳಿಕೆಗಳು ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿದ್ದಿದೆ. ಆ ಸಾಲಿನಲ್ಲಿ ನಯನತಾರಾ (Nayanthara) ಮೊದಲಾದವರು ಇದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ನಯನತಾರಾ

ನಯನತಾರಾ ಅವರು ಮದುವೆ ಆದ ಕೇವಲ ಆರು ತಿಂಗಳಿಗೆ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದರು. ಮದುವೆ ಆಗಿ ಕನಿಷ್ಠ ಐದು ವರ್ಷ ಆಗಿದ್ದರೆ ಮಾತ್ರ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯಲು ಅವಕಾಶ ಭಾರತದಲ್ಲಿ ಇದೆ. ಆದರೆ, ಇವರು ಮದುವೆ ಆಗಿ ಕೇವಲ ಒಂದು ವರ್ಷದ ಒಳಗೆ ಮಗು ಪಡೆದಿದ್ದು ತಪ್ಪು ಎಂದು ಅನೇಕರು ದೂರಿದ್ದರು. ಆದರೆ, ಇವರು ಮದುವೆ ನೋಂದಣಿ ಮಾಡಿಕೊಂಡು ಆರು ವರ್ಷ ಆಗಿತ್ತು ಎಂಬುದು ಆ ಬಳಿಕ ಗೊತ್ತಾಗಿತ್ತು. ಸದ್ಯ ‘ಜವಾನ್’ ಸಿನಿಮಾ ಯಶಸ್ಸಿನ ಅಲೆಯಲ್ಲಿ ಅವರು ತೇಲುತ್ತಿದ್ದಾರೆ.

ಅಲ್ಲು ಅರ್ಜುನ್

ಅಲ್ಲು ಅರ್ಜುನ್ ಅವರು 2014ರಲ್ಲಿ ಸುದ್ದಿ ಆಗಿದ್ದರು. ಅಲ್ಲು ಅರ್ಜುನ್ ಅವರು ಪೊಲೀಸರ ಜೊತೆ ಗಲಾಟೆ ಮಾಡಿಕೊಂಡಿದ್ದರು. ಅವರು ಕುಡಿದು ಕಾರು ಡ್ರೈವ್ ಮಾಡಿ ಬರುತ್ತಿದ್ದರು ಎನ್ನಲಾಗಿದೆ. ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿತ್ತು. ಸದ್ಯ ‘ಪುಷ್ಪ 2’ ಸಿನಿಮಾ ಕೆಲಸಗಳಲ್ಲಿ ಅವರು ಬ್ಯುಸಿ ಇದ್ದಾರೆ.

ಸಾಯಿ ಪಲ್ಲವಿ

ಸಾಯಿ ಪಲ್ಲವಿ ಅವರು ಕಾಶ್ಮೀರಿ ಪಂಡಿತರ ಕುರಿತು ನೀಡಿದ ಹೇಳಿಕೆ ವಿವಾದ ಸೃಷ್ಟಿಸಿತ್ತು. ‘ದಿ ಕಾಶ್ಮೀರ್ ಫೈಲ್ಸ್’ ನೋಡಿದ ಬಳಿಕ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದರು. ‘ಈ ಹಿಂದೆ ನಡೆದ ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ಈಗ ನಡೆಯುತ್ತಿರುವ ಗುಂಪು ಹಲ್ಲೆ ಎರಡೂ ಒಂದೇ’ ಎಂದು ಹೇಳಿದ ಮಾತು ವಿವಾದಕ್ಕೆ ಕಾರಣ ಆಗಿತ್ತು.  ಆ ಬಳಿಕ ಹೇಳಿಕೆಗೆ ಅವರು ಸ್ಪಷ್ಟನೆ ಕೂಡ ನೀಡಿದ್ದರು. ಆದರೆ, ಅವರು ಕ್ಷಮೆ ಕೇಳಿಲ್ಲ.

 ಮಹೇಶ್ ಬಾಬು

ಮಹೇಶ್ ಬಾಬು ಅವರು ಬಾಲಿವುಡ್​ ಬಗ್ಗೆ ನೀಡಿದ ಹೇಳಿಕೆ ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು. ‘ಬಾಲಿವುಡ್​ಗೆ ನನ್ನನ್ನು ಭರಿಸುವ ಶಕ್ತಿ ಇಲ್ಲ. ಹೀಗಾಗಿ ನಾನು ಬಾಲಿವುಡ್​ಗೆ ಹೋಗುವುದಿಲ್ಲ’ ಎಂದು ಅವರು ಹೇಳಿದ್ದರು. ಆ ಬಳಿಕ ಅವರು ಸ್ಪಷ್ಟನೆ ನೀಡಿದ್ದರು. ಇದು ಸಂಭಾವನೆ ವಿಚಾರವಾಗಿ ಹೇಳಿದ ಮಾತಲ್ಲ ಎಂದಿದ್ದರು. ಸದ್ಯ ‘ಗುಂಟೂರು ಖಾರಂ’ ಸಿನಿಮಾ ಕೆಲಸದಲ್ಲಿ ಅವರು ತೊಡಗಿಕೊಂಡಿದ್ದಾರೆ.

ತಮನ್ನಾ

ತಮನ್ನಾ ಅವರು ಇತ್ತೀಚೆಗೆ ಬೋಲ್ಡ್ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅವರು ನೀಡಿದ್ದ ಹೇಳಿಕೆ ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು. ಸೆಲೆಬ್ರಿಟಿಗಳು ಪ್ರಮೋಷನ್​ಗಾಗಿ ಚಾರಿಟೆಬಲ್ ಟ್ರಸ್ಟ್ ನಡೆಸುತ್ತಾರೆ ಎಂದು ಹೇಳುವ ಮೂಲಕ ಅವರು ವಿವಾದದಲ್ಲಿ ಸಿಲುಕಿದ್ದರು. ಅನೇಕರು ಒಳ್ಳೆಯ ಉದ್ದೇಶ ಇಟ್ಟುಕೊಂಡೇ ಈ ಕೆಲಸ ಮಾಡುತ್ತಿದ್ದಾರೆ. ಅಂಥವರಿಗೆ ತಮನ್ನಾ ಹೇಳಿಕೆ ಬೇಸರ ತರಿಸಿತ್ತು.

ಜ್ಯೋತಿಕಾ

ಜ್ಯೋತಿಕಾ ಅವರಿಗೆ ಸಾರ್ವಜನಿಕವಾಗಿ ಲೈಂಗಿಕ ಕಿರುಕುಳ ನೀಡಲಾಗಿತ್ತು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು.

ಖುಷ್ಬು

ಹಿರಿಯ ನಟಿ ಖುಷ್ಬು ಅವರು ರಾಜಕೀಯದಲ್ಲೂ ತೊಡಗಿಕೊಂಡಿದ್ದಾರೆ. 2005ರಲ್ಲಿ ಅವರು ಲಿವ್ ಇನ್ ರಿಲೇಶನ್​ಶಿಪ್ ಬಗ್ಗೆ ಮಾತನಾಡಿದ್ದರು. ಅವರ ಮೇಲೆ ಹಲವು ಆರೋಪ ಹೊರಿಸಲಾಯಿತು. ಅವರು ನೀಡಿದ ಹೇಳಿಕೆ ಸರಿ ಇಲ್ಲ ಎಂದು ಅನೇಕರು ಅಭಿಪ್ರಾಯಪಟ್ಟರು. ವಿವಿಧ ರಾಜಕೀಯ ಪಕ್ಷಗಳು ಈ ಬಗ್ಗೆ ಆಕ್ರೋಶ ಹೊರಹಾಕಿದವು. ನಂತರ ಮದ್ರಾಸ್ ಹೈಕೋರ್ಟ್ ಅವರ ವಿರುದ್ಧದ ಎಲ್ಲಾ ಪ್ರಕರಣಗಳನ್ನು ರದ್ದು ಮಾಡಿತ್ತು.

ಇದನ್ನೂ ಓದಿ: ಅಕ್ಕಿನೇನಿ ನಾಗಾರ್ಜುನಗೆ ಆಶಿಕಾ ರಂಗನಾಥ್ ನಾಯಕಿ? ಟಾಲಿವುಡ್ ಆಫರ್ ಗಿಟ್ಟಿಸಿಕೊಂಡ ಕನ್ನಡತಿ

ನಾಗಾರ್ಜುನ

ನಾಗಾರ್ಜುನ ಅವರು ಬಿಗ್ ಬಾಸ್ ನಿರೂಪಣೆಯಲ್ಲಿ ಬ್ಯುಸಿ ಆಗಿದ್ದಾರೆ. 2011ರಲ್ಲಿ ಪತ್ರಕರ್ತೆ ಒಬ್ಬರು ನಾಗಾರ್ಜುನ್ ವಿರುದ್ಧ ಕೇಸ್ ಹಾಕಿದ್ದರು. ನಾಗಾರ್ಜುನ ಅವರು ತಮಗೆ ಕಿರುಕುಳ ನೀಡಿದ್ದಾರೆ, ಅವಾಚ್ಯ ಶಬ್ದ ಬಳಕೆ ಮಾಡಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:58 am, Tue, 3 October 23