Seetha Raama: ರಾಮನನ್ನು ಸೋಲಿಸುವ ಭರದಲ್ಲಿ ಅಶೋಕನ ಕೈಯಲ್ಲಿ ಸಿಕ್ಕಿ ಬಿಳುತ್ತಾಳಾ ಭಾರ್ಗವಿ?

Seetha Raama: ರಾಮ್ ಆಫೀಸಿಗೆ ಹೋಗಿಲ್ಲ ಎನ್ನುವ ವಿಷಯವನ್ನು ಭಾರ್ಗವಿ ತನ್ನ ಮಾವ ಸೂರ್ಯ ಪ್ರಕಾಶ್​ಗೆ ಹೇಳುತ್ತಾಳೆ. ಅವನು ಆ ವಿಷಯವನ್ನು ಅಶೋಕ್​ಗೆ ತಿಳಿಸುತ್ತಾನೆ. ಅಶೋಕನಿಗೆ ಭಾರ್ಗವಿಯ ಮೋಸದ ಅರಿವು ಇದ್ದರೂ ಅದನ್ನು ರಾಮ್ ಒಪ್ಪುವುದಿಲ್ಲ ಎಂಬ ಬೇಸರವಿದೆ.  

Seetha Raama: ರಾಮನನ್ನು ಸೋಲಿಸುವ ಭರದಲ್ಲಿ ಅಶೋಕನ ಕೈಯಲ್ಲಿ ಸಿಕ್ಕಿ ಬಿಳುತ್ತಾಳಾ ಭಾರ್ಗವಿ?
ರಾಮ್
Follow us
ಪ್ರೀತಿ ಭಟ್​, ಗುಣವಂತೆ
| Updated By: ರಾಜೇಶ್ ದುಗ್ಗುಮನೆ

Updated on: Oct 03, 2023 | 8:02 AM

‘ಸೀತಾ ರಾಮ’ (Seetha Raama Serial) ಧಾರಾವಾಹಿ (Serial) ಸಂಚಿಕೆ 57- 58: ಸೀತಾಳ ಆರೈಕೆ ಮಾಡಲು ರಾಮ್ ಅವರ ಮನೆಗೆ ಬರುತ್ತಾನೆ. ತಮ್ಮ ಮುನಿಸನ್ನು ಬಿಟ್ಟು ಸೀತಾ, ರಾಮ್ ಮಾತನಾಡಿಕೊಳ್ಳುತ್ತಾರೆ. ಎಲ್ಲ ಕೆಲಸವನ್ನು ನಾನು ಸಿಹಿ ಸೇರಿ ಮಾಡುತ್ತೇವೆ ಎನ್ನುವ ರಾಮ್ ಮಾತಿಗೆ ಸೀತಾ ಮುಗುಳ್ನಗುತ್ತಾಳೆ. ಸಿಹಿಗೆ ಇಂಜೆಕ್ಷನ್ ಹಾಕುತ್ತೇನೆ ಎಂದು ದೈರ್ಯದಿಂದ ಹೇಳಿದ ರಾಮ್ ಅವಳ ಪುಟ್ಟ ಕೈ ನೋಡುತ್ತಿದ್ದಂತೆಯೇ ಹೆದರುತ್ತಾನೆ. ಆಗ ಸೀತಾಳೆ ಬಂದು ಸಿಹಿಗೆ ಇಂಜೆಕ್ಷನ್ ಕೊಡುತ್ತಾಳೆ. ಸೀತಾಳ ಧೈರ್ಯ ನೋಡಿ ನೋವನ್ನು ಸಹಿಸಿಕೊಳ್ಳುವುದಕ್ಕೆ ತಾಯಿಯಾಗಬೇಕು ಅನಿಸುತ್ತೆ ಎನುತ್ತಾನೆ. ಅದಕ್ಕೆ ಸೀತಾ ಹೆಣ್ಣಾದರೆ ಸಾಕು ಎನ್ನುತ್ತಾಳೆ. ಇನ್ನು ಸೀತಾಳಿಗಾಗಿ, ಸಿಹಿ ಮತ್ತು ರಾಮ್ ಸೇರಿ ಆರೈಕೆ ಮಾಡಿ ತಮ್ಮ ಕೈಯಾರೇ ಉಪ್ಪಿಟ್ಟು ಮಾಡಿಕೊಡುತ್ತಾರೆ. ಸೀತಾ ಕೂಡ ಅದನ್ನು ನೋಡಿ ಖುಷಿ ಪಡುತ್ತಾಳೆ.

ರುದ್ರ ಪ್ರತಾಪ್ ಸೀತಾ ತನ್ನ ಜೊತೆ ಮಾತನಾಡುತ್ತಾಳೆ ಎಂಬ ಖುಷಿಯಲ್ಲಿ ಅದಕ್ಕೆ ಕಾರಣರಾದ ಸೀತಾಳ ಅಣ್ಣ ಮತ್ತು ಅತ್ತಿಗೆಯನ್ನು ಕರೆದು ಅವರಿಗೆ ಹಣ ಕೊಡುತ್ತಾನೆ. ಅದನ್ನು ನೋಡಿ ಅವರಿಬ್ಬರೂ ಖುಷಿಯಲ್ಲಿ ತೇಲಾಡುತ್ತಾರೆ. ಅವಳು ನನ್ನ ಜೊತೆ ಮದುವೆ ಆಗಲು ಒಪ್ಪಿಸಿದರೇ ಇನ್ನು ಹೆಚ್ಚು ಹಣ ನೀಡುವುದಾಗಿ ಅವರಿಗೆ ಆಸೆ ತೋರಿಸುತ್ತಾನೆ.

ಇದನ್ನೂ ಓದಿ: ಮತ್ತೊಂದು ಮಹಾ ಸಂಚಿಕೆ ಘೋಷಣೆ  ಮಾಡಿದ ‘ಸೀತಾ ರಾಮ’ ಧಾರಾವಾಹಿ ತಂಡ; ಯಾವಾಗ?

ರಾಮ್ ಆಫೀಸ್​ಗೆ ಹೋಗಿಲ್ಲ ಎನ್ನುವುದನ್ನು ತಿಳಿದ ಭಾರ್ಗವಿ ಎಲ್ಲಿಗೆ ಹೋಗಿರಬಹುದು ಎಂದು ತಿಳಿದುಕೊಳ್ಳುವುದಕ್ಕೆ ಒದ್ದಾಡುತ್ತಾಳೆ. ಚರಣ್​ಗೆ ಹೇಳಿ ಆಫೀಸ್​ನಲ್ಲಿ ಕೆಲವು ಬದಲಾವಣೆ ಮಾಡಿ ಎಂದು ಹೇಳುತ್ತಾಳೆ. ಜೊತೆಗೆ ರಾಮ್ ಆಫೀಸಿಗೆ ಹೋಗಿಲ್ಲ ಎನ್ನುವ ವಿಷಯವನ್ನು ತನ್ನ ಮಾವ ಸೂರ್ಯ ಪ್ರಕಾಶ್​ಗೆ ಹೇಳುತ್ತಾಳೆ. ಅವನು ಆ ವಿಷಯವನ್ನು ಅಶೋಕ್​ಗೆ ತಿಳಿಸುತ್ತಾನೆ. ಅಶೋಕನಿಗೆ ಭಾರ್ಗವಿಯ ಮೋಸದ ಅರಿವು ತಿಳಿದಿದ್ದರೂ ಅದನ್ನು ರಾಮ್ ಒಪ್ಪುವುದಿಲ್ಲ ಎಂಬ ಬೇಸರವಿರುತ್ತದೆ. ಅಶೋಕ್ ಮತ್ತೆ ಆಫೀಸಿಗೆ ಹೋಗುವ ಮನಸ್ಸು ಮಾಡುತ್ತಾನಾ? ಸೀತಾ ಮತ್ತು ರಾಮ್ ಮಧ್ಯೆ ಪ್ರೀತಿಯ ಅಂಕುರವಾಗುತ್ತಾ? ಕಾದು ನೋಡೋಣ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ