ಮತ್ತೊಂದು ಮಹಾ ಸಂಚಿಕೆ ಘೋಷಣೆ  ಮಾಡಿದ ‘ಸೀತಾ ರಾಮ’ ಧಾರಾವಾಹಿ ತಂಡ; ಯಾವಾಗ?

ಮಹಾ ಸಂಚಿಕೆ ಪ್ರಸಾರ ಕಂಡರೆ ವೀಕ್ಷಕರಿಗೆ ಖುಷಿ ಆಗುತ್ತದೆ. ಒಂದೇ ದಿನ ಎರಡು ಎಪಿಸೋಡ್​ಗಳನ್ನು ನೋಡುವ ಅವಕಾಶ ಸಿಗುತ್ತದೆ. ಅಂದರೆ, ಮಹಾ ಸಂಚಿಕೆ ಇರುವ ಧಾರಾವಾಹಿ ಒಂದು ಗಂಟೆಗಳ ಕಾಲ ಪ್ರಸಾರ ಕಾಣುತ್ತದೆ. ಈಗ ‘ಸೀತಾ ರಾಮ’ ಧಾರಾವಾಹಿ ಇಂದು (ಅಕ್ಟೋಬರ್ 2) ಮಹಾ ಸಂಚಿಕೆ ಪ್ರಸಾರ ಮಾಡಲಿದೆ.

ಮತ್ತೊಂದು ಮಹಾ ಸಂಚಿಕೆ ಘೋಷಣೆ  ಮಾಡಿದ ‘ಸೀತಾ ರಾಮ’ ಧಾರಾವಾಹಿ ತಂಡ; ಯಾವಾಗ?
ಸೀತಾ ರಾಮ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Oct 02, 2023 | 8:12 AM

ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ‘ಸೀತಾ ರಾಮ’ (Seetha Raama Serial) ಧಾರಾವಾಹಿ ಪ್ರೇಕ್ಷಕರನ್ನು ಸೆಳೆದುಕೊಳ್ಳುತ್ತಿದೆ. ಇತ್ತೀಚೆಗಷ್ಟೇ ಈ ಧಾರಾವಾಹಿ 50ನೇ ಸಂಚಿಕೆಯನ್ನು ಪೂರ್ಣಗೊಳಿಸಿದೆ. ಭಾವನಾತ್ಮಕವಾಗಿ ಧಾರಾವಾಹಿ ಎಲ್ಲರನ್ನೂ ಸೆಳೆದುಕೊಳ್ಳುತ್ತಿದೆ. ಗಗನ್ ಚಿನ್ನಪ್ಪ, ವೈಷ್ಣವಿ ಗೌಡ, ರೀತು ಸಿಂಗ್, ಮುಖ್ಯಮಂತ್ರಿ ಚಂದ್ರು, ಪೂಜಾ ಲೋಕೇಶ್ ಮೊದಲಾದವರು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈಗ ಧಾರಾವಾಹಿ ಮಹಾ ಸಂಚಿಕೆ ಪ್ರಸಾರ ಮಾಡಲು ನಿರ್ಧರಿಸಿದೆ. ಈ ಬಗ್ಗೆ ಜೀ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಂಡಿದೆ.

ಮಹಾ ಸಂಚಿಕೆ ಪ್ರಸಾರ ಕಂಡರೆ ವೀಕ್ಷಕರಿಗೆ ಖುಷಿ ಆಗುತ್ತದೆ. ಒಂದೇ ದಿನ ಎರಡು ಎಪಿಸೋಡ್​ಗಳನ್ನು ನೋಡುವ ಅವಕಾಶ ಸಿಗುತ್ತದೆ. ಅಂದರೆ, ಮಹಾ ಸಂಚಿಕೆ ಇರುವ ಧಾರಾವಾಹಿ ಒಂದು ಗಂಟೆಗಳ ಕಾಲ ಪ್ರಸಾರ ಕಾಣುತ್ತದೆ. ಈಗ ‘ಸೀತಾ ರಾಮ’ ಧಾರಾವಾಹಿ ಇಂದು (ಅಕ್ಟೋಬರ್ 2) ಮಹಾ ಸಂಚಿಕೆ ಪ್ರಸಾರ ಮಾಡಲಿದೆ. ಈ ವಿಚಾರ ಕೇಳಿ ‘ಸೀತಾ ರಾಮ’ ಧಾರಾವಾಹಿ ವೀಕ್ಷಕರು ಖುಷಿಪಟ್ಟಿದ್ದಾರೆ. ರಾತ್ರಿ 9:30ರಿಂದ 10:30ರವರೆಗೆ ಧಾರಾವಾಹಿ ಪ್ರಸಾರ ಕಾಣಲಿದೆ. ಈ ಬಗ್ಗೆ ಅಧಿಕೃತ ಘೋಷಣೆ ಆಗಿದೆ.

‘ಸೀತಾ ರಾಮ ನಡುವಿನ ಮುನಿಸು ಕರಗಿಸೋಕೆ ಸಿಹಿ ನೆಪವೇ ಸಾಕು. ಸೀತಾ ರಾಮ 1 ಗಂಟೆಯ ಮಹಾಸಂಚಿಕೆ ಸೋಮವಾರ ರಾತ್ರಿ 9.30ಕ್ಕೆ’ ಎಂದು ಜೀ ಕನ್ನಡ ಹೊಸ ಪ್ರೋಮೋ ಹಂಚಿಕೊಂಡಿದೆ. ಈ ಎರಡು ಎಪಿಸೋಡ್​ಗಳೂ ಸಾಕಷ್ಟು ಭಾವನಾತ್ಮಕವಾಗಿ ಇರಲಿವೆ ಎಂದು ಹೇಳಲಾಗುತ್ತಿದೆ. ಇಂದು (ಅಕ್ಟೋಬರ್ 2) ಗಾಂಧಿ ಜಯಂತಿ. ಬಹುತೇಕರಿಗೆ ರಜಾ ಇರುತ್ತದೆ. ಈ ಕಾರಣದಿಂದಲೂ ಮಹಾ ಸಂಚಿಕೆ ಪ್ರಸಾರ ಕಾಣುತ್ತಿರಬಹುದು.

ಸೀತಾ ರಾಮಾ ಧಾರಾವಾಹಿ ಕಥೆಯ ಒಂದೆಳೆ..

ರಾಮ್ (ಗಗನ್ ಚಿನ್ನಪ್ಪ) ಆಗರ್ಭ ಶ್ರೀಮಂತ. ಆತ ವಿದೇಶದಲ್ಲಿ ಇದ್ದವನು. ಒಮ್ಮೆ ಭಾರತಕ್ಕೆ ಬರುತ್ತಾನೆ. ತಾತ ಸೂರಿ (ಮುಖ್ಯಮಂತ್ರಿ ಚಂದ್ರು) ಮಾತಿಗೆ ಕಟ್ಟುಬಿದ್ದು ಇಲ್ಲಿಯೇ ಉಳಿದುಕೊಳ್ಳುತ್ತಾನೆ. ಕಚೇರಿಗೆ ಹೋದಾಗ ಅಲ್ಲಿ ಆದ ಅವ್ಯವಹಾರಗಳು ಕಣ್ಣಿಗೆ ಬೀಳುತ್ತವೆ. ಈ ಅವ್ಯವಹಾರಗಳ ಮಾಸ್ಟರ್ ಮೈಂಡ್ ಆತನ ಚಿಕ್ಕಮ್ಮ ಭಾರ್ಗವಿ (ಪೂಜಾ ಲೋಕೇಶ್). ಆದರೆ, ಅವಳು ಇದನ್ನು ಮುಚ್ಚಿಟ್ಟಿದ್ದಾಳೆ. ತಪ್ಪಿತಸ್ಥೆಯನ್ನು ಕಂಡು ಹಿಡಿಯಲು ರಾಮ್ ಮುಂದಾಗಿದ್ದಾನೆ.

ಇದನ್ನೂ ಓದಿ: ‘ಸೀತಾ ರಾಮ’ ಧಾರಾವಾಹಿಯಲ್ಲಿ ಜೀವದ ಗೆಳೆಯನಾಗಿ ಮಿಂಚಿದ ಅಶೋಕ; ನಟನೆಗೆ ಭರ್ಜರಿ ಮೆಚ್ಚುಗೆ

ಈಗ ಕಥೆ ಏನಾಗಿದೆ?

ಆತನಿಗೆ ಸೀತಾ (ವೈಷ್ಣವಿ ಗೌಡ) ಪರಿಚಯ ಆಗಿದೆ. ಸೀತಾಳ ಮಗಳು ಸಿಹಿಯನ್ನು (ರೀತು ಸಿಂಗ್) ರಾಮ್ ತುಂಬಾನೇ ಹಚ್ಚಿಕೊಂಡಿದ್ದಾನೆ. ಸ್ವಂತ ಮನೆಯನ್ನು ಉಳಿಸಿಕೊಳ್ಳಲು ಸೀತಾಗೆ ಅಡ್ವಾನ್ಸ್ ಸ್ಯಾಲರಿ ಬೇಕಿತ್ತು. ಇದನ್ನು ರಾಮ್ ಕೊಡಿಸಲು ಮುಂದೆ ಬಂದಿದ್ದ. ಆದರೆ, ಅದು ಸಾಧ್ಯವಾಗಿಲ್ಲ. ಅಷ್ಟೇ ಅಲ್ಲ ಭಾರ್ಗವಿಯಿಂದ ಆಕೆ ಬೈಸಿಕೊಂಡಿದ್ದಾಳೆ. ಇದೇ ಸಂದರ್ಭದಲ್ಲಿ ವೈಷ್ಣವಿಗೆ ಜ್ವರ ಬಂದಿದೆ. ಆಕೆಯ ಆರೈಕೆಗೆ ರಾಮ್ ಮುಂದಾಗುತ್ತಾನೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ