‘ಸೀತಾ ರಾಮ’ ಧಾರಾವಾಹಿಯಲ್ಲಿ ಜೀವದ ಗೆಳೆಯನಾಗಿ ಮಿಂಚಿದ ಅಶೋಕ; ನಟನೆಗೆ ಭರ್ಜರಿ ಮೆಚ್ಚುಗೆ

‘ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ’ ಸಿನಿಮಾದಲ್ಲಿ ಅಶೋಕ್ ಅವರು ದತ್ತು ಹೆಸರಿನ ಪಾತ್ರ ಮಾಡಿದ್ದರು. ಯಶ್ ಗೆಳೆಯನಾಗಿ ಅವರು ಗಮನ ಸೆಳೆದಿದ್ದರು. ‘ಗೂಗ್ಲಿ’ ಸಿನಿಮಾದಲ್ಲೂ ಯಶ್ ಗೆಳೆಯನಾಗಿ ಗಮನ ಸೆಳೆದಿದ್ದರು. ಈಗ ‘ಸೀತಾ ರಾಮ’ ಧಾರಾವಾಹಿಯಲ್ಲೂ ಅವರ ನಟನೆಗೆ ಮೆಚ್ಚುಗೆ ಸಿಗುತ್ತಿದೆ.

‘ಸೀತಾ ರಾಮ’ ಧಾರಾವಾಹಿಯಲ್ಲಿ ಜೀವದ ಗೆಳೆಯನಾಗಿ ಮಿಂಚಿದ ಅಶೋಕ; ನಟನೆಗೆ ಭರ್ಜರಿ ಮೆಚ್ಚುಗೆ
ಅಶೋಕ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Sep 30, 2023 | 2:56 PM

‘ಸೀತಾ ರಾಮ’ ಧಾರಾವಾಹಿ (Seetha Raama Serial) ಇತ್ತೀಚೆಗೆ 50 ಎಪಿಸೋಡ್​ಗಳನ್ನು ಪೂರೈಸಿದೆ. ಕಥಾ ನಾಯಕ ರಾಮ್ (ಗಗನ್ ಚಿನ್ನಪ್ಪ) ಗೆಳೆಯನ ಪಾತ್ರದಲ್ಲಿ ಅಶೋಕ್ ನಟಿಸುತ್ತಿದ್ದಾರೆ. ಧಾರಾವಾಹಿಯಲ್ಲಿ ಅವರ ಪಾತ್ರದ ಹೆಸರು ಅಶೋಕ್ ಎಂದೇ ಇದೆ. ರಾಮ್ (Ram) ಹಾಗೂ ಅಶೋಕ್ ಮಧ್ಯೆ ಇರುವ ಫ್ರೆಂಡ್​ಶಿಪ್ ಎಲ್ಲರ ಗಮನ ಸೆಳೆಯುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭರ್ಜರಿ ಚರ್ಚೆ ಆಗುತ್ತಿದೆ. ಧಾರಾವಾಹಿಯಲ್ಲಿ ಇತ್ತೀಚೆಗೆ ಪ್ರಸಾರ ಕಂಡ ಎಪಿಸೋಡ್ ಸಾಕಷ್ಟು ಹೈಲೈಟ್ ಆಗಿದೆ.

ಸೂರಿ (ಮುಖ್ಯಮಂತ್ರಿ) ಕಟ್ಟಿ ಬೆಳೆಸಿದ ಕಂಪನಿಗೆ ರಾಮ್ ಬಾಸ್. ಈ ಕಂಪನಿಯಲ್ಲಿ ಸಾಕಷ್ಟು ಗೋಲ್​ಮಾಲ್ ಆಗಿದೆ ಎನ್ನುವ ಅನುಮಾನ ಸೂರಿ, ಅಶೋಕ್ ಹಾಗೂ ರಾಮ್​ಗೆ ಬರುತ್ತದೆ. ಈ ಕಾರಣದಿಂದಲೇ ಅಶೋಕ್​ನ (ಪಾತ್ರದ ಹೆಸರು) ಬಾಸ್ ಎಂದು ಬಿಂಬಿಸಲಾಗಿದೆ. ಕಂಪನಿಯಲ್ಲಾದ ಎಲ್ಲಾ ಹಗರಣಗಳಿಗೆ ಸೂರಿಯ ಸೊಸೆ ಭಾರ್ಗವಿಯದ್ದೇ (ಪೂಜಾ ಲೋಕೇಶ್) ಮಾಸ್ಟರ್​ಮೈಂಡ್. ಆದರೆ, ಇದನ್ನು ಅವಳು ಮುಚ್ಚಿಟ್ಟಿದ್ದಾಳೆ. ಈ ವಿಚಾರದಲ್ಲಿ ಅಶೋಕ್​ಗೆ ಅನುಮಾನ ಶುರುವಾಗಿದೆ. ಈ ಕಾರಣದಿಂದಲೇ ಅಶೋಕ್ ಅಲರ್ಟ್ ಆಗಿದ್ದಾನೆ.

ಬಾಸ್ ಚೇರ್ ಮೇಲೆ ಕುಳಿತ ಕಾರಣಕ್ಕೆ ಅಶೋಕನಿಗೆ ಅವಮಾನ ಮಾಡುವ ಕೆಲಸವನ್ನು ಭಾರ್ಗವಿ ಮಾಡಿದ್ದಳು. ಈ ವೇಳೆ ಆತ ಕಣ್ಣೀರು ಹಾಕಿದ್ದ. ಆದರೆ, ರಾಮ್​ನ ಬಿಟ್ಟುಕೊಟ್ಟಿಲ್ಲ. ಅವನು ಭಾರ್ಗವಿಯ ಬಣ್ಣ ಬಯಲು ಪ್ರಯತ್ನಿಸಿದರೂ ಇದನ್ನು ಒಪ್ಪುತ್ತಿಲ್ಲ. ಈ ದೃಶ್ಯ ಅನೇಕರಿಗೆ ಇಷ್ಟವಾಗಿದೆ. ಅಶೋಕನ ಪಾತ್ರವನ್ನು ಅಶೋಕ್ ಶರ್ಮ ಉತ್ತಮ ರೀತಿಯಲ್ಲಿ ನಿರ್ವಹಿಸುತ್ತಿದ್ದಾರೆ ಎಂದು ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಅವರಿಗೆ ಈ ರೀತಿಯ ಪಾತ್ರ ಹೊಂದುತ್ತದೆ ಎಂದು ಅನೇಕರು ಹೇಳಿದ್ದಾರೆ.

‘ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ’ ಸಿನಿಮಾದಲ್ಲಿ ಅಶೋಕ್ ಅವರು ದತ್ತು ಹೆಸರಿನ ಪಾತ್ರ ಮಾಡಿದ್ದರು. ಯಶ್ ಗೆಳೆಯನಾಗಿ ಅವರು ಗಮನ ಸೆಳೆದಿದ್ದರು. ‘ಗೂಗ್ಲಿ’ ಸಿನಿಮಾದಲ್ಲೂ ಯಶ್ ಗೆಳೆಯನಾಗಿ ಗಮನ ಸೆಳೆದಿದ್ದರು. ಈಗ ‘ಸೀತಾ ರಾಮ’ ಧಾರಾವಾಹಿಯಲ್ಲೂ ಅವರ ನಟನೆಗೆ ಮೆಚ್ಚುಗೆ ಸಿಗುತ್ತಿದೆ.

View this post on Instagram

A post shared by Zee Kannada (@zeekannada)

ಇದನ್ನೂ ಓದಿ: Seetha Raama: ಸೀತಾ ರಾಮರ ನಡುವಿನ ವಿಷಯದಲ್ಲಿ ಅಶೋಕ್ ತೊಳಲಾಟ; ಪ್ರಿಯಾಗೆ ಪ್ರಾಣಸಂಕಟ!

ಧಾರಾವಾಹಿ ವೀಕ್ಷಿಸುವವರು ಇದು ನಿಜಜೀವನದಲ್ಲೇ ನಡೆಯುತ್ತಿರುವ ಘಟನೆ ಎಂಬ ರೀತಿಯಲ್ಲಿ ಪರಿಗಣಿಸುತ್ತಾರೆ. ಹೀಗಾಗಿ, ಅಶೋಕ್​ಗೆ ನ್ಯಾಯ ಸಿಗಬೇಕು ಎಂದು ಅನೇಕರು ಆಗ್ರಹಿಸಿದ್ದಾರೆ. ‘ಅಶೋಕ್​​​ಗೆ ಆದ ಅವಮಾನಕ್ಕೆ ಭಾರ್ಗವಿ ಕ್ಷಮೆ ಕೇಳಲೇಬೇಕು’ ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್