ನಯನತಾರಾ (Nayanthara) ಹಾಗೂ ವಿಘ್ನೇಶ್ ಶಿವನ್ ಜೂನ್ 9ರಂದು ಮದುವೆ ಆಗಿ ಹೊಸ ಬಾಳು ಆರಂಭಿಸಿದ್ದಾರೆ. ತಮಿಳುನಾಡಿನ ಮಹಾಬಲಿಪುರಂನಲ್ಲಿ ಈ ಜೋಡಿ ವಿವಾಹವಾಗಿದೆ. ಈ ಮೂಲಕ ಹಲವು ವರ್ಷಗಳ ಪ್ರೀತಿಗೆ ಇವರು ಹೊಸ ಅರ್ಥ ನೀಡಿದ್ದಾರೆ. ಸ್ಟಾರ್ ನಟರ ಮದುವೆ ಎಂದರೆ ಇಂಡಸ್ಟ್ರಿ ಗೆಳೆಯರು ಹಾಗೂ ಕುಟುಂಬದವರಿಂದ ದುಬಾರಿ ಬೆಲೆಯ ಗಿಫ್ಟ್ ಸಿಗೋದು ಸಾಮಾನ್ಯ. ಈಗ ನಯತಾರಾ-ವಿಘ್ನೇಶ್ ಮದುವೆಯಲ್ಲಿ (Nayanthara-Vignesh Shivan Wedding) ) ದುಬಾರಿ ಗಿಫ್ಟ್ಗಳು ಸಿಕ್ಕಿವೆ. ಅಚ್ಚರಿ ಎಂದರೆ, ಮದುವೆ ಆದ ಖುಷಿಯಲ್ಲಿ ಸ್ವತಃ ನಯನತಾರಾ ಅವರು ಪತಿ ವಿಘ್ನೇಶ್ಗೆ 20 ಕೋಟಿ ರೂಪಾಯಿ ಮೌಲ್ಯದ ಬಂಗಲೆಯನ್ನು ಉಡುಗೊರೆಯಾಗಿ ನೀಡಿದ ಬಗ್ಗೆ ವರದಿ ಆಗಿದೆ.
ನಯನತಾರಾ ಅವರು ಸ್ಟಾರ್ ನಟಿ. ಅವರಿಗೆ ಸ್ಟಾರ್ ಕಲಾವಿದರು ಹಾಗೂ ನಿರ್ಮಾಪಕರ ಜತೆ ಗೆಳೆತನವಿದೆ. ವಿಘ್ನೇಶ್ ಕೂಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಈ ಕಾರಣಕ್ಕೆ ನಿರ್ಮಾಪಕ ಬೋನಿ ಕಪೂರ್, ಬಾಲಿವುಡ್ ನಟ ಶಾರುಖ್ ಖಾನ್, ಕಾರ್ತಿ, ನಿರ್ದೇಶಕ ಅಟ್ಲೀ ಮೊದಲಾದವರು ಈ ಮದುವೆಗೆ ಹಾಜರಿ ಹಾಕಿದ್ದರು. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಇವರ ಮದುವೆಗೆ ಶುಭಾಶಯಗಳ ಮಹಾಪೂರ ಹರಿದು ಬಂದಿದೆ. ಹಲವು ಉಡುಗೊರೆಗಳು ಕೂಡ ಸಿಕ್ಕಿವೆ.
ನಯನತಾರಾ ಅವರು ಐಷಾರಾಮಿ ಬಂಗಲೆಯನ್ನು ವಿಘ್ನೇಶ್ಗೆ ನೀಡಿದ್ದಾರೆ ಎನ್ನಲಾಗಿದೆ. ಇದರ ಬೆಲೆ ಸುಮಾರು 20 ಕೋಟಿ ರೂಪಾಯಿ. ನಯನತಾರಾ ಈ ಬಂಗೆಲೆಯನ್ನು ಖರೀದಿಸಿ ಗುಟ್ಟಾಗಿ ವಿಘ್ನೇಶ್ ಹೆಸರಿಗೆ ನೋಂದಣಿ ಮಾಡಿಸಿದ್ದರು. ಅವರು ಮದುವೆಯ ದಿನ ಈ ನಿವಾಸದ ದಾಖಲೆಗಳನ್ನು ವಿಘ್ನೇಶ್ಗೆ ನೀಡಿದ್ದಾರೆ. ಇದರಿಂದ ಅವರು ಅಚ್ಚರಿಗೊಂಡಿದ್ದಾರೆ ಎಂದು ವರದಿ ಆಗಿದೆ. ಇಷ್ಟಕ್ಕೆ ನಿಂತಿಲ್ಲ. 24 ತೊಲ ಚಿನ್ನವನ್ನು ನಯನತಾರಾ ಅವರು ವಿಘ್ನೇಶ್ ಸಹೋದರಿಗೆ ನೀಡಿದ್ದಾರೆ. ಈ ಮೂಲಕ ಮದುವೆಯನ್ನು ಅವರು ವಿಶೇಷವಾಗಿಸಿದ್ದಾರೆ.
ಇದನ್ನೂ ಓದಿ: ನಯನತಾರಾ-ವಿಘ್ನೇಶ್ ಮದುವೆಗೆ ಬಂದ ಶಾರುಖ್ ಖಾನ್, ರಜನಿಕಾಂತ್; ಇಲ್ಲಿವೆ ಫೋಟೋಗಳು
ವಿಘ್ನೇಶ್ ಕೂಡ ನಯನತಾರಾಗೆ ದುಬಾರಿ ಉಡುಗೊರೆಯನ್ನೇ ನೀಡಿದ್ದಾರೆ. 5 ಕೋಟಿ ರೂಪಾಯಿ ಬೆಲೆ ಬಾಳುವ ಡೈಮಂಡ್ ರಿಂಗ್ ನಯನತಾರಾಗೆ ನೀಡಿದ್ದಾರೆ. ಮದುವೆಯಲ್ಲಿ ನಯನತಾರಾ ಧರಿಸಿರುವ ಆಭರಣ ಗಮನ ಸೆಳೆದಿತ್ತು. ಇದನ್ನು ವಿಘ್ನೇಶ್ ಅವರೇ ಗಿಫ್ಟ್ ಮಾಡಿದ್ದಾರೆ. ಇದರ ಬೆಲೆ 2-3 ಕೋಟಿ ರೂಪಾಯಿ ಇದೆ ಎನ್ನುತ್ತಿವೆ ವರದಿ. ನಯನತಾರಾ ಹಾಗೂ ವಿಘ್ನೇಶ್ ಸೆಲೆಬ್ರಿಟಿಗಳಿಗೋಸ್ಕರ ವಿಶೇಷ ಪಾರ್ಟಿ ಆಯೋಜಿಸಲು ನಿರ್ಧರಿಸಿದ್ದಾರೆ. ಚೆನ್ನೈನಲ್ಲಿ ಈ ವಾರಾಂತ್ಯಕ್ಕೆ ಪಾರ್ಟಿ ಆಯೋಜನೆಗೊಳ್ಳಲಿದೆ ಎನ್ನಲಾಗುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.