AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಯ್ಯ ಜನ್ಮದಿನಕ್ಕೆ ‘NBK 111’ ಧಮಾಕಾ: ‘ನ್ಯೂ ಏಜ್’ ಲುಕ್​ನಲ್ಲಿ ಬಂದ ನಂದಮೂರಿ

ನಟ ಬಾಲಕೃಷ್ಣ ಅವರ 65ನೇ ಜನ್ಮದಿನಕ್ಕೆ NBK111 ಚಿತ್ರದ 'ಎಂಟ್ರಿ ಆಫ್ ಆನ್ ಎರಾ' ಗ್ಲಿಂಪ್ಸ್ ಬಿಡುಗಡೆಯಾಗಿದೆ. ಅವರ ಹೊಸ, ಆಧುನಿಕ ಅವತಾರ ನೋಡಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಇದು ಗೋಪಿಚಂದ್ ಮಲಿನೇನಿ ನಿರ್ದೇಶನದ, ನಯನತಾರಾ ನಟನೆಯ, ಐತಿಹಾಸಿಕ ಆಕ್ಷನ್ ಡ್ರಾಮಾ ಸಿನಿಮಾವಾಗಿದೆ. ಅರವಿಂದ್ ಕಶ್ಯಪ್ ಛಾಯಾಗ್ರಹಣ ಹಾಗೂ ತಮನ್ ಸಂಗೀತ, ಬೃಹತ್ ತಾರಾಗಣದ ಈ ಪ್ಯಾನ್-ಇಂಡಿಯಾ ಸಿನಿಮಾ ನವೆಂಬರ್ 20 ರಂದು ತೆರೆಗೆ ಬರಲಿದೆ.

ಬಾಲಯ್ಯ ಜನ್ಮದಿನಕ್ಕೆ 'NBK 111' ಧಮಾಕಾ: 'ನ್ಯೂ ಏಜ್' ಲುಕ್​ನಲ್ಲಿ ಬಂದ ನಂದಮೂರಿ
ಬಾಲಯ್ಯ
ರಾಜೇಶ್ ದುಗ್ಗುಮನೆ
|

Updated on:Jun 11, 2026 | 7:39 AM

Share

ನಟ ನಂದಮೂರಿ ಬಾಲಕೃಷ್ಣ ಅವರ 65ನೇ ಜನ್ಮದಿನದ (ಜೂನ್ 10) ಅಂಗವಾಗಿ, ಅವರ ನಟನೆಯ 111ನೇ ಚಿತ್ರದ (NBK111) ಮೊದಲ ಝಲಕ್ ಬಿಡುಗಡೆಯಾಗಿದೆ. ‘ಎಂಟ್ರಿ ಆಫ್ ಆನ್ ಎರಾ’ ಹೆಸರಿನ ಈ ಗ್ಲಿಂಪ್ಸ್ ವೀಡಿಯೋ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದೆ. ಬಾಲಯ್ಯ ಎನರ್ಜಿ ನೋಡಿ ಎಲ್ಲರೂ ಅಚ್ಚರಿ ಹೊರಹಾಕಿದ್ದಾರೆ.

‘ನೋ ಮೋರ್ ವಿಂಟೇಜ್, ಓನ್ಲಿ ನ್ಯೂ ಏಜ್’ ಹೆಸರಿನ ಟ್ಯಾಗ್‌ಲೈನ್‌ನೊಂದಿಗೆ ಈ ವೀಡಿಯೋ ಹೊರಬಂದಿದೆ. ಬಾಲಕೃಷ್ಣ ಅವರ ಎಂದಿನ ಸಾಂಪ್ರದಾಯಿಕ ಮಾಸ್ ಶೈಲಿಗಿಂತ ಇದು ಸಂಪೂರ್ಣ ಭಿನ್ನವಾಗಿದೆ. ಹೈ-ಬಜೆಟ್ ಮೇಕಿಂಗ್ ಹಾಗೂ ಹೊಚ್ಚಹೊಸ ಮಾಡರ್ನ್ ಲುಕ್‌ನಲ್ಲಿ ಬಾಲಯ್ಯ ಅಬ್ಬರಿಸಿದ್ದಾರೆ. ಈ ಚಿತ್ರಕ್ಕೆ ‘ಕಾಂತಾರ’ ಖ್ಯಾತಿಯ ಅರವಿಂದ್ ಕಶ್ಯಪ್ ಛಾಯಾಗ್ರಹಣ ಮಾಡುತ್ತಿದ್ದಾರೆ ಎಂಬುದು ವಿಶೇಷ. ಹೀಗಾಗಿ ದೃಶ್ಯಗಳು ಹೊಸ ಶೈಲಿಯಲ್ಲಿ ಮೂಡಿ ಬಂದಿವೆ. ಇವರ ಅದ್ಭುತ ವಿಶುವಲ್ಸ್‌ಗೆ ಎಸ್‌ ತಮನ್ ತಮ್ಮ ಬಿಜಿಎಂ ಮೂಲಕ ಜೀವ ತುಂಬಿದ್ದಾರೆ. ಇದು ಹಳೆಯ ಕಾಲ ಹಾಗೂ ಇಂದಿನ ಕಾಲಘಟ್ಟದಲ್ಲಿ ನಡೆಯುವ ಐತಿಹಾಸಿಕ ಆಕ್ಷನ್ ಡ್ರಾಮಾ ಸಿನಿಮಾವಾಗಿದೆ.

ಬಾಲಯ್ಯ  ಸಿನಿಮಾ ಪೋಸ್ಟರ್

ಭಾರಿ ತಾರಾಗಣ, ಬಿಗ್ ಬಜೆಟ್:

ಗೋಪಿಚಂದ್ ಮಲಿನೇನಿ ನಿರ್ದೇಶನದ ಈ ಪ್ಯಾನ್-ಇಂಡಿಯಾ ಚಿತ್ರದಲ್ಲಿ ಲೇಡಿ ಸೂಪರ್‌ಸ್ಟಾರ್ ನಯನತಾರಾ ನಾಯಕಿಯಾಗಿದ್ದಾರೆ. ಮನೋಜ್ ಮಂಚು ಮತ್ತು ಸಮುದ್ರಖನಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ವೆಂಕಟ್ ಸತೀಶ್ ಕಿಲ್ಲಾರು ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದ್ದು, ಸಿನಿಮಾದಲ್ಲಿ ಭಾರಿ ವಿಎಫ್‌ಎಕ್ಸ್ ಇರಲಿದೆ.

ಇದನ್ನೂ ಓದಿ: ‘ಜೈಲರ್ 2’ ಸಿನಿಮಾದಿಂದ ಬಾಲಯ್ಯ ಔಟ್? ವಿಜಯ್ ಸೇತುಪತಿಗೆ ದೊಡ್ಡ ಚಾನ್ಸ್

ಹೈದರಾಬಾದ್‌ನಲ್ಲಿ ಸದ್ಯ ಶೂಟಿಂಗ್ ನಡೆಯುತ್ತಿದೆ. ಈ ಸಿನಿಮಾ ರಿಲೀಸ್ ಡೇಟ್​ ಅನ್ನು ಚಿತ್ರತಂಡ ಘೋಷಿಸಿಲ್ಲ. ಆದರೆ, ಸಿನಿಮಾ ನವೆಂಬರ್ 20 ರಂದು ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ. ‘ಅಖಂಡ 2’ ಬಳಿಕ ಮತ್ತೆ ಅಬ್ಬರಿಸಲು ಬಾಲಯ್ಯ ರೆಡಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:36 am, Thu, 11 June 26

Follow Us
‘ಅವರು ಭಯೋತ್ಪಾದಕರಾ?’; ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗನ್ ದಾಳಿಗೆ ಪ
‘ಅವರು ಭಯೋತ್ಪಾದಕರಾ?’; ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗನ್ ದಾಳಿಗೆ ಪ
ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; SIT ತನಿಖೆಗೆ ಸುಪ್ರೀಂ ಸೂಚನೆ
ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; SIT ತನಿಖೆಗೆ ಸುಪ್ರೀಂ ಸೂಚನೆ
ವೈಮನಸ್ಸು ಮರೆತು ದರ್ಶನ್ ಭೇಟಿ ಮಾಡಲು ಜೈಲಿಗೆ ಬಂದ ನಟ ಧನ್ವೀರ್
ವೈಮನಸ್ಸು ಮರೆತು ದರ್ಶನ್ ಭೇಟಿ ಮಾಡಲು ಜೈಲಿಗೆ ಬಂದ ನಟ ಧನ್ವೀರ್
ತಮಿಳುನಾಡಲ್ಲಿ ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ಕಾವೇರಿ ನೀರು!
ತಮಿಳುನಾಡಲ್ಲಿ ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ಕಾವೇರಿ ನೀರು!
ತಮಿಳುನಾಡಿಗೆ ಕಾವೇರು ನೀರು ಬಿಡದಂತೆ ಸರ್ಕಾರಕ್ಕೆ ಎಚ್ಚರಿಕೆ
ತಮಿಳುನಾಡಿಗೆ ಕಾವೇರು ನೀರು ಬಿಡದಂತೆ ಸರ್ಕಾರಕ್ಕೆ ಎಚ್ಚರಿಕೆ
ತಮಿಳುನಾಡಿಗೆ ನೀರು ಹರಿಸುವ ಆದೇಶ ಖಂಡಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ
ತಮಿಳುನಾಡಿಗೆ ನೀರು ಹರಿಸುವ ಆದೇಶ ಖಂಡಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ
ಪ್ರಧಾನ್ ಅವರನ್ನು ತೆಗೆದು ಪ್ರಧಾನಿಯನ್ನು ಉಳಿಸಿಕೊಂಡಿರಿ; ಅಖಿಲೇಶ್ ಯಾದವ್
ಪ್ರಧಾನ್ ಅವರನ್ನು ತೆಗೆದು ಪ್ರಧಾನಿಯನ್ನು ಉಳಿಸಿಕೊಂಡಿರಿ; ಅಖಿಲೇಶ್ ಯಾದವ್
"ಕಳೆದ 2 ವರ್ಷಗಳಲ್ಲಿ 3000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ"
ಕಾವೇರಿ ಸಂಧಾನ ಸೂತ್ರಕ್ಕೆ‌ ದಿನಾಂಕ ಫಿಕ್ಸ್, ಆ.3ರಂದು ಸಿಎಂಗಳ ಸಭೆ ನಿಗದಿ
ಕಾವೇರಿ ಸಂಧಾನ ಸೂತ್ರಕ್ಕೆ‌ ದಿನಾಂಕ ಫಿಕ್ಸ್, ಆ.3ರಂದು ಸಿಎಂಗಳ ಸಭೆ ನಿಗದಿ
ಕೆ.ಆರ್.ಪೇಟೆ ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರ ಹೈಡ್ರಾಮಾ!
ಕೆ.ಆರ್.ಪೇಟೆ ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರ ಹೈಡ್ರಾಮಾ!