ಮಹೇಶ್ ಬಾಬು (Mahesh Babu) ಅವರ ಖ್ಯಾತಿ ವಿಶ್ವಾದ್ಯಂತ ಹಬ್ಬಿದೆ. ಕೇವಲ ಆಂಧ್ರ ಪ್ರದೇಶ, ಕರ್ನಾಟಕ, ತಮಿಳು ನಾಡು ಮಾತ್ರವಲ್ಲದೇ ವಿದೇಶದಲ್ಲೂ ಅವರನ್ನು ಇಷ್ಟಪಡುವ ಅನೇಕರಿದ್ದಾರೆ. ಈಗ ಅವರನ್ನು ನೆಟ್ಫ್ಲಿಕ್ಸ್ ಸಿಇಒ ಟೆಡ್ ಸೆರಾಂಡಸ್ ಭೇಟಿ ಮಾಡಿದ್ದಾರೆ. ಹೈದರಾಬಾದ್ನಲ್ಲಿರುವ ಮಹೇಶ್ ಬಾಬು ಮನೆಗೆ ಟೆಡ್ ಭೇಟಿ ನೀಡಿದ್ದಾರೆ. ಈ ಸಂದರ್ಭದ ಫೋಟೋಗಳನ್ನು ಮಹೇಶ್ ಬಾಬು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಟೆಡ್ ಸೆರಾಂಡಸ್ ಅವರು ಇತ್ತೀಚೆಗೆ ಹೈದರಾಬಾದ್ಗೆ ಆಗಮಿಸಿದ್ದಾರೆ. ಅವರು ನೇರವಾಗಿ ರಾಮ್ ಚರಣ್ ಹಾಗೂ ಚಿರಂಜೀವಿ ಅವರ ಮನೆಗೆ ಭೇಟಿ ನೀಡಿದ್ದಾರೆ. ಭಾರತೀಯ ಸಿನಿಮಾ ರಂಗದ ಕುರಿತು, ಇಲ್ಲಿನ ಬೆಳವಣಿಗೆ ಕುರಿತು ಮಾತುಕತೆ ನಡೆದಿದೆ. ಆ ಬಳಿಕ ಅವರು ಮಹೇಶ್ ಬಾಬು ಮನೆಗೆ ತೆರಳಿದ್ದಾರೆ. ಮಾತುಕತೆಯಲ್ಲಿ ಏನೆಲ್ಲ ನಡೆದಿದೆ ಎನ್ನುವ ಕುರಿತು ಮಾಹಿತಿ ಹಂಚಿಕೊಳ್ಳಲಾಗಿದೆ.
ಇಂದು (ಡಿಸೆಂಬರ್ 9) ಬೆಳಿಗ್ಗೆ ಟೆಡ್ ಸೆರಾಂಡಸ್ ಹಾಗೂ ಮಹೇಶ್ ಬಾಬು ಭೇಟಿ ಆಗಿದ್ದಾರೆ. ತ್ರಿವಿಕ್ರಂ ಶ್ರೀನಿವಾಸ್ ಕೂಡ ಈ ಸಂದರ್ಭದಲ್ಲಿ ಇದ್ದರು. ‘ಕಾಫಿ ಹೀರಿ ಚಿಲ್ ಮಾಡಿದೆವು. ದೂರದೃಷ್ಟಿಯುಳ್ಳ ಟೆಡ್ ಸೆರಾಂಡಸ್ ಮತ್ತು ಅವರ ತಂಡದೊಂದಿಗೆ ಎಂಟರ್ಟೇನ್ಮೆಂಟ್ ಇಂಡಸ್ಟ್ರಿಯ ಭವಿಷ್ಯದ ಕುರಿತು ಕೆಲವು ಆಸಕ್ತಿದಾಯಕ ವಿಚಾರಗಳ ಕುರಿತು ಚರ್ಚೆ ಮಾಡಿದೆವು’ ಎಂದು ಮಹೇಶ್ ಬಾಬು ಮಾತನಾಡಿದ್ದಾರೆ.
Coffee and chill!!
Some interesting conversations about the future of entertainment with the visionary #TedSarandos and his fabulous team #MonikaShergill #AbhishekGoradia@NetflixIndia pic.twitter.com/lpoXqMWz05— Mahesh Babu (@urstrulyMahesh) December 9, 2023
ಇದನ್ನೂ ಓದಿ: ನಾಗಾರ್ಜುನ ಹೊಸ ಸಿನಿಮಾ ‘ನಾ ಸಾಮಿ ರಂಗ’; ಮಹೇಶ್ ಬಾಬು ಜೊತೆ ಕ್ಲ್ಯಾಶ್ ಆಗುತ್ತಾ ಈ ಚಿತ್ರ?
ಸದ್ಯ ಮಹೇಶ್ ಬಾಬು ಅವರು ‘ಸರ್ಕಾರು ವಾರಿ ಪಾಟ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಜನವರಿ 12ರಂದು ಸಿನಿಮಾ ರಿಲೀಸ್ ಆಗಲಿದೆ. ತ್ರಿವಿಕ್ರಂ ಶ್ರೀನಿವಾಸ್ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದ ಕೆಲಸಗಳು ಬಹುತೇಕ ಪೂರ್ಣಗೊಂಡಿವೆ ಎಂದು ಹೇಳಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ