ನಾಗಾರ್ಜುನ ಹೊಸ ಸಿನಿಮಾ ‘ನಾ ಸಾಮಿ ರಂಗ’; ಮಹೇಶ್ ಬಾಬು ಜೊತೆ ಕ್ಲ್ಯಾಶ್ ಆಗುತ್ತಾ ಈ ಚಿತ್ರ?
2024ರ ಸಂಕ್ರಾಂತಿ ಹಬ್ಬಕ್ಕೆ ಸಾಲು ಸಾಲು ಸಿನಿಮಾಗಳು ಬಿಡುಗಡೆ ಆಗಲಿವೆ. ಅವುಗಳ ಜೊತೆ ‘ನಾ ಸಾಮಿ ರಂಗ’ ಚಿತ್ರ ಕೂಡ ಪೈಪೋಟಿಗೆ ಇಳಿಯುತ್ತಿದೆ. ಅಕ್ಕಿನೇನಿ ನಾಗಾರ್ಜುನ ಅವರ ಹುಟ್ಟುಹಬ್ಬದ ಪ್ರಯುಕ್ತ ಈ ಸಿನಿಮಾ ಅನೌನ್ಸ್ ಆಗಿದೆ. ಇದರ ಫಸ್ಟ್ ಗ್ಲಿಂಪ್ಸ್ ವಿಡಿಯೋ ಸಖತ್ ಮಾಸ್ ಆಗಿ ಮೂಡಿಬಂದಿದೆ.
ತೆಲುಗಿನ ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ (Akkineni Nagarjuna) ಅವರು ತಮ್ಮ 64ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 1959ರ ಆಗಸ್ಟ್ 29ರಂದು ಚೆನ್ನೈನಲ್ಲಿ ಜನಿಸಿದ ಇವರು, 1986ರಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಈಗಲೂ ಸಖತ್ ಫಿಟ್ ಆಗಿರುವ ನಾಗಾರ್ಜುನ ಅವರು ತಮ್ಮ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ‘ನಾ ಸಾಮಿ ರಂಗ’ (Naa Saami Ranga) ಎಂಬುದು ಈ ಸಿನಿಮಾದ ಶೀರ್ಷಿಕೆ. ಈ ಚಿತ್ರದ ಮೂಲಕ ಅವರು ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ನಾಗಾರ್ಜುನ ಅವರು ಹೊಸ ಸಿನಿಮಾ ಒಪ್ಪಿಕೊಳ್ಳಲು ಯಾವುದೇ ಅವಸರ ತೋರಿರಲಿಲ್ಲ. ಈಗ ಹುಟ್ಟುಹಬ್ಬದ ದಿನವೇ ‘ನಾ ಸಾಮಿ ರಂಗ’ ಚಿತ್ರದ ಬಗ್ಗೆ ಸುದ್ದಿ ಹೊರಬಿದ್ದಿದೆ. ಇದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಈ ಸಿನಿಮಾದ ಫಸ್ಟ್ ಲುಕ್ ಜೊತೆಗೆ ಟೀಸರ್ ಕೂಡ ಬಿಡುಗಡೆ ಆಗಿದ್ದು ಅಭಿಮಾನಿಗಳ ಖುಷಿ ಡಬಲ್ ಆಗಿದೆ.
ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬದೊಂದಿಗೆ, ಹೊಸ ಸಿನಿಮಾದ ಟೀಸರ್ ಕೂಡ ಬಿಡುಗಡೆಯಾದ್ದು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ‘ನಾ ಸಾಮಿ ರಂಗ’ ಚಿತ್ರದಲ್ಲಿ ನಾಗಾರ್ಜುನ ಅವರಿಗೆ ರಗಡ್ ಗೆಟಪ್ ಇರಲಿದೆ. ಫಸ್ಟ್ ಲುಕ್ ನೋಡಿದ ಬಳಿಕ ಸಾಕಷ್ಟು ಕುತೂಹಲ ಮೂಡಿದೆ. ‘ಶ್ರೀನಿವಾಸ ಸಿಲ್ವರ್ ಸ್ಕ್ರೀನ್’ ಬ್ಯಾನರ್ ಮೂಲಕ ‘ನಾ ಸಾಮಿ ರಂಗ’ ಸಿನಿಮಾ ಸಿದ್ಧವಾಗಲಿದೆ.
‘ನಾ ಸಾಮಿ ರಂಗ’ ಚಿತ್ರದ ಫಸ್ಟ್ ಗ್ಲಿಂಪ್ಸ್ ವಿಡಿಯೋ:
ಶ್ರೀನಿವಾಸ ಚಿತ್ತುರಿ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ನಾಗಾರ್ಜುನ ಜೊತೆ ಕೆಲಸ ಮಾಡಲು ಅವರು ಉತ್ಸುಕರಾಗಿದ್ದಾರೆ. ‘ನಾ ಸಾಮಿ ರಂಗ’ ಸಿನಿಮಾದ ಫಸ್ಟ್ ಗ್ಲಿಂಪ್ಸ್ ವಿಡಿಯೋ ಸಖತ್ ಮಾಸ್ ಆಗಿ ಮೂಡಿಬಂದಿದೆ. ಮುಂದಿನ ವರ್ಷ ಸಂಕ್ರಾಂತಿ ಹಬ್ಬದ ವೇಳೆ ಈ ಚಿತ್ರ ರಿಲೀಸ್ ಆಗಲಿದೆ.
ಇದನ್ನೂ ಓದಿ: 960 ಕೋಟಿ ರೂಪಾಯಿ ಒಡೆಯ ಅಕ್ಕಿನೇನಿ ನಾಗಾರ್ಜುನ
2024ರ ಸಂಕ್ರಾಂತಿ ಹಬ್ಬಕ್ಕೆ ಸಾಲು ಸಾಲು ಸಿನಿಮಾಗಳು ಬಿಡುಗಡೆ ಆಗಲಿದ್ದು, ಅವುಗಳ ಜೊತೆ ‘ನಾ ಸಾಮಿ ರಂಗ’ ಚಿತ್ರ ಕೂಡ ಪೈಪೋಟಿಗೆ ಇಳಿಯುತ್ತಿದೆ. ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ, ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಕೂಡ ಸಂಕ್ರಾಂತಿಯಂದೇ ತೆರೆ ಮೇಲೆ ಬರಲಿದೆ. ತೆಲುಗಿನ ಇಬ್ಬರು ಸ್ಟಾರ್ ನಟರ ಸಿನಿಮಾಗಳು ಒಂದೇ ದಿನ ಬಿಡುಗಡೆಗೊಳ್ಳುತ್ತಿದ್ದು, ಬಾಕ್ಸ್ ಆಫೀಸ್ನಲ್ಲಿ ಕ್ಲ್ಯಾಶ್ ಆಗಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಯೂಟ್ಯೂಬರ್ ಗಂಗವ್ವನಿಗೆ ಹೊಸ ಮನೆ ಕಟ್ಟಲು ಲಕ್ಷಾಂತರ ಹಣ ಸಹಾಯ ಮಾಡಿದ ನಾಗಾರ್ಜುನ
2022ರ ಅಕ್ಟೋಬರ್ 5ರಂದು ನಾಗಾರ್ಜುನ ನಟನೆಯ ‘ಘೋಸ್ಟ್’ ಸಿನಿಮಾ ಬಿಡುಗಡೆ ಆಗಿತ್ತು. ಈ ಸಿನಿಮಾಕ್ಕೆ ಜನರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಅದರ ನಂತರ ನಾಗಾರ್ಜುನ ಅವರ ಹೊಸ ಸಿನಿಮಾವನ್ನು ಒಪ್ಪಿಕೊಂಡಿರಲಿಲ್ಲ. ಈಗ ಅವರ ಹುಟ್ಟುಹಬ್ಬದಂದು ಹೊಸ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಗೊಂಡಿದೆ. ನೃತ್ಯ ನಿರ್ದೆಶಕರಾದ ವಿಜಯ್ ಬಿನ್ನಿ ಅವರು ಈ ಸಿನಿಮಾದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಆ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಶೀಘ್ರದಲ್ಲೇ ತೆಲುಗು ‘ಬಿಗ್ ಬಾಸ್ ಸೀಸನ್ 7’ ಆರಂಭವಾಗಲಿದ್ದು ಅದನ್ನು ನಾಗಾರ್ಜುನ ನಿರೂಪಣೆ ಮಾಡಲಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.