ಟೈಟಲ್ ಸಾಂಗ್ ಬಿಡುಗಡೆ ಮಾಡುವ ಮೂಲಕ ‘ಪುಷ್ಪ 2’ (Pushpa 2) ಚಿತ್ರತಂಡ ಭರ್ಜರಿ ಪ್ರಚಾರ ಆರಂಭಿಸಿದೆ. ‘ಪುಷ್ಪ ಪುಷ್ಪ..’ ಎಂಬ ಈ ಹಾಡಿಗೆ ದೇವಿ ಶ್ರೀ ಪ್ರಸಾದ್ ಅವರು ಸಂಗೀತ ನೀಡಿದ್ದಾರೆ. 6 ಭಾಷೆಗಳಲ್ಲಿ ಈ ಸಾಂಗ್ ಬಿಡುಗಡೆ ಆಗಿದೆ. ಮಿಲಿಯನ್ಗಟ್ಟಲೆ ವೀವ್ಸ್ ಪಡೆದು ಮುನ್ನುಗ್ಗುತ್ತಿದೆ. ಟಿ-ಸಿರೀಸ್ ಮೂಲಕ ‘ಪುಷ್ಪ ಪುಷ್ಪ..’ ಹಾಡು (Pushpa Pushpa Song) ರಿಲೀಸ್ ಆಗಿದೆ. ಇದರಲ್ಲಿ ಅಲ್ಲು ಅರ್ಜುನ್ ಅವರನ್ನು ನೋಡಿದ ಅನೇಕರಿಗೆ ‘ಜೋಗಿ’ ಸಿನಿಮಾ ನೆನಪಾಗಿದೆ. ಹೌದು, ಈ ಹಾಡಿನಲ್ಲಿ ಅಲ್ಲು ಅರ್ಜುನ್ (Allu Arjun) ಧರಿಸಿದ ಬಟ್ಟೆಗೂ, ‘ಜೋಗಿ’ ಚಿತ್ರದಲ್ಲಿ ಶಿವರಾಜ್ಕುಮಾರ್ ಧರಿಸಿದ್ದ ಕಾಸ್ಟ್ಯೂಮ್ಗೂ ಸಾಮ್ಯತೆ ಕಾಣಿಸಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.
‘ಪುಷ್ಪ ಪುಷ್ಪ..’ ಹಾಡಿನಲ್ಲಿ ಅಲ್ಲು ಅರ್ಜನ್ ಧರಿಸಿದ ಅಂಗಿಯ ಮೇಲೆ ಹಸ್ತದ ಚಿಹ್ನೆ ಇದೆ. ಕೆಂಪು ಬಣ್ಣದಲ್ಲಿ ಇದನ್ನು ವಿನ್ಯಾಸ ಮಾಡಿಲಾಗಿದೆ. ಈ ಹಾಡನ್ನು ಬಿಡುಗಡೆ ಮಾಡುವುದಕ್ಕೂ ಮುನ್ನ ಅನಾವರಣ ಮಾಡಿದ್ದ ಪೋಸ್ಟರ್ನಲ್ಲೂ ಅದೇ ಚಿಹ್ನೆಯನ್ನು ಹೈಲೈಟ್ ಮಾಡಲಾಗಿತ್ತು. ‘ಜೋಗಿ’ ಸಿನಿಮಾದಲ್ಲಿ ಶಿವಣ್ಣ ಧರಿಸಿದ ಶರ್ಟ್ ಮೇಲೆ ಕೂಡ ಇದೇ ರೀತಿಯ ಹಸ್ತದ ಚಿಹ್ನೆ ಇತ್ತು. ಅದನ್ನು ಈಗ ಪ್ರೇಕ್ಷಕರು ನೆನಪಿಸಿಕೊಳ್ಳುತ್ತಿದ್ದಾರೆ.
‘ಪುಷ್ಪ 2’ ಬಿಡುಗಡೆಗೂ ಮುನ್ನ 150 ಕೋಟಿ ರೂಪಾಯಿಗೆ ಹೆಚ್ಚಿತು ಅಲ್ಲು ಅರ್ಜುನ್ ಸಂಬಳ
‘ಜೋಗಿ’ ಸಿನಿಮಾ 2005ರ ಆಗಸ್ಟ್ 19ರಂದು ಬಿಡುಗಡೆ ಆಗಿತ್ತು. ಆ ಸಿನಿಮಾ ಸೃಷ್ಟಿಸಿದ್ದ ದಾಖಲೆಗಳು ಹಲವು. ‘ಎಕ್ಸ್ಕ್ಯೂಸ್ ಮೀ’ ಹಾಗೂ ‘ಕರಿಯ’ ಚಿತ್ರಗಳ ಯಶಸ್ಸಿನ ಬಳಿಕ ಪ್ರೇಮ್ ಅವರು ‘ಜೋಗಿ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದರು. ಗುರು ಕಿರಣ್ ಸಂಗೀತ ನಿರ್ದೇಶದನಲ್ಲಿ ಮೂಡಿಬಂದಿದ್ದ ಹಾಡುಗಳು ಧೂಳೆಬ್ಬಿಸಿದ್ದವು. ಆ ಸಿನಿಮಾದಲ್ಲಿ ಶಿವರಾಜ್ಕುಮಾರ್ ಅವರ ಗೆಟಪ್, ಕಾಸ್ಟ್ಯೂಮ್, ಡೈಲಾಗ್ ಡೆಲಿವರಿ.. ಎಲ್ಲವೂ ಡಿಫರೆಂಟ್ ಆಗಿತ್ತು. ಆ ಚಿತ್ರ ಬಿಡುಗಡೆಯಾಗಿ 19 ವರ್ಷ ಕಳೆದಿವೆ. ಈಗಲೂ ಅಭಿಮಾನಿಗಳ ಫೇವರಿಟ್ ಲಿಸ್ಟ್ನಲ್ಲಿ ಆ ಸಿನಿಮಾ ಇದೆ.
ಅಲ್ಲು ಅರ್ಜುನ್ ಅವರ ಬೆನ್ನಿನ ಮೇಲೆ ಇರುವ ಈ ಹಸ್ತದ ಗುರುತು ನೋಡಿ ಅಭಿಮಾನಿಗಳಿಗೆ ಕೌತುಕ ಹೆಚ್ಚಾಗಿದೆ. ಆಗಸ್ಟ್ 15ರಂದು ಗ್ರ್ಯಾಂಡ್ ಆಗಿ ‘ಪುಷ್ಪ 2’ ಸಿನಿಮಾ ವಿಶ್ವಾದ್ಯಂತ ಬಿಡುಗಡೆ ಆಗಲಿದೆ. ತೆಲುಗು, ಕನ್ನಡ, ತಮಿಳು, ಹಿಂದಿ, ಮಲಯಾಳಂ, ಬೆಂಗಾಲಿ ಭಾಷೆಯಲ್ಲಿ ಈ ಚಿತ್ರ ರಿಲೀಸ್ ಆಗಲಿದೆ. ‘ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆಯು ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಸುಕುಮಾರ್ ಅವರು ನಿರ್ದೇಶನ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಶ್ರೀವಲ್ಲಿ ಪಾತ್ರದಲ್ಲಿ ಅಭಿಮಾನಿಗಳಿಗೆ ದರ್ಶನ ನೀಡಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.