ಭಾರತ ಕಷ್ಟದಲ್ಲಿದ್ದಾಗ ಮಾಲ್ಡೀವ್ಸ್ಗೆ ಹೋಗಿ ಮಜಾ ಮಾಡುವ ಸೆಲೆಬ್ರಿಟಿಗಳು; ನೆಟ್ಟಿಗರಿಂದ ತರಾಟೆ
ಅನೇಕ ಸೆಲೆಬ್ರಿಟಿಗಳು ಮಾಲ್ಡೀವ್ಸ್ಗೆ ತೆರಳಿದ್ದಾರೆ. ಇನ್ನೂ ಕೆಲವರು ಅಲ್ಲಿಗೆ ಹೋಗಲು ತಯಾರಿ ನಡೆಸಿದ್ದರು. ಅಷ್ಟರಲ್ಲಾಗಲೇ ಮಾಲ್ಡೀವ್ಸ್ ಸರ್ಕಾರ ಶಾಕ್ ನೀಡಿದೆ.
ಭಾರತ ಈಗ ತುಂಬಾ ಸಂಕಷ್ಟದಲ್ಲಿದೆ. ಕೊರೊನಾ ವೈರಸ್ನ ಎರಡನೇ ಅಲೆಗೆ ಸಿಲುಕಿ ಜನರೆಲ್ಲ ಪರದಾಡುತ್ತಿದ್ದಾರೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಜನಸಾಮಾನ್ಯರು ಕಣ್ಣೀರು ಹಾಕುತ್ತಿರುವಾಗ ಕೆಲವು ಸೆಲೆಬ್ರಿಟಗಳು ವಿದೇಶಕ್ಕೆ ಹಾರಿದ್ದಾರೆ. ತಮ್ಮ ಸಿನಿಮಾಗಳು ತೆರೆಕಂಡಾಗ ಪ್ರಚಾರಕ್ಕಾಗಿ ಜನರ ಬಳಿಗೆ ಬರುವ ಸೆಲೆಬ್ರಿಟಿಗಳೆಲ್ಲ ಕೊರೊನಾ ವೈರಸ್ನಿಂದ ಉಂಟಾದ ಈ ಕಡುಕಷ್ಟ ಕಾಲದಲ್ಲಿ ವಿದೇಶಕ್ಕೆ ಹೋಗಿದ್ದಾರೆ. ಅದರಲ್ಲೂ ಮಾಲ್ಡೀವ್ಸ್ನ ದ್ವೀಪಗಳಲ್ಲಿ ಎಂಜಾಯ್ ಮಾಡುತ್ತ, ಸುಖವಾಗಿದ್ದಾರೆ. ಅಂಥವರನ್ನು ಈಗ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ಭಾರತದ ಸೆಲೆಬ್ರಿಟಿಗಳಿಗೆ ಮಾಲ್ಡೀವ್ಸ್ ಎಂದರೆ ಸಿಕ್ಕಾಪಟ್ಟೆ ಇಷ್ಟ. ಬಿಡುವು ಸಿಕ್ಕಾಗಲೆಲ್ಲ ಅವರು ಮಾಲ್ಡೀವ್ಸ್ಗೆ ಹೋಗಿ ಅಲ್ಲಿನ ದ್ವೀಪಗಳಲ್ಲಿ ಕಾಲ ಕಳೆಯುತ್ತಾರೆ. ಇತ್ತೀಚೆಗೆ ಮುಂಬೈನಲ್ಲಿ ಕೊರೊನಾ ವೈರಸ್ ನಿಯಂತ್ರಿಸುವ ಸಲುವಾಗಿ ಲಾಕ್ಡೌನ್ ಘೋಷಿಸಲಾಯಿತು. ಈ ಸಂದರ್ಭದಲ್ಲಿ ಸಿನಿಮಾ ಶೂಟಿಂಗ್ಗಳನ್ನೂ ನಿಲ್ಲಿಸಲಾಗಿದೆ. ಹಾಗಾಗಿ ಅನೇಕ ಸೆಲೆಬ್ರಿಟಿಗಳು ಮಾಲ್ಡೀವ್ಸ್ಗೆ ತೆರಳಿದ್ದಾರೆ. ಇನ್ನೂ ಕೆಲವರು ಅಲ್ಲಿಗೆ ಹೋಗಲು ತಯಾರಿ ನಡೆಸಿದ್ದರು. ಅಷ್ಟರಲ್ಲಾಗಲೇ ಮಾಲ್ಡೀವ್ಸ್ ಸರ್ಕಾರ ಶಾಕ್ ನೀಡಿದೆ.
ಭಾರತದಲ್ಲಿ ಕೊರೊನಾ ವೈರಸ್ ಹಾವಳಿ ಮಿತಿ ಮೀರಿ ಹಬ್ಬುತ್ತಿರುವುದರಿಂದ ಭಾರತದಿಂದ ಪ್ರವಾಸಕ್ಕೆ ಬರುವವರನ್ನು ಮಾಲ್ಡೀವ್ಸ್ ನಿರ್ಬಂಧಿಸಿದೆ. ಅಲ್ಲಿನ ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ಉಳಿದುಕೊಳ್ಳುವುದನ್ನು ನಿಷೇಧಿಸಲಾಗಿದೆ. ಇದು ಬಾಲಿವುಡ್ ಮಂದಿಗೆ ಬರೆ ಹಾಕಿದಂತಾಗಿದೆ. ಕೆಲವೇ ದಿನಗಳ ಹಿಂದೆ ಜರ್ಮನಿ, ಇಟಲಿ, ಇರಾನ್, ಸಿಂಗಾಪುರ್ ಮುಂತಾದ ದೇಶಗಳು ಭಾರತೀಯರ ಪ್ರವೇಶವನ್ನು ನಿರ್ಬಂಧಿಸಿದ್ದವು. ಈಗಿನದ್ದು ಮಾಲ್ಡೀವ್ಸ್ ಸರದಿ.
Maldives suspends tourists from India
Bollywood celebrities: pic.twitter.com/mkdGXuYkJE
— Indian Memes (@Theindianmeme) April 26, 2021
ಜಾನ್ವಿ ಕಪೂರ್, ದಿಶಾ ಪಠಾಣಿ, ಟೈಗರ್ ಶ್ರಾಫ್, ರಣಬೀರ್ ಕಪೂರ್, ಆಲಿಯಾ ಭಟ್ ಮುಂತಾದ ಸೆಲೆಬ್ರಿಟಿಗಳು ಮಾಲ್ಡೀವ್ಸ್ನಲ್ಲಿ ಎಂಜಾಯ್ ಮಾಡುತ್ತಿದ್ದರು. ತಮ್ಮ ಫೋಟೋಗಳನ್ನು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಾಕಿಕೊಂಡು ಖುಷಿಪಡುತ್ತಿದ್ದರು. ಈಗ ಅಂಥವರಿಗೆಲ್ಲ ಮಾಲ್ಡೀವ್ಸ್ ಸರ್ಕಾರ ಕಡಿವಾಣ ಹಾಕಿದೆ. ಪರಿಣಾಮವಾಗಿ ಬಾಲಿವುಡ್ ಸೆಲೆಬ್ರಿಟಿಗಳನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
Bollywood celebrities rushing for the Maldives while watching people in India die… #CovidIndia pic.twitter.com/KUFrVUixm1
— Delhi Decoded (@DelhiDecoded) April 26, 2021
ದೇಶದ ಜನರು ಕಷ್ಟಪಡುತ್ತಿದ್ದಾಗ ಇವರೆಲ್ಲ ಮೋಜು ಮಸ್ತಿ ಮಾಡುತ್ತಿದ್ದರು. ಆದರೆ ಹೀಗೆ ಸರಿಯಾಗಿ ಪಾಠ ಕಲಿಸಿದಂತಾಗಿದೆ ಎಂಬ ಅರ್ಥದಲ್ಲಿ ನೆಟ್ಟಿಗರು ಮೀಮ್ಸ್ ಮಾಡಿ ಹರಿಬಿಡುತ್ತಿದ್ದಾರೆ. ಅವು ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಸ್ವಲ್ಪ ಆದ್ರೂ ನಾಚಿಕೆ ಇರಲಿ: ಕೊರೊನಾ ಸಮಯದಲ್ಲಿ ಬೀಚ್ಗೆ ಹೋಗಿ ಬಿಕಿನಿ ಹಾಕುವವರಿಗೆ ಸ್ಟಾರ್ ನಟನ ಟಾಂಗ್
Published On - 11:33 am, Tue, 27 April 21