
ಹೈದರಾಬಾದ್ ಮಾಲ್‌ನಲ್ಲಿ ನಡೆದ ‘ರಾಜಾ ಸಾಬ್’ ಸಾಂಗ್ ರಿಲೀಸ್ ಕಾರ್ಯಕ್ರಮದಲ್ಲಿ ನಟಿ ನಿಧಿ ಅಗರ್ವಾಲ್ (Nidhi Agerwal) ಭಾಗಿ ಆಗಿದ್ದರು. ಈ ವೇಳೆ ನಟಿಯ ಮೇಲೆ ಅಲ್ಲಿದ್ದ ಜನರು ಮುಗಿಬಿದ್ದಿದ್ದರು.ಇದು ಸಾಕಷ್ಟು ಚರ್ಚೆಗೆ ಕಾರಣ ಆಗಿತ್ತು. ನಟಿ ಇದರಿಂದ ಸಾಕಷ್ಟು ತೊಂದರೆ ಅನುಭವಿಸಿದ್ದರು. ಈಗ ಈ ಘಟನೆ ಬಗ್ಗೆ ತೆಲುಗು ನಟ ಶಿವಾಜಿ ನೀಡಿದ ಹೇಳಿಕೆ ಚರ್ಚೆಗೆ ಕಾರಣವಾಗಿದೆ. ‘ನಟಿಯರು ಸಾಧಾರಣ ಉಡುಗೆ ತೊಡಬೇಕು’ ಎಂದಿದ್ದಾರೆ. ಈ ಹೇಳಿಕೆ ನಟಿಗೆ ಬೇಸರ ಮೂಡಿಸಿದೆ.
ಡಿಸೆಂಬರ್ 17 ರಂದು ಹೈದರಾಬಾದ್‌ನ ಲುಲು ಮಾಲ್‌ನಲ್ಲಿ ರಾಜಾ ಸಾಬ್‌ನ ಹಾಡಿನ ಬಿಡುಗಡೆ ಸಮಾರಂಭದಲ್ಲಿ ನಿಧಿ ಚಿತ್ರತಂಡದೊಂದಿಗೆ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಊಹೆಗೂ ಮೀರಿದ ಸಂಖ್ಯೆಯಲ್ಲಿ ಜನರು ಸೇರಿದ್ದರು.ಈವೆಂಟ್ ಮುಗಿದ ಬಳಿಕ ನಟಿ ಅಲ್ಲಿಂದ ಹೊರ ಬರಲು ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ಸಾಕಷ್ಟು ಜನರು ಅವರ ದೇಹವನ್ನು ಟಚ್ ಮಾಡಿದ್ದರು. ಈ ಸಂಬಂಧ ಕೇಸ್ ಕೂಡ ದಾಖಲಾಯಿತು.
ಶಿವಾಜಿ ಪ್ರತಿಕ್ರಿಯೆ..
ಹೈದರಾಬಾದ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರೋ ಶಿವಾಜಿ, ‘ನಿಧಿಯ ಉಡುಗೆ ಜನಸಮೂಹವನ್ನು ಕೆರಳಿಸಿತು’ ಎಂದು ನೇರವಾಗಿ ಅವರ ಉಡುಗೆ ಬಗ್ಗೆ ಆರೋಪ ಮಾಡಿದ್ದಾರೆ. ‘ಸಾಯಿ ಪಲ್ಲವಿ, ಅನುಷ್ಕಾ, ಸೌಂದರ್ಯ, ಭೂಮಿಕಾ ಮೊದಲಾದವರನ್ನು ಯಾರಾದರೂ ಟಚ್ ಮಾಡಿದ್ದಾರಾ? ಏಕೆಂದರೆ ಅವರು ಸರಿಯಾಗಿ ಬಟ್ಟೆ ಹಾಕುತ್ತಾರೆ’ ಎಂದಿದ್ದಾರೆ ಶಿವಾಜಿ.
ಇದನ್ನೂ ಓದಿ: ನಿಧಿ ಅಗರ್ವಾಲ್ ಜೊತೆ ಅನುಚಿತ ವರ್ತನೆ: ಮಾಲ್ ವಿರುದ್ಧ ಕೇಸ್ ದಾಖಲು
‘ಯಾರೂ ಪ್ರಚೋದಿಸಬೇಡಿ. ನೀವು ಹಾಗೆ ಮಾಡಿದಾಗ ಪುರುಷರು ನಿಮ್ಮನ್ನು ಮುಟ್ಟಬಹುದು ಎಂದು ಭಾವಿಸುತ್ತಾರೆ. ನಿಮಗೆ ಹೇಗೆ ಅನಿಸುತ್ತದೆಯೋ ಹಾಗೆ ಉಡುಗೆ ಧರಿಸಿ. ಆದರೆ,ನಾನು ನಿಜವನ್ನು ಹೇಳುತ್ತಿದ್ದೇನೆ’ ಎಂದಿದ್ದಾರೆ ಅವರು.
ಈ ಕಾಮೆಂಟ್‌ಗಳಿಗೆ ಪ್ರತಿಕ್ರಿಯಿಸಿದ ನಿಧಿ, ‘ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಲುಲು ಮಾಲ್ ಕಾರ್ಯಕ್ರಮದ ಫೋಟೋವನ್ನು ಹಂಚಿಕೊಂಡು, ‘ಸಂತ್ರಸ್ತೆಯನ್ನು ದೂಷಿಸುವುದು ತಪ್ಪು’ ಎಂರ್ಥದಲ್ಲಿ ಮಾತನಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.