ನಾಲ್ಕು ವರ್ಷಗಳ ಹಿಂದೆ ನಿಧಿ ಸುಬ್ಬಯ್ಯ ಮದುವೆ ಆಗಿದ್ರು; ಆಮೇಲೇನಾಯ್ತು?

ಯೋಗರಾಜ್​ ಭಟ್​ ನಟನೆಯ ಪಂಚರಂಗಿ ಸಿನಿಮಾ ನಿಧಿ ಸುಬ್ಬಯ್ಯಗೆ ಹಿಟ್​ ತಂದುಕೊಟ್ಟಿತ್ತು. ಇದಾದ ನಂತರ ನಿಧಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ನಿಧಿ ಸುಬ್ಬಯ್ಯ ಮದುವೆ ಆಗಿದ್ರು; ಆಮೇಲೇನಾಯ್ತು?
ಸಂಗ್ರಹ ಚಿತ್ರ
Edited By:

Updated on: Apr 03, 2021 | 7:05 AM

ನಟಿ ನಿಧಿ ಸುಬ್ಬಯ್ಯ ಬಿಗ್​ ಬಾಸ್​ ಮನೆ ಪ್ರವೇಶಿಸಿ ಐದು ವಾರಗಳು ಕಳೆದಿವೆ. ಎಲ್ಲಾ ಸ್ಪರ್ಧಿಗಳು ತಮ್ಮ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ನಿಧಿ ಕೂಡ ಇದಕ್ಕೆ ಹೊರತಾಗಿಲ್ಲ. ತಮ್ಮ ತಂದೆಗೆ ಕ್ಯಾನ್ಸರ್​ ಆಗಿತ್ತು ಎಂಬಿತ್ಯಾದಿ ವಿಚಾರಗಳನ್ನು ಹಂಚಿಕೊಂಡಿದ್ದರು. ಆದರೆ, ಅವರು ಎಲ್ಲಿಯೂ ಮದುವೆ ಆಗಿದೆ ಎನ್ನುವ ವಿಚಾರದ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ. ಇದು ಏಕೆ? ಎನ್ನುವ ಪ್ರಶ್ನೆ ಅನೇಕರಲ್ಲಿ ಕಾಡುತ್ತಿದೆ.

ಯೋಗರಾಜ್​ ಭಟ್​ ನಟನೆಯ ಪಂಚರಂಗಿ ಸಿನಿಮಾ ನಿಧಿ ಸುಬ್ಬಯ್ಯಗೆ ಹಿಟ್​ ತಂದುಕೊಟ್ಟಿತ್ತು. ಇದಾದ ನಂತರ ನಿಧಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಾಲಿವುಡ್​ ಅಂಗಳದಲ್ಲೂ ನಿಧಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು. ಈ ಮಧ್ಯೆ 2017ರಲ್ಲಿ ನಿಧಿ ಮದುವೆ ಆಗಿದ್ದರು.

ಲವೇಶ್​ ಹೆಸರಿನ ಉದ್ಯಮಿಯನ್ನು ನಿಧಿ ಪ್ರೀತಿಸುತ್ತಿದ್ದರು. 2017ರಲ್ಲಿ ವಿರಾಜಪೇಟೆಯ ಖಾಸಗಿ ರೆಸಾರ್ಟ್​ನಲ್ಲಿ ಇವರು ಮದುವೆ ಕೂಡ ಆಗಿದ್ದರು. ನಂತರ ನಿಧಿ ಪತಿ ಜತೆ ವಿದೇಶಕ್ಕೆ ಹಾರಿದ್ದರು ಎನ್ನಲಾಗಿದೆ. ಈ ಅವಧಿಯಲ್ಲಿ ನಿಧಿ ಸಾಮಾಜಿಕ ಜಾಲತಾಣದಲ್ಲಿ ದೂರವೇ ಉಳಿದಿದ್ದರು.

2017ರ ಸಮಯದಲ್ಲಿ ನಿಧಿ ಕೆಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆದರೆ, ಈಗ ಆ ಫೋಟೋಗಳು ಕಾಣುತ್ತಿಲ್ಲ. ಅಲ್ಲದೆ, ಬಿಗ್​ ಬಾಸ್​ ಮನೆಯಲ್ಲಿ ಎಲ್ಲೂ ಅವರು ತಮಗೆ ಮದುವೆ ಆಗಿತ್ತು ಎಂಬುದಾಗಲೀ, ಪತಿ ಏನು ಮಾಡುತ್ತಿದ್ದಾರೆ ಎಂಬುದಾಗಲೀ ಹಂಚಿಕೊಂಡಿಲ್ಲ. ಇತ್ತೀಚೆಗೆ ಅವರು ನನಗೂ ಒಬ್ಬ ಗೆಳೆಯ ಬೇಕು ಎಂದು ಹೇಳಿಕೊಂಡಿದ್ದರು. ಇದು ಕೂಡ ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ.

ಮೂಲಗಳ ಪ್ರಕಾರ ಮದುವೆ ಆದ ನಂತರ ಒಂದೇ ವರ್ಷದಲ್ಲಿ ಇಬ್ಬರೂ ವಿಚ್ಛೇದನ ಪಡೆದಿದ್ದಾರಂತೆ. ಆದರೆ, ಈ ವಿಚಾರ ಎಲ್ಲೂ ಅಷ್ಟಾಗಿ ಸುದ್ದಿಯಾಗಿಲ್ಲ. ನಿಧಿ ಕೂಡ ಈ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ. ಸದ್ಯ, ಈ ವಿಚಾರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲ ಇದೆ. ಈ ಬಗ್ಗೆ ಅವರು ಬಿಗ್​ ಬಾಸ್​ ಮನೆಯಲ್ಲಿ ಎಲ್ಲಾದರೂ ಹೇಳುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಪ್ರಶಾಂತ್​ ಸಂಬರಗಿ ಎದುರು ತಪ್ಪು ಒಪ್ಪಿಕೊಂಡ ನಿಧಿ; ದ್ವೇಷ ಕಳೆದುಕೊಂಡು ಒಂದಾದರು!