ರಘು ಗೌಡಗೆ ಎಫ್​ ಶಬ್ದದ ಮೂಲಕ ಬೈದ ನಿಧಿ ಸುಬ್ಬಯ್ಯ!

ಆಗ ರಘು ಮಧ್ಯದಲ್ಲಿ ಮಾತನಾಡೋಕೆ ಪ್ರಯತ್ನಿಸಿದ್ದಾರೆ. ಇದು ನಿಧಿಗೆ ಇಷ್ಟವಾಗಿಲ್ಲ. ಎಕ್ಸ್​ಕ್ಯೂಸ್​ಮಿ, ನಾನು ಹೇಳಿ ಮುಗಿಸಿಕೊಳ್ಳುತ್ತೇನೆ ಎಂದು ದೊಡ್ಡ ಧ್ವನಿಯಲ್ಲೇ ನಿಧಿ ಹೇಳಿದರು.

ರಘು ಗೌಡಗೆ ಎಫ್​ ಶಬ್ದದ ಮೂಲಕ ಬೈದ ನಿಧಿ ಸುಬ್ಬಯ್ಯ!
ರಘು ಗೌಡ-ನಿಧಿ ಸುಬ್ಬಯ್ಯ

Updated on: Apr 03, 2021 | 6:41 PM

 ಬಿಗ್​ ಬಾಸ್​ ಮನೆಯಲ್ಲಿರುವ ನಿಧಿ ಸುಬ್ಬಯ್ಯ ಅವರು ರಘು ಗೌಡ ಜತೆ ಉತ್ತಮ ಒಡನಾಟ ಹೊಂದಿದ್ದಾರೆ. ನಿಧಿ ಎಲ್ಲರ ಜತೆಯೂ ಓಪನ್​ಅಪ್​ ಆಗಿಲ್ಲ. ಆದರೆ, ರಘು ಗೌಡ ಎಂದರೆ ಅವರಿಗೆ ಹೆಚ್ಚು ಇಷ್ಟ. ಇದೇ ಕಾರಣಕ್ಕೆ ಏನೇ ಕಷ್ಟ ಸುಖ ಇದ್ದರೂ ರಘು ಬಳಿ ಹಂಚಿಕೊಳ್ಳುತ್ತಾರೆ. ಆದರೆ, ಈಗ ಇಬ್ಬರ ನಡುವೆ ವೈಮನಸ್ಸು ಮೂಡುವ ಲಕ್ಷಣ ಗೋಚರವಾಗಿದೆ.

ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​, ಚಕ್ರವರ್ತಿ ಚಂದ್ರಚೂಡ್, ನಿಧಿ ಸುಬ್ಬಯ್ಯ ಹಾಗೂ ಮಂಜು ಕೂತು ಮಾತನಾಡುತ್ತಿದ್ದರು. ಈ ವೇಳೆ ನಿಧಿ, ಟಾಸ್ಕ್​ ಚೆನ್ನಾಗಿ ಮಾಡಿಲ್ಲ ಎಂದರೆ ಎಲ್ಲರೂ ನಮಗೆ ಕಳಪೆ ಎನ್ನುವ ಪಟ್ಟ ಕಟ್ಟುತ್ತಾರೆ. ಉಳಿದ ಯಾವ ವಿಚಾರವನ್ನೂ ಗಮನಿಸುವುದೇ ಇಲ್ಲ ಎಂದು ಬೇಸರ ಹೊರ ಹಾಕಿದರು.

ಆಗ ರಘು ಮಧ್ಯದಲ್ಲಿ ಮಾತನಾಡೋಕೆ ಪ್ರಯತ್ನಿಸಿದ್ದಾರೆ. ಇದು ನಿಧಿಗೆ ಇಷ್ಟವಾಗಿಲ್ಲ. ಎಕ್ಸ್​ಕ್ಯೂಸ್​ಮಿ, ನಾನು ಹೇಳಿ ಮುಗಿಸಿಕೊಳ್ಳುತ್ತೇನೆ ಎಂದು ದೊಡ್ಡ ಧ್ವನಿಯಲ್ಲೇ ನಿಧಿ ಹೇಳಿದರು. ಇದಕ್ಕೆ ರಘು ಸಿಟ್ಟಾಗಿದ್ದಾರೆ. ನೀವು ಮೆಲ್ಲಗೆ ಹೇಳಿದ್ರೆ ನಂಗೆ ಅರ್ಥವಾಗುತ್ತೆ. ದೊಡ್ಡ ಧ್ವನಿ ಮಾಡಿ ಹೇಳುವ ಅಗತ್ಯವೇನಿತ್ತು ಎಂದು ಪ್ರಶ್ನೆ ಮಾಡಿದ್ದಾರೆ.

ಆಗ ನಿಧಿ, ನಾನು ನಿಮಗೆ ಬಯ್ಯುತ್ತಿಲ್ಲ ಅಥವಾ ನಿಮ್ಮನ್ನು ಟೀಕೆ ಮಾಡುತ್ತಿಲ್ಲ. ಇದ್ದ ವಿಚಾರವನ್ನು ಹೇಳುತ್ತಿದ್ದೇನೆ ಎಂದರು. ಆಗ ರಘು, ಹೌದು ಎಂದು ಕೊಂಕಾಗಿ ಉತ್ತರಿಸಿದರು. ಆಗ ನಿಧಿ What the F*** Dude ಎಂದು ಪ್ರಶ್ನೆ ಮಾಡಿದ್ದಾರೆ.

ನಂತರ ಮಾತಿಗೆ ಮಾತು ಬೆಳೆದಿದೆ. ನಿಧಿ ಕೊನೆಗೆ ಬೇಸರ ಮಾಡಿಕೊಂಡು ಅತ್ತೇ ಬಿಟ್ಟಿದ್ದಾರೆ. ಆಗ ನಿಧಿ ಅವರನ್ನು ರಘು ಸಮಾಧಾನ ಮಾಡೋಕೆ ಹೋಗಿದ್ದಾರೆ. ಕೊನೆಗೂ ನಿಧಿ ಅಳುತ್ತಲೇ ತಾವು ಏನು ಹೇಳಬೇಕು ಎಂದುಕೊಂಡಿದ್ದರೋ ಅದನ್ನು ಹೇಳಿ ಮುಗಿಸಿದ್ದಾರೆ.

ಇದನ್ನೂ ಓದಿ: ಗೆಳೆಯ ಎನ್ನುತ್ತಲೇ ಚಂದ್ರಚೂಡ್​ಗೆ ನಂಬಿಕೆ ದ್ರೋಹ ಬಗೆದ ಸಂಬರಗಿ; ಇಲ್ಲಿದೆ ವಿಡಿಯೋ ಸಾಕ್ಷಿ

Published On - 6:37 pm, Sat, 3 April 21