ಯಶ್ ಜೊತೆ ರೀಲ್ಸ್ ಮಾಡಿದ್ದ ಯೂಟ್ಯೂಬರ್ ಈಗ ನಟಿ; ದೊಡ್ಡ ನಿರ್ಮಾಣ ಸಂಸ್ಥೆಯಿಂದ ಬಂಡವಾಳ

ನಿಹಾರಿಕಾ ಅಭಿಮಾನಿ ಬಳಗ ದೊಡ್ಡದು. ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ 30 ಲಕ್ಷ ಹಿಂಬಾಲಕರು ಇದ್ದಾರೆ. ಕನ್ನಡದ ಸ್ಟಾರ್​ ನಟ ಯಶ್ ಜೊತೆ ಇನ್​ಸ್ಟಾಗ್ರಾಮ್ ರೀಲ್ಸ್ ಮಾಡಿದಂತೆಯೇ ಅವರು ತೆಲುಗಿನಲ್ಲಿ ಮಹೇಶ್ ಬಾಬು ಹಾಗೂ ಇತರ ಸ್ಟಾರ್​ಗಳ ಜೊತೆ ವಿಡಿಯೋ ಮಾಡಿದ್ದಾರೆ. ಈಗ ಅವರು ನಟಿ ಆಗುತ್ತಿದ್ದಾರೆ.

ಯಶ್ ಜೊತೆ ರೀಲ್ಸ್ ಮಾಡಿದ್ದ ಯೂಟ್ಯೂಬರ್ ಈಗ ನಟಿ; ದೊಡ್ಡ ನಿರ್ಮಾಣ ಸಂಸ್ಥೆಯಿಂದ ಬಂಡವಾಳ
ಯಶ್-ನಿಹಾರಿಕಾ

Updated on: May 21, 2024 | 7:49 AM

ಯೂಟ್ಯೂಬರ್ ನಿಹಾರಿಕಾ ಎನ್​ಎಂ ಬಗ್ಗೆ ಅನೇಕರಿಗೆ ತಿಳಿದಿದೆ. ಅವರು ಕನ್ನಡ ಮಂದಿಗೂ ಪರಿಚಿತರು. ‘ಕೆಜಿಎಫ್ 2’ (KGF Chapter 2) ಸಂದರ್ಭದಲ್ಲಿ ಯಶ್ ಜೊತೆ ರೀಲ್ಸ್ ಮಾಡಿ ವೈರಲ್ ಆಗಿದ್ದರು. ಈಗ ಅವರು ಸಿನಿಮಾ ರಂಗಕ್ಕೆ ಕಾಲಿಡುತ್ತಿದ್ದಾರೆ. ಯೂಟ್ಯೂಬರ್ ಆಗಿ ಫೇಮಸ್ ಆಗಿದ್ದ ಅವರು ಈಗ ಪೂರ್ಣ ಪ್ರಮಾಣದಲ್ಲಿ ನಟಿ ಆಗುತ್ತಿದ್ದಾರೆ. ಅವರ ಮೊದಲ ಸಿನಿಮಾಗೆ ದೊಡ್ಡ ನಿರ್ಮಾಣ ಸಂಸ್ಥೆಯೇ ಬಂಡವಾಳ ಹೂಡುತ್ತಿದೆ. ಮ್ಯೂಸಿಕ್ ಡೈರೆಕ್ಟರ್ ಎಸ್​. ಥಮನ್ ಅವರು ಅವರ ಅತಿಥಿ ಪಾತ್ರ ಕೂಡ ಸಿನಿಮಾದಲ್ಲಿ ಇರಲಿದೆ ಎಂದು ಹೇಳಲಾಗುತ್ತಿದೆ.

ನಿಹಾರಿಕಾ ಅಭಿಮಾನಿ ಬಳಗ ದೊಡ್ಡದು. ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ 30 ಲಕ್ಷ ಹಿಂಬಾಲಕರು ಇದ್ದಾರೆ. ಕನ್ನಡದ ಸ್ಟಾರ್​ ನಟ ಯಶ್ ಜೊತೆ ಇನ್​ಸ್ಟಾಗ್ರಾಮ್ ರೀಲ್ಸ್ ಮಾಡಿದಂತೆಯೇ ಅವರು ತೆಲುಗಿನಲ್ಲಿ ಮಹೇಶ್ ಬಾಬು ಹಾಗೂ ಇತರ ಸ್ಟಾರ್​ಗಳ ಜೊತೆ ವಿಡಿಯೋ ಮಾಡಿದ್ದಾರೆ. ಇದರಿಂದ ತೆಲುಗು ಮಂದಿಗೂ ಅವರ ಪರಿಚಯ ಇದೆ. ಅವರು ತಮಿಳು ಚಿತ್ರಕ್ಕೆ ಸಹಿ ಹಾಕಿದ್ದಾರೆ.

ನಿಹಾರಿಕಾ ಅವರ ಮೊದಲ ಚಿತ್ರಕ್ಕೆ ತಮಿಳಿನ ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಬಂಡವಾಳ ಹೂಡುತ್ತಿದೆ. ಇದನ್ನು ತಮಿಳಿನ ಜೊತೆಗೆ ಇತರ ಭಾಷೆಗೂ ಡಬ್ ಮಾಡಿ ರಿಲೀಸ್ ಮಾಡಲು ತಂಡ ನಿರ್ಧರಿಸಿದೆ. ಅಥರ್ವ ಅವರು ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ಎಸ್ ಥಮನ್ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ. ವಿಶೇಷ ಎಂದರೆ ಅವರು ಈ ಚಿತ್ರದಲ್ಲಿ ಅತಿಥಿ ಪಾತ್ರ ಕೂಡ ಮಾಡುತ್ತಿದ್ದಾರೆ. ಈ ವಿಚಾರ ಅನೇಕರಿಗೆ ಅಚ್ಚರಿ ತಂದಿದೆ. ನಿರ್ದೇಶಕರು, ಸಂಗೀತ ಸಂಯೋಜಕರು ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡೋದು ಕಾಮನ್. ಅದೇ ರೀತಿ ಥಮನ್ ಅವರು ಅತಿಥಿ ಪಾತ್ರ ಮಾಡಲಿದ್ದಾರೆ.

ಇದನ್ನೂ ಓದಿ: ಕಂಟೆಂಟ್ ಕ್ರಿಯೇಟರ್ ನಿಹಾರಿಕಾಗೆ ಪಂಚ್ ಕೊಟ್ಟ ರಾಕಿಂಗ್ ಸ್ಟಾರ್ ಯಶ್​; ವಿಡಿಯೋ ವೈರಲ್

ಸದ್ಯ ಸಿನಿಮಾ ತಂಡ ಪ್ರೀ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇದೆ. ಈ ಚಿತ್ರದ ಉಳಿದ ಪಾತ್ರವರ್ಗ ಹಾಗೂ ತಾಂತ್ರಿಕ ವರ್ಗದ ಬಗ್ಗೆ ಇನ್ನೂ ಮಾಹಿತಿ ರಿವೀಲ್ ಆಗಿಲ್ಲ. ಈ ಬಗ್ಗೆ ಶೀಘ್ರವೇ ಅಧಿಕೃತ ಮಾಹಿತಿ ಸಿಗಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.