Yami Gautam: ಗಂಡು ಮಗುವಿಗೆ ಜನ್ಮ ನೀಡಿದ ಯಾಮಿ ಗೌತಮ್; ಇಟ್ಟ ಹೆಸರೇನು?
ಸೋಶಿಯಲ್ ಮೀಡಿಯಾದಲ್ಲಿ ಯಾಮಿ ಹಾಗೂ ಆದಿತ್ಯ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮುಂಬೈನ ಸೂರ್ಯ ಹಾಸ್ಪಿಟಲ್ನಲ್ಲಿ ಮಗುವಿನ ಜನನ ಆಗಿದೆ ಎಂದು ಯಾಮಿ ಮಾಹಿತಿ ನೀಡಿದ್ದಾರೆ. ಮಗುವಿನ ಹೆಸರನ್ನು ಕೂಡ ರಿವೀಲ್ ಮಾಡಲಾಗಿದೆ.
Updated on: May 21, 2024 | 8:41 AM

ನಟಿ ಯಾಮಿ ಗೌತಮ್ ಅವರು ಆದಿತ್ಯ ಧಾರ್ ಅವರನ್ನು 2021ರ ಜೂನ್ 4ರಂದು ವಿವಾಹ ಆದರು. ಈಗ ಯಾಮಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆ ಆಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಯಾಮಿ ಹಾಗೂ ಆದಿತ್ಯ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮುಂಬೈನ ಸೂರ್ಯ ಹಾಸ್ಪಿಟಲ್ನಲ್ಲಿ ಮಗುವಿನ ಜನನ ಆಗಿದೆ ಎಂದು ಯಾಮಿ ಮಾಹಿತಿ ನೀಡಿದ್ದಾರೆ. ಮಗುವಿನ ಹೆಸರನ್ನು ಕೂಡ ರಿವೀಲ್ ಮಾಡಲಾಗಿದೆ.

ವೇದವಿದ್ ಎಂದು ಮಗುವಿಗೆ ನಾಮಕರಣ ಮಾಡಲಾಗಿದೆ. ಶಿವ ಪುರಾಣದ ಪ್ರಕಾರ ವೇದವಿದ್ ಎಂದರೆ ವೇದಗಳ ಬಗ್ಗೆ ಜ್ಞಾನ ಹೊಂದಿರುವವನು ಎಂದರ್ಥ.

ಸದ್ಯ ಯಾಮಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ. ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳು ನಟಿಗೆ ಅಭಿನಂದನೆ ತಿಳಿಸಿದ್ದಾರೆ. ಅವರು ಮಗುವಿನ ಫೋಟೋ ರಿವೀಲ್ ಮಾಡಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಆದಿತ್ಯ ಧಾರ್ ನಿರ್ದೇಶಣದ ‘ಉರಿ’ ಸಿನಿಮಾದಲ್ಲಿ ಯಾಮಿ ನಟಿಸಿದ್ದರು. ಈ ಸಿನಿಮಾದ ಸೆಟ್ನಲ್ಲಿ ಇವರ ಮಧ್ಯೆ ಪ್ರೀತಿ ಮೂಡಿತ್ತು. ವಿಕ್ಕಿ ಕೌಶಲ್ ಅವರ ಬಣ್ಣದ ಬದುಕನ್ನು ಈ ಸಿನಿಮಾ ಬದಲಿಸಿತ್ತು.

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.
Read More




