AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಂಟೆಂಟ್ ಕ್ರಿಯೇಟರ್ ನಿಹಾರಿಕಾಗೆ ಪಂಚ್ ಕೊಟ್ಟ ರಾಕಿಂಗ್ ಸ್ಟಾರ್ ಯಶ್​; ವಿಡಿಯೋ ವೈರಲ್

ಹಲವು ಕಂಟೆಂಟ್ ಕ್ರಿಯೇಟರ್​ಗಳನ್ನು ಯಶ್ ಭೇಟಿ ಮಾಡಿದ್ದಾರೆ. ನಿಹಾರಿಕಾ ಕೂಡ ಯಶ್​ ಅವರನ್ನು ಭೇಟಿ ಮಾಡಿದ್ದು, ಒಂದು ರೀಲ್ಸ್ ಮಾಡಿ ಪೋಸ್ಟ್ ಮಾಡಿದ್ದಾರೆ.

ಕಂಟೆಂಟ್ ಕ್ರಿಯೇಟರ್ ನಿಹಾರಿಕಾಗೆ ಪಂಚ್ ಕೊಟ್ಟ ರಾಕಿಂಗ್ ಸ್ಟಾರ್ ಯಶ್​; ವಿಡಿಯೋ ವೈರಲ್
ನಿಹಾರಿಕಾ-ಯಶ್
TV9 Web
| Edited By: |

Updated on: Apr 13, 2022 | 6:15 PM

Share

ಇದು ಸೋಶಿಯಲ್ ಮೀಡಿಯಾ ಜಮಾನ. ಸಾಕಷ್ಟು ಕಂಟೆಂಟ್ ಕ್ರಿಯೇಟರ್​ಗಳು ಹುಟ್ಟಿಕೊಂಡಿದ್ದಾರೆ. ಅವರು ಪೋಸ್ಟ್​ ಮಾಡುವ ವಿಡಿಯೋಗಳು ಲಕ್ಷಾಂತರ, ಕೋಟ್ಯಂತರ ವೀಕ್ಷಣೆ ಕಾಣುತ್ತವೆ. ನಿಹಾರಿಕಾ ಎನ್​.ಎಂ. (Niharika Nm) ಕೂಡ ಓರ್ವ ಕಂಟೆಂಟ್ ಕ್ರಿಯೇಟರ್. ಅವರು ಮಾಡುವ ವಿಡಿಯೋಗಳನ್ನು ಅಭಿಮಾನಿಗಳು ಇಷ್ಟಪಡುತ್ತಾರೆ. ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ (Instagram) 20 ಲಕ್ಷ ಹಿಂಬಾಲಕರಿದ್ದಾರೆ. ಈಗ ಅವರು ಯಶ್ (Yash) ಜತೆ ಮಾಡಿರುವ ಹೊಸ ವಿಡಿಯೋ ಒಂದು ಸಖತ್ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ಅನೇಕರು ನಕ್ಕಿದ್ದಾರೆ. ನಿಹಾರಿಕಾಗೆ ಯಶ್ ಪಂಚ್ ಕೊಟ್ಟ ರೀತಿ ಅಭಿಮಾನಿಗಳಿಗೆ ಇಷ್ಟವಾಗಿದೆ.

‘ಕೆಜಿಎಫ್​ ಚಾಪ್ಟರ್​ 2’ ರಿಲೀಸ್​ಗೆ ರೆಡಿ ಇದೆ. ಈ ಸಿನಿಮಾ ಪ್ರಚಾರಕ್ಕಾಗಿ ಚಿತ್ರತಂಡ ಉತ್ತರ ಭಾರತದಲ್ಲಿ ಸಾಕಷ್ಟು ಸಮಯ ಕಳೆದಿದೆ. ಹಲವು ಮಾಧ್ಯಮಗಳಿಗೆ ಸಂದರ್ಶನ ನೀಡಿದೆ. ಯಶ್ ಅವರನ್ನು ಕಂಡು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಉತ್ತರ ಭಾರತದಲ್ಲಿ ಅವರು ಮಾಲ್​ನಲ್ಲಿ ಪ್ರಚಾರಕ್ಕೆ ತೆರಳಿದಾಗ ಸಾವಿರಾರು ಅಭಿಮಾನಿಗಳು ಯಶ್ ಅವರನ್ನು ನೋಡಲು ಮುಗಿಬಿದ್ದಿದ್ದರು. ಈ ಫೋಟೋ ಸಖತ್ ವೈರಲ್ ಆಗಿತ್ತು. ಹಲವು ಕಂಟೆಂಟ್ ಕ್ರಿಯೇಟರ್​ಗಳನ್ನು ಯಶ್ ಭೇಟಿ ಮಾಡಿದ್ದಾರೆ. ನಿಹಾರಿಕಾ ಕೂಡ ಯಶ್​ ಅವರನ್ನು ಭೇಟಿ ಮಾಡಿದ್ದು, ಒಂದು ರೀಲ್ಸ್ ಮಾಡಿ ಪೋಸ್ಟ್ ಮಾಡಿದ್ದಾರೆ.

‘ಕೆಜಿಎಫ್​ 2’ ಸಿನಿಮಾದ  ‘ವಾಯ್ಲೆನ್ಸ್​.​​. ವಾಯ್ಲೆನ್ಸ್​​.​. ವಾಯ್ಲೆನ್ಸ್​..’ ಡೈಲಾಗ್ ಸಖತ್ ಫೇಮಸ್ ಆಗಿದೆ. ಇದೇ ಡೈಲಾಗ್​ಅನ್ನು ನಿಹಾರಿಕಾ ಹೇಳಿದ್ದಾರೆ. ಕೈನಲ್ಲಿ ಬಾಟಲ್ ಒಂದನ್ನು ಇಟ್ಟುಕೊಂಡ ನಿಹಾರಿಕಾ, ‘ವಾಯ್ಲೆನ್ಸ್​​.. ವಾಯ್ಲೆನ್ಸ್​​.. ವಾಯ್ಲೆನ್ಸ್​..​’ ಎಂದು ಹೇಳೋಕೆ ಶುರು ಮಾಡಿದ್ದಾರೆ. ಏನೇ ಮಾಡಿದರೂ ಆ ಬಾಟಲಿಯ ಮುಚ್ಚಳ ತೆಗೆಯಲು ಸಾಧ್ಯವಾಗಿಲ್ಲ. ‘ಯಾರು ಈ ಬಾಟಲಿ ಕೊಟ್ಟಿದ್ದು. ಬೇರೆ ಬಾಟಲಿ ಕೊಡಿ’ ಎಂದು ಮತ್ತೊಂದು ಬಾಟಲಿ ತೆಗೆದುಕೊಳ್ಳುತ್ತಾರೆ ನಿಹಾರಿಕಾ. ಆಗ ಯಶ್ ಎಂಟ್ರಿ ಆಗುತ್ತದೆ.

ನಿಹಾರಿಕಾ ಹಿಡಿದುಕೊಂಡಿದ್ದ ಬಾಟಲಿಯನ್ನು ಯಶ್ ತಮ್ಮ ಕೈಗೆ ತೆಗೆದುಕೊಳ್ಳುತ್ತಾರೆ. ‘ವಾಯ್ಲೆನ್ಸ್​​ ಲೈಕ್ಸ್​ ಮಿ. ಐ ಕಾಂಟ್​ ಅವಾಯ್ಡ್​’ ಎನ್ನುವ ಯಶ್,​ ಬೆರಳಿನಲ್ಲೇ ಮುಚ್ಚಳ ಹಾರಿಸುತ್ತಾರೆ. ನಂತರ ಬಾಟಲಿ ಸಮೇತ ಅವರು ಅಲ್ಲಿಂದ ತೆರಳುತ್ತಾರೆ. ‘ಮೈ ನೇಮ್​ ಇಸ್ ವಾಯ್ಲೆನ್ಸ್​​, ಡೋಂಟ್​ ಅವಾಯ್ಡ್​ ಮಿ ಸರ್​’ ಎಂದು ಯಶ್ ಹಿಂದೆ ಓಡುತ್ತಾರೆ ನಿಹಾರಿಕಾ. ಸದ್ಯ, ಈ ವಿಡಿಯೋ 6 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ.

ಇದನ್ನೂ ಓದಿ: ಪುಣೆಯಲ್ಲಿ ‘ಕೆಜಿಎಫ್​ 2’ ಟಿಕೆಟ್​ ಸಿಗದೇ ವಿಮಾನ ಹತ್ತಿ ಬೆಂಗಳೂರಿಗೆ ಬಂದ ಲೇಡಿ ಫ್ಯಾನ್ಸ್​​: ಆಹಾ ಅಭಿಮಾನ

‘ಕೆಜಿಎಫ್​ 2’ ಬಿಡುಗಡೆಗೂ ಮುನ್ನ ಹುಟ್ಟೂರಿಗೆ ಭೇಟಿ; ಒಂದೇ ಫ್ರೇಮ್​ನಲ್ಲಿ ವಿಜಯ್ ಕಿರಗಂದೂರು, ಯಶ್, ಪ್ರಶಾಂತ್ ನೀಲ್

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ