ವೇದಿಕೆ ಮೇಲೆ ನಟಿಗೆ ಲಿಪ್​​ಲಾಕ್ ಮಾಡಿದ ಅಭಿಮಾನಿ; ತಳ್ಳಿದರೂ ಬಿಡದ ಫ್ಯಾನ್

ರೆಡ್ ಕಾರ್ಪೆಟ್ ಮೇಲೆಯೇ 'ಗರಂ ಮಸಾಲಾ' ಸಿನಿಮಾ ಖ್ಯಾತಿಯ ನಟಿ ನಿಕಿತಾ ರಾವಲ್ ಅವರಿಗೆ ಮಹಿಳಾ ಅಭಿಮಾನಿಯೊಬ್ಬಳು ಹಠಾತ್ತಾಗಿ ಲಿಪ್ ಕಿಸ್ ಕೊಟ್ಟಿದ್ದಾಳೆ. ಈ ದಿಢೀರ್ ಆಘಾತಕಾರಿ ಘಟನೆಯಿಂದ ನಟಿ ತೀವ್ರ ಅಸಹಾಯಕತೆಗೆ ಒಳಗಾಗಿದ್ದಾರೆ. ಪ್ರಸ್ತುತ ಈ ಶಾಕಿಂಗ್ ವಿಡಿಯೋ ಸೋಶಿಯಲ್ ಮೀಡಿಯಾ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರಿಂದ ತೀವ್ರ ಮಟ್ಟದ ಆಕ್ರೋಶ ವ್ಯಕ್ತವಾಗುತ್ತಿದೆ.

ವೇದಿಕೆ ಮೇಲೆ ನಟಿಗೆ ಲಿಪ್​​ಲಾಕ್ ಮಾಡಿದ ಅಭಿಮಾನಿ; ತಳ್ಳಿದರೂ ಬಿಡದ ಫ್ಯಾನ್
ನಿಕಿತಾ

Updated on: Aug 10, 2026 | 7:39 AM

ಮುಖ್ಯಾಂಶಗಳು

  • ರೆಡ್ ಕಾರ್ಪೆಟ್ ಮೇಲೆ ನಟಿಗೆ ಶಾಕ್ ಕೊಟ್ಟ ಅಭಿಮಾನಿ
  • ಸೆಲ್ಫಿ ನೆಪದಲ್ಲಿ ನಿಕಿತಾ ರಾವಲ್ ತುಟಿಗೆ ಕಿಸ್
  • ಕಹಿ ಅನುಭವದ ನಡುವೆಯೂ ಬ್ಯುಸಿ ನಟಿಯ ಸಿನಿಮಾ ಪಯಣ

ರೆಡ್ ಕಾರ್ಪೆಟ್ ಕಾರ್ಯಕ್ರಮಗಳು ಯಾವಾಗಲೂ ಝಗಮಗಿಸುತ್ತವೆ. ಆದರೆ ಕೆಲವೊಮ್ಮೆ ಇಲ್ಲಿ ನಟಿಯರಿಗೆ ಕಹಿ ಅನುಭವಗಳೂ ಎದುರಾಗುತ್ತವೆ. ‘ಗರಂ ಮಸಾಲಾ’ ಸಿನಿಮಾ ಖ್ಯಾತಿಯ ನಟಿ ನಿಕಿತಾ ರಾವಲ್ ಅವರಿಗೆ ಇತ್ತೀಚೆಗೆ ಇಂತಹದ್ದೇ ಒಂದು ಶಾಕಿಂಗ್ ಘಟನೆ ನಡೆದಿದೆ. ವೇದಿಕೆಯ ಮೇಲೆ ಅಭಿಮಾನಿಯೊಬ್ಬಳು ನಿಕಿತಾಗೆ ಹಠಾತ್ತಾಗಿ ಲಿಪ್ ಕಿಸ್ ಕೊಟ್ಟಿದ್ದಾಳೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪ್ರಸ್ತುತ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಕಾರ್ಯಕ್ರಮವೊಂದರಲ್ಲಿ ನಿಕಿತಾ ರಾವಲ್ ರೆಡ್ ಕಾರ್ಪೆಟ್ ಮೇಲೆ ಪೋಸ್ ನೀಡುತ್ತಿದ್ದರು. ಛಾಯಾಗ್ರಾಹಕರು ಫೋಟೋ ತೆಗೆಯುತ್ತಿದ್ದರು. ಆ ಸಮಯದಲ್ಲಿ ಮಹಿಳಾ ಅಭಿಮಾನಿಯೊಬ್ಬಳು ನಿಕಿತಾ ಬಳಿ ಬಂದಳು. ನಟಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮನವಿ ಮಾಡಿದಳು. ನಿಕಿತಾ ಕೂಡ ನಗುತ್ತಲೇ ಸೆಲ್ಫಿಗೆ ಒಪ್ಪಿಕೊಂಡರು. ಆಕೆಯ ಜೊತೆ ಪ್ರೀತಿಯಿಂದ ಫೋಟೋಗೆ ಪೋಸ್ ನೀಡಿದರು.

ಆದರೆ ಮುಂದಿನ ಕ್ಷಣದಲ್ಲೇ ಆಘಾತಕಾರಿ ಘಟನೆ ನಡೆಯಿತು. ಆ ಅಭಿಮಾನಿ ನಿಕಿತಾ ಅವರ ಕೆನ್ನೆಗೆ ಕಿಸ್ ಮಾಡಿದಳು. ತಕ್ಷಣವೇ ನಟಿಯನ್ನು ತನ್ನತ್ತ ಎಳೆದುಕೊಂಡಳು. ನೇರವಾಗಿ ನಿಕಿತಾ ತುಟಿಗೆ ಕಿಸ್ ಮಾಡಿದಳು. ಈ ದಿಢೀರ್ ಕೃತ್ಯದಿಂದ ನಟಿ ಸಂಪೂರ್ಣವಾಗಿ ಬೆಚ್ಚಿಬಿದ್ದರು. ಆಕೆಯಿಂದ ತಪ್ಪಿಸಿಕೊಳ್ಳಲು ನಿಕಿತಾ ಪ್ರಯತ್ನಿಸಿದರು.

ಇದನ್ನೂ ಓದಿ: ‘ಟಾಕ್ಸಿಕ್’ ಟ್ರೇಲರ್; ಕಿಯಾರಾ ಟ್ರೋಲ್ ಮಾಡಿದವರ ಬಾಯಿ ಮುಚ್ಚಿಸಿದ ಪತಿ ಸಿದ್ದಾರ್ಥ್

ಆದರೂ ಆ ಅಭಿಮಾನಿ ನಟಿಯನ್ನು ಬಿಡಲಿಲ್ಲ. ನಿಕಿತಾ ಅವರನ್ನು ಗಟ್ಟಿಯಾಗಿ ಹಿಡಿದುಕೊಂಡಳು. ನಿಕಿತಾ ಮುಖದಲ್ಲಿ ಅಸಹಾಯಕತೆ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಅಲ್ಲಿಂದ ಹೋಗುವ ಮುನ್ನ ಅಭಿಮಾನಿ ಮತ್ತೆ ಕೆನ್ನೆಗೆ ಕಿಸ್ ಮಾಡಿದಳು. ಈ ಎಲ್ಲಾ ದೃಶ್ಯಗಳು ಕ್ಯಾಮೆರಾದಲ್ಲಿ ದಾಖಲಾಗಿವೆ. ಪ್ರಸ್ತುತ ನೆಟ್ಟಿಗರು ಈ ವಿಡಿಯೋ ನೋಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಿಕಿತಾ ರಾವಲ್ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಬ್ಲ್ಯಾಕ್ ಅಂಡ್ ವೈಟ್’, ‘ಮಿಸ್ಟರ್ ಹಾಟ್ ಮಿಸ್ಟರ್ ಕೂಲ್’, ‘ದಿ ಹೀರೋ – ಅಭಿಮನ್ಯು’, ‘ಅಮ್ಮಾ ಕಿ ಬೋಲಿ’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us