AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಿವುಡ್​​ ಸ್ಟಾರ್ ನಟರಿಗೆ ಬೆದರಿಕೆ ಹಾಕಿದ್ದ ಭೂಗತ ಪಾತಕಿಯ ಬಂಧನ

ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್‌ನ ಆಪ್ತ ಸಹಚರ ಹರಿಚಂದ್ ಜಾಟ್ ಅಲಿಯಾಸ್ ಹ್ಯಾರಿ ಬಾಕ್ಸರ್‌ನನ್ನು ಅಮೆರಿಕದಲ್ಲಿ ವಶಕ್ಕೆ ಪಡೆಯಲಾಗಿದೆ. ದೆಹಲಿ ಪೊಲೀಸ್ ಮೂಲಗಳು ಈ ಸುದ್ದಿಯನ್ನು ಖಚಿತಪಡಿಸಿದ್ದು, ಹರಿಯಾಣದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಎಂದು ಗುರುತಿಸಲ್ಪಟ್ಟಿರುವ ಈತನ ಬಂಧನ, ವಿದೇಶದಿಂದ ಕಾರ್ಯನಿರ್ವಹಿಸುತ್ತಿದ್ದ ಗ್ಯಾಂಗ್‌ಗಳ ಮೇಲಿನ ಕಾರ್ಯಾಚರಣೆಗೆ ದೊಡ್ಡ ಯಶಸ್ಸು ಎಂದು ಹೇಳಲಾಗುತ್ತಿದೆ.

ಬಾಲಿವುಡ್​​ ಸ್ಟಾರ್ ನಟರಿಗೆ ಬೆದರಿಕೆ ಹಾಕಿದ್ದ ಭೂಗತ ಪಾತಕಿಯ ಬಂಧನ
Harry Boxer
ಮಂಜುನಾಥ ಸಿ.
|

Updated on: Nov 07, 2026 | 8:49 PM

Share

ಮುಖ್ಯಾಂಶಗಳು

  • ಬಾಲಿವುಡ್​​ ನಟರಿಗೆ ಬೆದರಿಕೆ ಹಾಕಿದ್ದ ಪಾತಕಿಯ ಬಂಧನ
  • ಕುಖ್ಯಾತ ಭೂಗತ ಪಾತಕಿ ಹ್ಯಾರಿ ಬಾಕ್ಸರ್ ಅನ್ನು ಬಂಧಿಸಿದ ಪೊಲೀಸರು
  • ಹ್ಯಾರಿ ಬಾಕ್ಸರ್ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ

ಇತ್ತೀಚೆಗೆ ಬಾಲಿವುಡ್ ನಟ-ನಟಿಯರ ಮೇಲೆ ದಾಳಿ, ಬೆದರಿಕೆಗಳು ಹೆಚ್ಚಾಗಿವೆ. ವಿದೇಶದಲ್ಲಿದ್ದುಕೊಂಡು ಭಾರತದಲ್ಲಿ ‘ಭಯೋತ್ಪಾದನೆ’ ಮಾಡುವ ಕಾರ್ಯದಲ್ಲಿ ಭೂಗತ ಪಾತಕಿಗಳು ನಿರತರಾಗಿದ್ದಾರೆ. ಅದರಲ್ಲೂ ಲಾರೆನ್ಸ್ ಬಿಷ್ಣೋಯಿ ಗ್ಯಾಂಗಿಗೆ ಸೇರಿದವರಿಂದಲೇ ಈ ಕೃತ್ಯಗಳು ನಡೆಯುತ್ತಿವೆ. ಇತ್ತೀಚೆಗಷ್ಟೆ ನಟ ಟೈಗರ್ ಶ್ರಾಫ್ ಮೇಲೆ ದಾಳಿಯನ್ನೂ ಸಹ ಮಾಡಲಾಗಿತ್ತು. ಈ ಹಿಂದೆ ಹಲವು ಬಾಲಿವುಡ್ ನಟರಿಗೆ ಬೆದರಿಕೆಗಳನ್ನು ಹಾಕಲಾಗಿತ್ತು. ಈ ದಾಳಿ, ಬೆದರಿಕೆಗಳಲ್ಲಿ ಪ್ರಮುಖ ಪಾತ್ರವಹಿಸಿದ್ದ ಕುಖ್ಯಾತ ಪಾತಕಿಯೊಬ್ಬನನ್ನು ಕ್ಯಾಲಿಫೋರ್ನಿಯಾನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್‌ನ ಆಪ್ತ ಸಹಚರ ಹರಿಚಂದ್ ಜಾಟ್ ಅಲಿಯಾಸ್ ಹ್ಯಾರಿ ಬಾಕ್ಸರ್‌ನನ್ನು ಅಮೆರಿಕದಲ್ಲಿ ವಶಕ್ಕೆ ಪಡೆಯಲಾಗಿದೆ. ದೆಹಲಿ ಪೊಲೀಸ್ ಮೂಲಗಳು ಈ ಸುದ್ದಿಯನ್ನು ಖಚಿತಪಡಿಸಿದ್ದು, ಹರಿಯಾಣದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಎಂದು ಗುರುತಿಸಲ್ಪಟ್ಟಿರುವ ಈತನ ಬಂಧನ, ವಿದೇಶದಿಂದ ಕಾರ್ಯನಿರ್ವಹಿಸುತ್ತಿದ್ದ ಗ್ಯಾಂಗ್‌ಗಳ ಮೇಲಿನ ಕಾರ್ಯಾಚರಣೆಗೆ ದೊಡ್ಡ ಯಶಸ್ಸು ಎಂದು ಹೇಳಲಾಗುತ್ತಿದೆ.

ಈ ವರ್ಷದ ಫೆಬ್ರವರಿಯಲ್ಲಿ ಮುಂಬೈನಲ್ಲಿರುವ ಖ್ಯಾತ ಚಲನಚಿತ್ರ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮನೆಯ ಹೊರಗೆ ನಡೆದ ಗುಂಡಿನ ದಾಳಿಯ ಹೊಣೆಯನ್ನು ಬಾಕ್ಸರ್ ಸ್ವತಃ ಹೊತ್ತುಕೊಂಡಿದ್ದ. ನಂತರ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳು ಮತ್ತು ಆಡಿಯೋ ಸಂದೇಶಗಳ ಮೂಲಕ ರಣವೀರ್ ಸಿಂಗ್ ಸೇರಿದಂತೆ ಹಲವು ಬಾಲಿವುಡ್ ನಟರಿಗೆ ಬೆದರಿಕೆ ಹಾಕಿದ್ದ. ರಣ್ವೀರ್ ಸಿಂಗ್ ಅವರಿಂದ ಹತ್ತು ಕೋಟಿ ರೂಪಾಯಿ ಹಣಕ್ಕೆ ಒತ್ತಾಯವನ್ನೂ ಸಹ ಮಾಡಿದ್ದ.

ಇದನ್ನೂ ಓದಿ:ಬಾಲಿವುಡ್ ನಟ ಆಯುಷ್ಮಾನ್​​ಗೆ ಬೆದರಿಕೆ, ಬೆಂಗಳೂರಿನಲ್ಲಿ ವ್ಯಕ್ತಿ ಬಂಧನ

ದೆಹಲಿ ಪೊಲೀಸ್ ವಿಶೇಷ ದಳ (ಸ್ಪೆಷಲ್ ಸೆಲ್) ಮತ್ತು ಹರಿಯಾಣ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಹಂಚಿಕೊಂಡ ಮಾಹಿತಿಯ ಆಧಾರದ ಮೇಲೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಬಾಕ್ಸರ್‌ನನ್ನು ಬಂಧಿಸಲಾಗಿದೆ. ಕೆಲವೇ ದಿನಗಳ ಹಿಂದೆ ಇನ್ನಿಬ್ಬರು ಗ್ಯಾಂಗ್‌ಸ್ಟರ್‌ಗಳಾದ ಹಿಮಾಂಶು ಭಾವು ಮತ್ತು ನೀರಜ್ ಫರೀದ್‌ಪುರಿಯಾ ಅವರನ್ನೂ ಅಮೆರಿಕದಲ್ಲಿ ಬಂಧಿಸಲಾಗಿತ್ತು. ಹೀಗೆ ಸರಣಿಯಾಗಿ ನಡೆದ ಬಂಧನಗಳು ಭಾರತದ ತನಿಖಾ ಸಂಸ್ಥೆಗಳು ಮತ್ತು ವಿದೇಶಿ ಏಜೆನ್ಸಿಗಳ ನಡುವಿನ ಸಮನ್ವಯವ ಸಾಕ್ಷಿಯಾಗಿವೆ.

ರಾಜಸ್ಥಾನದ ಕೊಟ್‌ಪುಟ್ಲಿ-ಬೆಹ್ರೋರ್ ಜಿಲ್ಲೆಯ ಬಾಮ್ಸೂರ್ ಗ್ರಾಮದವನಾದ ಬಾಕ್ಸರ್, ವಿದೇಶದಿಂದಲೇ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸುಲಿಗೆ ಜಾಲವನ್ನು ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಕೊಲೆ, ಕೊಲೆ ಯತ್ನ, ಹಲ್ಲೆ, ಗುಂಡಿನ ದಾಳಿ ಹಾಗೂ ಉದ್ಯಮಿಗಳಿಗೆ ಸುಲಿಗೆ ಬೆದರಿಕೆ ಹಾಕಿದ ಹಲವು ಪ್ರಕರಣಗಳು ಆತನ ವಿರುದ್ಧ ದಾಖಲಾಗಿವೆ. ಈ ಹ್ಯಾರಿ ಬಾಕ್ಸರ್ ರೈತ ಕುಟುಂಬದಿಂದ ಬಂದ ಈತ ಮೊದಲು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿದ್ದ. ಜೈಪುರದಲ್ಲಿ ಬಾಕ್ಸಿಂಗ್ ಕಲಿಯುವಾಗ ಅವನಿಗೆ ‘ಬಾಕ್ಸರ್’ ಎಂಬ ಅಡ್ಡಹೆಸರು ಬಂತು. ನಂತರ ಬಾಕ್ಸಿಂಗ್ ಕೋಚ್ ಆಗಿಯೂ ಕೆಲಸ ಮಾಡಿ, ಬಳಿಕ ಅಪರಾಧ ಜಗತ್ತಿಗೆ ಇಳಿದ ಎನ್ನಲಾಗುತ್ತದೆ.

ಈ ವರ್ಷದ ಫೆಬ್ರವರಿಯಲ್ಲಿ ನಟ ರಣವೀರ್ ಸಿಂಗ್‌ಗೆ 10 ಕೋಟಿ ರೂಪಾಯಿ ಸುಲಿಗೆ ಹಣಕ್ಕೆ ಬೇಡಿಕೆಯಿಟ್ಟು ಬೆದರಿಕೆ ಹಾಕಲಾಗಿತ್ತು. ಆ ಧ್ವನಿ ಬಾಕ್ಸರ್‌ನದೇ ಎಂದು ಮುಂಬೈ ಪೊಲೀಸರು ಪ್ರಾಥಮಿಕವಾಗಿ ಶಂಕಿಸಿದ್ದರು, ಮತ್ತು ಮುಂಬೈ ಸೈಬರ್ ಪೊಲೀಸರು ಆತನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಅದಕ್ಕೂ ಮೊದಲು, ಜನವರಿ 2026ರಲ್ಲಿ ದೆಹಲಿಯ ಉದ್ಯಮಿಯೊಬ್ಬರಿಗೆ ಅಂತಾರಾಷ್ಟ್ರೀಯ ಸಂಖ್ಯೆಯಿಂದ ವಾಟ್ಸಾಪ್ ಕರೆ ಮಾಡಿ 5 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆಯಿಡಲಾಗಿತ್ತು. ಕರೆ ಮಾಡಿದಾತ ತನ್ನನ್ನು ಹ್ಯಾರಿ ಬಾಕ್ಸರ್ ಎಂದು ಪರಿಚಯಿಸಿಕೊಂಡಿದ್ದ.

ದೆಹಲಿ ಪೊಲೀಸರ ಪ್ರಕಾರ, ಬಾಕ್ಸರ್ ರಣದೀಪ್ ಮಲಿಕ್ ಗ್ಯಾಂಗ್‌ನೊಂದಿಗೆ ಸಂಬಂಧ ಹೊಂದಿದ್ದಾನೆ. ಸುಲಿಗೆ ಕರೆಗಳು ಮತ್ತು ಗುಂಡಿನ ದಾಳಿ ಘಟನೆಗಳ ಸಂಬಂಧ ಈ ಗ್ಯಾಂಗ್‌ನ ಹೆಸರು ಇತ್ತೀಚೆಗೆ ಕೇಳಿಬಂದಿದೆ. ನಟ ಟೈಗರ್ ಶ್ರಾಫ್ ಅವರನ್ನು ಗುರಿಯಾಗಿಸಿದ ಗುಂಡಿನ ದಾಳಿಗೆ ಶಸ್ತ್ರಾಸ್ತ್ರ ಪೂರೈಸಿದ್ದ ಜಾಲದೊಂದಿಗೂ ಆತನಿಗೆ ನಂಟಿದೆ ಎಂದು ಶಂಕಿಸಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಗಾನವಿ ಮಾಡಿದ ಡ್ರಾಮಾ ಬಯಲು ಮಾಡಿದ ಸುದೀಪ್: ವಿಡಿಯೋ ನೋಡಿ
ಗಾನವಿ ಮಾಡಿದ ಡ್ರಾಮಾ ಬಯಲು ಮಾಡಿದ ಸುದೀಪ್: ವಿಡಿಯೋ ನೋಡಿ
ಬೆಲೆ ಏರಿಕೆ ಭಾಗ್ಯದ ಸರ್ಕಾರವಲ್ಲ, ಗ್ಯಾರಂಟಿಗಳ ಸರ್ಕಾರ: ಡಿಕೆ ಸುರೇಶ್
ಬೆಲೆ ಏರಿಕೆ ಭಾಗ್ಯದ ಸರ್ಕಾರವಲ್ಲ, ಗ್ಯಾರಂಟಿಗಳ ಸರ್ಕಾರ: ಡಿಕೆ ಸುರೇಶ್
ಎಥೆನಾಲ್ ವಿಚಾರದಲ್ಲಿ ರಾಜ್ಯ ಸರ್ಕಾರ ಸುಳ್ಳು ಆರೋಪ ಮಾಡ್ತಿದೆ: ಜೋಶಿ
ಎಥೆನಾಲ್ ವಿಚಾರದಲ್ಲಿ ರಾಜ್ಯ ಸರ್ಕಾರ ಸುಳ್ಳು ಆರೋಪ ಮಾಡ್ತಿದೆ: ಜೋಶಿ
ಪ್ರಿಯಾಂಕ್ ಖರ್ಗೆ ವಿರುದ್ಧ ಮರುಳಾರಾಧ್ಯ ಸ್ವಾಮೀಜಿ ಆಕ್ಷೇಪಾರ್ಹ ಹೇಳಿಕೆ
ಪ್ರಿಯಾಂಕ್ ಖರ್ಗೆ ವಿರುದ್ಧ ಮರುಳಾರಾಧ್ಯ ಸ್ವಾಮೀಜಿ ಆಕ್ಷೇಪಾರ್ಹ ಹೇಳಿಕೆ
ಕೈಕೊಟ್ಟ ಮಳೆ: ಉಡುಪಿಯಲ್ಲಿ ರೈತರು, ಮೀನುಗಾರರಿಗೆ ಸಂಕಷ್ಟ!
ಕೈಕೊಟ್ಟ ಮಳೆ: ಉಡುಪಿಯಲ್ಲಿ ರೈತರು, ಮೀನುಗಾರರಿಗೆ ಸಂಕಷ್ಟ!
ಲೆಟರ್ ವಿಷಯದಲ್ಲಿ ಗಾನವಿಗೆ ಕ್ಲಾಸ್? ಸೂಚನೆ ಕೊಟ್ಟ ಸುದೀಪ್
ಲೆಟರ್ ವಿಷಯದಲ್ಲಿ ಗಾನವಿಗೆ ಕ್ಲಾಸ್? ಸೂಚನೆ ಕೊಟ್ಟ ಸುದೀಪ್
ಸ್ಟಿಂಗ್ ಕೇಸ್: ಕುಮಾರಸ್ವಾಮಿ ವಿರುದ್ಧ ಯತೀಂದ್ರ ಸ್ಫೋಟಕ ಹೇಳಿಕೆ
ಸ್ಟಿಂಗ್ ಕೇಸ್: ಕುಮಾರಸ್ವಾಮಿ ವಿರುದ್ಧ ಯತೀಂದ್ರ ಸ್ಫೋಟಕ ಹೇಳಿಕೆ
ದೇವಿರಮ್ಮ ಜಾತ್ರೆಯಲ್ಲಿ ನಟಿ ಅಮೂಲ್ಯ; ಬೆಟ್ಟ ಏರಿ ದೇವರದರ್ಶನ ಪಡೆದ ನಟಿ
ದೇವಿರಮ್ಮ ಜಾತ್ರೆಯಲ್ಲಿ ನಟಿ ಅಮೂಲ್ಯ; ಬೆಟ್ಟ ಏರಿ ದೇವರದರ್ಶನ ಪಡೆದ ನಟಿ
ಶೋಭಾ ಕರಂದ್ಲಾಜೆ, ಬೊಮ್ಮಾಯಿ ಮನೆ ಮುಂದೆ ವಿವಾದಾತ್ಮಕ ಪೋಸ್ಟರ್ !
ಶೋಭಾ ಕರಂದ್ಲಾಜೆ, ಬೊಮ್ಮಾಯಿ ಮನೆ ಮುಂದೆ ವಿವಾದಾತ್ಮಕ ಪೋಸ್ಟರ್ !
ಅತ್ತಿಬೆಲೆ ಪಟಾಕಿ ಮಾರುಕಟ್ಟೆಯಲ್ಲಿ ಈ ಬಾರಿ ಮಾರಾಟ ಶೇ 30 ರಷ್ಟು ಕುಸಿತ!
ಅತ್ತಿಬೆಲೆ ಪಟಾಕಿ ಮಾರುಕಟ್ಟೆಯಲ್ಲಿ ಈ ಬಾರಿ ಮಾರಾಟ ಶೇ 30 ರಷ್ಟು ಕುಸಿತ!