22 ವರ್ಷದ ಹಿಂದೆ ವಿವಾದಕ್ಕೊಳಗಾಗಿದ್ದ ಟೈಟಲ್ ಅನ್ನೇ ಮತ್ತೆ ಕೈಗೆತ್ತಿಕೊಂಡ ಕಮಲ್ ಹಾಸನ್
ಇಂದು (ನವೆಂಬರ್ 07) ಭಾರತ ಚಿತ್ರರಂಗದ ಸೂಪರ್ ಸ್ಟಾರ್ ನಟ ಕಮಲ್ ಹಾಸನ್ ಹುಟ್ಟುಹಬ್ಬ. ಎಲ್ಲರೂ ಸೇಫ್ ಆದ ಕಮರ್ಶಿಯಲ್ ಸಿನಿಮಾಗಳನ್ನು ತೆಗೆಯುತ್ತಾ ಸ್ಟಾರ್ ಎನಿಸಿಕೊಂಡರೆ ಕಮಲ್ ಹಾಸನ್ ಪ್ರಯೋಗಾತ್ಮಕ ಸಿನಿಮಾಗಳನ್ನು, ತೀಕ್ಷ್ಣ ಸಂದೇಶಗಳನ್ನು ಹೊಂದಿದ ಸಿನಿಮಾಗಳನ್ನು ಮಾಡುತ್ತಾ ಬಂದಿದ್ದಾರೆ. ಇದೇ ಕಾರಣಕ್ಕೆ ಹಲವು ಬಾರಿ ವಿವಾದ, ಪ್ರತಿಭಟನೆಗಳನ್ನು ಎದುರಿಸಿದ್ದಾರೆ. ಆದರೂ ತಮ್ಮ ಹಠವನ್ನು ಬಿಟ್ಟಿಲ್ಲ ಕಮಲ್ ಹಾಸನ್. 22 ವರ್ಷಗಳ ಹಿಂದೆ ವಿವಾದಕ್ಕೆ ಕಾರಣವಾಗಿದ್ದ ಹೆಸರನ್ನೇ ಇಟ್ಟುಕೊಂಡು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ ನಟ.

22 ವರ್ಷಗಳ ಹಿಂದೆ ಕಮಲ್ ಹಾಸನ್ ನಿರ್ದೇಶನ ಮಾಡಿದ್ದ ಸಿನಿಮಾ ಒಂದನ್ನು ‘ಸಂದಿಯಾರ್’ ಎಂಬ ಹೆಸರು ಇಡಲಾಗಿತ್ತು. ಆದರೆ ಆ ಸಿನಿಮಾದ ಹೆಸರಿಗೆ ತೀವ್ರ ವಿವಾದ ಎದುರಾಯ್ತು, ಪ್ರತಿಭಟನೆಗಳು ನಡೆದಿದ್ದವು. ಬಳಿಕ ಕಮಲ್ ಹಾಸನ್ ಅವರನ್ನು ಆ ಹೆಸರನ್ನು ಬದಲಾಯಿಸಿ ಸಿನಿಮಾ ನಿರ್ದೇಶಿಸಿ ಬಿಡುಗಡೆ ಮಾಡಿದರು. ಸಿನಿಮಾ ಬ್ಲಾಕ್ ಬಸ್ಟರ್ ಆಯ್ತು. ತಮಿಳಿನ ಕಲ್ಟ್ ಸಿನಿಮಾ ಎನಿಸಿಕೊಂಡಿತು. ಆದರೆ ಈಗ ಮತ್ತೆ ಅದೇ ‘ಸಂದಿಯಾರ್’ ಹೆಸರಿನಲ್ಲಿ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ.
ನವೆಂಬರ್ 7ರಂದು ನಟನ ಹುಟ್ಟುಹಬ್ಬದ ದಿನವೇ ಶೂಟಿಂಗ್ ಶುರುವಾಗಿರುವುದನ್ನು ಚಿತ್ರತಂಡ ಖಚಿತಪಡಿಸಿದೆ. ಚಿತ್ರದ ಶೀರ್ಷಿಕೆಯನ್ನು ಒಂದು ದಿನ ಮೊದಲಷ್ಟೇ ಬಹಿರಂಗಪಡಿಸಲಾಗಿತ್ತು. ಎಸ್ ಯು ಅರುಣ್ ಕುಮಾರ್ ನಿರ್ದೇಶನದ ಈ ಚಿತ್ರ ಸೇಡು, ಆ್ಯಕ್ಷನ್ ಹಾಗೂ ಪ್ರತೀಕಾರದ ರೋಚಕ ಕಥೆಯನ್ನು ಹೊಂದಿದೆಯಂತೆ.
ಇದನ್ನೂ ಓದಿ:ಕಮಲ್ ಹಾಸನ್ ಸ್ವಪ್ರತಿಷ್ಠೆ ಉಳ್ಳ ಮನುಷ್ಯ: ನಟ ಆರೋಪ
ಚಿತ್ರೀಕರಣ ಆರಂಭದ ಸಂದರ್ಭದಲ್ಲಿ ನಿರ್ದೇಶಕ ಅರುಣ್ ಅವರು ಭಾವನಾತ್ಮಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಕಮಲ್ ಹಾಸನ್ ಅವರನ್ನು ಮಹಾನ್ ಕಲಾವಿದ ಎಂದು ವರ್ಣಿಸಿದ್ದು, ಅವರಿಂದಲೇ ನಾನು ಚಿತ್ರರಂಗಕ್ಕೆ ಬಂದಿದ್ದೆಂದು ಈಗ ಅವರೊಟ್ಟಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಪೂರ್ವಜನ್ಮದ ಸುಕೃತ ಎಂದಿದ್ದಾರೆ. ತಾವು ಮೆಚ್ಚುವ ಗುರುವೇ ತಮ್ಮನ್ನು ನಿರ್ದೇಶಕರಾಗಿ ಆಯ್ಕೆ ಮಾಡಿ, ತಮ್ಮ ಕಥೆಗೆ ಜೀವ ತುಂಬಿರುವುದು ಸಂತಸ ತಂದಿದೆ. ಜೊತೆಗೆ ಈ ಪಯಣದಲ್ಲಿ ಬಹಳಷ್ಟು ಕಲಿಯುವ ಖುಷಿಯೂ ಇದೆ ಎಂದಿದ್ದಾರೆ. ಕನಸು ನನಸಾಗಲು ನೆರವಾದ ನಿರ್ಮಾಪಕರಾದ ಅಣ್ಣ ಮಹೇಂದ್ರನ್ ಮತ್ತು ಗೆಳೆಯ ಡಿಸ್ನಿ ಅವರಿಗೆ ಧನ್ಯವಾದ ಹೇಳಿದ್ದಾರೆ.
ಕಮಲ್ ಹಾಸನ್ ತಮ್ಮ 2004ರ ಚಿತ್ರಕ್ಕೆ ಮೊದಲು ಇದೇ ‘ಸಂದಿಯಾರ್’ ಹೆಸರನ್ನು ಆರಿಸಿದ್ದರು. ಆಗ ನಡೆದಿದ್ದ ಪ್ರತಿಭಟನೆ ಕಾರಣಕ್ಕೆ ಆ ಸಿನಿಮಾದ ಹೆಸರು ಬದಲಾಯಿಸಿ ಅದಕ್ಕೆ ‘ವಿರುಮಾಂಡಿ’ ಎಂದು ಮರುನಾಮಕರಣ ಮಾಡಲಾಗಿತ್ತು. ಆ ನಂತರ ನಡೆದಿದ್ದು ಇತಿಹಾಸ. ಆದರೆ ಅದೇ ಹೆಸರನ್ನು ಕಮಲ್ ಹಾಸನ್ ಮತ್ತೆ ತಮ್ಮ ಸಿನಿಮಾಕ್ಕೆ ಇರಿಸಿದ್ದಾರೆ. ಸಿನಿಮಾವನ್ನು ಎಸ್ಎ ಅರುಣ್ ಕುಮಾರ್ ನಿರ್ದೇಶಿಸಲಿದ್ದಾರೆ. ಸಿನಿಮಾಕ್ಕೆ ಅನಿರುದ್ಧ್ ರವಿಂದರ್ ಸಂಗೀತ ನೀಡಲಿದ್ದಾರೆ. ಅನ್ಬರಿವ್ ಆಕ್ಷನ್ ನಿರ್ದೇಶಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ