ಅಫ್ಘಾನಿಸ್ತಾನದಲ್ಲಿರುವ ನನ್ನ ಕುಟುಂಬದವರು ಸಂಪರ್ಕಕ್ಕೆ ಸಿಗುತ್ತಿಲ್ಲ; ಕಣ್ಣೀರಿಟ್ಟ ಕಿರುತೆರೆ ನಟಿ

| Updated By: ರಾಜೇಶ್ ದುಗ್ಗುಮನೆ

Updated on: Aug 29, 2021 | 6:06 PM

ಕಾಬೂಲ್​ನಿಂದ ಭಾರತಕ್ಕೆ ವಿಶೇಷ ವಿಮಾನದ ಮೂಲಕ ಅನೇಕರನ್ನು ಕರೆತರಲಾಗಿದೆ. ಈ ಪೈಕಿ ನೂಪರ್​ ಸಹೋದರಿ ಜಿಗ್ಯಾಸ ಅವರ ಗಂಡ ಇಲ್ಲ. ಇದರಿಂದ ಕುಟುಂಬದವರು ಸಾಕಷ್ಟು ಆತಂಕಗೊಂಡಿದ್ದಾರೆ.

ಅಫ್ಘಾನಿಸ್ತಾನದಲ್ಲಿರುವ ನನ್ನ ಕುಟುಂಬದವರು ಸಂಪರ್ಕಕ್ಕೆ ಸಿಗುತ್ತಿಲ್ಲ; ಕಣ್ಣೀರಿಟ್ಟ ಕಿರುತೆರೆ ನಟಿ
ಅಫ್ಘಾನಿಸ್ತಾನದಲ್ಲಿರುವ ನನ್ನ ಕುಟುಂಬದವರು ಸಂಪರ್ಕಕ್ಕೆ ಸಿಗುತ್ತಿಲ್ಲ; ಕಣ್ಣೀರಿಟ್ಟ ಕಿರುತೆರೆ ನಟಿ
Follow us on

ಅಫ್ಘಾನಿಸ್ತಾನದಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದೆ. ತಾಲಿಬಾನಿಗಳು ಸಾಕಷ್ಟು ಜನರನ್ನು ಹತ್ಯೆ ಮಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಮಧ್ಯೆ ಹಿಂದಿ ಕಿರುತೆರೆ ನಟಿ ನೂಪುರ್​ ಅಲಂಕಾರ್​ ಕಣ್ಣೀರು ಹಾಕಿದ್ದಾರೆ. ಆಫ್ಘನ್​ನಲ್ಲಿರುವ ಭಾವ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂಬುದು ಅವರ ಆತಂಕಕ್ಕೆ ಕಾರಣವಾಗಿದೆ. ಈ ವಿಚಾರದಲ್ಲಿ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.

ಕಾಬೂಲ್​ನಿಂದ ಭಾರತಕ್ಕೆ ವಿಶೇಷ ವಿಮಾನದ ಮೂಲಕ ಅನೇಕರನ್ನು ಕರೆತರಲಾಗಿದೆ. ಈ ಪೈಕಿ ನೂಪರ್​ ಸಹೋದರಿ ಜಿಗ್ಯಾಸ ಅವರ ಗಂಡ ಇಲ್ಲ. ಇದರಿಂದ ಕುಟುಂಬದವರು ಸಾಕಷ್ಟು ಆತಂಕಗೊಂಡಿದ್ದಾರೆ. ಅಫ್ಘಾನಿಸ್ತಾನ ಸಂಪೂರ್ಣವಾಗಿ ತಾಲಿಬಾನಿಗಳ ವಶವಾದಾಗ ಒಮ್ಮೆ ಅವರು ಕರೆ ಮಾಡಿದ್ದರು. ಇದಾದ ನಂತರದಲ್ಲಿ ಜಿಗ್ಯಾಸ ಗಂಡನ ಸುಳಿವು ಸಿಗುತ್ತಿಲ್ಲ.

‘ಜಿಗ್ಯಾಸಳ​ ಪತಿ ಜತೆ ಮಾತನಾಡುವಾಗ ಏಕಾಏಕಿ ಕಾಲ್​ ಕಟ್​ ಆಗಿತ್ತು. ಮೊಬೈಲ್​ ಚಾರ್ಜ್​ ಹಾಕೋಕೆ ಸಾಧ್ಯವಾಗುತ್ತಿಲ್ಲ ಎಂದು ಆತ ಹೇಳಿದ್ದ. ತನ್ನನ್ನು ಸಂಪರ್ಕಿಸೋಕೆ ಬೇರೊಬ್ಬರ ನಂಬರ್​ ಕೊಡುತ್ತೀನಿ ಎಂದು ಹೇಳಿದ್ದ. ಆದರೆ, ಈ ವರೆಗೆ ಆತನ ಸುಳಿವಿಲ್ಲ’ ಎಂದು ಕಣ್ಣೀರು ಹಾಕಿದ್ದಾರೆ ನೂಪುರ್​.

ನೂಪುರ್​ ಅವರು ‘ಸ್ವರಗಿಣಿ’, ‘ಇಸ್​ ಪ್ಯಾರ್​ ಕೊ ಕ್ಯಾ ನಾಮ್​ ದೂ?’, ‘ಏಕ್​ ಬಾರ್ ಫಿರ್’​ ಮೊದಲಾದ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ವರ್ಷದ ಲಾಕ್​ಡೌನ್​ ವೇಳೆ ಅವರಿಗೆ ಆರ್ಥಿಕ ಸಂಕಷ್ಟ ಎದುರಾಗಿತ್ತು. ಆಗ ಅವರು ಚಿನ್ನದ ಸರವನ್ನು ಮಾರಾಟ ಮಾಡಿ ಹಣ ಹೊಂದಿಸಿದ್ದರು. ಈ ವಿಚಾರ ಸಾಕಷ್ಟು ಸುದ್ದಿಯಾಗಿತ್ತು. ಅಲ್ಲದೆ, ಸಹಾಯ ಮಾಡುವಂತೆ ಅವರು ಜನರಲ್ಲಿ ಕೋರಿದ್ದರು. ಅಕ್ಷಯ್​ ಕುಮಾರ್​ ಸೇರಿ ಸಾಕಷ್ಟು ಸೆಲೆಬ್ರಿಟಿಗಳು ನೂಪುರ್​ಗೆ ಸಹಾಯ ಮಾಡಿದ್ದರು.

ಅಪ್ಘಾನಿಸ್ತಾನ​ ಸಂಪೂರ್ಣವಾಗಿ ತಾಲಿಬಾನಿಗಳ ಕಪಿಮುಷ್ಟಿ ಸೇರಿದೆ. ಈ ಕಾರಣಕ್ಕೆ ಅನೇಕರು ದೇಶಬಿಟ್ಟು ತೆರಳುತ್ತಿದ್ದಾರೆ. ಈ ಮಧ್ಯೆ ತಾಲಿಬಾನಿಗಳು ಸಿನಿಮಾ ನಿರ್ಮಾಣದ ಮೇಲೆ ತಾಲಿಬಾನಿಗಳು ನಿರ್ಬಂಧ ಹೇರಿದ್ದಾರೆ.  ಹೀಗಾಗಿ, ಅಲ್ಲಿನ ಸಿನಿಮಾ ನಿರ್ಮಾತೃರರು ದೇಶ ಬಿಟ್ಟು ತೊರೆಯುತ್ತಿದ್ದಾರೆ. ಇತ್ತೀಚೆಗೆ ಫಿಲ್ಮ್​ ಮೇಕರ್​ ಹಾಗೂ ಫೋಟೋ ಜರ್ನಲಿಸ್ಟ್​ ರೋಯಾ ಹೈದರಿ ಅಪ್ಘಾನಿಸ್ತಾನ ತೊರೆದು ಫ್ರಾನ್ಸ್ ಸೇರಿದ್ದರು. ಅವರು ಭಾವನಾತ್ಮಕ ಪತ್ರ ಒಂದನ್ನು ಬರೆದುಕೊಂಡಿದ್ದರು.

ಇದನ್ನೂ ಓದಿ: ನಾಲ್ಕು ಕಾರ್ ಹಾಗೂ ಹೆಲಿಕಾಪ್ಟರ್​ನಲ್ಲಿ ಕೊಂಡೊಯ್ದ ಅಫ್ಘಾನಿಸ್ತಾನದ ಹಣವನ್ನು ಹಿಂತಿರುಗಿಸಿ: ಅಶ್ರಫ್ ಘನಿಗೆ ತಾಲಿಬಾನ್ ಎಚ್ಚರಿಕೆ