ಯಶ್​ ದಾಸ್​ಗುಪ್ತಾಗೆ ಪ್ರೀತಿಯಿಂದ ಗಂಡ ಎಂದ ನಟಿ ನುಸ್ರತ್​; ಬರ್ತ್​ಡೇ ಫೋಟೋ ವೈರಲ್​

| Updated By: ರಾಜೇಶ್ ದುಗ್ಗುಮನೆ

Updated on: Oct 11, 2021 | 7:17 PM

ಯಶ್ ದಾಸ್​​ಗುಪ್ತ ಜತೆ ನುಸ್ರತ್​ ರಿಲೇಶನ್​ಶಿಪ್​ನಲ್ಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ನುಸ್ರತ್​ ಮತ್ತು ನಿಖಿಲ್​ ಸಂಸಾರದಲ್ಲಿ ಬಿರುಗಾಳಿ ಬೀಸಲು ನಟ ಯಶ್​ ದಾಸ್​​ಗುಪ್ತ ಕಾರಣ ಎಂದು ಹೇಳಲಾಗಿತ್ತು.

ಯಶ್​ ದಾಸ್​ಗುಪ್ತಾಗೆ ಪ್ರೀತಿಯಿಂದ ಗಂಡ ಎಂದ ನಟಿ ನುಸ್ರತ್​; ಬರ್ತ್​ಡೇ ಫೋಟೋ ವೈರಲ್​
ಯಶ್​ ಮತ್ತು ನುಸ್ರತ್​
Follow us on

ಪಶ್ಚಿಮ ಬಂಗಾಳ ಟಿಎಂಸಿ ನಾಯಕಿ, ನಟಿ ನುಸ್ರತ್​ ಜಹಾನ್ ವೈಯಕ್ತಿಕ ಜೀವನದ ವಿಚಾರದಲ್ಲಿ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಆಗಸ್ಟ್​​ 26ರಂದು ಗಂಡು ಮಗುವಿಗೆ ಜನ್ಮ ನೀಡಿದ್ದ ಅವರು, ಯಶ್​ ದಾಸ್​ಗುಪ್ತ ಈ ಮಗುವಿಗೆ ತಂದೆ ಎಂದು ಹೇಳಿದ್ದರು. ಈಗ ಯಶ್​ ದಾಸ್​ಗುಪ್ತಾ ಜನ್ಮದಿನದ ಫೋಟೋಗಳನ್ನು ನುಸ್ರತ್​ ಹಂಚಿಕೊಂಡಿದ್ದು, ಅವರನ್ನು ಪತಿ ಎಂದು ಪ್ರೀತಿಯಿಂದ ಕರೆದಿದ್ದಾರೆ.

2019ರಲ್ಲಿ ನಿಖಿಲ್​ ಜೈನ್​ ಎಂಬ ಉದ್ಯಮಿಯನ್ನು ಟರ್ಕಿಯಲ್ಲಿ ಮದುವೆಯಾಗಿದ್ದರು ನುಸ್ರತ್​. ಆದರೆ ಭಾರತೀಯ ಕಾನೂನಿನ ಅನ್ವಯ ಆ ವಿವಾಹ ಮಾನ್ಯವಾಗಿಲ್ಲ ಎಂದು ನುಸ್ರತ್ ಹೇಳಿದ್ದರು. 2020ರ ನವೆಂಬರ್​​ ತಿಂಗಳಲ್ಲಿ ಇಬ್ಬರೂ ಪ್ರತ್ಯೇಕವಾಗಿದ್ದಾಗಿ ತಿಳಿಸಿದ್ದ ಅವರು, ನಂತರ ತಾವು ಗರ್ಭಿಣಿ ಎಂದು ಘೋಷಿಸಿದರು. ಆಗಸ್ಟ್​ನಲ್ಲಿ ಮಗುವಿಗೆ ಜನ್ಮ ನೀಡಿದರು.

ಯಶ್ ದಾಸ್​​ಗುಪ್ತ ಜತೆ ನುಸ್ರತ್​ ರಿಲೇಶನ್​ಶಿಪ್​ನಲ್ಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ನುಸ್ರತ್​ ಮತ್ತು ನಿಖಿಲ್​ ಸಂಸಾರದಲ್ಲಿ ಬಿರುಗಾಳಿ ಬೀಸಲು ನಟ ಯಶ್​ ದಾಸ್​​ಗುಪ್ತ ಕಾರಣ ಎಂದು ಹೇಳಲಾಗಿತ್ತು. ‘ಒನ್​’ ಸಿನಿಮಾದಲ್ಲಿ ಯಶ್​ ಮತ್ತು ನುಸ್ರತ್​ ಜೊತೆಯಾಗಿ ನಟಿಸಿದ್ದರು. ಆ ಬಳಿಕ ಇಬ್ಬರ ನಡುವೆ ಹೆಚ್ಚು ಆಪ್ತತೆ ಬೆಳೆದಿತ್ತು. ಯಶ್​ ದಾಸ್​​ಗುಪ್ತ ಮಗುವಿನ ತಂದೆ ಎಂದಿದ್ದ ನುಸ್ರತ್,​ ಈಗ ಯಶ್​ಗೆ ಪ್ರೀತಿಯಿಂದ ಗಂಡ ಎಂದಿದ್ದಾರೆ.

ಯಶ್​ ಜನ್ಮದಿನಕ್ಕೆ ತಂದ ಕೇಕ್​ಅನ್ನು ನುಸ್ರತ್​ ಹಂಚಿಕೊಂಡಿದ್ದಾರೆ. ಈ ಕೇಕ್​ ಮೇಲೆ ಅವರು ಮೇಲ್ಭಾಗದಲ್ಲಿ ಪತಿ ಎಂದು ಬರೆದರೆ ಕೆಳಭಾಗದಲ್ಲಿ ತಂದೆ ಎಂದು ಬರೆದುಕೊಂಡಿದ್ದಾರೆ. ಸದ್ಯ, ಈ ಫೋಟೋ ಸಾಕಷ್ಟು ವೈರಲ್​ ಆಗುತ್ತಿದೆ.

ಇತ್ತೀಚೆಗೆ ನುಸ್ರತ್​ ಜಹಾನ್​ ಮತ್ತು ಯಶ್​ ಒಟ್ಟಿಗೇ ಕೋಲ್ಕತ್ತ ಮುನ್ಸಿಪಲ್​ ಕಾರ್ಪೋರೇಶನ್​ನಲ್ಲಿ ಕಾಣಿಸಿಕೊಂಡಿದ್ದರು. ಅವರು ಕೊವಿಡ್​ 19 ಲಸಿಕೆ ಎರಡನೇ ಡೋಸ್​ ಪಡೆಯಲು ಬಂದಿದ್ದಾರೆಂದೇ ಹೇಳಲಾಗಿತ್ತು. ಆದರೆ ಅವರು ಮಗುವಿನ ಬರ್ತ್​ ಸರ್ಟಿಫಿಕೇಟ್​ ಸಂಬಂಧದ ಕೆಲಸಕ್ಕೆ ಬಂದಿದ್ದರೆಂದು ನಂತರ ವರದಿ ಆಗಿತ್ತು.

ಇದನ್ನೂ ಓದಿ: ಗಂಡು ಮಗುವಿಗೆ ಜನ್ಮ ನೀಡಿದ ತೃಣಮೂಲ ಕಾಂಗ್ರೆಸ್ ಸಂಸದೆ, ನಟಿ ನುಸ್ರತ್ ಜಹಾನ್​

ನಟಿ ನುಸ್ರತ್​ ಜಹಾನ್​​ ಮಗುವಿನ ತಂದೆ ಹೆಸರು ಅಂತೂ ಬಹಿರಂಗವಾಯ್ತು; ರೂಮರ್​ ನಿಜವಾಯ್ತು !