AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆದಿಪುರುಷ್ ನಿರ್ಮಾಪಕರು, ವಿತರಕರಲ್ಲಿ ಮನವಿ ಮಾಡಿ ಕಣ್ಣೀರು ಹಾಕಿದ ನಿರ್ದೇಶಕ ಓಂ

Om Raut: ಆದಿಪುರುಷ್ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಇಂದು ನಡೆದ ಅದ್ಧೂರಿ ಪ್ರೀ ರಿಲೀಸ್ ಇವೆಂಟ್​ನಲ್ಲಿ ಮಾತನಾಡಿದ ನಿರ್ದೆಶಕ ಓಂ ರಾವತ್, ಸಿನಿಮಾದ ನಿರ್ಮಾಪಕರು, ವಿತರಕರಲ್ಲಿ ಮನವಿ ಮಾಡಿದರು. ವೇದಿಕೆ ಮೇಲೆ ಭಾವುಕರಾಗಿ ಕಣ್ಣೀರು ಹಾಕಿದರು ಸಹ.

ಆದಿಪುರುಷ್ ನಿರ್ಮಾಪಕರು, ವಿತರಕರಲ್ಲಿ ಮನವಿ ಮಾಡಿ ಕಣ್ಣೀರು ಹಾಕಿದ ನಿರ್ದೇಶಕ ಓಂ
ಓಂ ರಾವತ್-ಪ್ರಭಾಸ್
ಮಂಜುನಾಥ ಸಿ.
|

Updated on: Jun 06, 2023 | 11:37 PM

Share

ಪ್ರಭಾಸ್ (Prabhas) ನಟನೆಯ ಆದಿಪುರುಷ್ (Adipurush) ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಕೋವಿಡ್, ಸೆಟ್​ಗೆ ಬೆಂಕಿ, ಸತತ ಕೇಸುಗಳು, ಟೀಕೆ ಹೀಗೆ ಹಲವು ಸಮಸ್ಯೆಗಳನ್ನು ಎದುರಿಸಿಕೊಂಡು ಕೊನೆಗೂ ಬಿಡುಗಡೆ ಹಂತವನ್ನು ಆದಿಪುರುಷ್ ಸಿನಿಮಾ ಬಂದು ತಲುಪಿದೆ. ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಅನ್ನು ಇಂದು (ಜೂನ್ 16) ತಿರುಪತಿಯಲ್ಲಿ ಬಹು ಅದ್ಧೂರಿಯಾಗಿ ಆಯೋಜಿಸಲಾಗಿತ್ತು. ಪ್ರೀ ರಿಲೀಸ್ ಇವೆಂಟ್​ನಲ್ಲಿ ಮಾತನಾಡಿದ ಆದಿಪುರುಷ್ ಸಿನಿಮಾ ನಿರ್ಮಾಪಕ ಓಂ ರಾವತ್ (Om Raut) ಸಿನಿಮಾದ ನಿರ್ಮಾಪಕರು, ವಿತರಕರಲ್ಲಿ ಮನವಿಯೊಂದನ್ನು ಮಾಡುತ್ತಾ ಭಾವುಕರಾಗಿ ವೇದಿಕೆ ಮೇಲೆ ಕಣ್ಣೀರು ಹಾಕಿದರು.

ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಹೆಚ್ಚು ಮಂದಿಗೆ ಮಾತನಾಡಲು ಅವಕಾಶ ಸಿಗಲಿಲ್ಲ, ಆದರೆ ಪ್ರಭಾಸ್ ಮಾತನಾಡುವುದಕ್ಕೆ ಮುಂಚೆ ಚುಟುಕಾಗಿ ಮಾತನಾಡಿದ ನಿರ್ದೇಶಕ ಓಂ ರಾವತ್, ವೇದಿಕೆ ಮೇಲೆಯೇ ಆದಿಪುರುಷ್ ಸಿನಿಮಾದ ನಿರ್ಮಾಪಕ ಭೂಷಣ್ ಕುಮಾರ್, ಸಹ ನಿರ್ಮಾಣ ಸಂಸ್ಥೆಯಾದ ಯುವಿ ಕ್ರಿಯೇಷನ್ಸ್​ನ ನಿರ್ಮಾಪಕರು, ವಿತರಕರಾದ ಅನಿಲ್ ತಂಡಾನಿ ಹಾಗೂ ಇನ್ನಿತರರನ್ನು ವೇದಿಕೆ ಮೇಲೆ ಕರೆಸಿ ಸಾಲಾಗಿ ನಿಲ್ಲುವಂತೆ ಹೇಳಿ ಎಲ್ಲರ ಮುಂದೆ ನಿಮ್ಮಗಳ ಮನವಿಯೊಂದು ಮಾಡಲು ಇದೆ ಎಂದು ಮಾತು ಆರಂಭಿಸಿದರು.

ನನ್ನ ತಾಯಿ ನನಗೆ ಹೇಳುತ್ತಿದ್ದರು, ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದಲ್ಲಿ ಎಲ್ಲಿಯೇ ರಾಮಾಯಣದ ನಾಟಕ ಆಡಿದರೆ ಅದರ ಯಾವುದೇ ಪ್ರದರ್ಶನ ಮಾಡಿದರೆ ಅದನ್ನು ನೋಡಲು ಸಾಕ್ಷಾತ್ ಆಂಜನೇಯ ಸ್ವಾಮಿಯೇ ಬರುತ್ತಾನಂತೆ. ಹಾಗಾಗಿ ನಿರ್ಮಾಪಕರು ಹಾಗೂ ವಿತರಕರಾದ ನಿಮ್ಮ ಬಳಿ ಮನವಿ ಮಾಡುತ್ತಿದ್ದೇನೆ, ಆದಿಪುರುಷ್ ಸಿನಿಮಾ ಎಲ್ಲೇ ಪ್ರದರ್ಶನಗೊಳ್ಳಲಿ ಆಂಜನೇಯ ಸ್ವಾಮಿಗಾಗಿ ಚಿತ್ರಮಂದಿರದಲ್ಲಿ ಒಂದು ಕುರ್ಚಿ ಖಾಲಿ ಇಡಿ ಎಂದು ಓಂ ರಾವತ್ ಮನವಿ ಮಾಡಿದರು. ಮನವಿ ಮಾಡುತ್ತಾ ಮಾಡುತ್ತಾ ಭಾವುಕರಾಗಿ ಕಣ್ಣೀರು ಹಾಕಿದರು. ಅವರನ್ನು ವೇದಿಕೆ ಮೇಲಿದ್ದವರು ಸಂತೈಸಿದರು.

ಇದನ್ನೂ ಓದಿ:ಆದಿಪುರುಷ್ ಟ್ರೈಲರ್: ರಾಮಾಯಣಕ್ಕೆ ತಂತ್ರಜ್ಞಾನದ ಮೆರುಗು, ‘ಮಾಸ್’ ಅವತಾರದಲ್ಲಿ ಶ್ರೀರಾಮ

ಆ ನಂತರ ಮಾತು ಆರಂಭಿಸಿದ ಪ್ರಭಾಸ್, ಓಂ ರಾವತ್ ಮನವಿಯನ್ನು ಪರಿಗಣಿಸುತ್ತೀರಾ ಹನುಮಂತನಿಗಾಗಿ ಒಂದು ಕುರ್ಚಿ ಬಿಡುತ್ತೀರಾ ಎಂದು ಕೇಳಿದರು. ಆಗ ನಿರ್ಮಾಪಕರು ಹಾಗೂ ವಿತರಕರು ಒಂದೇನೂ ಒಂದಕ್ಕಿಂತಲೂ ಹೆಚ್ಚು ಕುರ್ಚಿಯನ್ನು ಖಾಲಿ ಬಿಡುತ್ತೇವೆ ಎಂದರು.

”ಆದಿಪುರುಷ್ ಸಿನಿಮಾಕ್ಕಾಗಿ ಓಂ ರಾವತ್ ಬಹಳ ಕಷ್ಟಪಟ್ಟಿದ್ದಾನೆ. ಆತ ಒಬ್ಬ ಫೈಟರ್, ನನ್ನ 20 ವರ್ಷದ ವೃತ್ತಿ ಜೀವನದಲ್ಲಿ ಆ ರೀತಿಯ ಒಬ್ಬ ಫೈಟರ್ ಅನ್ನು ನಾನು ನೋಡಿಯೇ ಇಲ್ಲ. ನೀವುಗಳು ನಮ್ಮ ಟೀಸರ್​ಗೆ ತೋರಿಸಿದ ಅಭಿಮಾನದಿಂದ ಫಿದಾ ಆಗಿರುವ ಓಂ, ಸಿನಿಮಾದ ಯಾವುದೇ ಅಪ್​ಡೇಟ್ ಇದ್ದರೂ ಅದನ್ನು ತೆಲುಗು ಅಭಿಮಾನಿಗಳೇ ಮೊದಲು ನೋಡಬೇಕು ಎಂದು ಇಲ್ಲಿಯೇ ಪ್ರೀ ರಿಲೀಸ್ ಇವೆಂಟ್ ಮಾಡಿಸಿದ” ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ