ಓರಿ ಒಂದು ರಾತ್ರಿಗೆ ಸಂಪಾದಿಸೋದು ಇಷ್ಟೊಂದು ಹಣವಾ? ಶಾಕ್ ಆಗೋದು ಗ್ಯಾರಂಟಿ

|

Updated on: Mar 15, 2024 | 11:40 AM

ರಾತ್ರಿ ವೇಳೆ ಆಯೋಜನೆ ಮಾಡುವ ಪಾರ್ಟಿ ಹಾಗೂ ಕಾರ್ಯಕ್ರಮದಲ್ಲಿ ಭಾಗಿ ಆದರೆ ಓರಿ ಅವರಿಗೆ ಹಣ ಸಿಗುತ್ತದೆಯಂತೆ. ‘ಸಂತೋಷವನ್ನು ಹಂಚುವುದೇ ನನ್ನ ಕೆಲಸ. ಇದು ಕಾರ್ಯಕ್ರಮಗಳಲ್ಲಿ ಭಾಗಿ ಆಗುವುದಕ್ಕೆ ಸ್ಫೂರ್ತಿ ನೀಡುತ್ತದೆ. ಈ ರೀತಿ ಇವೆಂಟ್ ಅಂಟೆಡ್ ಮಾಡೋದೆ ನನ್ನ ಆದಾಯಾದ ಮೂಲ’ ಎಂದಿದ್ದಾರೆ ಅವರು.

ಓರಿ ಒಂದು ರಾತ್ರಿಗೆ ಸಂಪಾದಿಸೋದು ಇಷ್ಟೊಂದು ಹಣವಾ? ಶಾಕ್ ಆಗೋದು ಗ್ಯಾರಂಟಿ
ಓರಿ
Follow us on

ಓರ್ಹಾನ್ ಅವತ್ರಮಣಿ (Orhan Awatramani) ಅವರು ಓರಿ ಎಂದೇ ಫೇಮಸ್. ಅವರು ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಸೆಲೆಬ್ರಿಟಿಗಳ ಜೊತೆ ಪೋಸ್ ಕೊಡುತ್ತಾರೆ. ಅವರು ಏನು ಕೆಲಸ ಮಾಡುತ್ತಾರೆ ಎಂಬಿತ್ಯಾದಿ ವಿಚಾರಗಳು ಗುಟ್ಟಾಗಿಯೇ ಇದ್ದವು. ಈ ಬಗ್ಗೆ ಕೇಳಿದರೆ ಅವರು ಒಂದು ಶಾಕಿಂಗ್ ವಿಚಾರ ರಿವೀಲ್ ಮಾಡಿದ್ದಾರೆ. ಸೆಲೆಬ್ರಿಟಿಗಳ ಜೊತೆ ಕಾಣಿಸಿಕೊಳ್ಳೋ ಓರಿ ಆದಾಯದ ಮೂಲ ಏನು ಎಂಬುದನ್ನು ಹೇಳಿದ್ದಾರೆ.

ಓರಿ ಅವರು ಇತ್ತೀಚೆಗೆ ಫೋರ್ಬ್ಸ್ ಇಂಡಿಯಾ ಜೊತೆ ಮಾತನಾಡಿದ್ದಾರೆ. ರಾತ್ರಿ ವೇಳೆ ಆಯೋಜನೆ ಮಾಡುವ ಪಾರ್ಟಿ ಹಾಗೂ ಕಾರ್ಯಕ್ರಮದಲ್ಲಿ ಭಾಗಿ ಆದರೆ ಅವರಿಗೆ ಹಣ ಸಿಗುತ್ತದೆಯಂತೆ. ‘ಸಂತೋಷವನ್ನು ಹಂಚುವುದೇ ನನ್ನ ಕೆಲಸ. ಇದು ಕಾರ್ಯಕ್ರಮಗಳಲ್ಲಿ ಭಾಗಿ ಆಗುವುದಕ್ಕೆ ಸ್ಫೂರ್ತಿ ನೀಡುತ್ತದೆ. ಈ ರೀತಿ ಇವೆಂಟ್ ಅಂಟೆಡ್ ಮಾಡೋದೆ ನನ್ನ ಆದಾಯಾದ ಮೂಲ’ ಎಂದಿದ್ದಾರೆ ಅವರು.

ಓರಿ ಅವರು ಒಂದು ಕಾರ್ಯಕ್ರಮದಲ್ಲಿ ಭಾಗಿ ಆದರೆ 15-30 ಲಕ್ಷ ರೂಪಾಯಿ ಪಡೆಯುತ್ತಾರಂತೆ. ‘ಜನರು ಮದುವೆಗೆ ಕರೆಯುತ್ತಾರೆ. ಇದಕ್ಕಾಗಿ 15-30 ಲಕ್ಷ ರೂಪಾಯಿವರೆಗೆ ಪಾವತಿಸುತ್ತಾರೆ. ನಾನು ಅತಿಥಿಯಾಗಿ ಮದುವೆಗೆ ಹೋಗುವುದಿಲ್ಲ, ಅವರ ಗೆಳೆಯನಾಗಿ ನಾನು ಮದುವೆಯಲ್ಲಿ ಭಾಗಿ ಆಗುತ್ತೇನೆ’ ಎಂದು ಹೇಳಿದ್ದಾರೆ.

ಈ ಮೊದಲು ‘ಬಿಗ್ ಬಾಸ್ ಹಿಂದಿ ಸೀಸನ್ 17’ರಲ್ಲಿ ಓರಿ ಅವರು ಅತಿಥಿಯಾಗಿ ತೆರಳಿದ್ದರು. ಈ ವೇಳೆ ಕೆಲವು ವಿಚಾರಗಳನ್ನು ಅವರು ರಿವೀಲ್ ಮಾಡಿದ್ದರು. ‘ನಾನು ಫೋಟೋ ಕ್ಲಿಕ್ಕಿಸಿಕೊಂಡು ಪೋಸ್ಟ್ ಮಾಡಿದರೆ ಹಣ ಸಿಗುತ್ತದೆ. ಒಂದು ರಾತ್ರಿ ಕಾರ್ಯಕ್ರಮದಲ್ಲಿ ಭಾಗಿ ಆದರೆ 20-30 ಲಕ್ಷ ರೂಪಾಯಿ ಸಿಗುತ್ತದೆ’ ಎಂದು ಅವರು ಹೇಳಿದ್ದರು.

ಇದನ್ನೂ ಓದಿ: ಅಂಬಾನಿ ಮದುವೆಯಲ್ಲಿ ‘ಆರತಿ ಗರ್ಲ್’ ಆದ ನಟಿ ಜಾನ್ಹವಿ ಕಪೂರ್, ಸಖತ್ ಟ್ರೋಲ್

‘ಕಾಫಿ ವಿತ್ ಕರಣ್ ಸೀಸನ್ 8’ರಲ್ಲಿ ಓರಿ ಅವರು ಅತಿಥಿಯಾಗಿ ಆಗಮಿಸಿದ್ದರು. ‘ನಾನು ಎಲ್ಲಾ ಪಾಪರಾಜಿಗಳ ಪೋಸ್ಟ್​ನ ನೋಡುತ್ತೇನೆ. ನನ್ನ ಬಗ್ಗೆ ಹಾಕಿರೋ ಪೋಸ್ಟ್​ಗೆ ಜನರು ಏನು ಕಮೆಂಟ್ ಮಾಡುತ್ತಾರೆ ಎಂಬುದನ್ನು ನಾನು ಸಂಪೂರ್ಣವಾಗಿ ಓದುತ್ತೇನೆ’ ಎಂದು ಹೇಳಿದ್ದರು.ಮುಖೇಶ್ ಅಂಬಾನಿ ಮಗ ಅನಂತ್ ಅಂಬಾನಿ ಅವರ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಓರಿ ಭಾಗಿ ಆಗಿದ್ದರು. ಅವರು ಅನೇಕ ಸೆಲೆಬ್ರಿಟಿಗಳ ಜೊತೆ ಪೋಸ್​ ಕೊಟ್ಟಿದ್ದರು. ಈ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ