Oscars 2021: ಅತ್ಯುತ್ತಮ ನಿರ್ದೇಶಕಿ ಆಸ್ಕರ್​ ಪ್ರಶಸ್ತಿ ಪಡೆದು ದಾಖಲೆ ಬರೆದ ಕ್ಲೋಯಿ ಜಾವ್​

|

Updated on: Apr 26, 2021 | 8:59 AM

Oscars Academy Awards: ಲಾಸ್​ ಏಂಜಲೀಸ್​ನಲ್ಲಿ ನಡೆಯುತ್ತಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೋಮಡ್​ಲ್ಯಾಂಡ್​ ಚಿತ್ರದ ನಿರ್ದೇಶನಕ್ಕಾಗಿ ಚೀನಾದ ಕ್ಲೋಯಿ ಜಾವ್​ ಅವರು ‘ಅತ್ಯುತ್ತಮ ನಿರ್ದೇಶಕಿ’ ಪ್ರಶಸ್ತಿ ಪಡೆದುಕೊಂಡಿದ್ದಾರೆ.

Oscars 2021: ಅತ್ಯುತ್ತಮ ನಿರ್ದೇಶಕಿ ಆಸ್ಕರ್​ ಪ್ರಶಸ್ತಿ ಪಡೆದು ದಾಖಲೆ ಬರೆದ ಕ್ಲೋಯಿ ಜಾವ್​
‘ಅತ್ಯುತ್ತಮ ನಿರ್ದೇಶಕಿ’ ಆಸ್ಕರ್ ಪ್ರಶಸ್ತಿ ಪಡೆದುಕೊಂಡ ಕ್ಲೋಯಿ ಜಾವ್
Follow us on

93ನೇ ಆಸ್ಕರ್​ ಪ್ರಶಸ್ತಿ ಘೋಷಣೆ ಆಗಿದೆ. ಭಾರತೀಯ ಕಾಲಮಾನದ ಪ್ರಕಾರ ಸೋಮವಾರ (ಏ.26) ಮುಂಜಾನೆ 5:30ರಿಂದ 8:30ರವರೆಗೆ ಈ ಕಾರ್ಯಕ್ರಮ ಜರುಗಿದೆ. ಲಾಸ್​ ಏಂಜಲೀಸ್​ನಲ್ಲಿ ನಡೆದೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೋಮಡ್​ಲ್ಯಾಂಡ್​ ಚಿತ್ರದ ನಿರ್ದೇಶನಕ್ಕಾಗಿ ಚೀನಾದ ಕ್ಲೋಯಿ ಜಾವ್​ ಅವರು ‘ಅತ್ಯುತ್ತಮ ನಿರ್ದೇಶಕಿ’ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಆಸ್ಕರ್​ನಲ್ಲಿ ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿ ಪಡೆದ ಏಷ್ಯಾದ ಮೊದಲ ಮಹಿಳೆ ಎಂಬ ಖ್ಯಾತಿಗೆ ಕ್ಲೋಯಿ ಜಾವ್ ಪಾತ್ರರಾಗಿದ್ದಾರೆ. ಆ ಮೂಲಕ ಅವರು ದಾಖಲೆ ಬರೆದಿದ್ದಾರೆ. ಅಲ್ಲಿದೆ, ಒಟ್ಟಾರೆ ಆಸ್ಕರ್​ ಇತಿಹಾಸದಲ್ಲಿ ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿ ಪಡೆದ ಎರಡನೇ ಮಹಿಳೆ ಕ್ಲೋಯಿ ಜಾವ್ ಅವರಾಗಿದ್ದಾರೆ.

‘ಮಾಂಕ್’​ ಚಿತ್ರದ ಅಭಿನಯಕ್ಕಾಗಿ ಆಂಥೊನಿ ಹಾಪ್ಕಿನ್ಸ್​ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ನೋಮಡ್​ಲ್ಯಾಂಡ್​ ಚಿತ್ರದಲ್ಲಿ ನಟಿಸಿರುವ ಫ್ರಾನ್ಸಿಸ್​ ಮೆಕ್​ಡೊರ್ಮಂಡ್​ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ. ಜೂಡಸ್​ ಆ್ಯಂಡ್​ ಬ್ಲಾಕ್​ ಮೆಶಿಯಾ ಚಿತ್ರದ ನಟನೆಗಾಗಿ ಡ್ಯಾನಿಯಲ್​ ಕಲೂಯಾ ಅವರು ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ‘ಮಿನಾರಿ’ ಸಿನಿಮಾದಲ್ಲಿ ನಟಿಸಿರುವ 73ರ ಪ್ರಾಯದ ಯು ಜಂಗ್​ ಯಾನ್​ ಅವರಿಗೆ ಅತ್ತುತ್ತಮ ಪೋಷಕ ನಟಿ ಪ್ರಶಸ್ತಿ ಸಿಕ್ಕಿದೆ.

‘ಪ್ರಾಮಿಸಿಂಗ್​ ಎಂಗ್​ ವುಮನ್’​ ಚಿತ್ರಕ್ಕೆ ಎಮೆರಲ್ಡ್​ ಫೆನಲ್​ ಅವರಿಗೆ ಬೆಸ್ಟ್​ ಒರಿಜಿನಲ್​ ಸ್ಕ್ರೀನ್​ಪ್ಲೇ ಪ್ರಶಸ್ತಿ ಬಂದಿದೆ. ಡೆನ್ಮಾರ್ಕ್​ನ ‘ಅನದರ್​ ರೌಂಡ್​’ ಸಿನಿಮಾಗೆ ಅತ್ಯುತ್ತಮ ಅಂತಾರಾಷ್ಟ್ರೀಯ ಫೀಚರ್​ ಫಿಲ್ಮ್​ ಗೌರವ ಸಿಕ್ಕಿದೆ. ಈ ವಿಭಾಗದಲ್ಲಿ ಭಾರತದಿಂದ ಜಲ್ಲಿಕಟ್ಟು ಸಿನಿಮಾ ಪ್ರವೇಶ ಪಡೆದಿತ್ತು. ಆದರೆ ಅಂತಿಮ ಸುತ್ತಿಗೆ ನಾಮನಿರ್ದೇಶನಗೊಳ್ಳುವಲ್ಲಿ ಜಲ್ಲಿಕಟ್ಟು ವಿಫಲವಾಗಿತ್ತು.

ಅತ್ಯುತ್ತಮ ವಿಶ್ಯುವಲ್​ ಎಫೆಕ್ಟ್​ ಪ್ರಶಸ್ತಿ ಟೆನೆಟ್​ ಚಿತ್ರದ ಪಾಲಾಗಿದೆ. ಅತ್ಯುತ್ತಮ ಧ್ವನಿ ವಿನ್ಯಾಸ ಮತ್ತು ಅತ್ಯುತ್ತಮ ಸಂಕಲನ ಪ್ರಶಸ್ತಿ ‘ಸೌಂಡ್​ ಆಫ್​ ಮೆಟಲ್​’ ಚಿತ್ರಕ್ಕೆ ದೊರೆತಿದೆ. ‘ಮಾ ರೇನೀಸ್​ ಬ್ಲ್ಯಾಕ್​ ಬಾಟಮ್​’ ಚಿತ್ರ ಅತ್ಯುತ್ತಮ ಕೇಶವಿನ್ಯಾಸ ಹಾಗೂ ಅತ್ಯುತ್ತಮ ಮೇಕಪ್​ ವಿಭಾಗದಲ್ಲಿ ಪ್ರಶಸ್ತಿ ಗಳಿಸಿದೆ. ಅತ್ಯುತ್ತಮ ಛಾಯಾಗ್ರಹಣ ಮತ್ತು ಅತ್ಯುತ್ತಮ ನಿರ್ಮಾಣ ವಿನ್ಯಾಸ ಪ್ರಶಸ್ತಿಯನ್ನು ಮಾಂಕ್​ ಚಿತ್ರದ ಪಡೆದುಕೊಂಡಿದೆ.

ಇದನ್ನೂ ಓದಿ: ಆಸ್ಕರ್ ಪ್ರಶಸ್ತಿ ಕಳೆದುಕೊಂಡ ಎಆರ್ ರೆಹಮಾನ್?

Published On - 7:57 am, Mon, 26 April 21