Oscars 2021: ಆಸ್ಕರ್​ 2021ರ ಸಮಾರಂಭಕ್ಕೆ ಮಾಸ್ಕ್​ ಧರಿಸಿ ಬಂದ್ರೆ ಇಲ್ಲ ಎಂಟ್ರಿ

ಈ ಬಾರಿ ಯಾವ ಚಿತ್ರಗಳು ಆಸ್ಕರ್ ಬಾಚಿಕೊಳ್ಳಲಿದೆ ಎನ್ನುವ ಕುತೂಹಲ ಇದೆ. ವಿಶೇಷ ಎಂದರೆ ನೆಟ್​ಫ್ಲಿಕ್ಸ್​ನ 36 ಸಿನಿಮಾಗಳು ಆಸ್ಕರ್​ ಸ್ಪರ್ಧೆಯಲ್ಲಿ ಸ್ಥಾನ ಪಡೆದುಕೊಂಡಿವೆ.

Oscars 2021: ಆಸ್ಕರ್​ 2021ರ ಸಮಾರಂಭಕ್ಕೆ ಮಾಸ್ಕ್​ ಧರಿಸಿ ಬಂದ್ರೆ ಇಲ್ಲ ಎಂಟ್ರಿ
ಆಸ್ಕರ್​ 2021
Follow us
ರಾಜೇಶ್ ದುಗ್ಗುಮನೆ
| Updated By: Digi Tech Desk

Updated on:Apr 25, 2021 | 8:56 PM

ಚಿತ್ರರಂಗದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಮುಂಚೂಣಿಯಲ್ಲಿರುವ ಆಸ್ಕರ್​​ 2021 ಪ್ರಶಸ್ತಿ ಸಮಾರಂಭ ಸೋಮವಾರ (ಏಪ್ರಿಲ್​ 26) ನಡೆಯಲಿದೆ. ಲಾಸ್​ ಏಂಜಲೀಸ್​ನಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿದೆ. ಕೊರೊನಾ ವೈರಸ್​ ಅಮೆರಿಕದಲ್ಲಿ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಹೀಗಿದ್ದರೂ, ಕಾರ್ಯಕ್ರಮಕ್ಕೆ ತೆರಳುವವರು ಮಾಸ್ಕ್​ ಧರಿಸುವಂತಿಲ್ಲ. ಕಮರ್ಷಿಯಲ್​ ಆ್ಯಡ್​ ಬ್ರೇಕ್​ನಲ್ಲಿ ಮಾತ್ರ ಮಾಸ್ಕ್​ ಧರಿಸಬಹುದಾಗಿದೆ.

ಈ ಬಾರಿ ಯಾವ ಚಿತ್ರಗಳು ಆಸ್ಕರ್ ಬಾಚಿಕೊಳ್ಳಲಿದೆ ಎನ್ನುವ ಕುತೂಹಲ ಇದೆ. ವಿಶೇಷ ಎಂದರೆ ನೆಟ್​ಫ್ಲಿಕ್ಸ್​ನ 36 ಸಿನಿಮಾಗಳು ಆಸ್ಕರ್​ ಸ್ಪರ್ಧೆಯಲ್ಲಿ ಸ್ಥಾನ ಪಡೆದುಕೊಂಡಿವೆ. ಮಾಂಕ್​ ಹೆಸರಿನ ಸಿನಿಮಾ 10 ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿದೆ.

ಭಾರತೀಯ ಕಾಲಮಾನ ಮುಂಜಾನೆ 5:30ರಿಂದ 8:30ರ ವರೆಗೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ಆಸ್ಕರ್​ ಕಾರ್ಯಕ್ರಮವನ್ನು ಆಸ್ಕರ್​​​ನ​ ಅಧಿಕೃತ ಯೂಟ್ಯೂಬ್​ ಚಾನೆಲ್​ನಲ್ಲಿ ವೀಕ್ಷಿಸಬಹುದು. ಸ್ಟಾರ್​ ವರ್ಲ್ಡ್​​ ಹಾಗೂ ಸ್ಟಾರ್​ ಮೂವಿಸ್​ನಲ್ಲಿ ರಾತ್ರಿ 8:30ಕ್ಕೆ ಕಾರ್ಯಕ್ರಮ ರಿ ಟೆಲಿಕಾಸ್ಟ್​ ಆಗಲಿದೆ. 93ನೇ ಪ್ರಶಸ್ತಿ ಸಮಾರಂಭವನ್ನು ರಿಜ್​ ಅಹ್ಮದ್, ವೈಲಾ ಡೇವಿಸ್​, ಬ್ರಾಡ್​ ಪಿಟ್​ ಸೇರಿ ಸಾಕಷ್ಟು ಸೆಲೆಬ್ರಿಟಿಗಳು ನಡೆಸಿಕೊಡುತ್ತಿದ್ದಾರೆ.

ಮಾಸ್ಕ್​ ಏಕೆ ಧರಿಸುವಂತಿಲ್ಲ?

ಅಮೆರಿಕದಲ್ಲಿ ಕೊರೊನಾ ವೈರಸ್​ ಮಿತಿ ಮೀರಿ ಹರಡುತ್ತಿದೆ. ಕೊರೊನಾ ಹೆಚ್ಚಿರುವ ರಾಷ್ಟ್ರಗಳು ಮಾಸ್ಕ್​ ಧರಿಸುವುದನ್ನು ಕಡ್ಡಾಯ ಮಾಡಿವೆ. ಆದರೆ, ಈ ಕಾರ್ಯಕ್ರಮಕ್ಕೆ ಎಂಟ್ರಿ ತೆಗೆದುಕೊಳ್ಳುವವರು ಮಾಸ್ಕ್​ ಧರಿಸುವಂತಿಲ್ಲ. ಕ್ಯಾಮೆರಾ ಎದುರಿರುವಾಗ ಮಾಸ್ಕ್​ ಧರಿಸಿ ಕೂತಿರುವುದು ಅಷ್ಟು ಸುಂದರವಾಗಿ ಕಾಣುವುದಿಲ್ಲ ಎಂಬುದು ಆಯೋಜಕರ ನಂಬಿಕೆ. ಹೀಗಾಗಿ, ಈ ನಿರ್ಧಾರಕ್ಕೆ ಬರಲಾಗಿದೆ. ಅಲ್ಲದೆ, ನಾಮಿನಿಗಳು, ಶೋ ನಡೆಸಿಕೊಡುವವರು ಹಾಗೂ ನಿಯಮಿತಿ ಗೆಸ್ಟ್​​ಗಳಿಗೆ ಮಾತ್ರ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಗುತ್ತಿದೆ. ಇವರು ಕೊರೊನಾ ಪರೀಕ್ಷೆ ಒಳಪಟ್ಟಿರುವುದು ಕಡ್ಡಾಯವಾಗಿದೆ.

ಇದನ್ನೂ ಓದಿ: Darshan: ದರ್ಶನ್​ಗೆ ಆಸ್ಕರ್​ ಕೊಡಿ; ವೇದಿಕೆಯ ಮೇಲೆ ಬೇಡಿಕೆ ಇಟ್ಟ ರವಿಶಂಕರ್​!

Published On - 8:48 pm, Sun, 25 April 21