ಅಕ್ಕಿನೇನಿ ನಾಗಾರ್ಜುನ (Akkineni Nagarjuna) ಅವರು ಹಲವು ಸಮಯದಿಂದ ಚಿತ್ರರಂಗದಲ್ಲಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಹಲವು ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಅವರ ಮಗ ನಾಗ ಚೈತನ್ಯ (Naga Chaitanya) ಕೂಡ ಟಾಲಿವುಡ್ನ ಬೇಡಿಕೆಯ ನಟ. ಅವರಿಗೂ ದೊಡ್ಡ ಅಭಿಮಾನಿ ಬಳಗ ಇದೆ. ಅಪ್ಪನ ನೆರಳಲ್ಲಿ ಬೆಳೆಯದೇ, ತಮ್ಮದೇ ಆದ ಸ್ವಂತ ಇಮೇಜ್ ಕ್ರಿಯೇಟ್ ಮಾಡಿಕೊಂಡಿದ್ದಾರೆ ಅವರು. ಈಗ ಇಬ್ಬರೂ ಒಟಿಟಿ ಮೇಲೆ ಕಣ್ಣಿಟ್ಟಿದ್ದಾರೆ. ಹಾಗಂತ, ಇಬ್ಬರೂ ಒಂದೇ ವೆಬ್ ಸರಣಿಯಲ್ಲಿ ನಟಿಸುತ್ತಿಲ್ಲ. ಇಬ್ಬರೂ ಬೇರೆಬೇರೆ ವೆಬ್ ಸೀರಿಸ್ನಲ್ಲಿ ನಟಿಸೋಕೆ ರೆಡಿ ಆಗಿದ್ದಾರೆ. ಆದರೆ, ಈ ವೆಬ್ ಸೀರಿಸ್ಗಳು ಒಟ್ಟಿಗೆ ತೆರೆಗೆ ಬರುವ ನಿರೀಕ್ಷೆ ಇದೆ.
ಅಕ್ಕಿನೇನಿ ನಾಗಾರ್ಜುನ ಹಾಗೂ ನಾಗ ಚೈತನ್ಯ ನಟನೆಯ ‘ಬಂಗಾರ್ರಾಜು’ ಚಿತ್ರ ಇತ್ತೀಚೆಗೆ ತೆರೆಗೆ ಬಂದು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಸಂಕ್ರಾಂತಿ ಸಂದರ್ಭದಲ್ಲಿ ತೆರೆಗೆ ಬಂದ ಈ ಚಿತ್ರ ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಿದೆ. ಅಪ್ಪ-ಮಗನನ್ನು ಒಟ್ಟಿಗೆ ತೆರೆಮೇಲೆ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಈಗ ಇವರ ಗಮನ ಒಟಿಟಿ ಮೇಲೆ ನೆಟ್ಟಿದೆ.
‘ದೂಥ’ ವೆಬ್ ಸರಣಿಯಲ್ಲಿ ನಾಗ ಚೈತನ್ಯ ನಟಿಸಲಿದ್ದಾರೆ ಎನ್ನಲಾಗಿದೆ. ವೆಬ್ ಸೀರಿಸ್ನ ಟೈಟಲ್ ಸದ್ಯ ಸಾಕಷ್ಟು ಕುತೂಹಲ ಮೂಡಿಸಿದೆ. ಇದೊಂದು ಭಿನ್ನ ಕಾನ್ಸೆಪ್ಟ್ನಲ್ಲಿ ಮೂಡಿ ಬರುತ್ತಿರುವ ವೆಬ್ ಸರಣಿ ಎನ್ನಲಾಗಿದೆ. ಇದೊಂದು ಹಾರರ್ ಥ್ರಿಲ್ಲರ್ ವೆಬ್ ಸರಣಿ ಇರಬಹುದು ಎಂಬುದು ಹಲವರ ಊಹೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಘೋಷಣೆ ಆಗಬೇಕಿದೆ.
ಅದೇ ರೀತಿಯಲ್ಲಿ, ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಒಟಿಟಿ ಪ್ಲಾಟ್ಫಾರ್ಮ್ ಅಕ್ಕಿನೇನಿ ನಾಗಾರ್ಜುನ ಅವರಿಗೆ ವೆಬ್ ಸೀರಿಸ್ ಆಫರ್ ಒಂದನ್ನು ನೀಡಿದೆ ಎನ್ನಲಾಗುತ್ತಿದೆ. ಇದರಲ್ಲಿ ನಟಿಸೋಕೆ ಅವರು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇದನ್ನು ಯಾರು ನಿರ್ದೇಶನ ಮಾಡುತ್ತಿದ್ದಾರೆ? ಯಾವ ಶೈಲಿಯಲ್ಲಿ ವೆಬ್ ಸರಣಿ ಮೂಡಿ ಬರುತ್ತಿದೆ ಎನ್ನುವ ವಿಚಾರ ಇನ್ನಷ್ಟೇ ಅಧಿಕೃತವಾಗಬೇಕಿದೆ.
ಕೊವಿಡ್ ಕಾಣಿಸಿಕೊಂಡ ನಂತರದಲ್ಲಿ ಎಲ್ಲರೂ ಒಟಿಟಿಯತ್ತ ಹೆಚ್ಚು ಆಕರ್ಷಿತರಾದರು. ಚಿತ್ರಮಂದಿರಗಳು ಹಲವು ತಿಂಗಳ ಕಾಲ ಮುಚ್ಚಿದ್ದರಿಂದ ಅನೇಕ ನಿರ್ಮಾಪಕರಿಗೆ ಒಟಿಟಿ ಆಯ್ಕೆ ಅನಿವಾರ್ಯವಾಗಿತ್ತು. ಒಟಿಟಿ ವ್ಯಾಪ್ತಿ ಹೆಚ್ಚಿದಂತೆ ವೆಬ್ ಸೀರಿಸ್ ಕ್ರೇಜ್ ಹೆಚ್ಚುತ್ತಾ ಬಂತು. ಸ್ಟಾರ್ ನಟರುಗಳು ವೆಬ್ ಸೀರಿಸ್ನಲ್ಲಿ ನಟಿಸೋಕೆ ಆದ್ಯತೆ ಕೊಡೋಕೆ ಆರಂಭಿಸಿದರು. ಅದೇ ರೀತಿ ಅಕ್ಕಿನೇನಿ ನಾಗಾರ್ಜುನ ಕೂಡ ವೆಬ್ ಸೀರಿಸ್ ಲೋಕಕ್ಕೆ ಕಾಲಿಡೋಕೆ ರೆಡಿ ಆಗಿದ್ದಾರೆ.
ಇದನ್ನೂ ಓದಿ: ಸಮಂತಾ ಹಾದಿಯಲ್ಲಿ ನಾಗ ಚೈತನ್ಯ; ಹೊಸ ಪ್ರಯತ್ನಕ್ಕೆ ಸಿಗಲಿದೆಯೇ ಯಶಸ್ಸು?
‘ಸಮಂತಾ ಬಗ್ಗೆ ನಾನು ಯಾವುದೇ ಹೇಳಿಕೆ ನೀಡಿಲ್ಲ’; ಕಿಡಿಕಾರಿದ ಅಕ್ಕಿನೇನಿ ನಾಗಾರ್ಜುನ