ಇಂಗ್ಲಿಷ್​ನಲ್ಲೂ ಬಂತು ‘ಪುಷ್ಪ 2’ ಸಿನಿಮಾ; ವಿಶ್ವಾದ್ಯಂತ ಅಲ್ಲು ಅರ್ಜುನ್ ಹವಾ

ಭಾರತೀಯ ಭಾಷೆಗಳಲ್ಲಿ ಅಬ್ಬರಿಸಿದ ‘ಪುಷ್ಪ 2’ ಸಿನಿಮಾ ಈಗ ಇಂಗ್ಲಿಷ್​ನಲ್ಲೂ ಸದ್ದು ಮಾಡುತ್ತಿದೆ. ವಿಶ್ವಾದ್ಯಂತ ಇರುವ ಪ್ರೇಕ್ಷಕರು ಈ ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ನೆಟ್​ಫ್ಲಿಕ್ಸ್​ನಲ್ಲಿ ‘ಪುಷ್ಪ 2’ ಸಿನಿಮಾದ ಇಂಗ್ಲಿಷ್ ವರ್ಷನ್ ಸ್ಟ್ರೀಮ್ ಆಗುತ್ತಿದೆ. ನೆಟ್​ಫ್ಲಿಕ್ಸ್ ಗ್ಲೋಬಲ್ ಟಾಪ್​ 10 ಟ್ರೆಂಡಿಂಗ್​ನಲ್ಲೂ ಈ ಸಿನಿಮಾ ಇದೆ.

ಇಂಗ್ಲಿಷ್​ನಲ್ಲೂ ಬಂತು ‘ಪುಷ್ಪ 2’ ಸಿನಿಮಾ; ವಿಶ್ವಾದ್ಯಂತ ಅಲ್ಲು ಅರ್ಜುನ್ ಹವಾ
Allu Arjun

Updated on: Feb 09, 2025 | 1:16 PM

‘ಪುಷ್ಪ 2’ ಸಿನಿಮಾ ಮಾಡಿದ ದಾಖಲೆಗಳು ಒಂದೆರಡಲ್ಲ. ಚಿತ್ರಮಂದಿರದಲ್ಲಿ ಹಲವು ವಾರಗಳ ಕಾಲ ಹೌಸ್​ಫುಲ್ ಪ್ರದರ್ಶನ ಕಂಡ ಈ ಸಿನಿಮಾ ಸಖತ್ ಸದ್ದು ಮಾಡಿತು. ವಿಶ್ವಾದ್ಯಂತ ಅಂದಾಜು 1800 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು ಈ ಸಿನಿಮಾದ ಹೆಚ್ಚುಗಾರಿಕೆ. ಥಿಯೇಟರ್​ನಲ್ಲಿ ಅಬ್ಬರಿಸಿದ ಬಳಿಕ ನೆಟ್​ಫ್ಲಿಕ್ಸ್ ಒಟಿಟಿಯಲ್ಲೂ ಈ ಸಿನಿಮಾ ಅಬ್ಬರಿಸುತ್ತಿದೆ. ವಿಶೇಷ ಏನೆಂದರೆ, ಈಗ ‘ಪುಷ್ಪ 2’ ಸಿನಿಮಾ ಇಂಗ್ಲಿಷ್ ಭಾಷೆಯಲ್ಲೂ ಪ್ರಸಾರ ಕಾಣುತ್ತಿದೆ. ಇದರಿಂದ ಅಲ್ಲು ಅರ್ಜುನ್ ಅವರ ಖ್ಯಾತಿ ಹೆಚ್ಚಾಗಿದೆ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿ ‘ಪುಷ್ಪ 2’ ಸಿನಿಮಾ ಬಿಡುಗಡೆ ಆಗಿತ್ತು. ಒಟಿಟಿಯಲ್ಲಿ ಕೂಡ ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಬೆಂಗಾಲಿ ಮುಂತಾದ ಭಾಷೆಯಲ್ಲಿ ಸಿನಿಮಾ ಲಭ್ಯವಾಗಿತ್ತು. ಅವುಗಳ ಜೊತೆಗೆ ಈಗ ಇಂಗ್ಲಿಷ್ ಭಾಷೆಗೂ ಈ ಸಿನಿಮಾ ಡಬ್ ಆಗಿದೆ. ಹಾಗಾಗಿ ಬೇರೆ ಬೇರೆ ದೇಶಗಳಲ್ಲಿ ಇರುವ ಪ್ರೇಕ್ಷಕರು ನೆಟ್​ಫ್ಲಿಕ್ಸ್ ಮೂಲಕ ‘ಪುಷ್ಪ 2’ ಇಂಗ್ಲಿಷ್ ವರ್ಷನ್ ನೋಡಿ ಎಂಜಾಯ್ ಮಾಡುತ್ತಿದ್ದಾರೆ.

ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆದಾಗಿನಿಂದಲೂ ‘ಪುಷ್ಪ 2’ ಸಿನಿಮಾ ಜಾಗತಿಕ ಟ್ರೆಂಡಿಂಗ್​ನಲ್ಲಿ ಸ್ಥಾನ ಪಡೆದುಕೊಂಡಿದೆ. ಈಗ ಇಂಗ್ಲಿಷ್ ವರ್ಷನ್ ಕೂಡ ಸೇರ್ಪಡೆ ಆಗಿರುವುದರಿಂದ ಇನ್ನಷ್ಟು ಕ್ರೇಜ್ ಜಾಸ್ತಿ ಆಗಿದೆ. ಸುಕುಮಾರ್​ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದು, ಅಲ್ಲು ಅರ್ಜುನ್ ಜೊತೆ ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಮುಂತಾದವರು ಮಿಂಚಿದ್ದಾರೆ.

ಇದನ್ನೂ ಓದಿ: ಅಲ್ಲು ಅರ್ಜುನ್ ಬರೋ ಈ ಜಾಗಕ್ಕೆ ಅಭಿಮಾನಿಗಳಿಗೆ ಇಲ್ಲ ಎಂಟ್ರಿ

ಸಿನಿಮಾ ಬಿಡುಗಡೆ ಆದ ಬಳಿಕ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲು ಅಲ್ಲು ಅರ್ಜುನ್ ಅವರಿಗೆ ಸಾಧ್ಯವಾಗಲಿಲ್ಲ. ಮೊದಲ ದಿನವೇ ಕಾಲ್ತುಳಿತದಿಂದ ಅಭಿಮಾನಿ ನಿಧನರಾಗಿದ್ದು ಅಲ್ಲು ಅರ್ಜುನ್ ಅವರಿಗೆ ನೋವುಂಟು ಮಾಡಿತ್ತು. ಆ ಘಟನೆ ಬಳಿಕ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡು ಸಿನಿಮಾಗೆ ಪ್ರಚಾರ ನೀಡಲಿಲ್ಲ. ಹಲವು ದಿನಗಳು ಕಳೆದ ಬಳಿಕ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಆರಂಭಿಸಿದರು. ಇತ್ತೀಚೆಗೆ ಸಕ್ಸಸ್ ಪಾರ್ಟಿ ಮಾಡಲಾಗಿದೆ. ಅಲ್ಲು ಅರ್ಜುನ್ ಅವರು ಈ ಚಿತ್ರದ ಗೆಲುವನ್ನು ನಿರ್ದೇಶಕ ಸುಕುಮಾರ್ ಅವರಿಗೆ ಅರ್ಪಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.