ಅಲ್ಲು ಅರ್ಜುನ್ ಬರೋ ಈ ಜಾಗಕ್ಕೆ ಅಭಿಮಾನಿಗಳಿಗೆ ಇಲ್ಲ ಎಂಟ್ರಿ
ಅಲ್ಲು ಅರ್ಜುನ್ ಅವರು ತಮ್ಮ ತಂದೆ ಅಲ್ಲು ಅರವಿಂದ್ ನಿರ್ಮಿಸಿರುವ "ತಾಂಡೇಲ್" ಚಿತ್ರದ ಪ್ರಿ-ರಿಲೀಸ್ ಈವೆಂಟ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಆದರೆ, "ಸಂಧ್ಯಾ" ಘಟನೆಯ ನಂತರ ಭದ್ರತಾ ಕಾರಣಗಳಿಂದ ಈ ಕಾರ್ಯಕ್ರಮಕ್ಕೆ ಅಭಿಮಾನಿಗಳ ಪ್ರವೇಶ ನಿಷೇಧಿಸಲಾಗಿದೆ. ಪೊಲೀಸ್ ಬಿಗಿ ಭದ್ರತೆಯ ನಡುವೆ ಅನ್ನಪೂರ್ಣ ಸ್ಟುಡಿಯೋದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಅಲ್ಲು ಅರ್ಜುನ್ ಅವರು ದೊಡ್ಡ ಮಟ್ಟದ ಜನಪ್ರಿಯತೆ ಪಡೆದವರು. ಆದರೆ, ‘ಸಂಧ್ಯಾ’ ಥಿಯೇಟರ್ ಕಾಲ್ತುಳಿತ ಪ್ರಕರಣ ಅವರ ಜೀವನಕ್ಕೆ ಕಪ್ಪು ಚುಕ್ಕೆ ಆಗಿ ಉಳಿದು ಹೋಗಿದೆ. ಈ ಬಗ್ಗೆ ಅವರಿಗೆ ಬೇಸರ ಇದೆ. ಈ ಘಟನೆ ಬಳಿಕ ಅವರು ಪೊಲೀಸ್ ಠಾಣೆಗೆ ತೆರಳಿದ್ದು ಬಿಟ್ಟರೆ ಮತ್ಯಾವುದೇ ಈವೆಂಟ್ನಲ್ಲಿ ಪಾಲ್ಗೊಂಡಿಲ್ಲ. ಈಗ ಅವರು ‘ತಾಂಡೇಲ್’ ಚಿತ್ರದ ಪ್ರೀ ರಿಲೀಸ್ ಈವೆಂಟ್ನಲ್ಲಿ ಭಾಗವಹಿಸಲು ರೆಡಿ ಆಗಿದ್ದಾರೆ. ಆದರೆ, ಇಲ್ಲಿ ಅಭಿಮಾನಿಗಳಿಗೆ ಎಂಟ್ರಿ ಇಲ್ಲ ಎನ್ನಲಾಗಿದೆ
ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಅವರು ‘ತಾಂಡೇಲ್’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ನಾಗ ಚೈತನ್ಯ ಹೀರೋ ಆದರೆ ಸಾಯಿ ಪಲ್ಲವಿ ನಾಯಕಿ. ಈ ಚಿತ್ರದ ಪ್ರೀ ರಿಲೀಸ್ ಈವೆಂಟ್ಗೆ ಮಗನಿಗೆ ಆಹ್ವಾನ ನೀಡಿದ್ದಾರೆ ಅಲ್ಲು ಅರವಿಂದ್. ಇದಕ್ಕೆ ಅವರು ಕೂಡ ಒಪ್ಪಿದ್ದು, ಈವೆಂಟ್ಗೆ ಬರಲು ರೆಡಿ ಆಗಿದ್ದಾರೆ. ಇಂದು (ಫೆಬ್ರವರಿ 1) ಸಂಜೆ ಈವೆಂಟ್ ನಡೆಯಲಿದೆ.
‘ತಾಂಡೇಲ್’ಗೆ ಅಲ್ಲು ಅರ್ಜುನ್ ಅವರು ಅತಿಥಿ. ಹೀಗಾಗಿ, ಪೊಲೀಸರು ಈ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಾ ಇದ್ದಾರೆ. ಹೊರಗೆ ಮಾಡಿದರೆ ಸಮಸ್ಯೆ ಆಗುತ್ತದೆ ಎಂಬ ಕಾರಣಕ್ಕೆ ಇದನ್ನು ಅನ್ನಪೂರ್ಣ ಸ್ಟುಡಿಯೋ ಒಳಗೆ ಮಾಡಲಾಗುತ್ತಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಕೂಡ ಖುಷಿಪಟ್ಟಿದ್ದರು. ಆದರೆ, ಇದಕ್ಕೆ ಅಭಿಮಾನಿಗಳಿಗೆ ಎಂಟ್ರಿ ಇಲ್ಲ ಎಂಬ ವಿಚಾರ ಅವರ ತಿಳಿದ ಬಳಿಕ ಅವರಿಗೆ ಬೇಸರ ಮೂಡಿಸಿದೆ.
ಇದನ್ನೂ ಓದಿ:ಆಮಿರ್ ಖಾನ್ ಜತೆ ‘ಗಜಿನಿ 2’ ಸಿನಿಮಾ ಮಾಡಲು ಮುಂದಾದ ಅಲ್ಲು ಅರ್ಜುನ್ ತಂದೆ
ಅಭಿಮಾನಿಗಳನ್ನು ಒಂದೆಡೆ ಸೇರಿಸಿ ಕಾರ್ಯಕ್ರಮ ಮಾಡೋದು ಎಂದರೆ ಅಲ್ಲು ಅರ್ಜುನ್ ಅವರಿಗೆ ಚಿಂತೆಯ ವಿಚಾರ ಆಗಿದೆ. ಅವರು ಈ ಬಗ್ಗೆ ಭಯ ಬೀಳುತ್ತಿದ್ದಾರೆ. ಈ ಕಾರಣದಿಂದಲೇ ಯಾವುದೇ ಅಭಿಮಾನಿಗಳಿಗೆ ಒಳಗೆ ಬರೋಕೆ ಅವಕಾಶ ಇಲ್ಲ ಎನ್ನಲಾಗಿದೆ. ಪೊಲೀಸರ ಸಹಾಯ ಕೂಡ ಕೇಳಲಾಗಿದ್ದು, ಹೊರಗೆ ಅಭಿಮಾನಿಗಳು ನೆರೆಯದಂತೆ ನೋಡಿಕೊಳ್ಳಲಾಗುತ್ತಿದೆ.
ಅಲ್ಲು ಅರವಿಂದ್ ನಿರ್ಮಾಣದ ‘ತಾಂಡೇಲ್’ ಚಿತ್ರ ನಾಗ ಚೈತನ್ಯ ವೃತ್ತಿ ಜೀವನಕ್ಕೂ ಮುಖ್ಯ ಎನಿಸಿದೆ. ಅವರಿಗೆ ಗೆಲ್ಲಬೇಕಾದ ಅನಿವಾರ್ಯತೆ ಇದೆ. ಫೆಬ್ರವರಿ 7ರಂದು ಸಿನಿಮಾ ರಿಲೀಸ್ ಆಗಲಿದೆ. ನಾಗ ಚೈತನ್ಯ ಹಾಗೂ ಸಾಯಿ ಪಲ್ಲವಿನ ಒಟ್ಟಾಗಿ ನೋಡಲು ಫ್ಯಾನ್ಸ್ ಕಾದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ