AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ರಮ ಸಂಬಂಧದ ಕಥೆ; ಹಾಟ್​ಸ್ಟಾರ್​ನಲ್ಲಿರೋ ಈ ಮಲಯಾಳಂ ಸಿನಿಮಾನ ಮಿಸ್ ಮಾಡಬೇಡಿ

ಮಲಯಾಳಂ ಸಿನಿಮಾ 'ಅವಿಹಿತಮ್' ಈಗ OTTಗೆ ಲಗ್ಗೆ ಇಟ್ಟಿದೆ. ಸೆನ್ನಾ ಹೆಗ್ಡೆ ನಿರ್ದೇಶನದ ಈ ಚಿತ್ರ ಹಳ್ಳಿಯೊಂದರಲ್ಲಿ ನಡೆಯುವ ಅಕ್ರಮ ಸಂಬಂಧದ ಕಥೆ ಹೇಳುತ್ತದೆ. ಅಕ್ಟೋಬರ್ 9ರಂದು ಥಿಯೇಟರ್‌ನಲ್ಲಿ ರಿಲೀಸ್ ಆಗಿದ್ದ ಸಿನಿಮಾ ಈಗ Jio Hotstar ನಲ್ಲಿ ಲಭ್ಯವಿದೆ. ಕಥೆಯೊಂದು ಶುರುವಾಗಿದೆ ಖ್ಯಾತಿಯ ಸೆನ್ನಾ ಹೆಗ್ಡೆ ನಿರ್ದೇಶನದಲ್ಲಿ ಮೂಡಿಬಂದಿರುವ ಸಿನಿಮಾದಲ್ಲಿ, ಹಾಸ್ಯ ಮತ್ತು ಸಂದೇಶ ಇದೆ.

ಅಕ್ರಮ ಸಂಬಂಧದ ಕಥೆ; ಹಾಟ್​ಸ್ಟಾರ್​ನಲ್ಲಿರೋ ಈ ಮಲಯಾಳಂ ಸಿನಿಮಾನ ಮಿಸ್ ಮಾಡಬೇಡಿ
ಅವಿತಾಮ್
ರಾಜೇಶ್ ದುಗ್ಗುಮನೆ
|

Updated on: Nov 17, 2025 | 3:07 PM

Share

ಪ್ರತಿ ವಾರ ಒಟಿಟಿಯಲ್ಲಿ (OTT) ಹೊಸ ಹೊಸ ಸಿನಿಮಾಗಳು ರಿಲೀಸ್ ಆಗುತ್ತಲೇ ಇರುತ್ತವೆ. ಕೆಲವು ಸಿನಿಮಾಗಳು ಸಾಕಷ್ಟು ಗಮನ ಸೆಳೆಯುತ್ತವೆ. ಪರಭಾಷೆಯ ಸಿನಿಮಾಗಳಾದರೂ ಡಬ್ಬಿಂಗ್ ಕಾರಣದಿಂದ ಕನ್ನಡ ಪ್ರೇಕ್ಷಕರನ್ನು ತಲುಪುತ್ತದೆ. ಈಗ ಮಲಯಾಳಂನ ಸಿನಿಮಾ ಒಂದು ಒಟಿಟಿಗೆ ಕಾಲಿಟ್ಟಿದೆ. ಈ ಚಿತ್ರದ ಕಥೆ ಇರೋದು ಅಕ್ರಮ ಸಂಬಂಧದ ಬಗ್ಗೆ. ಹಳ್ಳಿಯಲ್ಲಿ ಸಾಗುವ ಕಥೆ ಗಮನ ಸೆಳೆಯುವ ರೀತಿಯಲ್ಲಿ ಇದೆ.

ಕನ್ನಡದಲ್ಲಿ ‘ಕಥೆಯೊಂದು ಶುರುವಾಗಿದೆ’ ಹೆಸರಿನ ಸಿನಿಮಾ ಬಂದಿತ್ತು. ದಿಗಂತ್ ಈ ಚಿತ್ರಕ್ಕೆ ಹೀರೋ. ಇದನ್ನು ನಿರ್ದೇಶನ ಮಾಡಿದ್ದು, ಸೆನ್ನಾ ಹೆಗ್ಡೆ. ಈಗ ನಾವು ಹೇಳುತ್ತಿರುವ ಚಿತ್ರವನ್ನು ನಿರ್ದೇಶನ ಮಾಡಿದ್ದು ಇದೇ ಸೆನ್ನಾ ಹೆಗ್ಡೆ. ಈ ಚಿತ್ರದ ಹೆಸರು ‘ಅವಿಹಿತಮ್’ ಎಂದು. ಈ ಸಿನಿಮಾ ಅಕ್ಟೋಬರ್ 9ರಂದು ಥಿಯೇಟರ್​ನಲ್ಲಿ ರಿಲೀಸ್ ಆಯಿತು. ಈಗ ಸಿನಿಮಾ ಒಟಿಟಿಗೆ ಬಂದಿದೆ. ಜಿಯೋ ಹಾಟ್​ಸ್ಟಾರ್​ನಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯ.

ಒಂದು ಸಣ್ಣ ಹಳ್ಳಿ. ಆ ಹಳ್ಳಿಯಲ್ಲಿರೋ ಪ್ರಕಾಶನ್ (ರೆಂಜಿ ಕಾಂಕೋಲ್) ಫ್ರೆಂಡ್ಸ್ ಜೊತೆ ಕುಡಿದು ರಾತ್ರಿ ಮನೆಗೆ ಬರುತ್ತಿರುತ್ತಾನೆ. ಆಗ ತೋಟದಲ್ಲಿ ಏನೋ ಶಬ್ದವಾದಂತೆ ಕೇಳಿಸುತ್ತದೆ. ಮಹಿಳೆಯೊಬ್ಬಳು ಯುವಕನ ಜೊತೆ ಕಿಸ್ ಮಾಡೋ ದೃಶ್ಯ ಅದು. ಈ ವಿಷಯವನ್ನು ಪ್ರಕಾಶನ್ ವೇಣುಗೆ (ಉನ್ನಿ ರಾಜ್) ಹೇಳುತ್ತಾನೆ. ಮರುದಿನ ರಾತ್ರಿ ಬಂದು ನೋಡಿದರೆ ಮತ್ತದೇ ದೃಶ್ಯ. ನಂತರ ಇನ್ನೂ ಕೆಲವರಿಗೆ ಈ ವಿಷಯ ಗೊತ್ತಾಗುತ್ತದೆ. ಅಷ್ಟಕ್ಕೂ ಯಾರು ಆ ಇಬ್ಬರು? ನಂತರ ಅವರನ್ನು ಹೇಗೆ ಪತ್ತೆ ಹಚ್ಚಲಾಗುತ್ತದೆ? ಕ್ಲೈಮ್ಯಾಕ್ಸ್​ನಲ್ಲಿ ಏನಾಗುತ್ತದೆ ಎಂಬುದೇ ಸಿನಿಮಾ.

ಇದನ್ನೂ ಓದಿ: ಈ ವಾರ ಒಟಿಟಿಗೆ ಹಿಟ್ ಸಿನಿಮಾಗಳು, ನಿಮ್ಮ ಆಯ್ಕೆ ಯಾವುದು?

ಇಲ್ಲಿ ಸಿನಿಮಾ ಮೇಕಿಂಗ್ ಅಷ್ಟು ಚೆನ್ನಾಗಿಲ್ಲ. ಆದರೆ, ಸಿನಿಮಾದ ಕಥೆ ಹೊಸದು ಎನಿಸುತ್ತದೆ. ಕೊನೆಯವರೆಗೂ ಸಸ್ಪೆನ್ಸ್ ಉಳಿಸಿಕೊಂಡು ಹೋಗುತ್ತದೆ. ಇದರ ಜೊತೆಗೆ ಒಂದಷ್ಟು ಹಾಸ್ಯವನ್ನು ಕೂಡ ನಿರ್ದೇಶಕರು ಬೆರೆಸಿದ್ದಾರೆ. ಕ್ಲೈಮ್ಯಾಕ್ಸ್​ನಲ್ಲಿ ಒಂದೊಳ್ಳೆಯ ಸಂದೇಶ ಕೊಡುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಒಮ್ಮೆ ಟೈಮ್​ ಪಾಸ್​ಗೆ ಈ ಸಿನಿಮಾ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ