‘ಬಿಗ್ ಬಾಸ್ ಒಟಿಟಿ’ (Bigg Boss OTT) ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಹೊಸ ವಾರದ ಮೊದಲ ದಿನವೇ ಎಲಿಮಿನೇಷನ್ಗೆ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಕೆಲವರು ನೇರವಾಗಿ ನಾಮಿನೇಟ್ ಆದರೆ, ಇನ್ನೂ ಕೆಲವರನ್ನು ಸ್ಪರ್ಧಿಗಳು ನಾಮಿನೇಟ್ ಮಾಡಿದ್ದಾರೆ. ಈ ವಾರ 11 ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿದ್ದಾರೆ. ಆ ಪೈಕಿ 8 ಮಂದಿ ಎಲಿಮಿನೇಷನ್ಗೆ ನಾಮಿನೇಟ್ ಆಗಿದ್ದಾರೆ.
ಈಗಾಗಲೇ ಮೂರು ವಾರಗಳಲ್ಲಿ ಐದು ಮಂದಿ ಎಲಿಮಿನೇಟ್ ಆಗಿದ್ದಾರೆ. ಐದು ಮಂದಿ ಪೈಕಿ ಇಬ್ಬರು ಗಾಯಗೊಂಡು ಎಲಿಮಿನೇಟ್ ಆಗಿದ್ದಾರೆ. ಅರ್ಜುನ್ ಹಾಗೂ ಲೋಕೇಶ್ ಅವರು ಗಾಯಗೊಂಡು ಔಟ್ ಆದರು. ಐದು ಮಂದಿ ಕಡಿಮೆ ಆಗಿರುವುದರಿಂದ ಮನೆಯಲ್ಲಿ ಸ್ಪರ್ಧೆ ಹೆಚ್ಚಾಗಿದೆ. ಈ ವಾರ ರೂಪೇಶ್ ಅವರು ನಾಮಿನೇಷನ್ನಿಂದ ಬಚಾವ್ ಆಗುವ ಮೂಲಕ ಮುಂದಿನ ವಾರಕ್ಕೆ ಮುಂದುವರಿದಿದ್ದಾರೆ. ಈ ವಾರ ಜಶ್ವಂತ್ ಬೋಪಣ್, ಚೈತ್ರಾ ಹಳ್ಳಿಕೇರಿ, ಅಕ್ಷತಾ, ಸಾನ್ಯಾ ಐಯ್ಯರ್, ರಾಕೇಶ್ ಅಡಿಗ, ಸೋನು ಶ್ರೀನಿವಾಸ್ ಗೌಡ, ನಂದಿನಿ, ಜಯಶ್ರೀ ಆರಾಧ್ಯ ನಾಮಿನೇಷನ್ ಲಿಸ್ಟ್ನಲ್ಲಿದ್ದಾರೆ.
ಜಶ್ವಂತ್ ಅವರು ಹೆಚ್ಚು ವೋಟ್ ಪಡೆದು ನಾಮಿನೇಟ್ ಆಗಿದ್ದಾರೆ. ಅವರು ಕಳೆದ ಮೂರು ವಾರಗಳಿಂದ ನಾಮಿನೇಟ್ ಆಗಿಲ್ಲ. ಈ ಕಾರಣಕ್ಕೆ ಮನೆಯವರು ಅವರನ್ನು ನಾಮಿನೇಟ್ ಮಾಡಿದ್ದಾರೆ. ಚೈತ್ರಾ ಅವರು ಸೇಫ್ ಗೇಮ್ ಆಡುತ್ತಿದ್ದಾರೆ ಎಂಬ ಕಾರಣಕ್ಕೆ ನಾಮಿನೇಟ್ ಆದರು. ಸೋನು ಶ್ರೀನಿವಾಸ್ ಗೌಡ, ಅಕ್ಷತಾ, ರಾಕೇಶ್ ಹೆಚ್ಚು ವೋಟ್ ಪಡೆದು ಡೇಂಜರ್ಜೋನ್ಗೆ ಬಂದರು.
ಕ್ಯಾಪ್ಟನ್ಗೆ ಒಬ್ಬರನ್ನು ನೇರವಾಗಿ ನಾಮಿನೇಟ್ ಮಾಡುವ ಅವಕಾಶವನ್ನು ಬಿಗ್ ಬಾಸ್ ನೀಡಿದರು. ಈ ವೇಳೆ ಅವರು ನಂದಿನಿಯನ್ನು ನೇರವಾಗಿ ನಾಮಿನೇಟ್ ಮಾಡಿದರು. ಇನ್ನು, ಜಯಶ್ರೀ ಅವರು ಕಳೆದ ವಾರವೇ ನಾಮಿನೇಟ್ ಆಗಿದ್ದರು. ಅವರು ಟಾಸ್ಕ್ ಆಡುವಾಗ ಸ್ಪರ್ಧಿಗಳ ಕಣ್ಣಿಗೆ ನೀರು ಹಾಗೂ ಪರ್ಫ್ಯೂಮ್ ಎರಚಿದ್ದರು. ಇದರಿಂದ ಮನೆಯವರ ಕಣ್ಣಿಗೆ ತೊಂದರೆ ಉಂಟಾಗಿತ್ತು. ಈ ಕಾರಣದಿಂದ ಅವರು ನೇರವಾಗಿ ನಾಮಿನೇಟ್ ಆಗಿದ್ದರು.
ಇದನ್ನೂ ಓದಿ: ಸೋಶಿಯಲ್ ಮೀಡಿಯಾದಲ್ಲಿ ರೂಪೇಶ್ ಶೆಟ್ಟಿಗೆ ಹೆಚ್ಚುತ್ತಿದೆ ಫ್ಯಾನ್ ಬೇಸ್; ವಿಫಲವಾಗಲಿದೆ ಮನೆಯವರ ತಂತ್ರ?
ರೂಪೇಶ್ ಅವರು ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅವರಿಗೆ ಮನೆಯ ಹೊರಗೆ ಹೆಚ್ಚು ಫ್ಯಾನ್ಸ್ ಇದ್ದಾರೆ. ಈ ವಾರ ಅವರು ಸೇಫ್ ಆಗಿರುವುದರಿಂದ ಫೈನಲ್ಗೆ ಮತ್ತಷ್ಟು ಹತ್ತಿರ ಆಗಿದ್ದಾರೆ.