ಮಗು ಜನಿಸಿ ಮೂರು ದಿನಕ್ಕೆ ಎರಡನೇ ಪತ್ನಿ ಬಗ್ಗೆ ಮೊದಲ ಹೆಂಡತಿಗೆ ಹೇಳಿದ್ದ ಬಿಗ್ ಬಾಸ್ ಸ್ಪರ್ಧಿ ಅರ್ಜುನ್ ರಮೇಶ್

ಬಾಲಿವುಡ್ ನಟ ಸಂಜಯ್ ದತ್ ಅವರು ವೈಯಕ್ತಿಕ ವಿಚಾರದಲ್ಲಿ ಸಾಕಷ್ಟು ಚರ್ಚೆ ಆಗಿದ್ದರು. ಅವರಿಗೆ ಇದ್ದ ಗರ್ಲ್​​ಫ್ರೆಂಡ್ಸ್​ಗೆ ಲೆಕ್ಕವೇ ಇರಲಿಲ್ಲ. ಅರ್ಜುನ್ ರಮೇಶ್ ಕೂಡ ಸಂಜಯ್ ದತ್ ಅವರನ್ನು ಫಾಲೋ ಮಾಡುತ್ತಾರೆ.

ಮಗು ಜನಿಸಿ ಮೂರು ದಿನಕ್ಕೆ ಎರಡನೇ ಪತ್ನಿ ಬಗ್ಗೆ ಮೊದಲ ಹೆಂಡತಿಗೆ ಹೇಳಿದ್ದ ಬಿಗ್ ಬಾಸ್ ಸ್ಪರ್ಧಿ ಅರ್ಜುನ್ ರಮೇಶ್
Edited By:

Updated on: Aug 08, 2022 | 10:43 PM

ಅರ್ಜುನ್ ರಮೇಶ್ (Arjun Ramesh) ಅವರು ‘ಬಿಗ್​ ಬಾಸ್ ಒಟಿಟಿ’ಗೆ (Bigg Boss OTT) ಕಾಲಿಟ್ಟಿದ್ದಾರೆ. ಅವರು ರಾಜಕೀಯ, ನಟನೆ ಎರಡರಲ್ಲೂ ಆ್ಯಕ್ಟೀವ್ ಆಗಿದ್ದಾರೆ. ಅವರು ಬಿಗ್ ಬಾಸ್ ಮನೆಯಲ್ಲಿ ವೈಯಕ್ತಿಕ ವಿಚಾರದಿಂದ ಸಾಕಷ್ಟು ಚರ್ಚೆ ಆಗುತ್ತಿದ್ದಾರೆ. ಅವರಿಗೆ ಇಬ್ಬರು ಪತ್ನಿಯರು. ಇದನ್ನು ಆರಂಭದಲ್ಲೇ ಹೇಳಿಕೊಂಡಿದ್ದರು. ಈಗ ಅವರು ಒಂದು ಅಚ್ಚರಿಯ ವಿಚಾರ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಫ್ಲರ್ಟ್ ವಿಚಾರದಲ್ಲಿ ಸಂಜಯ್ ದತ್ ಅವರನ್ನು ಮೀರಿಸುತ್ತೇನೆ ಎಂದಿದ್ದಾರೆ ಅರ್ಜುನ್​.

ಬಾಲಿವುಡ್ ನಟ ಸಂಜಯ್ ದತ್ ಅವರು ವೈಯಕ್ತಿಕ ವಿಚಾರದಲ್ಲಿ ಸಾಕಷ್ಟು ಚರ್ಚೆ ಆಗಿದ್ದರು. ಅವರಿಗೆ ಇದ್ದ ಗರ್ಲ್​​ಫ್ರೆಂಡ್ಸ್​ಗೆ ಲೆಕ್ಕವೇ ಇರಲಿಲ್ಲ. ಸಂಜಯ್ ದತ್ ಬಯೋಪಿಕ್ ‘ಸಂಜು’ ಚಿತ್ರದಲ್ಲಿ ಈ ವಿಚಾರವನ್ನು ಹೇಳಲಾಗಿತ್ತು. ಅಚ್ಚರಿ ಎಂದರೆ ಅರ್ಜುನ್ ರಮೇಶ್ ಕೂಡ ಸಂಜಯ್ ದತ್ ಅವರನ್ನು ಫಾಲೋ ಮಾಡುತ್ತಾರೆ.

‘ನಾನು ಎಷ್ಟು ಜನರ ಜತೆ ಫ್ಲರ್ಟ್ ಮಾಡಿದ್ದೇನೆ ಎಂಬುದು ನನಗೇ ಗೊತ್ತಿಲ್ಲ. ಆ ಲೆಕ್ಕವನ್ನು ಇಲ್ಲಿ ಕೊಡೋಕೆ ಹೋಗಲ್ಲ. ಇದರ ಲೆಕ್ಕ ನೀಡೋಕೆ ಹೋದರೆ ಸಂಜಯ್ ದತ್​ ಅವರನ್ನು ನಾನು ಹಿಂದಿಕ್ಕುತ್ತೇನೆ’ ಎಂದಿದ್ದಾರೆ ಅರ್ಜುನ್ ರಮೇಶ್​. ಈ ಮೂಲಕ ಅವರು ಸಾಕಷ್ಟು ಜನರ ಜತೆ ರಿಲೇಶನ್​​ಶಿಪ್​ನಲ್ಲಿದ್ದೆ, ಫ್ಲರ್ಟ್ ಮಾಡಿದ್ದೆ ಎಂಬ ವಿಚಾರವನ್ನು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ
‘ವಿಡಿಯೋ ಲೀಕ್​ ಆದಾಗಿನಿಂದ ಅಮ್ಮನ ಮುಖ ನೋಡಿಲ್ಲ, ನಾನು ಇಲ್ಲಿಂದ ಕ್ಷಮೆ ಕೇಳುತ್ತೇನೆ’; ಸೋನು ಗೌಡ
Rakesh Adiga: ಹುಡುಗಿಯ ಬೆತ್ತಲೆ ಫೋಟೋ ಅಂಟಿಸಿ, ಕಳ್ಳತನ ಮಾಡಿ, ತಾಯಿ ತಲೆ ತಗ್ಗಿಸುವಂತೆ ಮಾಡಿದ್ದ ರಾಕೇಶ್​ ಅಡಿಗ
Sonu Srinivas Gowda: ‘ನಂದು ಇನ್ನೊಂದು ವಿಡಿಯೋ ಇದೆ, ಯಾವಾಗ ಬರತ್ತೋ ಗೊತ್ತಿಲ್ಲ’: ಸತ್ಯ ಒಪ್ಪಿಕೊಂಡ ಸೋನು ಗೌಡ
Somanna Machimada: ಬಿಗ್ ಬಾಸ್ ಮನೆಗೆ ಖ್ಯಾತ ಪತ್ರಕರ್ತ: ಸೋಮಣ್ಣ ಬಗ್ಗೆ ನಿಮಗೆಷ್ಟು ಗೊತ್ತು?

‘ನಾನು ಬಿಗ್​ ಬಾಸ್​​ಗೆ ಹೋಗುವ ದಿನ ನನ್ನ ಇಡೀ ಕುಟುಂಬದವರು ಅಳೋಕೆ ಶುರು ಮಾಡಿದರು. ಅವರಿಗೆ ನನ್ನ ಬಿಟ್ಟು ಬೇರೆ ಪ್ರಪಂಚ ಇಲ್ಲ. ಮಿಲನ್ ನನ್ನ ಮೊದಲ ಹೆಂಡತಿ. ಮದುವೆ ಆಗಿದ್ದಾಗಲೇ ರವಿಕಾ ಜತೆ ಪ್ರೀತಿಯಲ್ಲಿದ್ದೆ. ರವಿಕಾಳನ್ನು ಸುಮಾರು ಐದು ವರ್ಷಗಳ ಕಾಲ ಹೊರ ಜಗತ್ತಿನಿಂದ ಬಚ್ಚಿಟ್ಟೆ. ರವಿಕಾಳನ್ನು ಭೇಟಿ ಮಾಡುವ ವಿಚಾರ ಮಿಲನ್​ಗೆ ಗೊತ್ತಾದರೆ ಎಂಬ ಭಯ ಸದಾ ಕಾಡುತ್ತಿತ್ತು. ನಿಮ್ಮ ಲೈಫ್​​ಗೆ ಅರ್ಥ ಏನು ಎಂದು ರವಿಕಾ ಪಾಲಕರು ಒಂದು ದಿನ ಕೇಳಿದರು’ ಎಂದು ಹಳೆ ಘಟನೆ ನೆನಪಿಸಿಕೊಂಡಿದ್ದಾರೆ ಅವರು.

ಇದನ್ನೂ ಓದಿ: ‘ಬಿಗ್ ಬಾಸ್ ಒಟಿಟಿ’ ಸೇರಿದ 16 ಸ್ಪರ್ಧಿಗಳು ಇವರೇ ನೋಡಿ; ಇಲ್ಲಿದೆ ಫೋಟೋ ಹಾಗೂ ವಿವರ

‘ರವಿಕಾಗೆ ಮಗು ಜನಿಸಿದ ಮೂರು ದಿನಕ್ಕೆ ಈ ವಿಚಾರವನ್ನು ನಾನು ಮಿಲನ್​ಗೆ ಹೇಳಿದೆ. ನನಗೆ ಮಗು ನೋಡಬೇಕು ಎಂದಳು. ಇದು ಅವಳ ಮೊದಲ ರಿಯಾಕ್ಷನ್ ಆಗಿತ್ತು​. ಮಗುವನ್ನು ಮಿಲನ್ ಮುದ್ದಾಡಿದಳು’ ಎಂದಿದ್ದಾರೆ ಅರ್ಜುನ್​ ರಮೇಶ್.

Published On - 8:49 pm, Mon, 8 August 22