ಗುರುವಾರ ಅಮೇಜಾನ್ ಪ್ರೈಮ್​ನಲ್ಲಿ ರಿಲೀಸ್ ಆಗುತ್ತಿದೆ ಹಿಟ್ ಸಿನಿಮಾ; ಕನ್ನಡದಲ್ಲೂ ಲಭ್ಯ

ತಮಿಳಿನ ಸ್ಟಾರ್ ಹೀರೋ ಚಿತ್ರವು ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಸೆಪ್ಟೆಂಬರ್ 11 ರಿಂದ ಲಭ್ಯವಾಗಿದೆ. ಈ ಚಿತ್ರವು ಥಿಯೇಟರ್‌ಗಳಲ್ಲಿ ಮಧ್ಯಮ ಯಶಸ್ಸನ್ನು ಕಂಡಿತ್ತು. ಲೋಕೇಶ್ ಕನಗರಾಜ್ ನಿರ್ದೇಶನದ ಈ ಚಿತ್ರದಲ್ಲಿ ಉಪೇಂದ್ರ, ಆಮಿರ್ ಖಾನ್, ರಚಿತಾ ರಾಮ್, ನಾಗಾರ್ಜುನ ಮುಂತಾದವರು ನಟಿಸಿದ್ದಾರೆ. 500 ಕೋಟಿಗೂ ಅಧಿಕ ಬಾಕ್ಸ್ ಆಫೀಸ್ ಸಂಗ್ರಹಿಸಿದ ಈ ಚಿತ್ರ ಒಟಿಟಿಯಲ್ಲಿ ಯಾವ ಮಟ್ಟದ ಪ್ರೇಕ್ಷಕರನ್ನು ಸೆಳೆಯುತ್ತದೆ ಎಂಬ ಕುತೂಹಲ ಮೂಡಿದೆ.

ಗುರುವಾರ ಅಮೇಜಾನ್ ಪ್ರೈಮ್​ನಲ್ಲಿ ರಿಲೀಸ್ ಆಗುತ್ತಿದೆ ಹಿಟ್ ಸಿನಿಮಾ; ಕನ್ನಡದಲ್ಲೂ ಲಭ್ಯ
ಪ್ರೈಮ್ ವಿಡಿಯೋ

Updated on: Sep 11, 2025 | 2:31 PM

ಒಟಿಟಿ ವೇದಿಕೆ ಹಿರಿದಾಗಿದೆ. ಕೊವಿಡ್ ಬಳಿಕ ಅನೇಕರು ಒಟಿಟಿಯಲ್ಲೇ ಸಿನಿಮಾ ವೀಕ್ಷಿಸಲು ಆದ್ಯತೆ ನೀಡುತ್ತಿದ್ದಾರೆ. ಪ್ರತಿ ವಾರ ಯಾವ ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆ ಕಾಣುತ್ತವೆ ಎನ್ನುವ ಕುತೂಹಲ ಅಭಿಮಾನಿಗಳಿಗೆ ಇರುತ್ತದೆ. ಈ ವಾರವೂ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟಾರ್ ಹೀರೋನ ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರ ಥಿಯೇಟರ್​​ನಲ್ಲಿ ಯಶಸ್ಸು ಕಂಡಿತು. ಈಗ ಸಿನಿಮಾ ಒಟಿಟಿಗೆ ಬರಲು ಸಿದ್ಧವಾಗಿದೆ. ಹಾಗಾದರೆ ಯಾವುದು ಆ ಚಿತ್ರ? ರಜನಿಕಾಂತ್ ನಟನೆಯ ‘ಕೂಲಿ’ (Coolie Movie).

ರಜನಿಕಾಂತ್ ಅವರು ‘ಕೂಲಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಲೋಕೇಶ್ ಕನಗರಾಜ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಉಪೇಂದ್ರ, ಆಮಿರ್ ಖಾನ್ ಮೊದಲಾದವರು ನಟಿಸಿದ್ದಾರೆ. ರಚಿತಾ ರಾಮ್ ಅವರದ್ದು ರಗಡ್ ಲುಕ್ ಪಾತ್ರ. ನಾಗಾರ್ಜುನ ಅವರದ್ದು ವಿಲನ್ ಪಾತ್ರ. ಶ್ರುತಿ ಹಾಸನ್, ಸತ್ಯರಾಜ್ ಕೂಡ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಮಲಯಾಳಂ ನಟ ಸೌಬಿನ್ ಶಾಹಿರ್ ಕೂಡ ಚಿತ್ರದಲ್ಲಿ ಇದ್ದಾರೆ. ಬ್ಲಾಕ್ ಮಾರ್ಕೆಟ್ ದಂಧೆ, ಫ್ರೆಂಡ್​ಶಿಪ್ ಮತ್ತಿತ್ಯಾದಿ ವಿಚಾರಗಳ ಮೇಲೆ ಸಿನಿಮಾ ಇದೆ.

‘ಕೂಲಿ’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್​ನಲ್ಲಿ 514 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಭಾರತದ ಗ್ರಾಸ್ ಕಲೆಕ್ಷನ್ 337 ಕೋಟಿ ರೂಪಾಯಿ ಇದೆ. ವಿದೇಶದ ಕಲೆಕ್ಷನ್ 177 ಕೋಟಿ ರೂಪಾಯಿ ಆಗಿದೆ. ಸಿನಿಮಾ ರಿಲೀಸ್ ಆಗಿ ಒಂದು ತಿಂಗಳು ಕಳೆಯುವುದರೊಳಗೆ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಿದೆ.

ಇದನ್ನೂ ಓದಿ
Video: ‘ತಡ ಮಾಡದೇ ಮಗು ಮಾಡಿಕೊಳ್ಳಿ’ ಎಂದು ಸಲಹೆ; ಓಕೆ ಎಂದ ಅನುಶ್ರೀ
ರಜನಿಕಾಂತ್ ಉದಾಹರಣೆ ನೀಡಿ ಅಮಿತಾಭ್ ಬಚ್ಚನ್​​ಗೆ ಪಾಠ ಮಾಡಿದ ನೆಟ್ಟಿಗರು
‘ಸು ಫ್ರಮ್ ಸೋ’ ಒಟಿಟಿಗೆ ಬಂದರೂ ಥಿಯೇಟರ್​ನಲ್ಲಿ ನಿಂತಿಲ್ಲ ಕಲೆಕ್ಷನ್
ಸುಧಾರಾಣಿ ಬಿಗ್ ಬಾಸ್​ಗೆ ಬರ್ತಾರೆ ಎಂದವರಿಗೆ ಉತ್ತರಿಸಿದ ನಟಿ

ಇದನ್ನೂ ಓದಿ: ಒಂದೇ ವಾರಕ್ಕೆ ಸುಸ್ತಾದ ‘ಕೂಲಿ’; ಹೀನಾಯ ಕಲೆಕ್ಷನ್​​​ ಮಾಡಿದ ರಜನಿ ಸಿನಿಮಾ

ಸನ್ ಪಿಕ್ಚರ್ಸ್ ನಿರ್ಮಾಣದ ‘ಕೂಲಿ’ ಸಿನಿಮಾ ಪ್ರೈಮ್ ವಿಡಿಯೋದಲ್ಲಿ ಸೆಪ್ಟೆಂಬರ್ 11ರಿಂದ ವೀಕ್ಷಣೆಗೆ ಸಿಗುತ್ತಿದೆ. ಈ ಸಿನಿಮಾ ಥಿಯೇಟರ್​ನಲ್ಲಿ ಸಾಧಾರಣ ಹಿಟ್ ಎನಿಸಿಕೊಂಡಿತ್ತು. ‘ಜೈಲರ್’ ಸಿನಿಮಾ ಭರ್ಜರಿ ಹಿಟ್ ಆಯಿತು. ಇದೇ ನಿರೀಕ್ಷೆಯಲ್ಲಿ ‘ಕೂಲಿ’ ಸಿನಿಮಾ ನೋಡಲು ಹೋದವರಿಗೆ ನಿರಾಸೆ ಆಗಿದೆ. ಇದನ್ನು ಜನರು ಒಟಿಟಿಯಲ್ಲಿ ಯಾವ ರೀತಿಯಲ್ಲಿ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ರಜನಿಕಾಂತ್ ಸ್ವ್ಯಾಗ್ ನೋಡಲು ಕೆಲವರು ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 2:58 pm, Wed, 10 September 25