ದೀಪಿಕಾ ಪಡುಕೋಣೆ (Deepika Padukone) ಅಭಿನಯದ ಹೊಸ ಸಿನಿಮಾ ‘ಗೆಹರಾಯಿಯಾ’ ಟ್ರೇಲರ್ ಸಖತ್ ಸದ್ದು ಮಾಡುತ್ತಿದೆ. ಯೂಟ್ಯೂಬ್ನಲ್ಲಿ ಬಿಡುಗಡೆಯಾಗಿ ಕೆಲವೇ ಗಂಟೆಗಳು ಕಳೆಯುವುದರೊಳಗೆ 90 ಲಕ್ಷಕ್ಕೂ ಅಧಿಕ ಮಂದಿ ಈ ಟ್ರೇಲರ್ ನೋಡಿದ್ದಾರೆ. ‘ಗೆಹರಾಯಿಯಾ’ (Gehraiyaan Movie) ಟ್ರೇಲರ್ ಬಗ್ಗೆ ಈ ಪರಿ ಆಕರ್ಷಣೆ ಮೂಡಲು ಕಾರಣ ಕೂಡ ಇದೆ. ಇದರಲ್ಲಿ ದೀಪಿಕಾ ಪಡುಕೋಣೆ ಅವರು ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಸಹ ನಟ ಸಿದ್ಧಾಂತ್ ಚತುರ್ವೇದಿ (Siddhant Chaturvedi) ಜೊತೆ ಅವರು ಹಸಿಬಿಸಿ ದೃಶ್ಯಗಳಲ್ಲಿ ಅಭಿನಯಿಸಿದ್ದಾರೆ. ಅನೇಕ ಲಿಪ್ ಲಾಕ್ ಸೀನ್ಗಳು ಈ ಟ್ರೇಲರ್ನಲ್ಲಿ ಇವೆ. ಅದನ್ನು ನೋಡಿ ಫ್ಯಾನ್ಸ್ ಅಚ್ಚರಿಪಟ್ಟಿದ್ದಾರೆ. ಈ ಹಿಂದೆ ಟೀಸರ್ನಲ್ಲಿಯೂ ಇದೇ ಅಂಶಗಳು ಹೈಲೈಟ್ ಆಗಿದ್ದವು. ಈಗ ಆ ಎಲ್ಲ ವಿಚಾರಗಳ ಬಗ್ಗೆ ದೀಪಿಕಾ ಪಡುಕೋಣೆ ಮೌನ ಮುರಿದಿದ್ದಾರೆ. ‘ಗೆಹರಾಯಿಯಾ’ ಸಿನಿಮಾದಲ್ಲಿ ಯಾಕೆ ಅಂಥ ದೃಶ್ಯಗಳಿವೆ ಎಂಬುದನ್ನು ಅವರು ವಿವರಿಸಿದ್ದಾರೆ. ಈ ಚಿತ್ರಕ್ಕೆ ಶಕುನ್ ಬಾತ್ರಾ ನಿರ್ದೇಶನ ಮಾಡಿದ್ದಾರೆ. ಅನನ್ಯಾ ಪಾಂಡೆ, ಧೈರ್ಯ ಕರ್ವ ಮುಂತಾದವರು ಅಭಿನಯಿಸಿದ್ದಾರೆ.
ಸಂಬಂಧಗಳ ಸಂಕೀರ್ಣತೆಯ ಬಗ್ಗೆ ಈ ಸಿನಿಮಾ ಬೆಳಕು ಚೆಲ್ಲಲಿದೆ. ಆಧುನಿಕ ಜಗತ್ತಿನಲ್ಲಿ ಸಂಬಂಧಗಳು ಯಾವ ರೀತಿ ಮಾರ್ಪಾಡು ಹೊಂದಿವೆ ಎಂಬುದನ್ನು ಈ ಚಿತ್ರ ತೋರಿಸಲಿದೆ. ಆ ಕಾರಣಕ್ಕಾಗಿ ಈ ಸಿನಿಮಾದಲ್ಲಿ ಇಂಥ ದೃಶ್ಯಗಳು ಸ್ಥಾನ ಪಡೆದುಕೊಂಡಿವೆ. ಎಂಗೇಜ್ ಮೆಂಟ್ ಮಾಡಿಕೊಂಡ ಯುವಕ, ಮದುವೆಯಾದ ಪರಸ್ತ್ರೀ ಜೊತೆ ಸಂಬಂಧ ಬೆಳೆಸುವ ಕಥೆ ಈ ಸಿನಿಮಾದಲ್ಲಿದೆ. ಈ ಪಾತ್ರವನ್ನು ನಿಭಾಯಿಸಲು ತಮ್ಮ ವೈಯಕ್ತಿಕ ಬದುಕಿನ ಕೆಲವು ಅಹಿತಕರ ಸಂದರ್ಭಗಳನ್ನು ನೆನಪು ಮಾಡಿಕೊಳ್ಳಬೇಕಾಯಿತು ಎಂದು ದೀಪಿಕಾ ಹೇಳಿದ್ದಾರೆ.
ರಣವೀರ್ ಸಿಂಗ್ ಅವರನ್ನು ಪ್ರೀತಿಸುವುದಕ್ಕೂ ಮುನ್ನ ನಟ ರಣಬೀರ್ ಕಪೂರ್ ಜೊತೆ ದೀಪಿಕಾ ಡೇಟಿಂಗ್ ಮಾಡುತ್ತಿದ್ದರು. ಆ ರಿಲೇಷನ್ಶಿಪ್ನಲ್ಲಿ ಅವರಿಗೆ ಹಲವು ಕಹಿ ಅನುಭವಗಳಾಗಿದ್ದುಂಟು. ಆ ಕಾರಣದಿಂದ ಅದು ಬ್ರೇಕಪ್ನಲ್ಲಿ ಅಂತ್ಯವಾಯ್ತು. ನಿರ್ದಿಷ್ಟವಾಗಿ ಈ ಯಾವ ವಿಚಾರವನ್ನೂ ದೀಪಿಕಾ ಪ್ರಸ್ತಾಪ ಮಾಡಿಲ್ಲ. ಆದರೂ ಕೂಡ ‘ಗೆಹರಾಯಿಯಾ’ ಟ್ರೇಲರ್ ಬಗ್ಗೆ ಮಾತಾಡುವಾಗ ವೈಯಕ್ತಿಕ ಬದುಕಿನ ಕುರಿತು ನೆನಪಿಸಿಕೊಂಡಿದ್ದಾರೆ.
ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ‘ಗೆಹರಾಯಿಯಾ’ ಸಿನಿಮಾ ನೇರವಾಗಿ ಬಿಡುಗಡೆ ಆಗಲಿದೆ. ಈ ಸಿನಿಮಾ ಬಗ್ಗೆ ದೀಪಿಕಾ ಪಡುಕೋಣೆ ಸಖತ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಫೆ.11ರಂದು ವೀಕ್ಷಣೆಗೆ ಲಭ್ಯವಾಗಲಿದ್ದು, ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಈ ಸಿನಿಮಾದಲ್ಲಿ ದೀಪಿಕಾ ಹಾಗೂ ಸಿದ್ದಾರ್ಥ್ ನಡುವೆ ಸಾಕಷ್ಟು ಕಿಸ್ಸಿಂಗ್ ದೃಶ್ಯಗಳಿವೆ. ದೀಪಿಕಾ ಸಿನಿಮಾದಲ್ಲಿ ತುಂಬ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ, ಟ್ರೇಲರ್ ಸಾಕಷ್ಟು ವೈರಲ್ ಆಗುತ್ತಿದೆ. ದೀಪಿಕಾ ನಟನೆ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:
Deepika Padukone: ವೈರಲ್ ಆಗುತ್ತಿದೆ ದೀಪಿಕಾ-ಸಿದ್ದಾರ್ಥ್ ಕಿಸ್ಸಿಂಗ್ ದೃಶ್ಯ; ಇಲ್ಲಿವೆ ಫೋಟೋಗಳು
ಕಿಸ್ಸಿಂಗ್ ದೃಶ್ಯಗಳಲ್ಲಿ ಮಿಂಚಿದ ದೀಪಿಕಾ ಪಡುಕೋಣೆ; ‘ಗೆಹರಾಯಿಯಾ’ ಟ್ರೇಲರ್ನಲ್ಲಿ ಹೈಲೈಟ್ ಆಯ್ತು ಸಂಬಂಧಗಳ ವಿಚಾರ