‘ನಾನು ತಳ್ಳಿದ್ರೆ 25 ಅಡಿ ದೂರ ಹೋಗಿ ಬೀಳ್ತೀಯಾ’; ಆವಾಜ್ ಹಾಕಲು ಬಂದ ಉದಯ್​ಗೆ ಗುರೂಜಿ ಎಚ್ಚರಿಕೆ

ತಮ್ಮ ಕುಟುಂಬದ ಆಸ್ತಿ 5000 ಕೋಟಿ ರೂಪಾಯಿ ಎಂದು ಹೇಳಿದ ವಿಚಾರ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ಈಗ ಉದಯ್ ಸೂರ್ಯ ಹಾಗೂ ಗುರೂಜಿ ಮಧ್ಯೆ ಕಿರಿಕ್ ಆಗಿದೆ.

‘ನಾನು ತಳ್ಳಿದ್ರೆ 25 ಅಡಿ ದೂರ ಹೋಗಿ ಬೀಳ್ತೀಯಾ’; ಆವಾಜ್ ಹಾಕಲು ಬಂದ ಉದಯ್​ಗೆ ಗುರೂಜಿ ಎಚ್ಚರಿಕೆ
ಉದಯ್​-ಗುರೂಜಿ
Edited By:

Updated on: Aug 10, 2022 | 2:37 PM

‘ಬಿಗ್ ಬಾಸ್​ ಒಟಿಟಿ’ (Bigg Boss OTT) ಸಾಕಷ್ಟು ಕುತೂಹಲ ಮೂಡಿಸುತ್ತಿದೆ. ‘ಬಿಗ್ ಬಾಸ್’ ಆರಂಭವಾದ ಒಂದೇ ವಾರದಲ್ಲಿ ಮನೆಯಲ್ಲಿ ಹಲವು ವಿಚಾರಗಳು ನಡೆದಿವೆ. ಕೆಲವರು ಪ್ರೀತಿ-ಫ್ಲರ್ಟ್​ ವಿಚಾರಕ್ಕೆ ಸುದ್ದಿ ಆದರೆ, ಇನ್ನೂ ಕೆಲವರು, ಜಗಳದ ವಿಚಾರಕ್ಕೆ ಸುದ್ದಿ ಆಗಿದ್ದಾರೆ. ಆ ಪೈಕಿ ಆರ್ಯವರ್ಧನ್​ ಗುರೂಜಿ ಕೂಡ ಹಲವು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಮನೆಯಲ್ಲಿ ಕೊಂಚ ಸೈಲೆಂಟ್ ಆಗಿರುವ ಅವರು, ಒಮ್ಮೊಮ್ಮೆ ಕಿತ್ತಾಟಕ್ಕೂ ಇಳಿಯುತ್ತಾರೆ. ಈಗ ನಟ ಉದಯ್ ಸೂರ್ಯ (Uday Surya) ಜತೆ ಅವರು ಜಗಳ ಮಾಡಿಕೊಂಡಿದ್ದಾರೆ. ಇಲ್ಲಿ ತಪ್ಪು ಯಾರದ್ದು ಎಂಬುದು ಸದ್ಯದ ಕುತೂಹಲ.

‘ಬಿಗ್ ಬಾಸ್​’ ಮನೆಗೆ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟವರು ಆರ್ಯವರ್ಧನ್ ಗುರೂಜಿ. ಟ್ರೋಲ್​ಆಗುತ್ತಾ ಅವರು ಸದಾ ಸುದ್ದಿಯಲ್ಲಿದ್ದರು. ಬಿಗ್ ಬಾಸ್ ಮನೆಯಲ್ಲಿ ಅವರು ಜಾಲಿಯಾಗಿ ಸಮಯ ಕಳೆಯುತ್ತಿದ್ದಾರೆ. ಅವರು ಅನೇಕರಿಗೆ ಇಷ್ಟವಾಗಿದ್ದಾರೆ. ತಮ್ಮ ಕುಟುಂಬದ ಆಸ್ತಿ 5000 ಕೋಟಿ ರೂಪಾಯಿ ಎಂದು ಹೇಳಿದ ವಿಚಾರ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ಈಗ ಉದಯ್ ಸೂರ್ಯ ಹಾಗೂ ಗುರೂಜಿ ಮಧ್ಯೆ ಕಿರಿಕ್ ಆಗಿದೆ.

ಇದನ್ನೂ ಓದಿ
Aryavardhan Guruji: ಬದಲಾಯ್ತು ಗುರೂಜಿ ಗೆಟಪ್​; ಬಿಗ್​ ಬಾಸ್​ ಮನೆಯಲ್ಲಿ ಈ ಪರಿ ಚೇಂಜ್​ ಆದ ಆರ್ಯವರ್ಧನ್​
ಮೀಸೆ, ತಲೆ ಬೋಳಿಸಿಕೊಂಡ ಆರ್ಯವರ್ಧನ್​; ಗುರೂಜಿ ಹೊಸ ಲುಕ್ ಹೇಗಿದೆ ನೋಡಿ
ಆರ್ಯವರ್ಧನ್​ ಗುರೂಜಿ ಕುಟುಂಬದ ಆಸ್ತಿ 5 ಸಾವಿರ ಕೋಟಿ ರೂಪಾಯಿ; ಶಾಕ್​ ಆದ ಸ್ಪರ್ಧಿಗಳು
Aryavardhan Guruji: ಜಿಂಗಲಕಾ ಲಕಾ ಲಕಾ: ‘ಬಿಗ್ ಬಾಸ್’ ಮನೆ ಸೇರಿದ ಈ ಆರ್ಯವರ್ಧನ್​ ಗುರೂಜಿ ಯಾರು?

ಪ್ರತಿ ತಂಡದ ಒಂದು ಸದಸ್ಯ ಸ್ಟೂಲ್ ಮೇಲೆ ನಿಂತು ತಿರುಗುವ ಕಂಬಿಯಿಂದ ಪಾರಾಗಬೇಕು. ಈ ಟಾಸ್ಕ್​​ನಡೆಯುವಾಗ ಗುರೂಜಿ ತಳ್ಳಿರುವ ಆರೋಪವನ್ನು ಉದಯ್​ ಸೂರ್ಯ ಮಾಡಿದ್ದಾರೆ. ಚಿಕ್ಕದಾಗಿ ಆರಂಭವಾದ ಈ ಮಾತು ದೊಡ್ಡ ಮಟ್ಟಕ್ಕೆ ತಿರುಗಿದೆ. ಇಬ್ಬರೂ ಕಿತ್ತಾಡಿಕೊಂಡಿದ್ದಾರೆ. ಗುರೂಜಿಗೆ ಕೋಪ ನೆತ್ತಿಗೇರಿದೆ. ‘ನಾನು ತಳ್ಳಿದ್ರೆ ನೀನು 25 ಅಡಿ ದೂರ ಹೋಗಿ ಬೀಳ್ತೀಯಾ’ ಎಂದು ಉದಯ್​ಗೆ ಗುರೂಜಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಮೀಸೆ, ತಲೆ ಬೋಳಿಸಿಕೊಂಡ ಆರ್ಯವರ್ಧನ್​; ಗುರೂಜಿ ಹೊಸ ಲುಕ್ ಹೇಗಿದೆ ನೋಡಿ

‘ಬಿಗ್​ ಬಾಸ್​’ ಮನೆಯಲ್ಲಿ ಮೊದಲ ವಾರವೇ ಸಾಕಷ್ಟು ಕಿತ್ತಾಟಗಳು ನಡೆದಿವೆ. ಸ್ಫೂರ್ತಿ ಗೌಡ ಹಾಗೂ ಸೋನು ಗೌಡ ದೊಡ್ಡ ಮಟ್ಟದಲ್ಲಿ ಕಿತ್ತಾಡಿಕೊಂಡಿದ್ದಾರೆ. ಇನ್ನು, ಸೋನು ಗೌಡ ಅವರು ಗುರೂಜಿ ವಿರುದ್ಧ ಮೊಟ್ಟೆ ವಿಚಾರಕ್ಕೆ ಅಸಮಾಧಾನ ಹೊರಹಾಕಿದ್ದಾರೆ. ಈ ವಾರ ಹಲವರ ತಲೆಯಮೇಲೆ ನಾಮಿನೇಷನ್​ ತೂಗುಗತ್ತಿ ಇದೆ. ವೀಕೆಂಡ್​ನಲ್ಲಿ ಯಾರು ಮನೆಯಿಂದ ಹೊರಹೋಗುತ್ತಾರೆ ಅನ್ನೋದು ಸದ್ಯದ ಕುತೂಹಲ.