ಒಟಿಟಿಯಲ್ಲಿ ಪ್ರಸಾರವಾಗಲಿದೆ ಹನ್ಸಿಕಾ ಮದುವೆ ಝಲಕ್; ಫಸ್ಟ್ ಪೋಸ್ಟರ್ ರಿಲೀಸ್​ 

| Updated By: ರಾಜೇಶ್ ದುಗ್ಗುಮನೆ

Updated on: Jan 19, 2023 | 9:32 AM

ಕಳೆದ ವರ್ಷ ಡಿಸೆಂಬರ್ 4ರಂದು ಹನ್ಸಿಕಾ ಹಾಗೂ ಸೊಹೈಲ್ ಮದುವೆ ಆಗಿದ್ದರು. ಅದ್ದೂರಿಯಾಗಿ ಈ ಮದುವೆ ಶಾಸ್ತ್ರಗಳು ನಡೆದಿದ್ದವು ಎಂಬುದಕ್ಕೆ ಇವರು ಹಂಚಿಕೊಂಡ ಫೋಟೋಗಳು ಸಾಕ್ಷ್ಯ ನೀಡಿದ್ದವು.

ಒಟಿಟಿಯಲ್ಲಿ ಪ್ರಸಾರವಾಗಲಿದೆ ಹನ್ಸಿಕಾ ಮದುವೆ ಝಲಕ್; ಫಸ್ಟ್ ಪೋಸ್ಟರ್ ರಿಲೀಸ್​ 
ಹನ್ಸಿಕಾ ಮೋಟ್ವಾನಿ ಮದುವೆ ವಿಡಿಯೋ ಫಸ್ಟ್ ಪೋಸ್ಟರ್
Follow us on

ಒಟಿಟಿ ಪ್ಲಾಟ್​ಫಾರ್ಮ್​ಗಳು ಪ್ರೇಕ್ಷಕರನ್ನು ಸೆಳೆಯಲು ಹೊಸಹೊಸ ಪ್ರಯೋಗಗಳನ್ನು ಮಾಡುತ್ತಿವೆ. ಆ ಪೈಕಿ ಸೆಲೆಬ್ರಿಟಿಗಳ ಮದುವೆ ವಿಡಿಯೋ ಪ್ರಸಾರ ಕೂಡ ಒಂದು. ಈ ಮೊದಲು ಕತ್ರಿನಾ ಕೈಫ್ (Katrina Kaif) ಹಾಗೂ ವಿಕ್ಕಿ ಕೌಶಲ್​ ಮದುವೆ ವಿಡಿಯೋ ಒಟಿಟಿಯಲ್ಲಿ ಪ್ರಸಾರವಾಗಲಿದೆ ಎನ್ನಲಾಗಿತ್ತು. ಆದರೆ, ಹಾಗಾಗಿಲ್ಲ. ನಯನತಾರಾ-ವಿಘ್ನೇಶ್ ಶಿವನ್ ಮದುವೆ ವಿಡಿಯೋ ಕೂಡ ನೆಟ್​​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಿಲ್ಲ. ಈಗ ನಟಿ ಹನ್ಸಿಕಾ ಮೋಟ್ವಾನಿ (Hansika Motwani) ಹಾಗೂ ಸೊಹೈಲ್ ಕತುರಿಯಾ ಮದುವೆ ಕಾರ್ಯಕ್ರಮದ ಝಲಕ್​ಅನ್ನು ಪ್ರಸಾರ ಮಾಡಲು ಡಿಸ್ನಿ ಪ್ಲಸ್ ಹಾಟ್​​ಸ್ಟಾರ್ ರೆಡಿ ಆಗಿದೆ. ಈ ಪ್ರೋಮೋ ಅನ್ನು ಹಾಟ್​​ಸ್ಟಾರ್​ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದೆ.

ಕಳೆದ ವರ್ಷ ಡಿಸೆಂಬರ್ 4ರಂದು ಹನ್ಸಿಕಾ ಹಾಗೂ ಸೊಹೈಲ್ ಮದುವೆ ಆಗಿದ್ದರು. ಅದ್ದೂರಿಯಾಗಿ ಈ ಮದುವೆ ಶಾಸ್ತ್ರಗಳು ನಡೆದಿದ್ದವು ಎಂಬುದಕ್ಕೆ ಇವರು ಹಂಚಿಕೊಂಡ ಫೋಟೋಗಳು ಸಾಕ್ಷ್ಯ ನೀಡಿದ್ದವು. ಈಗ ಹನ್ಸಿಕಾ ಮದುವೆ ವಿಡಿಯೋ ಹಾಟ್​ಸ್ಟಾರ್​ನಲ್ಲಿ ಪ್ರಸಾರವಾಗುವ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಇದಕ್ಕೆ ‘ಲವ್​ ಶಾದಿ ಡ್ರಾಮಾ’ ಎಂದು ಹೆಸರು ಇಡಲಾಗಿದೆ. ಇದರ ಫಸ್ಟ್​ ಪೋಸ್ಟರ್ ಕೂಡ ರಿಲೀಸ್ ಮಾಡಲಾಗಿದೆ. ಈ ಕಾರ್ಯಕ್ರಮದ ಪ್ರಸಾರ ದಿನಾಂಕ ಇನ್ನಷ್ಟೇ ತಿಳಿಯಬೇಕಿದೆ.

31ನೇ ವಯಸ್ಸಿಗೆ ಹನ್ಸಿಕಾ ಮೋಟ್ವಾನಿ ಅವರು ದಾಂಪತ್ಯ ಜೀವನ ಆರಂಭಿಸಿದ್ದಾರೆ. ಚಿತ್ರರಂಗದಲ್ಲಿ ಅವರಿಗೆ ಹಲವು ವರ್ಷಗಳ ಅನುಭವ ಇದೆ. ಬಾಲನಟಿಯಾಗಿಯೇ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು. ಹೃತಿಕ್​ ರೋಷನ್​ ನಟನೆಯ ‘ಕೋಯಿ ಮಿಲ್​ ಗಯಾ’ ಸಿನಿಮಾದಲ್ಲಿ ಅವರು ನಟಿಸಿ ಗಮನ ಸೆಳೆದಿದ್ದರು. ಬಳಿಕ ಹೀರೋಯಿನ್​ ಆಗಿ ಬಡ್ತಿ ಪಡೆದುಕೊಂಡರು. ತಮಿಳು, ತೆಲುಗು, ಮಲಯಾಳಂ, ಕನ್ನಡದಲ್ಲಿ ಅಭಿನಯಿಸಿ ಜನಪ್ರಿಯತೆ ಹೆಚ್ಚಿಸಿಕೊಂಡರು. ಒಟ್ಟು 50 ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ಅವರಿಗೆ ಇದೆ.

ಇದನ್ನೂ ಓದಿ
ಬಾಯ್​ಫ್ರೆಂಡ್ ಜತೆ ನಿಶ್ಚಿತಾರ್ಥ ಮಾಡಿಕೊಂಡ ‘ಬಿಂದಾಸ್​’ ಹುಡುಗಿ ಹನ್ಸಿಕಾ; ಯಾರು ಈ ಸೋಹೇಲ್?
Hansika Motwani: ‘ಬಿಂದಾಸ್​’ ನಟಿ ಹನ್ಸಿಕಾ ಮೋಟ್ವಾನಿ ಮದುವೆ; 450 ವರ್ಷ ಹಳೇ ಕೋಟೆಯಲ್ಲಿ ನಡೆಯಲಿದೆ ವಿವಾಹ
Hansika Motwani: ಹೊಸ ಫೋಟೋಶೂಟ್​ನಲ್ಲಿ ಮಿಂಚಿದ ಹನ್ಸಿಕಾ; ‘ಬಿಂದಾಸ್’ ಬೆಡಗಿಯ ಫೋಟೋಗಳು ವೈರಲ್​
Hansika Motwani: ಸ್ವಿಮ್ ಸ್ಯೂಟ್​ನಲ್ಲಿ ಮಿಂಚಿದ ‘ಬಿಂದಾಸ್​’ ಬೆಡಗಿ ಹನ್ಸಿಕಾ ಮೋಟ್ವಾನಿ

ಇದನ್ನೂ ಓದಿ: Hansika Motwani: ಈಜಿಪ್ಟ್​ ಪಿರಮಿಡ್​ಗಳ ಮುಂದೆ ನಿಂತು ಪೋಸ್ ನೀಡಿದ ನಟಿ ಹನ್ಸಿಕಾ

ಹನ್ಸಿಕಾ ಹಾಗೂ ಸೊಹೈಲ್​ ಉತ್ತಮ ಸ್ನೇಹಿತರಾಗಿದ್ದರು. ಬಳಿಕ ಇಬ್ಬರ ನಡುವೆ ಪ್ರೀತಿ ಚಿಗುರಿತು. ಕಳೆದ ವರ್ಷ ಮದುವೆ ಆಗುವ ಮೂಲಕ ಸಂತಸ ಹಂಚಿಕೊಂಡಿದ್ದರು. ತಮ್ಮಿಬ್ಬರ ಲವ್​ ಸ್ಟೋರಿ ಆರಂಭ ಆಗಿದ್ದು ಹೇಗೆ ಎಂಬ ಬಗ್ಗೆ ಈ ವಿಡಿಯೋದಲ್ಲಿ ಮಾಹಿತಿ ಸಿಗಲಿದೆಯೇ ಎನ್ನುವ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ