ಸಂಜಯ್ ಲೀಲಾ ಬನ್ಸಾಲಿ (Sanjay Leela Bansali) ನಿರ್ದೇಶನದ ‘ಹೀರಾಮಂಡಿ: ದಿ ಡೈಮಂಡ್ ಬಜಾರ್’ ಸೀರಿಸ್ ಮೇ 1ರಂದು ರಿಲೀಸ್ ಆಗಿದೆ. ನೆಟ್ಫ್ಲಿಕ್ಸ್ ಒಟಿಟಿ ಮೂಲಕ ಈ ಸೀರಿಸ್ ಪ್ರಸಾರ ಕಾಣುತ್ತಿದೆ. ಲಾಹೋರ್ನ ರೆಡ್ಲೈಟ್ ಏರಿಯಾ ಹೀರಾಮಂಡಿಯ ಕಥೆಯನ್ನು ಈ ಸಿನಿಮಾ ಹೊಂದಿದೆ. ಬ್ರಿಟಿಷರ ಆಳ್ವಿಕೆ ವೇಳೆ ಇವರ ಪರಿಸ್ಥಿತಿ ಯಾವ ರೀತಿಯಲ್ಲಿ ಇತ್ತು ಎಂಬುದನ್ನು ಈ ಸೀರಿಸ್ನಲ್ಲಿ ತೋರಿಸಲಾಗಿದೆ. ಈ ವೆಬ್ ಸೀರಿಸ್ಗಾಗಿ ಎಲ್ಲರೂ ದೊಡ್ಡ ಮಟ್ಟದ ಸಂಭಾವನೆ ಪಡೆದಿದ್ದಾರೆ.
ಸಂಜಯ್ ಲೀಲಾ ಬನ್ಸಾಲಿ ಅವರು ಈ ಚಿತ್ರದ ನಿರ್ದೇಶನಕ್ಕಾಗಿ 65 ಕೋಟಿ ರೂಪಾಯಿ ಪಡೆದಿದ್ದಾರೆ. ಇಡೀ ಸೀರಿಸ್ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದವರು ಎಂದರೆ ಅದು ಬನ್ಸಾಲಿ ಅವರು. ಇನ್ನು, ‘ಹೀರಾಮಂಡಿ’ ವೆಬ್ ಸೀರಿಸ್ನಲ್ಲಿ ನಟಿಸಿದ ನಟಿಯರ ವಿಚಾರಕ್ಕೆ ಬರೋದಾದರೆ ಸೋನಾಕ್ಷಿ ಸಿನ್ಹಾ ಅವರು ಅತಿ ಹೆಚ್ಚಿ ಸಂಭಾವನೆ ಪಡೆದಿದ್ದಾರೆ. ಅವರಿಗೆ 2 ಕೋಟಿ ರೂಪಾಯಿ ಸಿಕ್ಕಿದೆ.
ಅದಿತಿ ರಾವ್ ಹೈದರಿ ಅವರು ನಟನೆಯ ಮೂಲಕ ಎಲ್ಲರ ಗಮನ ಸೆಳೆದವರು. ಅವರ ಸಂಭಾವನೆ 1-1.5 ಕೋಟಿ ರೂಪಾಯಿ ಆಸುಪಾಸಿನಲ್ಲಿ ಇದೆ ಎನ್ನಲಾಗಿದೆ. ಸೋನಾಕ್ಷಿ ಸಿನ್ಹಾ ಬಳಿಕ ಅತಿ ಹೆಚ್ಚು ಸಂಭಾವನೆ ಪಡೆದ ಕಲಾವಿದೆ ಎಂದರೆ ಅದು ಅದಿತಿ ರಾವ್ ಹೈದರಿ. ಅವರು ಪ್ರತಿ ಫ್ರೇಮ್ನಲ್ಲೂ ಮಿಂಚಿದ್ದಾರೆ.
ಮನಿಶಾ ಕೊಯಿರಾಲಾ ಅವರು ಬರೋಬ್ಬರಿ 1 ಕೋಟಿ ಸಂಭಾವನೆ ಪಡೆದಿದ್ದಾರೆ. ಅವರು ಸಿನಿಮಾಗಳಲ್ಲಿ ನಟಿಸಿದ್ದು ತುಂಬಾನೇ ಕಡಿಮೆ. ಅಳೆದು ತೂಗಿ ಆಫರ್ಗಳನ್ನು ಅವರು ಒಪ್ಪಿಕೊಳ್ಳುತ್ತಾರೆ. ರಿಚಾ ಚಡ್ಡಾ ಅವರು ಈ ಸೀರಿಸ್ನಲ್ಲಿ ರಾಜ್ಜೋ ಹೆಸರಿನ ಪಾತ್ರ ಮಾಡಿದ್ದಾರೆ. ಅವರು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಸಂಜೀದಾ ಶೇಖರ್ ಅವರು 40 ಲಕ್ಷ ರೂಪಾಯಿ ಪಡೆದಿದ್ದಾರೆ ಎನ್ನಲಾಗಿದೆ. ಅವರ ಪಾತ್ರ ಹೆಚ್ಚು ಹೊತ್ತು ತೆರೆಮೇಲೆ ಬರುವುದಿಲ್ಲ. ಈ ಕಾರಣಕ್ಕೆ ಅವರಿಗೆ ಕಡಿಮೆ ಸಂಭಾವನೆ ನೀಡಲಾಗಿದೆ ಎಂದು ವರದಿ ಆಗಿದೆ.
ಸಂಜಯ್ ಲೀಲಾ ಬನ್ಸಾಲಿ ಅವರ ಸಿನಿಮಾಗಳಲ್ಲಿ ಸೆಟ್ಗಳು ಸಾಕಷ್ಟು ಗಮನ ಸೆಳೆಯುತ್ತವೆ. ಅದೇ ರೀತಿ ಅದ್ದೂರಿತನ ಮನೆ ಮಾಡಿರುತ್ತದೆ. ‘ಹೀರಾಮಂಡಿ’ಯಲ್ಲೂ ಅದು ಮುಂದುವರಿದಿದೆ. ಇಷ್ಟು ವರ್ಷಗಳ ಕಾಲ ಸಿನಿಮಾಗಳನ್ನು ಮಾಡಿ ಗಮನ ಸೆಳೆದಿದ್ದ ಅವರು ಇದೇ ಮೊದಲ ಬಾರಿಗೆ ಸೀರಿಸ್ ಒಂದನ್ನು ಮಾಡಿ ಭೇಷ್ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ: ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ನಟಿಸೋಕೆ ರೆಡಿ ಆದ ನಯನತಾರಾ
‘ಲವ್ ಆ್ಯಂಡ್ ವಾರ್’ ಸಿನಿಮಾನ ಸಂಜಯ್ ಲೀಲಾ ಬನ್ಸಾಲಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ರಣಬೀರ್ ಕಪೂರ್, ವಿಕ್ಕಿ ಕೌಶಲ್ ಹಾಗೂ ಆಲಿಯಾ ಭಟ್ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:55 am, Tue, 7 May 24