‘ಕಾಫಿ ವಿತ್ ಕರಣ್’ ಆರಂಭಕ್ಕೆ ದಿನಗಣನೆ ಆರಂಭ ಆಗಿದೆ. ಕಾಂಟ್ರವರ್ಸಿಗಳ ಕಿಂಗ್ ಎಂದೇ ಫೇಮಸ್ ಆಗಿರೋ ‘ಕಾಫಿ ವಿತ್ ಕರಣ್’ ಶೋಗೆ ಕರಣ್ ಜೋಹರ್ (Karan Johar) ನಿರೂಪಣೆ ಇರಲಿದೆ. ಕರಣ್ ಜೋಹರ್ ಶೋಗೆ ಹಲವು ಸೆಲೆಬ್ರಿಟಿಗಳು ಈ ಬಾರಿ ಬರಲಿದ್ದಾರೆ. ಈ ಶೋಗೆ ಬರೋ ಎಲ್ಲಾ ಸೆಲೆಬ್ರಿಟಿಗಳಿಗೆ ಬುಲೆಟ್ ರೀತಿಯಲ್ಲಿ ಪ್ರಶ್ನೆಗಳು ಎದುರಾಗುತ್ತವೆ. ಈ ಕಾರಣದಿಂದ ಈ ಮೊದಲು ಹಲವು ಸೆಲೆಬ್ರಿಟಿಗಳು ಈ ಕಾರ್ಯಕ್ರಮದಿಂದ ದೂರವೇ ಇದ್ದರು. ಕೆಲವರು ಈ ಶೋನಲ್ಲಿ ಹಲವು ವಿಚಾರಗಳನ್ನು ಒಪ್ಪಿಕೊಂಡಿದ್ದಾರೆ.
ಅನನ್ಯಾ ಪಾಂಡೆ ಅವರು ಕಾರ್ತಿಕ್ ಆರ್ಯನ್ ಹಾಗೂ ವಿಜಯ್ ದೇವರಕೊಂಡ ಅವರನ್ನು ಒಟ್ಟಿಗೆ ಡೇಟ್ ಮಾಡಿದ್ದರು ಎನ್ನಲಾಗಿದೆ. ಈ ಬಗ್ಗೆ ಸೀಸನ್ 7ರಲ್ಲಿ ಕರಣ್ ಅವರು ಮಾತನಾಡಿದ್ದರು. ಅವರ ಹೇಳಿಕೆಯನ್ನು ಅನೇಕರು ಟ್ರೋಲ್ ಮಾಡಿದ್ದರು.
ಟೀಂ ಇಂಡಿಯಾ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಅವರು ‘ಕಾಫಿ ವಿತ್ ಕರಣ್ ಸೀಸನ್ 7’ ಶೋಗೆ ಬಂದಿದ್ದರು. ಈ ವೇಳೆ ಹಾರ್ದಿಕ್ ಪಾಂಡ್ಯ ಅವರು ಮಹಿಳೆಯರ ಬಗ್ಗೆ ಕೆಟ್ಟ ಮಾತುಗಳನ್ನು ಆಡಿದ್ದರು. ಹಾರ್ದಿಕ್ ಪಾಂಡ್ಯ ಅವರು ಮದುವೆಗೂ ಮೊದಲೇ ವರ್ಜಿನಿಟಿ ಕಳೆದುಕೊಂಡಿರುವ ವಿಚಾರವನ್ನು ಒಪ್ಪಿಕೊಂಡಿದ್ದರು.
ಪ್ರಿಯಾಂಕಾ ಚೋಪ್ರಾ ಅವರು ಸೆಕ್ಸ್ ವಿಚಾರದ ಬಗ್ಗೆ ಮಾತನಾಡಿದ್ದರು. ಪಾರ್ಟನರ್ ಜೊತೆ ಒಟ್ಟಾಗಿ ಸ್ನಾನ ಮಾಡಿದ್ದಾಗಿಯೂ ಅವರು ಪರೋಕ್ಷವಾಗಿ ಒಪ್ಪಿಕೊಂಡಿದ್ದರು. ಅವರ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು.
ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ವಿಮಾನದಲ್ಲಿ ಸೆಕ್ಸ್ ಮಾಡುವ ವಿಚಾರದ ಬಗ್ಗೆ ಮಾತನಾಡಿದ್ದರು. ‘ಏರ್ಬಸ್ ವಿಮಾನದಲ್ಲಿ ದೊಡ್ಡ ರೂಂ ಹಾಗೂ ಬಾತ್ರೂಂ ಇರುತ್ತದೆ. ಈ ರೀತಿಯ ವಿಮಾನದಲ್ಲಿ ಸುಲಭದಲ್ಲಿ ಸೆಕ್ಸ್ ಮಾಡಬಹುದು’ ಎಂದಿದ್ದರು ಅವರು.
ರಣಬೀರ್ ಕಪೂರ್ ಅವರು ಸಾಕಷ್ಟು ಫ್ಲರ್ಟ್ ಮಾಡುತ್ತಿದ್ದರು. ಅವರನ್ನು ಅನೇಕರು ಪ್ಲೇ ಬಾಯ್ ಎಂದು ಕರೆದಿದ್ದಿದೆ. ಫ್ರೆಂಡ್ನ ಗರ್ಲ್ಫ್ರೆಂಡ್ ಜೊತೆ ಮಲಗಿದ್ದಾಗಿ ರಣಬೀರ್ ಕಪೂರ್ ಅವರು ಒಪ್ಪಿಕೊಂಡಿದ್ದರು. ಈ ವಿಚಾರದಲ್ಲಿ ಅವರನ್ನು ಟ್ರೋಲ್ ಮಾಡಲಾಗಿತ್ತು.
ಸಲ್ಮಾನ್ ಖಾನ್ ಅವರು ಎಲ್ಲರಿಗೂ ಶಾಕ್ ಆಗುವ ರೀತಿಯಲ್ಲಿ ಹೇಳಿಕೆ ನೀಡಿದ್ದರು. ತಾವು ವರ್ಜಿನ್ ಎಂದು ಹೇಳಿಕೊಂಡಿದ್ದರು. ಅರ್ಬಾಜ್ ಖಾನ್ ಹಾಗೂ ಸೋಹಿಲ್ ಖಾನ್ ಅವರು ಇದು ಸುಳ್ಳು ಎಂದು ಸಾಧಿಸಿದ್ದರು.
ದೀಪಿಕಾ ಪಡುಕೋಣೆ ಹಾಗೂ ರಣಬೀರ್ ಕಪೂರ್ ಅವರು ಒಟ್ಟಾಗಿ ಕಾಫಿ ವಿತ್ ಕರಣ್ ಶೋಗೆ ಬಂದಿದ್ದರು. ಈ ವೇಳೆ ಕಾಂಡೋಮ್ ಜಾಹೀರಾತಿಗೆ ರಣಬೀರ್ ಕಪೂರ್ ಸೂಕ್ತ ಎಂದು ಅವರು ಹೇಳಿಕೊಂಡಿದ್ದರು.
ಇದನ್ನೂ ಓದಿ: ರಣವೀರ್ ಸಿಂಗ್ ಜೊತೆ ಪೋಸ್ ಕೊಟ್ಟ ನಟಿ ಸಂಯುಕ್ತಾ ಹೆಗಡೆ
ರಣವೀರ್ ಸಿಂಗ್ ಅವರು ಅನುಷ್ಕಾ ಶರ್ಮಾ ಅವರ ಬ್ಯಾಕ್ ಬಗ್ಗೆ ಮಾತನಾಡಿದ್ದರು. ‘ನಾನು ಇದನ್ನು ಪಿಂಚ್ ಮಾಡಲೇ’ ಎಂದು ಅನುಷ್ಕಾಗೆ ರಣವೀರ್ ಕೇಳಿದ್ದರು. ಅನುಷ್ಕಾ ಗಂಭಿರವಾಗಿಯೇ ರಣವೀರ್ ಅವರನ್ನು ಗದರಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:23 pm, Wed, 18 October 23