‘ಗೇಮ್ ಆಫ್ ಥ್ರೋನ್ಸ್’ (Game Of Thrones) ವಿಶ್ವದ ಅತ್ಯುತ್ತಮ ವೆಬ್ ಸರಣಿಗಳಲ್ಲಿ ಒಂದೆಂಬ ಸ್ಥಾನ-ಮಾನ ಪಡೆದುಕೊಂಡಿದೆ. ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ‘ಗೇಮ್ ಆಫ್ ಥ್ರೋನ್ಸ್’ ವೆಬ್ ಸರಣಿ ಹೊಂದಿದೆ. ಈ ವೆಬ್ ಸರಣಿ 2019 ರಲ್ಲಿ ಅಂತ್ಯವಾಗಿತ್ತು. 2022 ರಲ್ಲಿ ‘ಗೇಮ್ ಆಫ್ ಥ್ರೋನ್ಸ್’ ಪ್ರೀಕ್ವೆಲ್, ‘ಹೌಸ್ ಆಫ್ ದಿ ಡ್ರ್ಯಾಗನ್ಸ್’ ಬಿಡುಗಡೆ ಆಗಿ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತ್ತು. ಇದೀಗ ಈ ಸರಣಿಯ ಎರಡನೇ ಭಾಗ ಬಿಡುಗಡೆ ಯಾವಾಗ ಎಂಬ ಪ್ರಶ್ನೆಗೆ ಉತ್ತರ ದೊರೆತಿದೆ.
ವಾರ್ನರ್ಸ್ ಬ್ರದರ್ಸ್ ನಿರ್ಮಾಣ ಸಂಸ್ಥೆಯ ಮುಖ್ಯಸ್ಥ ಜೆಬಿ ಪೆರ್ರೆಟಿ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡುತ್ತಾ, ‘ಹೌಸ್ ಆಫ್ ದಿ ಡ್ರ್ಯಾಗನ್’ ಸೀಸನ್ 2 ಜೂನ್ ತಿಂಗಳಲ್ಲಿ ಬಿಡುಗಡೆ ಆಗಲಿದೆ ಎಂದಿದ್ದಾರೆ. ಜೂನ್ ತಿಂಗಳ ಯಾವ ದಿನಂದು ಶೋ ಬಿಡುಗಡೆ ಆಗುತ್ತದೆ ಎಂಬ ಬಗ್ಗೆ ಇನ್ನಷ್ಟೆ ಖಾತ್ರಿ ಸಿಗಬೇಕಿದೆ. ಶೋನ ಎರಡನೇ ಸೀಸನ್ಗಾಗಿ ಎರಡು ವರ್ಷಗಳಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಈ ಸುದ್ದಿ ಖುಷಿ ತಂದಿದೆ.
ಇದನ್ನೂ ಓದಿ:ಸಿಟಾಡೆಲ್ ಪ್ರೀಮಿಯರ್ಗೆ ಕೋಟ್ಯಂತರ ಬೆಲೆಯ ವಜ್ರದ ಆಭರಣದ ಧರಿಸಿದ ಸಮಂತಾ
‘ಗೇಮ್ ಆಫ್ ಥ್ರೋನ್ಸ್’ ಮಾದರಿಯಲ್ಲಿಯೇ ‘ಹೌಸ್ ಆಫ್ ದಿ ಡ್ರ್ಯಾಗನ್ಸ್’ ಸಹ ಜೆಜೆ ಮಾರ್ಟಿನ್ ರ ‘ಸಾಂಗ್ ಆಫ್ ಐಸ್ ಆಡ್ ಫೈರ್’ ಕಾದಂಬರಿಯನ್ನು ಆಧರಿಸಿದೆ. ‘ಗೇಮ್ ಆಫ್ ಥ್ರೋನ್ಸ್’ ಕತೆ ನಡೆದ 200 ವರ್ಷಗಳ ಹಿಂದನ ಕತೆಯನ್ನು ‘ಹೌಸ್ ಆಫ್ ದಿ ಡ್ರ್ಯಾಗನ್ಸ್’ ಹೊಂದಿದೆ.’ಹೌಸ್ ಆಫ್ ದಿ ಡ್ರ್ಯಾಗನ್ಸ್’ ಸೀಸನ್ 1 ಅದ್ಭುತ ಪ್ಲಾಟ್ ಪಾಯಿಂಟ್ ನಲ್ಲಿ ಕೊನೆಯಾಗಿದೆ. ರಾಜ ವಿಸೆರಸ್ ಟಾಗೇರಿಯನ್ ನಿಧನದ ಬಳಿಕ ಆತನ ಪತ್ನಿ ಅಲಿಸಾ ತನ್ನ ಮಗ ಏಗಾನ್ ಟಾಗೇರಿಯನ್ ಅನ್ನು ಹೊಸ ರಾಜನೆಂದು ಘೋಷಿಸಿದ್ದರೆ, ಇತ್ತ ವಿಸೆರಸ್ ನ ಪುತ್ರಿ ರೆನೆರಿಯಾ ಟಾಗೇರಿಯನ್ ತನ್ನನ್ನು ತಾನು ರಾಣಿಯೆಂದು ಘೋಷಿಸಿಕೊಂಡಿದ್ದಾಳೆ.
ಎರಡೂ ಗುಂಪುಗಳ ನಡುವೆ ಯುದ್ಧ ಪ್ರಾರಂಭವಾಗುವ ಭೀತಿಯಿದ್ದು, ಎರಡೂ ಗುಂಪುಗಳು ತಮ್ಮ-ತಮ್ಮ ಜೊತೆಗಾರ ಪಾಳೆಗಾರರನ್ನು ಗುರುತಿಸಿ ಅವರೊಟ್ಟಿಗೆ ಯುದ್ಧದ ಯೋಜನೆಗಳನ್ನು ಮಾಡುತ್ತಿರುವಾಗಲೇ ರೆನೆರಿಯಾ ಮಗನನ್ನು ಅಲಿಸಾಳ ಎರಡನೇ ಪುತ್ರ ಕೊಂದ ಸುದ್ದಿ ಬರುತ್ತದೆ. ಮಗನ ಕಳೆದುಕೊಂಡಿರುವ ರೆನೆರಿಯಾ ಯುದ್ಧ ಪ್ರಾರಂಭಿಸುವಲ್ಲಿಗೆ ಮೊದಲ ಸೀಸನ್ ಕೊನೆಯಾಗಿದೆ. ಇದೀಗ ಎರಡನೇ ಸೀಸನ್ನಲ್ಲಿ ಅಲಿಸಾ ಹಾಗೂ ರಿಹಾನಾ ಟಾಗೇರಿಯನ್ ಪರಸ್ಪರ ಕಿತ್ತಾಡಲಿದ್ದಾರೆ. ಇಬ್ಬರಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ