ಒತ್ತಡಕ್ಕೆ ಮಣಿದ ನೆಟ್​ಫ್ಲಿಕ್ಸ್​, ಭಯೋತ್ಪಾದಕರ ಹೆಸರು ನಮೂದು

1999ರ ವಿಮಾನ ಅಪಹರಣ ಘಟನೆಯ ಕತೆ ಹೊಂದಿರುವ ‘ಐಸಿ 814’ ವೆಬ್ ಸರಣಿ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಿದ್ದು, ಅಪಹರಣಕಾರರ ನಿಜ ಹೆಸರನ್ನು ವೆಬ್ ಸರಣಿಯಲ್ಲಿ ಉಲ್ಲೇಖಿಸದೇ ಇರುವುದು ವಿವಾದಕ್ಕೆ ಕಾರಣವಾಗಿತ್ತು. ಈಗ ನೆಟ್​ಫ್ಲಿಕ್ಸ್​ ಅಪಹರಣಕಾರರ ನಿಜ ಹೆಸರನ್ನು ಪ್ರದರ್ಶಿಸುತ್ತಿದೆ.

ಒತ್ತಡಕ್ಕೆ ಮಣಿದ ನೆಟ್​ಫ್ಲಿಕ್ಸ್​, ಭಯೋತ್ಪಾದಕರ ಹೆಸರು ನಮೂದು
Follow us
|

Updated on: Sep 03, 2024 | 5:43 PM

ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಿರುವ ಹೊಸ ವೆಬ್ ಸರಣಿಯೊಂದು ವಿವಾದಕ್ಕೆ ಈಡಾಗಿದೆ. ವಿಜಯ್ ವರ್ಮಾ, ನಾಸಿರುದ್ಧೀನ್ ಶಾ, ಪಂಕಜ್ ಕಪೂರ್ ಸೇರಿದಂತೆ ಕೆಲ ಜನಪ್ರಿಯ ನಟರು ನಟಿಸಿರುವ ‘ಐಸಿ 814’ ವೆಬ್ ಸರಣಿಯಲ್ಲಿ ಭಯೋತ್ಪಾಕರ ಪರ ಸಿಂಪತಿ ಮೂಡುವಂತೆ ಚಿತ್ರಿಸಲಾಗಿದೆ ಮಾತ್ರವಲ್ಲದೆ ಕೆಲವು ಸತ್ಯಗಳನ್ನು ಬೇಕೆಂದೇ ಮೆದುಗೊಳಿಸಲಾಗಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಭಯೋತ್ಪಾದಕರ ನಿಜ ಹೆಸರನ್ನೇ ಮರೆಮಾಚಿ ನಕಲಿ ಹೆಸರನ್ನು ಬಳಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ವೆಬ್ ಸರಣಿಯನ್ನು ಹಿಂಪಡೆಯಬೇಕೆಂಬ ಒತ್ತಾಯವೂ ಜೋರಾಗಿ ಕೇಳಿ ಬಂದಿತ್ತು. ಇದೀಗ ನೆಟ್​ಫ್ಲಿಕ್ಸ್​ ವೆಬ್ ಸರಣಿಯಲ್ಲಿ ಭಯೋತ್ಪಾದಕರ ಹೆಸರನ್ನು ಪ್ರದರ್ಶಿಸಲು ಆರಂಭಿಸಿದೆ.

ವೆಬ್ ಸರಣಿಯಲ್ಲಿ ಅಪಹರಣಕಾರರ ಪಾತ್ರಗಳಿಗೆ ಶಂಕರ್ ಮತ್ತು ಭೋಲಾ ಎಂಬ ನಕಲಿ ಹೆಸರುಗಳನ್ನು (ಕೋಡ್​ನೇಮ್) ಗಳನ್ನು ಬಳಸಲಾಗಿದೆ. ವೆಬ್ ಸರಣಿಯ ಯಾವುದೇ ಹಂತದಲ್ಲಿಯೂ ಅವರ ನಿಜವಾದ ಹೆಸರನ್ನು ಹೇಳಲಾಗಿಲ್ಲ. ಇದೀಗ ಅಪಹರಣಕಾರರ ನಿಜವಾದ ಹೆಸರುಗಳನ್ನು ವೆಬ್​ ಸರಣಿಯ ಆರಂಭದಲ್ಲಿ ತೋರಿಸಲಾಗಿದೆ.

ಇದನ್ನೂ ಓದಿ:ಅಪಹರಣಕಾರರ ವೈಭವೀಕರಣ, ನೆಟ್​ಫ್ಲಿಕ್ಸ್​ ವೆಬ್ ಸರಣಿ ವಿರುದ್ಧ ದೂರು

ಭಯೋತ್ಪಾದಕರಾದ ಸನ್ನಿ ಅಹ್ಮದ್ ಖಾಜಿ, ಮಿಸ್ತ್ರಿ ಜೂಹುರ್ ಇಬ್ರಾಹಿಂ, ಶಾಖಿರ್, ಶಾಹಿದ್ ಅಖ್ತರ್ ಶಯೀದ್, ಇಬ್ರಾಹಿಂ ಅಥರ್ ಅವರುಗಳು ವಿಮಾನವನ್ನು ಅಪಹರಣ ಮಾಡಿದ್ದರು. ಇದೀಗ ಇವರ ಹೆಸರುಗಳನ್ನು ವೆಬ್ ಸರಣಿಯ ಆರಂಭದಲ್ಲಿ ಪ್ರದರ್ಶಿಸಲಾಗುತ್ತಿದೆ. ನೆಟ್​ಫ್ಲಿಕ್ಸ್​ ಇಂಡಿಯಾದ ಕಂಟೆಂಟ್ ವೈಸ್ ಪ್ರೆಸಿಡೆಂಟ್ ಮೋನಿಕಾ ಶೇರ್ಗಿಲ್ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ‘1999 ರ ವಿಮಾನ ಅಪಹರಣದ ಬಗ್ಗೆ ಮಾಹತಿ ಇಲ್ಲದವ ಪ್ರೇಕ್ಷಕರ ಅನುಕೂಲಕ್ಕಾಗಿ ನಾವು ಭಯೋತ್ಪಾದಕರ ನಿಜ ಹೆಸರಿನ ಜೊತೆಗೆ ಅವರ ಕೋಡ್​ ನೇಮ್​ಗಳನ್ನು ಸಹ ಪ್ರದರ್ಶಿಸುತ್ತಿದ್ದೇವೆ. ಕೋಡ್​ ನೇಮ್​ಗಳು ನಿಜವಾದ ಆಪರೇಷನ್​ನಲ್ಲಿ ಬಳಸಲಾಗಿತ್ತು’ ಎಂದು ಹೇಳಿದ್ದಾರೆ.

‘ಐಸಿ 814’ ವೆಬ್ ಸರಣಿಯು 1999 ರಲ್ಲಿ ನಡೆದ ವಿಮಾನ ಅಪಹರಣದ ಕತೆಯನ್ನು ಒಳಗೊಂಡಿದೆ. ಈ ವೆಬ್ ಸರಣಿಯಲ್ಲಿ ಭಯೋತ್ಪಾದಕರನ್ನು ವೈಭವೀಕರಿಸಲಾಗಿದೆ. ಅಪಹರಣ ಪ್ರಕರಣದಲ್ಲಿ ಪಾಕಿಸ್ತಾನ, ಐಎಸ್​ಐ ಗಳ ಕೈವಾಡ ಇಲ್ಲವೆಂಬಂತೆ ಚಿತ್ರೀಕರಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದೆ. ಅಲ್ಲದೆ ಘಟನೆ ನಡೆದಾಗ ಭಯೋತ್ಪಾದಕರೊಟ್ಟಿಗೆ ಸಂಧಾನಕ್ಕೆ ತೆರಳಿದ್ದ ಅಜಿತ್ ದೋವಲ್ ಹಾಗೂ ಇತರರನ್ನು ‘ಹೈಲೆಟ್’ ಮಾಡಿಲ್ಲ, ಸಂಧಾನ ದೃಶ್ಯವನ್ನು ಹಾಸ್ಯ ದೃಶ್ಯವೆಂಬಂತೆ ತೋರಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದೆ. ವೆಬ್ ಸರಣಿಯ ಪ್ರಸಾರ ನಿಲ್ಲಿಸಬೇಕೆಂದು ಒತ್ತಾಯಿಸಿ ದೆಹಲಿ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಹ ಹಾಕಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಸೀದಿ ಮುಂದೆ ಪಟಾಕಿ ಸಿಡಿಸಿದ್ದಕ್ಕೆ ಹಿಂದೂ ಕಾರ್ಯಕರ್ತರ ವಿರುದ್ಧ ಎಫ್​ಐಆರ್
ಮಸೀದಿ ಮುಂದೆ ಪಟಾಕಿ ಸಿಡಿಸಿದ್ದಕ್ಕೆ ಹಿಂದೂ ಕಾರ್ಯಕರ್ತರ ವಿರುದ್ಧ ಎಫ್​ಐಆರ್
ಆರ್​ಎಸ್ಎಸ್, ಬಿಜೆಪಿ ವಿರುದ್ಧ ಎಂ ಲಕ್ಷ್ಮಣ್ ಗಂಭೀರ ಆರೋಪ
ಆರ್​ಎಸ್ಎಸ್, ಬಿಜೆಪಿ ವಿರುದ್ಧ ಎಂ ಲಕ್ಷ್ಮಣ್ ಗಂಭೀರ ಆರೋಪ
ವಿಡಿಯೋ ನೋಡಿ - ಪಪ್ಪಾಯಿ ಹಣ್ಣಿನಲ್ಲಿ ವಿಚಿತ್ರ ವಿನಾಯಕ!
ವಿಡಿಯೋ ನೋಡಿ - ಪಪ್ಪಾಯಿ ಹಣ್ಣಿನಲ್ಲಿ ವಿಚಿತ್ರ ವಿನಾಯಕ!
‘ಬೇರೇ ಜೈಲಿಗೆ ಶಿಫ್ಟ್ ಮಾಡಿ ಪ್ಲೀಸ್’; ಬಳ್ಳಾರಿ ಜೈಲಲ್ಲಿ ಸುಸ್ತಾದ ದರ್ಶನ್
‘ಬೇರೇ ಜೈಲಿಗೆ ಶಿಫ್ಟ್ ಮಾಡಿ ಪ್ಲೀಸ್’; ಬಳ್ಳಾರಿ ಜೈಲಲ್ಲಿ ಸುಸ್ತಾದ ದರ್ಶನ್
ನಾಗಮಂಗಲ ಕೋಮುಗಲಭೆ​​: ಬೆಂಕಿ ಬಿದ್ದಿದ್ದ ಬೈಕ್​ ಶೋರೂಂಗೆ ಹೆಚ್​ಡಿಕೆ ಭೇಟಿ
ನಾಗಮಂಗಲ ಕೋಮುಗಲಭೆ​​: ಬೆಂಕಿ ಬಿದ್ದಿದ್ದ ಬೈಕ್​ ಶೋರೂಂಗೆ ಹೆಚ್​ಡಿಕೆ ಭೇಟಿ
ನಾಗಮಂಗಲ ಕೋಮುಗಲಭೆ ಕೇಸ್​​: ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ನಾಗಮಂಗಲ ಕೋಮುಗಲಭೆ ಕೇಸ್​​: ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
Daily Devotional: ಎಕ್ಕದ ಗಣಪತಿಯ ಮಹತ್ವ ತಿಳಿಯಿರಿ
Daily Devotional: ಎಕ್ಕದ ಗಣಪತಿಯ ಮಹತ್ವ ತಿಳಿಯಿರಿ
Nithya Bhavishya: ಈ ರಾಶಿಯವರಿಗೆ ಆಸ್ತಿ ಖರೀದಿಯ ಯೋಜನೆ ಯಶಸ್ವಿಯಾಗಬಹುದು
Nithya Bhavishya: ಈ ರಾಶಿಯವರಿಗೆ ಆಸ್ತಿ ಖರೀದಿಯ ಯೋಜನೆ ಯಶಸ್ವಿಯಾಗಬಹುದು
ಕೆಲವು ಅನುಮಾನವಿತ್ತು, ಕೇಳಿದ್ದೇನೆ: ದರ್ಶನ್ ಭೇಟಿ ಬಳಿಕ ಲಾಯರ್ ಮಾತು
ಕೆಲವು ಅನುಮಾನವಿತ್ತು, ಕೇಳಿದ್ದೇನೆ: ದರ್ಶನ್ ಭೇಟಿ ಬಳಿಕ ಲಾಯರ್ ಮಾತು
ಸದ್ಯಕ್ಕೆ ಜಾಮೀನಿಗೆ ಅರ್ಜಿ ಹಾಕಲ್ಲ ನಟ ದರ್ಶನ್: ವಕೀಲರಿಂದ ಮಾಹಿತಿ
ಸದ್ಯಕ್ಕೆ ಜಾಮೀನಿಗೆ ಅರ್ಜಿ ಹಾಕಲ್ಲ ನಟ ದರ್ಶನ್: ವಕೀಲರಿಂದ ಮಾಹಿತಿ