ಅಪಹರಣಕಾರರ ವೈಭವೀಕರಣ, ನೆಟ್​ಫ್ಲಿಕ್ಸ್​ ವೆಬ್ ಸರಣಿ ವಿರುದ್ಧ ದೂರು

IC 814: 1999 ರಲ್ಲಿ ನಡೆದ ವಿಮಾನ ಅಪಹರಣ ಕುರತಾದ ಕತೆ ಹೊಂದಿರುವ ಐಸಿ 814 ವೆಬ್ ಸರಣಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಈ ವೆಬ್ ಸರಣಿಯಲ್ಲಿ ಭಯೋತ್ಪಾದಕರನ್ನು ವೈಭವೀಕರಣ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಅಪಹರಣಕಾರರ ವೈಭವೀಕರಣ, ನೆಟ್​ಫ್ಲಿಕ್ಸ್​ ವೆಬ್ ಸರಣಿ ವಿರುದ್ಧ ದೂರು
ಐಸಿ 814
Follow us
| Updated By: ರಾಜೇಶ್ ದುಗ್ಗುಮನೆ

Updated on:Sep 03, 2024 | 2:39 PM

ಭಾರತದಲ್ಲಿ ಒಟಿಟಿಗಳು ಜನಪ್ರಿಯಗೊಳ್ಳಲು ಆರಂಭಿಸಿದ ಬಳಿಕ ಸಿನಿಮಾ ಹಾಗೂ ಕಿರುಚಿತ್ರಗಳ ನಡುವಿನ ವೆಬ್ ಸರಣಿಗಳು ಹೆಚ್ಚು ಜನಪ್ರಿಯಗೊಳ್ಳಲು ಆರಂಭವಾದವು. ದೊಡ್ಡ ಸ್ಟಾರ್ ನಟರುಗಳೇ ಈಗ ವೆಬ್ ಸರಣಿಗಳಲ್ಲಿ ನಟಿಸುತ್ತಿದ್ದಾರೆ. ಸಾಮಾನ್ಯವಾಗಿ ನಿಜ ಘಟನೆಗಳು, ಥ್ರಿಲ್ಲರ್ ಅಂಶವುಳ್ಳ ಕತೆಗಳನ್ನೇ ವೆಬ್ ಸರಣಿ ನಿರ್ಮಿಸಲು ಆರಿಸಿಕೊಳ್ಳಲಾಗುತ್ತದೆ. ನಿಜ ಘಟನೆಗಳನ್ನು ಆರಿಸಿಕೊಂಡಾಗ ಇತಿಹಾಸ ತಿರುಚುವ, ಪಕ್ಷಪಾತಿಯಾಗಿ ವಿಷಯಗಳನ್ನು ಪ್ರಸ್ತುತ ಪಡಿಸುವ ಅಪಾಯ ಹೆಚ್ಚಾಗಿರುತ್ತದೆ. ಇತ್ತೀಚೆಗೆ ಬಿಡುಗಡೆ ಆಗಿರುವ ‘ಐಸಿ 814’ ವಿಷಯದಲ್ಲಿಯೂ ಸಹ ಇದೇ ಆಗಿದೆ.

ಅನುಭವ್ ಸಿಂಹ ನಿರ್ದೇಶಿಸಿ, ವಿಜಯ್ ವರ್ಮಾ, ನಸಿರುದ್ದೀನ್ ಶಾ ಇನ್ನಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿರುವ ‘ಐಸಿ 814’ ವಿಮಾನ ಅಪಹರಣದ ಕತೆಯನ್ನು ಒಳಗೊಂಡಿದೆ. 1999 ರಲ್ಲಿ ಅಪಹರಣಕ್ಕೆ ಒಳಗಾಗಿದ್ದ IC 814 ವಿಮಾನದ ಕತೆಯನ್ನು ಈ ವೆಬ್ ಸರಣಿ ಒಳಗೊಂಡಿದೆ. ಆದರೆ ವೆಬ್ ಸರಣಿಯಲ್ಲಿ ನಿರ್ದೇಶಕ ಅನುಭವ್ ಸಿಂಹ, ಅಪಹರಣ ಮಾಡಿದ ದುರುಳರನ್ನು ವೈಭವೀಕರಣಗೊಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ವೆಬ್ ಸರಣಿಯ ವಿರುದ್ಧ ದೂರು ಮಾಡಲಾಗಿದೆ.

ಇದನ್ನೂ ಓದಿ:ವೆಬ್ ಸರಣಿಯಲ್ಲಿ ನಟಿಸಲಿದ್ದಾರೆ ಶಾರುಖ್ ಪುತ್ರಿ ಸುಹಾನಾ ಖಾನ್

ವೆಬ್ ಸರಣಿಯಲ್ಲಿ ಅಪಹರಣಕಾರರನ್ನು ವೈಭವೀಕರಣ ಮಾಡಲಾಗಿದೆ ಅಥವಾ ಅವರೆಡೆ ಪ್ರೇಕ್ಷಕನಿಗೆ ಸಿಂಪತಿ ಮೂಡುವಂತೆ ನಿರೂಪಣೆ ಮಾಡಲಾಗಿದೆ. ಅಪಹರಣಕಾರರ ಪಾತ್ರಗಳಿಗೆ ಶಂಕರ್ ಮತ್ತು ಭೋಲಾ ಎಂಬ ನಕಲಿ ಹೆಸರುಗಳನ್ನು (ಕೋಡ್​ನೇಮ್) ಗಳನ್ನು ಬಳಸಲಾಗಿದೆ. ವೆಬ್ ಸರಣಿಯ ಯಾವುದೇ ಹಂತದಲ್ಲಿಯೂ ಅವರ ನಿಜವಾದ ಹೆಸರನ್ನು ಹೇಳಲಾಗಿಲ್ಲ. ವಿಮಾನ ಅಪಹರಣ ಪ್ರಕರಣದಲ್ಲಿ ಪಾಕಿಸ್ತಾನದ ಐಎಸ್​ಐ ನದ್ದು ಯಾವುದೇ ತಪ್ಪಿಲ್ಲ ಎಂಬಂತೆ ತೋರಿಸಲಾಗಿದೆ. ಅಪಹರಣಕ್ಕೆ ಒಸಾಮ ಬಿನ್ ಲಾದೆನ್ ಇತರೆ ಕೆಲವು ಭಯೋತ್ಪಾದಕರು ಕಾರಣ ಎನ್ನಲಾಗಿದೆ.

ಅಪಹರಣಕಾರರೊಟ್ಟಿಗೆ ಸಂಧಾನಕ್ಕೆ ಹೋಗಿದ್ದ ಅಜಿತ್ ಧೋವಲ್ ಪಾತ್ರವನ್ನು ಹಾಸ್ಯದ ಪಾತ್ರದಂತೆ ತೋರಿಸಲಾಗಿದೆ. ಅಪಹರಣಕಾರರೊಟ್ಟಿಗಿನ ಸಂಧಾನ ಸಭೆಯನ್ನೂ ಹಾಸ್ಯದ ದೃಶ್ಯದಂತೆ ತೋರಿಸಲಾಗಿದೆ. ಸಂಧಾನಕ್ಕೆ ತೆರಳಿದಾಗಿನ ಚಿತ್ರಗಳು ಲಭ್ಯವಿದ್ದರೂ ಸಹ ಅವನ್ನು ಬೇಕೆಂದೇ ಬಳಸಿಕೊಳ್ಳಲಾಗಿಲ್ಲ. ಮಾತ್ರವಲ್ಲದೆ ಭಯೋತ್ಪಾದಕರ ಪರವಾಗಿ ಕೆಲವು ಸಂಭಾಷಣೆಗಳಿವೆ, ಭಯೋತ್ಪಾದಕರನ್ನು ಕ್ರಾಂತಿಕಾರಿಗಳಂತೆ ತೋರಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ವೆಬ್ ಸರಣಿ ಬಗ್ಗೆ ಆರೋಪಗಳು ಕೇಳಿ ಬಂದ ಬೆನ್ನಲ್ಲೆ ಕೇಂದ್ರ ಸರ್ಕಾರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲವಯ ನೆಟ್​ಫ್ಲಿಕ್ಸ್​ ಇಂಡಿಯಾಗೆ ನೊಟೀಸ್ ನೀಡಿದ್ದು ಉತ್ತರಿಸುವಂತೆ ಸೂಚಿಸಿದೆ. ದೆಹಲಿ ನ್ಯಾಯಾಲಯದಲ್ಲಿ ವೆಬ್ ಸರಣಿಯ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:11 pm, Tue, 3 September 24

ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!
ಬರೋಬ್ಬರಿ 111 ಎಸೆತಗಳು... ಕೆಟ್ಟ ರೀತಿಯಲ್ಲಿ ಔಟಾದ ಕೆಎಲ್ ರಾಹುಲ್
ಬರೋಬ್ಬರಿ 111 ಎಸೆತಗಳು... ಕೆಟ್ಟ ರೀತಿಯಲ್ಲಿ ಔಟಾದ ಕೆಎಲ್ ರಾಹುಲ್
ವಿದ್ಯಾರ್ಥಿನಿಯರ ಮೇಲೆ ಗೂಳಿ ದಾಳಿ; ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ವಿದ್ಯಾರ್ಥಿನಿಯರ ಮೇಲೆ ಗೂಳಿ ದಾಳಿ; ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಹುಬ್ಬಳ್ಳಿ ಈದ್ಗಾ ಮೈದಾನ ರಾಮಾವತಾರ ಗಣೇಶ ಮೆರವಣಿಗೆಯ ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಮೈದಾನ ರಾಮಾವತಾರ ಗಣೇಶ ಮೆರವಣಿಗೆಯ ವಿಡಿಯೋ ನೋಡಿ
ಕೋಲಾರ: ಸಂಕಷ್ಟಹರ ಗಣಪತಿ ದೇವಾಲಯದಲ್ಲಿ 10001 ಕರಿಗಡುಬಿನಲ್ಲಿ ಅರಳಿದ ಗಣಪತಿ
ಕೋಲಾರ: ಸಂಕಷ್ಟಹರ ಗಣಪತಿ ದೇವಾಲಯದಲ್ಲಿ 10001 ಕರಿಗಡುಬಿನಲ್ಲಿ ಅರಳಿದ ಗಣಪತಿ
ಗೂಳಿ ದಾಳಿಗೆ ವೃದ್ಧನ ಹೊಟ್ಟೆಯಿಂದ ಹೊರಬಂದ ಕರುಳು; ಸಿಸಿಟಿವಿ ದೃಶ್ಯ
ಗೂಳಿ ದಾಳಿಗೆ ವೃದ್ಧನ ಹೊಟ್ಟೆಯಿಂದ ಹೊರಬಂದ ಕರುಳು; ಸಿಸಿಟಿವಿ ದೃಶ್ಯ
ದರ್ಶನ್​​ ಹಾಗೂ ಪವಿತ್ರಾ ಸಂಬಂಧ ಎಂಥದ್ದು? ಚಾರ್ಜ್​ಶೀಟ್​ನಲ್ಲಿರೋ ಉಲ್ಲೇಖ
ದರ್ಶನ್​​ ಹಾಗೂ ಪವಿತ್ರಾ ಸಂಬಂಧ ಎಂಥದ್ದು? ಚಾರ್ಜ್​ಶೀಟ್​ನಲ್ಲಿರೋ ಉಲ್ಲೇಖ
ಮೈಸೂರಿನಲ್ಲಿ ಗಮನ ಸೆಳೆಯುತ್ತಿವೆ ವಿಶೇಷ ಗಣಪತಿ ವಿಗ್ರಹಗಳು, ವಿಡಿಯೋ ನೋಡಿ
ಮೈಸೂರಿನಲ್ಲಿ ಗಮನ ಸೆಳೆಯುತ್ತಿವೆ ವಿಶೇಷ ಗಣಪತಿ ವಿಗ್ರಹಗಳು, ವಿಡಿಯೋ ನೋಡಿ
ಗಣೇಶ ಚತುರ್ಥಿಯ ಮಹತ್ವ, ಪೂಜೆಗಳನ್ನು ಹೇಗೆ ಮಾಡಬೇಕು? ಈ ವಿಡಿಯೋ ನೋಡಿ
ಗಣೇಶ ಚತುರ್ಥಿಯ ಮಹತ್ವ, ಪೂಜೆಗಳನ್ನು ಹೇಗೆ ಮಾಡಬೇಕು? ಈ ವಿಡಿಯೋ ನೋಡಿ