AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bawaal: ‘ಬವಾಲ್’ ಸಿನಿಮಾವನ್ನು ತೆಗೆಯುವಂತೆ ಜ್ಯೂ ಸಮುದಾಯದ ಒತ್ತಾಯ

Bawaal: ಇತ್ತೀಚೆಗಷ್ಟೆ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆದ ವರುಣ್ ಧವನ್ ನಟನೆಯ 'ಬವಾಲ್' ಸಿನಿಮಾಕ್ಕೆ ಜ್ಯೂ ಸಮುದಾಯದ ವಿರೋಧ ಎದುರಾಗಿದೆ.

Bawaal: 'ಬವಾಲ್' ಸಿನಿಮಾವನ್ನು ತೆಗೆಯುವಂತೆ ಜ್ಯೂ ಸಮುದಾಯದ ಒತ್ತಾಯ
ಬವಾಲ್
Follow us
ಮಂಜುನಾಥ ಸಿ.
|

Updated on: Jul 27, 2023 | 8:23 PM

ವರುಣ್ ಧವನ್ (Varun Dhawan), ಜಾನ್ಹವಿ ಕಪೂರ್ (Janhvi Kapoor) ನಟನೆಯ ‘ಬವಾಲ್’ ಸಿನಿಮಾ ಕಳೆದ ವಾರವಷ್ಟೆ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದೆ. ‘ಬವಾಲ್’ ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಇದರ ಬೆನ್ನಲ್ಲೆ ಸಿನಿಮಾವನ್ನು ಅಮೆಜಾನ್ ಪ್ರೈಂ ವೇದಿಕೆಯಿಂದ ತೆಗೆಯಬೇಕು ಎಂದು ಒತ್ತಾಯಿಸಲಾಗುತ್ತಿದೆ. ಜರ್ಮನಿಯಲ್ಲಿ ನಡೆದ ಹಿಟ್ಲರ್​ನ ನರಮೆಧದ ದೃಶ್ಯಗಳು ಸಹ ಈ ಸಿನಿಮಾದಲ್ಲಿದ್ದು, ಇದೇ ಕಾರಣಕ್ಕೆ ಸಿನಿಮಾವನ್ನು ನರಮೇಧದ ಸಂತ್ರಸ್ತರಾದ ಜ್ಯೂಯಿಷ್ ಜನರು ವಿರೋಧಿಸಿದ್ದಾರೆ.

ಸಿನಿಮಾದಲ್ಲಿ ಹಿಟ್ಲರ್​ನ ಜ್ಯೂ ಜನರ ನರಮೇಧವನ್ನು ರೂಪಕವನ್ನಾಗಿ ಬಳಸಲಾಗಿದೆ. ಲಖನೌನ ಯುವಕನೋರ್ವ, ಹೊಸದಾಗಿ ಮದುವೆಯಾದ ಪತ್ನಿಯನ್ನು ಯೂರೋಪ್​ ಟ್ರಿಪ್​ಗೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಅವನ ಹಾಗೂ ಪತ್ನಿಯ ಸಂಬಂಧದಲ್ಲಿ ಬಿರುಕು ಮೂಡುತ್ತದೆ. ಅವರಿಬ್ಬರ ಸಂಬಂಧವನ್ನು ಹಿಟ್ಲರ್​ನ ಆಸ್ವಿಟ್ಜ್​ ನರಮೇಧ ಹಾಗೂ ವಿಶ್ವಯುದ್ಧ ಎರಡರ ಜೊತೆ ಹೋಲಿಕೆ ಮಾಡುವಂಥಹಾ ದೃಶ್ಯಗಳು ಬರುತ್ತವೆ. ಆದರೆ ಈ ದೃಶ್ಯಗಳ ಬಗ್ಗೆ ಜ್ಯೂ ಜನರ ಸಂಘಟನೆಯಾದ ಸಿಮೊನ್ ವೀಸಂತಲ್ ಸೆಂಟರ್ ವಿರೋಧಿಸಿದೆ. ಬಹಿರಂಗ ಪತ್ರವನ್ನು ಬರೆದು ಸಿನಿಮಾವನ್ನು ಕೂಡಲೇ ಅಮೆಜಾನ್ ಪ್ರೈಂನಿಂದ ತೆಗೆಯಬೇಕು ಎಂದು ಮನವಿ ಮಾಡಿದೆ.

ಇದನ್ನೂ ಓದಿ:ಲೈಂಗಿಕ ಕ್ರಿಯೆ ನಡೆಸುವಾಗ ಭಗವದ್ಗೀತೆ ಹಿಡಿದ ಯುವತಿ; ವಿವಾದಾತ್ಮಕ ದೃಶ್ಯವನ್ನು ಪ್ರಶ್ನಿಸಿದ ವರುಣ್ ಧವನ್

ನರಮೇಧದ ದೃಶ್ಯಗಳನ್ನು ರೂಪಕ ಎಂಬಂತೆ ಬಳಸಿಕೊಂಡಿರುವುದು ನರಮೇಧದಿಂದ ಬಾಧಿತರಾಗಿರುವ ಲಕ್ಷಾಂತರ ಕುಟುಂಬಗಳಿಗೆ ಘಾಸಿ ಮಾಡಿದೆ. ಅಲ್ಲದೆ ಸಿನಿಮಾದಲ್ಲಿ ನಾಯಕಿ, ಎಲ್ಲರಲ್ಲೂ ಒಬ್ಬೊಬ್ಬ ಹಿಟ್ಲರ್ ಇದ್ದಾನೆ ಎನ್ನುತ್ತಾಳೆ. ಇದು ಸಂಪೂರ್ಣವಾಗಿಯೂ ತಪ್ಪು. ಎಲ್ಲದಕ್ಕೂ ಮಿಗಿಲಾಗಿ ನರಮೇಧ ಎಂಬುದು ರೂಪಕ ಅಲ್ಲ, ಅದು, ಮನುಷ್ಯ ಮನುಷ್ಯನ ಮೇಲೆ ಮಾಡಿರುವ ಮನುಷ್ಯ ಇತಿಹಾಸದ ಅತ್ಯಂತ ಕೆಟ್ಟ ಪ್ರಯೋಗ ಎಂದಿದ್ದಾರೆ.

”ಆಸ್ವಿಟ್ಜ್​ನ ನರಮೇಧ ಮನುಷ್ಯ ಎಷ್ಟು ಕ್ರೂರಿಯಾಗಿ ವರ್ತಿಸಬಲ್ಲ ಎಂಬುದರ ನಿಜವಾದ ಸಾಕ್ಷಿ. ನಿರ್ದೇಶಕರು ನಾಜಿ ಕ್ಯಾಂಪ್​ನಲ್ಲಿ ಫ್ಯಾಂಟಸಿ ದೃಶ್ಯಗಳನ್ನು ಸೇರಿಸಿ, ತೋರಿಸಿ ತಮ್ಮ ಸಿನಿಮಾಕ್ಕೆ ತಮಗೆ ಪ್ರಚಾರ ಗಿಟ್ಟಿಸಬೇಕು ಎಂದುಕೊಂಡಿದ್ದರೆ ಅವರ ಯಶಸ್ವಿಯಾಗಿದ್ದಾರೆ. ಆದರೆ ಮನುಷ್ಯನ ಕ್ರೂರತೆಯನ್ನು ಪ್ರತಿ ವ್ಯಕ್ತಿಯ ಅಹಂಗೆ ಹೋಲಿಸಿ ತೆಳುವು ಮಾಡುವುದು ಸರಿಯಾದ ಕ್ರಮವಲ್ಲ. ಹಾಗಾಗಿ ಅಮೆಜಾನ್ ಪ್ರೈಂ ಈ ಕೂಡಲೇ ‘ಬವಾಲ್’ ಸಿನಿಮಾವನ್ನು ಸ್ಟ್ರೀಮಿಂಗ್ ವೇದಿಕೆಯಿಂದ ತೆಗೆದು ಹಾಕಬೇಕು ಎಂದು ಒತ್ತಾಯಿಸಿದೆ.

‘ಬವಾಲ್’ ಸಿನಿಮಾವನ್ನು ನಿತೀಶ್ ತಿವಾರಿ ನಿರ್ದೇಶನ ಮಾಡಿದ್ದಾರೆ. ನಿತೇಶ್ ತಿವಾರಿ ಈ ಹಿಂದೆ ‘ದಂಗಲ್’, ‘ಚಿಚೋರೆ’ ಅಂಥಹಾ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಆದರೆ ‘ಬವಾಲ್’ ಸಿನಿಮಾಕ್ಕೆ ಅವರಿಗೆ ವಿರೋಧ ಎದುರಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಲಿಪ್​ನಲ್ಲಿ ನಿಂತ ವಿಕೆಟ್ ಕೀಪರ್: ಎದುರಾಳಿ ತಂಡಕ್ಕೆ ಸಿಕ್ತು 5 ರನ್​
ಸ್ಲಿಪ್​ನಲ್ಲಿ ನಿಂತ ವಿಕೆಟ್ ಕೀಪರ್: ಎದುರಾಳಿ ತಂಡಕ್ಕೆ ಸಿಕ್ತು 5 ರನ್​
ದೇಶದ ಸೈನಿಕರಿಗೆ ಕರ್ತವ್ಯ ಮುಖ್ಯ; ವೈಯಕ್ತಿಕ ಸಂಬಂಧಗಳು, ಕೆಲಸಗಳಲ್ಲ
ದೇಶದ ಸೈನಿಕರಿಗೆ ಕರ್ತವ್ಯ ಮುಖ್ಯ; ವೈಯಕ್ತಿಕ ಸಂಬಂಧಗಳು, ಕೆಲಸಗಳಲ್ಲ
ಲಷ್ಕರ್ ಉಗ್ರನನ್ನು ಮುಗ್ದ ವ್ಯಕ್ತಿ, ಧರ್ಮ ಪ್ರಚಾರಕ ಎಂದು ಕರೆದ ಪಾಕ್
ಲಷ್ಕರ್ ಉಗ್ರನನ್ನು ಮುಗ್ದ ವ್ಯಕ್ತಿ, ಧರ್ಮ ಪ್ರಚಾರಕ ಎಂದು ಕರೆದ ಪಾಕ್
ಭಾರತ-ಪಾಕ್​ ಮಧ್ಯೆ ಉದ್ವಿಗ್ನ: ಸೈಬರ್ ದಾಳಿ ಬಗ್ಗೆ​ ದಯಾನಂದ್ ಎಚ್ಚರಿಕೆ!​​
ಭಾರತ-ಪಾಕ್​ ಮಧ್ಯೆ ಉದ್ವಿಗ್ನ: ಸೈಬರ್ ದಾಳಿ ಬಗ್ಗೆ​ ದಯಾನಂದ್ ಎಚ್ಚರಿಕೆ!​​
ರಾಕೇಶ್ ಪೂಜಾರಿ ಸಾಯುವುದಕ್ಕೂ ಮೊದಲು ಏನೆಲ್ಲ ಆಯ್ತು? ವಿವರಿಸಿದ ಜಿಜಿ
ರಾಕೇಶ್ ಪೂಜಾರಿ ಸಾಯುವುದಕ್ಕೂ ಮೊದಲು ಏನೆಲ್ಲ ಆಯ್ತು? ವಿವರಿಸಿದ ಜಿಜಿ
Daily Devotional: ಹನುಮಂತನಿಗೆ ಯಾವ ರೀತಿಯ ಹಾರ ಹಾಕಿದರೆ ಏನು ಫಲ?
Daily Devotional: ಹನುಮಂತನಿಗೆ ಯಾವ ರೀತಿಯ ಹಾರ ಹಾಕಿದರೆ ಏನು ಫಲ?
ಮೀನ ರಾಶಿಯವರಿಗೆ ಸ್ಥಾನ ಪಲ್ಲಟ, ಅವಿವಾಹಿತರಿಗೆ ವಿವಾಹ ಯೋಗ ಸಾಧ್ಯತೆ
ಮೀನ ರಾಶಿಯವರಿಗೆ ಸ್ಥಾನ ಪಲ್ಲಟ, ಅವಿವಾಹಿತರಿಗೆ ವಿವಾಹ ಯೋಗ ಸಾಧ್ಯತೆ
ತುಮಕೂರು ರೈಲು ನಿಲ್ದಾಣದಲ್ಲಿ ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ
ತುಮಕೂರು ರೈಲು ನಿಲ್ದಾಣದಲ್ಲಿ ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ
ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಮಾಡಿದ ಉಪ್ಪಿ ಮತ್ತು ಕುಟುಂಬ
ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಮಾಡಿದ ಉಪ್ಪಿ ಮತ್ತು ಕುಟುಂಬ
ಐಪಿಎಲ್ ಆದಷ್ಟು ಬೇಗ ಆರಂಭವಾಗಲಿದೆ; ರಾಜೀವ್ ಶುಕ್ಲಾ
ಐಪಿಎಲ್ ಆದಷ್ಟು ಬೇಗ ಆರಂಭವಾಗಲಿದೆ; ರಾಜೀವ್ ಶುಕ್ಲಾ