AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಯೋ ಹಾಟ್​ಸ್ಟಾರ್ ಈಗ ವಿಶ್ವದ ಎರಡನೇ ಅತಿದೊಡ್ಡ ಒಟಿಟಿ

Jio Hotstar: ರಿಲಯನ್ಸ್​ ಹಾಗೂ ವಾಲ್ಟ್ ಡಿಸ್ನಿ ಪಾಲುದಾರಿಕೆಯ ಜಿಯೋ ಹಾಟ್​ಸ್ಟಾರ್ ವಿಶ್ವದ ಎರಡನೇ ಅತಿದೊಡ್ಡ ಒಟಿಟಿ ವೇದಿಕೆ ಎನಿಸಿಕೊಂಡಿದೆ. ರಿಲಯನ್ಸ್ ಜಿಯೋ ಇನ್​ಫೋಕಾಮ್​ನ ಚೇರ್​ಮ್ಯಾನ್ ಆಕಾಶ್ ಅಂಬಾನಿ ಅವರು ರಿಲಯನ್ಸ್ ಜಿಯೋನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಜಿಯೋ ಹಾಟ್​ಸ್ಟಾರ್ ಗಾತ್ರದಲ್ಲಿ ಎಷ್ಟು ದೊಡ್ಡದು? ಮೊದಲ ಸ್ಥಾನದಲ್ಲಿರುವ ಒಟಿಟಿ ಯಾವುದು?

ಜಿಯೋ ಹಾಟ್​ಸ್ಟಾರ್ ಈಗ ವಿಶ್ವದ ಎರಡನೇ ಅತಿದೊಡ್ಡ ಒಟಿಟಿ
Jio Hotstar
ಮಂಜುನಾಥ ಸಿ.
|

Updated on:Aug 29, 2025 | 6:53 PM

Share

ಜಗತ್ತು ಚಿತ್ರಮಂದಿರ ಮತ್ತು ಟಿವಿಗಳಿಂದ ಒಟಿಟಿಗಳೆಡೆಗೆ ದೊಡ್ಡ ಹೆಜ್ಜೆ ಇಡುತ್ತಿರುವ ಸಮಯದಲ್ಲಿ ರಿಲಯನ್ಸ್​ ಹಾಗೂ ವಾಲ್ಟ್ ಡಿಸ್ನಿ ಪಾಲುದಾರಿಕೆಯ ಜಿಯೋ ಹಾಟ್​ಸ್ಟಾರ್ ವಿಶ್ವದ ಎರಡನೇ ಅತಿದೊಡ್ಡ ಒಟಿಟಿ ವೇದಿಕೆ ಎನಿಸಿಕೊಂಡಿದೆ. ರಿಲಯನ್ಸ್ ಜಿಯೋ ಇನ್​ಫೋಕಾಮ್​ನ ಚೇರ್​ಮ್ಯಾನ್ ಆಕಾಶ್ ಅಂಬಾನಿ ಅವರು ರಿಲಯನ್ಸ್ ಜಿಯೋನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ವಿಷಯವನ್ನು ಹಂಚಿಕೊಂಡರು.

ಒಟ್ಟಾರೆ ಟಿವಿ ಮಾರುಕಟ್ಟೆಯಲ್ಲಿ 34% ಹೊಂದಿರುವ ಜಿಯೋ ಅದರ ಜೊತೆಗೆ ಮೊಬೈಲ್, ಲ್ಯಾಪ್​ಟ್ಯಾಪ್, ಟಿವಿ ಇನ್ನಿತರೆ ಕನೆಕ್ಷನ್​​ಗಳ ಮೂಲಕ ನೂರಾರು ಕೋಟಿ ಜನರಿಗೆ ಕಂಟೆಂಟ್ ಅನ್ನು ತಲುಪಿಸುತ್ತಿದೆ. ಜಿಯೋದ ಭವಿಷ್ಯದ ಯೋಜನೆಗಳ ಬಗ್ಗೆಯೂ ಮಾತನಾಡಿರುವ ಆಕಾಶ್ ಅಂಬಾನಿ, ‘ಕಂಟೆಂಟ್, ಸಾಫ್ಟ್​ವೇರ್ ಮತ್ತು ಎಐ (ಕೃತಕ ಬುದ್ಧಿಮತ್ತೆ)ಯ ಸಂಗಮವನ್ನು ನಾವು ಜಿಯೋ ಹಾಟ್​ಸ್ಟಾರ್​​ನಲ್ಲಿ ಮಾಡಿದ್ದು, ಮುಂದಿನ ದಿನಗಳಲ್ಲಿ ನಾವು ಒಟಿಟಿಯನ್ನು ಇನ್ನಷ್ಟು ದೇಶಗಳಿಗೆ ವಿಸ್ತರಿಸುವ ಯೋಜನೆ ಹೊಂದಿದ್ದೇವೆ’ ಎಂದಿದ್ದಾರೆ.

ಪ್ರಸ್ತುತ ಜಿಯೋ ಹಾಟ್​ಸ್ಟಾರ್​​ ಬಳಿ 3.20 ಲಕ್ಷ ಗಂಟೆಗಳ ಕಾಲ ವೀಕ್ಷಿಸಬಲ್ಲ ಕಂಟೆಂಟ್ ಇದೆ. ಜಿಯೋದ ನಂತರದ ಸ್ಥಾನದಲ್ಲಿರುವ ಎರಡು ಒಟಿಟಿಗಳ ಕಂಟೆಂಟ್ ಅನ್ನು ಒಟ್ಟು ಮಾಡಿದರೂ ಇಷ್ಟು ಬೃಹತ್ ಗಂಟೆಗಳ ಕಂಟೆಂಟ್ ಅವರಲ್ಲಿ ಇಲ್ಲ. ಇದರ ಜೊತೆಗೆ ಪ್ರತಿವರ್ಷವೂ 30 ಸಾವಿರ ಗಂಟೆಗಳಿಗೂ ಹೆಚ್ಚಿನ ಅವಧಿಯ ಕಂಟೆಂಟ್ ಅನ್ನು ಜೋಡಿಸುತ್ತಾ ಸಾಗುತ್ತಿದೆ ಜಿಯೋ ಹಾಟ್​ಸ್ಟಾರ್.

ಇದನ್ನೂ ಓದಿ:ಒಟಿಟಿಯಲ್ಲಿರೋ ಈ ಅನಿಮೇಟೆಡ್ ಸಿನಿಮಾನ ಮಿಸ್ ಮಾಡಲೇಬೇಡಿ

ಟಿವಿ, ಲ್ಯಾಪ್​ಟಾಪ್, ಮೊಬೈಲ್​ಗಳನ್ನು ಸೇರಿಸಿ ಜಿಯೋ ಹಾಟ್​ಸ್ಟಾರ್​ಗೆ 60 ಕೋಟಿ ಬಳಕೆದಾರರಿದ್ದಾರೆ. ಇವರಲ್ಲಿ 30 ಕೋಟಿ ಬಳಕೆದಾರರು ಹಣ ಕೊಟ್ಟು ಸಬ್​ಸ್ಕ್ರೈಬರ್​​ಗಳಾಗಿ ಕಂಟೆಂಟ್ ನೋಡುವವರಾಗಿದ್ದಾರೆ. ‘ನಾವು ಹಾಟ್​ಸ್ಟಾರ್​ ಜೊತೆಗೆ ಕೈಜೋಡಿಸಿದ್ದು ಅದ್ಭುತವಾದ ಕ್ಷಣ. ನಾವು ಕಂಟೆಂಟ್ ಜೊತೆಗೆ ತಂತ್ರಜ್ಞಾನದ ನೆರವಿನಿಂದ ಅದ್ಭುತವಾದುದನ್ನು ಸಾಧಿಸಿದ್ದೇವೆ’ ಎಂದಿದ್ದಾರೆ. ಅಂದಹಾಗೆ ಮೊದಲನೇ ಸ್ಥಾನದಲ್ಲಿ ನೆಟ್​ಫ್ಲಿಕ್ಸ್​ ಇದೆ. ಎರಡನೇ ಸ್ಥಾನದಲ್ಲಿ ಜಿಯೋ ಹಾಟ್​ಸ್ಟಾರ್ ಇದೆ. ಮೂರನೇ ಸ್ಥಾನದಲ್ಲಿ ಅಮೆಜಾನ್ ಇದೆ.

ಜಿಯೋ ಹಾಟ್​ಸ್ಟಾರ್ ಹಾಲಿವುಡ್​ನ ಸಿನಿಮಾಗಳು, ಅನಿಮೇಷನ್ ಸಿನಿಮಾ, ಡಾಕ್ಯುಮೆಂಟರಿಗಳು, ವೆಬ್ ಸರಣಿಗಳ ಜೊತೆಗೆ ಭಾರತದ ಹಿಂದಿ, ಕನ್ನಡ, ಮಲಯಾಳಂ, ತಮಿಳು, ತೆಲುಗು ಇನ್ನೂ ಕೆಲವು ಭಾಷೆಗಳ ಸಿನಿಮಾ ಹಾಗೂ ವೆಬ್ ಸರಣಿಗಳನ್ನು ಪ್ರದರ್ಶಿಸುತ್ತದೆ. ಇದರ ಜೊತೆಗೆ ಐಪಿಎಲ್ ಸೇರಿದಂತೆ ಕ್ರಿಕೆಟ್ ಹಾಗೂ ಇತರೆ ಕೆಲವು ಕ್ರೀಡೆಗಳನ್ನು ಲೈವ್ ಪ್ರದರ್ಶನ ಮಾಡುತ್ತದೆ. ಕ್ರಿಕೆಟ್ ಪ್ರಸಾರದಿಂದಾಗಿ ಕೋಟ್ಯಂತರ ವೀಕ್ಷಕರು ಜಿಯೋ ಹಾಟ್​​ಸ್ಟಾರ್ ಅನ್ನು ಸಬ್​ಸ್ಕ್ರೈಬ್ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:52 pm, Fri, 29 August 25

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಬಿಡದಿ ಟೌನ್‌ಶಿಪ್‌ ವಿವಾದ: ಕಾನೂನಾತ್ಮಕ ಹೋರಾಟ ಮಾಡ್ತೇವೆ; ಕುಮಾರಸ್ವಾಮಿ
ಬಿಡದಿ ಟೌನ್‌ಶಿಪ್‌ ವಿವಾದ: ಕಾನೂನಾತ್ಮಕ ಹೋರಾಟ ಮಾಡ್ತೇವೆ; ಕುಮಾರಸ್ವಾಮಿ
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ