ಕಂಗನಾ ರಣಾವತ್ (Kangana Ranaut) ಅವರು ಮಾಡಿಕೊಳ್ಳುವ ವಿವಾದಗಳು ಒಂದೆರಡಲ್ಲ. ಅವರನ್ನು ಹೊಗಳುವುದಕ್ಕಿಂತ ಟೀಕೆ ಮಾಡುವವರೇ ಹೆಚ್ಚು. ಈಗ ಅವರು ‘ಲಾಕ್ ಅಪ್’ ಹೆಸರಿನ ಶೋ ಹೋಸ್ಟ್ ಮಾಡುತ್ತಿದ್ದಾರೆ. ಭಾನುವಾರ ಈ ಶೋ ಒಟಿಟಿ ಪ್ಲಾಟ್ಫಾರ್ಮ್ ‘ಆಲ್ಟ್ ಬಾಲಾಜಿ‘ಯಲ್ಲಿ (ALTBalaji)ಪ್ರಸಾರ ಆರಂಭಿಸಿದೆ. 16 ಸೆಲೆಬ್ರಿಟಿಗಳು ಈ ಶೋನ ಸ್ಪರ್ಧಿಗಳಾಗಿ ಆಗಮಿಸಿದ್ದಾರೆ. ಈ ರಿಯಾಲಿಟಿ ಶೋ (Reality Show) ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಆದರೆ, ಆರಂಭದಲ್ಲೇ ಕಂಗನಾ ರಣಾವತ್ ಅಭಿಮಾನಿಗಳಿಂದ ಹಾಗೂ ನೆಟ್ಟಿಗರಿಂದ ತೀವ್ರ ಅವಮಾನ ಎದುರಿಸಿದ್ದಾರೆ. ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗುತ್ತಿದೆ. ಇದಕ್ಕೆ ಕಾರಣವಾಗಿದ್ದು, ‘ಬಿಗ್ ಬಾಸ್’ ರಿಯಾಲಿಟಿ ಶೋ.
ಹಿಂದಿಯಲ್ಲಿ ‘ಬಿಗ್ ಬಾಸ್’ ಶೋ 15 ಸೀಸನ್ಗಳನ್ನು ಪೂರ್ಣಗೊಳಿಸಿದೆ. ವರ್ಷ ಕಳೆದಂತೆ ಈ ಶೋ ತನ್ನ ಚಾರ್ಮ್ ಕಳೆದುಕೊಳ್ಳುತ್ತಿದೆಯಾದರೂ ಒಂದು ವರ್ಗದ ಜನರು ಈ ಶೋಅನ್ನು ಇಷ್ಟಪಡುತ್ತಾರೆ. ಅದರಲ್ಲೂ ಸಲ್ಮಾನ್ ಖಾನ್ ಅವರ ನಿರೂಪಣೆ ಅನೇಕರಿಗೆ ಇಷ್ಟವಾಗುತ್ತದೆ. ಈ ಶೋನಿಂದ ಅನೇಕರ ಬದುಕು ಬದಲಾಗಿದೆ. ಇದರಲ್ಲಿ ಪಾಲ್ಗೊಂಡಿದ್ದ ಅನೇಕ ಸ್ಪರ್ಧಿಗಳು ಈಗ ‘ಲಾಕ್ ಅಪ್’ನಲ್ಲೂ ಇದ್ದಾರೆ. ಬಿಗ್ ಬಾಸ್ನಂತೆ ಇಲ್ಲೂ ಕೆಲವರ ಡ್ರಾಮಾಗಳು ಶುರುವಾಗಿದೆ. ಈ ಕಾರಣಕ್ಕೆ ವೀಕ್ಷಕರು ಈ ರಿಯಾಲಿಟಿ ಶೋಅನ್ನು ಟೀಕಿಸುತ್ತಿದ್ದಾರೆ. ಕಂಗನಾ ನಿರೂಪಕಿಯಂತೆ ಕಾಣುತ್ತಿಲ್ಲ ಎಂದು ವ್ಯಂಗ್ಯವಾಡುತ್ತಿದ್ದಾರೆ.
‘ಕಂಗನಾ ನಿರೂಪಕಿ ಅಲ್ಲ, ಸ್ಪರ್ಧಿಯಂತೆ ಕಾಣಿಸುತ್ತಿದ್ದಾರೆ. ಅವರೇ ಇಲ್ಲಿ ಡ್ರಾಮಾ ಹುಟ್ಟು ಹಾಕುತ್ತಿದ್ದಾರೆ. ನಿಜಕ್ಕೂ ಬೋರಿಂಗ್ ಶೋ’ ಎಂದು ಅಭಿಮಾನಿಯೋರ್ವ ಬರೆದುಕೊಂಡಿದ್ದಾರೆ. ‘ಇದು ಬಿಗ್ ಬಾಸ್ನ ಸಸ್ತಾ ಕಾಪಿ’ ಎಂದು ಬರೆದುಕೊಳ್ಳಲಾಗಿದೆ. ‘ನೆಟ್ಫ್ಲಿಕ್ಸ್ನ ಸ್ಕ್ವಿಡ್ ಗೇಮ್+ಬಿಗ್ ಬಾಸ್= ಲಾಕ್ಅಪ್’ ಎಂದು ಕೆಲವರು ಟೀಕೆ ಮಾಡಿದ್ದಾರೆ.
5 minutes in and i am already bored of the show, Why do i feel like it’s so so scripted & irritating . ?#LockUpp
— ?????♡ (@sapna_heree) February 27, 2022
ಕಂಗನಾ ಇದೇ ಮೊದಲ ಬಾರಿಗೆ ಒಂದು ಶೋಅನ್ನು ನಡೆಸಿಕೊಡುತ್ತಿದ್ದಾರೆ. ಅವರು ನಟನೆಯಲ್ಲಿ ಸಾಕಷ್ಟು ಪಳಗಿದ್ದಾರೆ ನಿಜ. ಆದರೆ, ನಟಿ ಆದ ಮಾತ್ರಕ್ಕೆ ನಿರೂಪಣೆಯಲ್ಲಿ ಯಶಸ್ಸು ಕಾಣಬೇಕೆಂದೇನೂ ಇಲ್ಲ. ಮೊದಲ ಶೋನಲ್ಲೇ ಅವರು ಟೀಕೆ ಎದುರಿಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಅವರಿಗೆ ಈ ಕ್ಷೇತ್ರದಿಂದ ಆಫರ್ ಬರದೆಯೂ ಇರಬಹುದು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
Only thing I dislike about #LockUpp is bringing political conversations on my TL and this safer side of Twitter which was usually apolitical #KaranKundrra
— Vinod Jain ☀️ (@VJ9KRS) February 27, 2022
ಬಿಗ್ ಬಾಸ್ ಮನೆಯ ರೀತಿಯಲ್ಲೇ ಜೈಲ್ ಸೆಟ್ಅನ್ನು ಹಾಕಲಾಗಿದೆ. 16 ಸ್ಪರ್ಧಿಗಳು ಈ ಶೋನಲ್ಲಿ ಇದ್ದು, ಒಟ್ಟು 72 ದಿನಗಳ ಕಾಲ ಈ ರಿಯಾಲಿಟಿ ಶೋ ನಡೆಯಲಿದೆ. ಅಂತಿಮವಾಗಿ ಯಾರು ಇದನ್ನು ಗೆಲ್ಲುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳ ವಲಯದಲ್ಲಿದೆ.
ಇದನ್ನೂ ಓದಿ: ಕಂಗನಾ ಮಾಡಿದ ಟೀಕೆಗೆ ಒಂದೇ ಮಾತಲ್ಲಿ ತಿರುಗೇಟು ನೀಡಿದ ಆಲಿಯಾ; ಶುಕ್ರವಾರವೇ ಭವಿಷ್ಯ ನಿರ್ಧಾರ
ಬದಲಾಯ್ತು ಕಂಗನಾ ಮನಸ್ಸು, ಹುಸಿ ಆಯ್ತು ನಿರೀಕ್ಷೆ; ಆಲಿಯಾ ಸಿನಿಮಾಗೆ ಕಿರಿಕ್ ಕ್ವೀನ್ ಮೆಚ್ಚುಗೆ
Published On - 1:42 pm, Tue, 1 March 22