AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಕೆಗಳ ಮಧ್ಯೆ ಗೆದ್ದ ಕಂಗನಾ ರಣಾವತ್​; ದಾಖಲೆ ವೀಕ್ಷಣೆ ಕಂಡ ‘ಲಾಕಪ್​’ ಶೋ

‘ಲಾಕಪ್​’ ಶೋ 48 ಗಂಟೆಗಳಲ್ಲಿ ಅಂದರೆ, ಎರಡು ದಿನಗಳಲ್ಲಿ 15 ಮಿಲಿಯನ್​ (1.5 ಕೋಟಿ) ವೀಕ್ಷಣೆ ಕಂಡಿದೆ. ಒಟಿಟಿಯಲ್ಲಿ ನೇರವಾಗಿ ಪ್ರಸಾರವಾದ ಯಾವ ಶೋ ಕೂಡ ಇಷ್ಟು ದೊಡ್ಡ ಮಟ್ಟದಲ್ಲಿ ವೀಕ್ಷಣೆ ಕಂಡಿಲ್ಲ ಎಂದು ವರದಿಯಾಗಿದೆ.

ಟೀಕೆಗಳ ಮಧ್ಯೆ ಗೆದ್ದ ಕಂಗನಾ ರಣಾವತ್​; ದಾಖಲೆ ವೀಕ್ಷಣೆ ಕಂಡ ‘ಲಾಕಪ್​’ ಶೋ
ಕಂಗನಾ
TV9 Web
| Edited By: |

Updated on: Mar 03, 2022 | 1:49 PM

Share

ನಟಿ ಕಂಗನಾ ರಣಾವತ್​ (Kangana Ranaut ) ವಿವಾದಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಈಗ ಅವರ ಹೆಗಲಿಗೆ ಒಟಿಟಿ ಶೋನ ನಿರೂಪಣೆಯ ಜವಾಬ್ದಾರಿ ಸಿಕ್ಕಿದೆ. ಆಲ್ಟ್​ಬಾಲಾಜಿ (ALTBalaji ) ಹಾಗೂ ಎಂಕ್ಸ್​ ಪ್ಲೇಯರ್​ನಲ್ಲಿ ಪ್ರಸಾರವಾಗುತ್ತಿರುವ ‘ಲಾಕಪ್​’ (Lock Upp) ಶೋಅನ್ನು ಕಂಗನಾ ನಡೆಸಿಕೊಡುತ್ತಿದ್ದಾರೆ. ಮೊದಲ ದಿನವೇ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು ಕಂಗನಾ. ಈ ಶೋ ಬಿಗ್​ ಬಾಸ್​ನ ಪಡಿಅಚ್ಚು ಎನ್ನುವ ಟೀಕೆಗಳು ಕೂಡ ಕೇಳಿ ಬಂದಿದ್ದವು. ಆದರೆ, ಈ ಟೀಕೆಗಳನ್ನೆಲ್ಲವನ್ನೂ ಈ ಶೋ ಮೆಟ್ಟಿ ನಿಂತಿದೆ. ಮೊದಲ ದಿನವೇ ಈ ಕಾರ್ಯಕ್ರಮ ದಾಖಲೆಯ ವೀಕ್ಷಣೆ ಕಂಡಿದೆ. ಇದು ಕಂಗನಾ ಖುಷಿಯನ್ನು ಹೆಚ್ಚಿಸಿದೆ. ಅಷ್ಟಕ್ಕೂ ಈ ಶೋ ಎಷ್ಟು ವೀಕ್ಷಣೆ ಕಂಡಿದೆ ಎಂಬುದಕ್ಕೆ ಇಲ್ಲಿದೆ ವಿವರ.

ಹಿಂದಿಯಲ್ಲಿ ‘ಬಿಗ್​ ಬಾಸ್​’ ಶೋ 15 ಸೀಸನ್​ಗಳನ್ನು ಪೂರ್ಣಗೊಳಿಸಿದೆ. ವರ್ಷ ಕಳೆದಂತೆ ಈ ಶೋ ತನ್ನ ಚಾರ್ಮ್​ ಕಳೆದುಕೊಳ್ಳುತ್ತಿದೆಯಾದರೂ ಒಂದು ವರ್ಗದ ಜನರು ಈ ಶೋಅನ್ನು ಇಷ್ಟಪಡುತ್ತಾರೆ. ಅದರಲ್ಲೂ ಸಲ್ಮಾನ್​ ಖಾನ್​ ಅವರ ನಿರೂಪಣೆ ಅನೇಕರಿಗೆ ಇಷ್ಟವಾಗುತ್ತದೆ. ಈ ಶೋನಿಂದ ಅನೇಕರ ಬದುಕು ಬದಲಾಗಿದೆ. ಇದರಲ್ಲಿ ಪಾಲ್ಗೊಂಡಿದ್ದ ಅನೇಕ ಸ್ಪರ್ಧಿಗಳು ಈಗ ‘ಲಾಕ್​ ಅಪ್​​’ನಲ್ಲೂ ಇದ್ದಾರೆ. ಬಿಗ್​ ಬಾಸ್​ನಂತೆ ಇಲ್ಲೂ ಕೆಲವರ ಡ್ರಾಮಾಗಳು ಶುರುವಾಗಿದೆ. ಕೆಲವರಿಗೆ ಇದು ಇಷ್ಟವಾಗಿಲ್ಲ. ಆದರೆ, ಒಂದು ವರ್ಗದವರಿಗೆ ಇದು ಇಷ್ಟವಾಗಿದೆ.

‘ಲಾಕಪ್​’ ಶೋ 48 ಗಂಟೆಗಳಲ್ಲಿ ಅಂದರೆ, ಎರಡು ದಿನಗಳಲ್ಲಿ 15 ಮಿಲಿಯನ್​ (1.5 ಕೋಟಿ) ವೀಕ್ಷಣೆ ಕಂಡಿದೆ. ಒಟಿಟಿಯಲ್ಲಿ ನೇರವಾಗಿ ಪ್ರಸಾರವಾದ ಯಾವ ಶೋ ಕೂಡ ಇಷ್ಟು ದೊಡ್ಡ ಮಟ್ಟದಲ್ಲಿ ವೀಕ್ಷಣೆ ಕಂಡಿಲ್ಲ ಎಂದು ವರದಿಯಾಗಿದೆ. ಇದು ಕಂಗನಾ ಖುಷಿಯನ್ನು ಹೆಚ್ಚಿಸಿದೆ.

ಈ ಬಗ್ಗೆ ಬರೆದುಕೊಂಡಿರುವ ಕಂಗನಾ, ‘ನನ್ನ ಶೋಗೆ ಸಿಕ್ಕಿರುವ ಪ್ರತಿಕ್ರಿಯೆಯಿಂದ ನಾನು ಖುಷಿಯಾಗಿದ್ದೇನೆ. ಇದೊಂದು ವಿಶಿಷ್ಟ ಪರಿಕಲ್ಪನೆಯ ವಿಭಿನ್ನ ಕಾರ್ಯಕ್ರಮ. ವೀಕ್ಷಕರು ನೀಡಿದ ಪ್ರೀತಿಯನ್ನು ನೋಡಿ ನನಗೆ ತುಂಬಾ ಖುಷಿಯಾಗಿದೆ’ ಎಂದು ಕಂಗನಾ ಹೇಳಿದ್ದಾರೆ. ಈ ಶೋ ಬಿಗ್​ ಬಾಸ್​ಗಿಂತಲೂ ಚೆನ್ನಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ.

ಟೀಕೆಗೆ ಒಳಗಾಗಿದ್ದ ಕಂಗನಾ..

‘ಲಾಕಪ್​’ ಶೋನ ಆರಂಭದಲ್ಲೇ ​ ಅಭಿಮಾನಿಗಳಿಂದ ಹಾಗೂ ನೆಟ್ಟಿಗರಿಂದ ಕಂಗನಾ ರಣಾವತ್ ತೀವ್ರ ಅವಮಾನ ಎದುರಿಸಿದ್ದರು. ಅವರನ್ನು ಹಿಗ್ಗಾಮುಗ್ಗಾ ಟ್ರೋಲ್​ ಮಾಡಲಾಗಿತ್ತು. ‘ಕಂಗನಾ ನಿರೂಪಕಿ ಅಲ್ಲ, ಸ್ಪರ್ಧಿಯಂತೆ ಕಾಣಿಸುತ್ತಿದ್ದಾರೆ. ಅವರೇ ಇಲ್ಲಿ ಡ್ರಾಮಾ ಹುಟ್ಟು ಹಾಕುತ್ತಿದ್ದಾರೆ. ನಿಜಕ್ಕೂ ಬೋರಿಂಗ್​ ಶೋ’ ಎಂದು ಅಭಿಮಾನಿಯೋರ್ವ ಬರೆದುಕೊಂಡಿದ್ದರು. ‘ಇದು ಬಿಗ್​ ಬಾಸ್​ನ ಸಸ್ತಾ ಕಾಪಿ’ ಎಂದು ಬರೆದುಕೊಳ್ಳಲಾಗಿತ್ತು. ‘ನೆಟ್​ಫ್ಲಿಕ್ಸ್​​ನ​ ಸ್ಕ್ವಿಡ್​ ಗೇಮ್​+ಬಿಗ್​ ಬಾಸ್​= ಲಾಕ್​ಅಪ್​’ ಎಂದು ಕೆಲವರು ಟೀಕೆ ಮಾಡಿದ್ದರು.

ಇದನ್ನೂ ಓದಿ: ಬಾಲಿವುಡ್​ನ​ ಈ ಹೀರೋ ಈಗಲೂ ನನ್ನನ್ನು ಮಗುವಿನಂತೆ ಕಾಣುತ್ತಾರೆ ಎಂದ ಆಲಿಯಾ ಭಟ್​

ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟ ಸಂಜಯ್​ ಮಗಳು; ಕರಣ್​ ಹೆಗಲಿದೆ ಹೊಸ ಜವಾಬ್ದಾರಿ

Follow Us
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ