‘ಕಾಂತಾರ’ 50 ದಿನ ಪೂರೈಸಿದ ಬೆನ್ನಲ್ಲೇ ಹೊರಬಿತ್ತು ಒಟಿಟಿ ರಿಲೀಸ್ ದಿನಾಂಕ

'ಕಾಂತಾರ' ಚಿತ್ರ ನ. 24ರಂದು ಅಮೆಜಾನ್ ಪ್ರೈಮ್​ನಲ್ಲಿ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ. ಆದರೆ ಚಿತ್ರತಂಡ ಈ ಕುರಿತಾಗಿ ಯಾವ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

‘ಕಾಂತಾರ’ 50 ದಿನ ಪೂರೈಸಿದ ಬೆನ್ನಲ್ಲೇ ಹೊರಬಿತ್ತು ಒಟಿಟಿ ರಿಲೀಸ್ ದಿನಾಂಕ
Kantara
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Nov 19, 2022 | 6:30 AM

ಒಂದಿಲ್ಲೊಂದು ವಿಚಾರಕ್ಕೆ ‘ಕಾಂತಾರ’ (Kantara) ಚಿತ್ರ ಸುದ್ದಿ ಆಗುತ್ತಲೇ ಇದೆ. ಈ ಚಿತ್ರ ಹಲವು ದಾಖಲೆಗಳನ್ನು ಪೀಸ್​ ಪೀಸ್ ಮಾಡಿ ಮುನ್ನುಗುತ್ತಿದೆ. ಇಂದಿಗೆ ‘ಕಾಂತಾರ’ ಕನ್ನಡದಲ್ಲಿ ಬಿಡುಗಡೆಯಾಗಿ 50 ದಿನ ಪೂರ್ಣಗೊಂಡಿದೆ​. ಈ ಚಿತ್ರ ಒಟ್ಟಾರೆ 300 ಕೋಟಿಗೂ ಅಧಿಕ ಗಳಿಕೆ ಮಾಡಿದೆ ಎಂದು ಬಾಕ್ಸ್ ಆಫೀಸ್ ಪಂಡಿತರು ಲೆಕ್ಕ ನೀಡಿದ್ದಾರೆ. ‘ಕೆಜಿಎಫ್​ 2’ (KGF 2) ಮಾಡಿದ್ದ ಹಲವು ದಾಖಲೆಗಳನ್ನು ‘ಕಾಂತಾರ’ ಮುರಿದಿದೆ. ‘ಕಾಂತಾರ’ ಚಿತ್ರದ ಒಟ್ಟಾರೆ ಮೇಕಿಂಗ್, ದಕ್ಷಿಣ ಕನ್ನಡ ಸೊಗಡು, ಕಂಬಳ ಮತ್ತು ಪ್ರಮುಖವಾಗಿ ಭೂತ ಕೋಲ ವಿಷಯ ಜನರಿಗೆ ಇಷ್ಟವಾಗಿದೆ. ಜೊತೆಗೆ ನಿರ್ದೇಶಕ ರಿಷಬ್​ ಶೆಟ್ಟಿ, ನಟಿ ಸಪ್ತಮಿ ಗೌಡ ಅಭಿನಯವನ್ನು ಅಭಿಮಾನಿಗಳು ಮೆಚ್ಚಿಕೊಂಡರು. ‘ಕಾಂತಾರ’ ಚಿತ್ರ ಕನ್ನಡದಲ್ಲಿ ರಿಲೀಸ್ ಆದ ಬಳಿಕ ಪರಭಾಷೆಯಲ್ಲಿ ಬೇಡಿಕೆ ಹೆಚ್ಚಾಗತೊಡಗಿತು. ಬಳಿಕ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಿಗೂ ಡಬ್ ಆಗಿ ಅಲ್ಲಿಯೂ ಸಿನಿಮಾ ಧೂಳೆಬ್ಬಿಸಿದೆ.

‘ಕಾಂತಾರ’ ನೋಡಿದ ಪ್ರತಿಯೊಬ್ಬರು ಚಿತ್ರವನ್ನು ಹೊಗಳಿದರು . ಈ ಚಿತ್ರವನ್ನು ಪದೇಪದೇ ನೋಡಬೇಕು ಎಂದು ಪ್ಲ್ಯಾನ್ ಹಾಕಿದವರಿಗೆ ಸಿಹಿ ಸುದ್ದಿ ಇದೆ. ‘ಕಾಂತಾರ’ ಚಿತ್ರ ನ. 4ರಂದು ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆ ಆಗಲಿದೆ ಎಂದು ವರದಿ ಆಗಿತ್ತು. ಆ ಸಮಯದಲ್ಲಿ ಸಿನಿಮಾ ಥಿಯೇಟರ್​ಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿತ್ತು. ಒಮ್ಮೆ ನೋಡಿದವರು ಮತ್ತೊಮ್ಮೆ, ಮತ್ತೊಮ್ಮೆ ನೋಡಿದರು ಇನ್ನೊಮ್ಮೆ ಎಂದು ಜನರು ಥಿಯೇಟರ್​​ಗಳಿಗೆ ಬರುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ಓಟಿಟಿ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿತ್ತು.

ನ. 24ರಂದು ಓಟಿಟಿಯಲ್ಲಿ ‘ಕಾಂತಾರ’ ರಿಲೀಸ್? 

ಕೆಲ ಮೂಲಗಳ ಪ್ರಕಾರ ‘ಕಾಂತಾರ’ ಚಿತ್ರ ನ. 24ರಂದು ಅಮೇಜಾನ್ ಪ್ರೈಮ್​ನಲ್ಲಿ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ. ಆದರೆ ನಿರ್ಮಾಣ ಸಂಸ್ಥೆ ಅಥವಾ ಅಮೇಜಾನ್​ ಪ್ರೈಮ್ ವಿಡಿಯೋದಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಸದ್ಯ ಸಿನಿಮಾ 50 ದಿನ ಪೂರೈಸಿದ ಹೊರತಾಗಿಯೂ ಅನೇಕರು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಚಿತ್ರದ ಕಲೆಕ್ಷನ್ ಒಳ್ಳೆಯ ರೀತಿಯಲ್ಲೇ ಆಗುತ್ತಿದೆ. ಹೀಗಾಗಿ,  ಈ ಹಿಂದಿನಂತೆ ಈಬಾರಿಯೂ ಒಟಿಟಿ ರಿಲೀಸ್ ದಿನಾಂಕ ಮತ್ತೆ ಮುಂದೂಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

‘ಹೊಂಬಾಳೆ ಫಿಲ್ಮ್ಸ್’​​​​ನ ಮುಂದಿನ ಚಿತ್ರಗಳು 

ಐದು ಪ್ರಮುಖ ಭಾಷೆಗಳ ಸಿನಿಮಾಗಳನ್ನು ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆ ನಿರ್ಮಿಸುತ್ತಿದೆ. ಜಗ್ಗೇಶ್ ಅಭಿನಯದ ‘ರಾಘವೇಂದ್ರ ಸ್ಟೋರ್ಸ್’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಶ್ರೀಮುರಳಿ ನಟನೆಯ ‘ಬಘೀರ’ ಚಿತ್ರಕ್ಕೆ ಶೂಟಿಂಗ್ ನಡೆಯುತ್ತಿದೆ. ರಕ್ಷಿತ್ ಅಭಿನಯದ ಮತ್ತು ನಿರ್ದೇಶನದ ‘ರಿಚರ್ಡ್ ಆಂಟೋನಿ’ ಮತ್ತು ಯುವ ರಾಜ್​ಕುಮಾರ್​​ ಅಭಿನಯದ ಹೊಸ ಸಿನಿಮಾ ಸದ್ಯದಲ್ಲೇ ಶುರುವಾಗಲಿವೆ. ಇವಿಷ್ಟು ಸದ್ಯಕ್ಕಿರುವ ಕನ್ನಡ ಚಿತ್ರಗಳು.

ಮತ್ತಷ್ಟು ಮನರಂಜನೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ