ಸಿನಿಮಾ ಬಿಟ್ಟು ವೆಬ್ ಸರಣಿ ನಿರ್ದೇಶಸಲು ಮುಂದಾದ ಕರಣ್, ಸಿನಿಮಾಕ್ಕಿಂತಲೂ ದೊಡ್ಡ ಬಜೆಟ್

Karan Johar: ‘ಕುಚ್ ಕುಚ್ ಹೋತಾ ಹೈ’, ‘ಕಭಿ ಖುಷಿ ಕಭಿ ಗಮ್’ ಇನ್ನೂ ಕೆಲವು ಐಕಾನಿಕ್ ಸಿನಿಮಾಗಳ ನಿರ್ದೇಶಿಸಿರುವ ಕರಣ್ ಜೋಹರ್ ಮೊದಲ ಬಾರಿಗೆ ವೆಬ್ ಸರಣಿ ನಿರ್ದೇಶಿಸಲು ಮುಂದಾಗಿದ್ದಾರೆ. ಕರಣ್ ನಿರ್ದೇಶನದ ವೆಬ್ ಸರಣಿ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಲಿದೆ.

ಸಿನಿಮಾ ಬಿಟ್ಟು ವೆಬ್ ಸರಣಿ ನಿರ್ದೇಶಸಲು ಮುಂದಾದ ಕರಣ್, ಸಿನಿಮಾಕ್ಕಿಂತಲೂ ದೊಡ್ಡ ಬಜೆಟ್
Follow us
ಮಂಜುನಾಥ ಸಿ.
|

Updated on: Sep 22, 2024 | 9:13 AM

ಒಟಿಟಿ ಬಂದ ಆರಂಭದಲ್ಲಿ ಭಾರತೀಯ ಚಿತ್ರರಂಗದ ಯಾರೂ ಅದರ ಶಕ್ತಿ, ಪ್ರಭಾವದ ಬಗ್ಗೆ ಊಹೆ ಮಾಡಿರಲಿಲ್ಲ. ಆದರೆ ತೀರ ಕೆಲವರಷ್ಟೆ ಒಟಿಟಿಗಾಗಿ ಬಹಳ ಮುಂಚೆಯೇ ಕಂಟೆಂಟ್ ಮಾಡಲು ಆರಂಭಿಸಿದ್ದರು. ಆದರೆ ಇತ್ತೀಚೆಗೆ ದೊಡ್ಡ ಸ್ಟಾರ್ ನಟರು, ಸ್ಟಾರ್ ನಿರ್ದೇಶಕರುಗಳು ಸಹ ಒಟಿಟಿಗಾಗಿ ಕಂಟೆಂಟ್ ಮಾಡಲು ನಾಮುಂದು-ತಾ ಮುಂದೆ ಎಂದು ಬರುತ್ತಿದ್ದಾರೆ. ಬಾಲಿವುಡ್​ನ ಸ್ಟಾರ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಇತ್ತೀಚೆಗಷ್ಟೆ ‘ಹೀರಾಮಂಡಿ’ ಹೆಸರಿನ ವೆಬ್ ಸರಣಿಯನ್ನು ನೆಟ್​ಫ್ಲಿಕ್ಸ್​ಗಾಗಿ ನಿರ್ದೇಶನ ಮಾಡಿದ್ದಾರೆ. ಇದೀಗ ಅದೇ ಹಾದಿಯನ್ನು ಹಿಡಿದಿದ್ದಾರೆ ಬಾಲಿವುಡ್​ನ ಮತ್ತೊಬ್ಬ ಬಡಾ ನಿರ್ದೇಶಕ ಕರಣ್ ಜೋಹರ್.

‘ಕುಚ್ ಕುಚ್ ಹೋತಾ ಹೈ’, ‘ಕಭಿ ಖುಷಿ ಕಭಿ ಗಮ್’, ‘ಸ್ಟುಡೆಂಟ್ ಆಫ್ ದಿ ಇಯರ್’, ‘ಏ ದಿಲ್ ಹೆ ಮುಷ್ಕಿಲ್’ ಇನ್ನೂ ಕೆಲವು ಐಕಾನಿಕ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಕರಣ್ ಜೋಹರ್ ಇದೀಗ ವೆಬ್ ಸರಣಿ ನಿರ್ದೇಶನ ಮಾಡಲು ಮುಂದಾಗಿದ್ದಾರೆ. ತಮ್ಮ ಸಿನಿಮಾಗಳಿಗೆ ಹಾಕುವ ಬಂಡವಾಳಕ್ಕಿಂತಲೂ ದೊಡ್ಡ ಬಂಡವಾಳವನ್ನು ವೆಬ್ ಸರಣಿ ಮೇಲೆ ಕರಣ್ ಹೂಡಿಕೆ ಮಾಡುತ್ತಿದ್ದಾರೆ. ಈ ವೆಬ್ ಸರಣಿಯನ್ನು ನೆಟ್​ಫ್ಲಿಕ್ಸ್​ಗಾಗಿ ಕರಣ್ ನಿರ್ದೇಶನ ಮಾಡುತ್ತಿದ್ದು, ಮುಂಚಿತವಾಗಿಯೇ ಕರಣ್ ಹಾಗೂ ನೆಟ್​ಫ್ಲಿಕ್ಸ್ ನಡುವೆ ಒಪ್ಪಂದ ಆಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:‘ಚಿತ್ರರಂಗ ಬಿಟ್ಟು ಹೋಗು ಅಂದಿದ್ದರು’: ಕರಣ್ ಜೋಹರ್, ಕೇತನ್ ಮೆಹ್ತಾ ಮೇಲೆ ಕಂಗನಾ ಆರೋಪ

ಕರಣ್ ಜೋಹರ್ ನಿರ್ದೇಶನ ಮಾಡುತ್ತಿರುವ ವೆಬ್ ಸರಣಿ, ಮಹಿಳಾ ಪ್ರಧಾನ ವೆಬ್ ಸರಣಿಯಾಗಿದ್ದು, ಈ ವೆಬ್ ಸರಣಿಯಲ್ಲಿ ಬಾಲಿವುಡ್​ನ ಹಲವು ಸ್ಟಾರ್ ನಟಿಯರು ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್​ನ ಹಿರಿಯ ನಟಿಯರಿಂದ ಹಿಡಿದು ಯುವ ನಟಿಯರಾದ ಜಾನ್ಹವಿ, ಅನನ್ಯಾ ಇನ್ನೂ ಕೆಲವು ನಟಿಯರು ಸಹ ಈ ವೆಬ್ ಸರಣಿಯಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ವೆಬ್ ಸರಣಿಯ ಚಿತ್ರೀಕರಣ ಶೀಘ್ರವೇ ಪ್ರಾರಂಭವಾಗಲಿದ್ದು, ಕರಣ್​ ಪಾಲಿಗೆ ಇದು ಮೊದಲ ವೆಬ್ ಸರಣಿ ಆಗಿರಲಿದೆ.

ಕರಣ್ ಜೊಹರ್ ನಿರ್ದೇಶನಕ್ಕಿಂತಲೂ, ಸಿನಿಮಾ ನಿರ್ಮಾಣ ಮತ್ತು ವಿತರಣೆಗೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಇದೀಗ ಕರಣ್ ಜೋಹರ್ ನಿರ್ಮಾಣ ಮಾಡಿರುವ ‘ಜಿಗರ’ ಸಿನಿಮಾ ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ. ಈ ಸಿನಿಮಾದಲ್ಲಿ ಆಲಿಯಾ ಭಟ್ ನಾಯಕಿ. ಆಕ್ಷನ್ ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಸಿನಿಮಾದ ಟ್ರೈಲರ್ ಗಮನ ಸೆಳೆಯುತ್ತಿದೆ. ನಿರ್ಮಾಣದ ಜೊತೆಗೆ ದಕ್ಷಿಣದ ಕೆಲವು ದೊಡ್ಡ ಬಜೆಟ್ ಸಿನಿಮಾಗಳನ್ನು ಬಾಲಿವುಡ್​ನಲ್ಲಿ ವಿತರಣೆ ಸಹ ಮಾಡುತ್ತಾರೆ ಕರಣ್ ಜೋಹರ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನವಿ ಮುಂಬೈನಲ್ಲಿ ಏಷ್ಯಾದ 2ನೇ ದೊಡ್ಡ ಇಸ್ಕಾನ್ ದೇವಾಲಯ ಉದ್ಘಾಟಿಸಿದ ಮೋದಿ
ನವಿ ಮುಂಬೈನಲ್ಲಿ ಏಷ್ಯಾದ 2ನೇ ದೊಡ್ಡ ಇಸ್ಕಾನ್ ದೇವಾಲಯ ಉದ್ಘಾಟಿಸಿದ ಮೋದಿ
ದೇವರಾಜ ಮಾರ್ಕೆಟ್ ಡೆಮಾಲಿಶ್ ಮಾಡಲು ನ್ಯಾಯಾಲಯ ಆದೇಶಿಸಿದೆ: ಮಹದೇವಪ್ಪ
ದೇವರಾಜ ಮಾರ್ಕೆಟ್ ಡೆಮಾಲಿಶ್ ಮಾಡಲು ನ್ಯಾಯಾಲಯ ಆದೇಶಿಸಿದೆ: ಮಹದೇವಪ್ಪ
ಮಹಾಕುಂಭದಲ್ಲಿ ಭಕ್ತಸಾಗರ; ಕಣ್ಸೆಳೆಯುತ್ತಿದೆ ವಿಹಂಗಮ ನೋಟ
ಮಹಾಕುಂಭದಲ್ಲಿ ಭಕ್ತಸಾಗರ; ಕಣ್ಸೆಳೆಯುತ್ತಿದೆ ವಿಹಂಗಮ ನೋಟ
ನಾಳೆಯಲ್ಲ, ಮುಂದಿನ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಮಂಡನೆ: ಸಿದ್ದರಾಮಯ್ಯ
ನಾಳೆಯಲ್ಲ, ಮುಂದಿನ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಮಂಡನೆ: ಸಿದ್ದರಾಮಯ್ಯ
ಹಿಂದೆ ಇಂದಿರಾ ಗಾಂಧಿಯನ್ನು ಇಬ್ರಾಹಿಂ ಅವಾಚ್ಯ ಪದಗಳಿಂದ ನಿಂದಿಸಿದ್ದರು:ಶಾಸಕ
ಹಿಂದೆ ಇಂದಿರಾ ಗಾಂಧಿಯನ್ನು ಇಬ್ರಾಹಿಂ ಅವಾಚ್ಯ ಪದಗಳಿಂದ ನಿಂದಿಸಿದ್ದರು:ಶಾಸಕ
Video: ಆಟೋ ಚಾಲಕನನ್ನು ಥಳಿಸಿದ ಮಹಿಳೆ
Video: ಆಟೋ ಚಾಲಕನನ್ನು ಥಳಿಸಿದ ಮಹಿಳೆ
ಪಕ್ಷದಲ್ಲಿ ತಿಕ್ಕಾಟ ಇದ್ದೇ ಇರುತ್ತದೆ, ಅದರೆ ಅನ್ಯೋನ್ಯವಾಗಿದ್ದೇವೆ: ಶಾಸಕ
ಪಕ್ಷದಲ್ಲಿ ತಿಕ್ಕಾಟ ಇದ್ದೇ ಇರುತ್ತದೆ, ಅದರೆ ಅನ್ಯೋನ್ಯವಾಗಿದ್ದೇವೆ: ಶಾಸಕ
ತೆರಿಗೆ ಹಣ ಸಂಗ್ರಹದಲ್ಲೂ ಸರ್ಕಾರ ಭಾರೀ ಹಿಂದೆ ಬಿದ್ದಿದೆ: ಕುಮಾರಸ್ವಾಮಿ
ತೆರಿಗೆ ಹಣ ಸಂಗ್ರಹದಲ್ಲೂ ಸರ್ಕಾರ ಭಾರೀ ಹಿಂದೆ ಬಿದ್ದಿದೆ: ಕುಮಾರಸ್ವಾಮಿ
ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ
ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ
ಪ್ರಭಾಕರ್ ಜೊತೆ ಸರಿಗಮ ವಿಜಿಗೆ ಇತ್ತು ಒಳ್ಳೆಯ ಒಡನಾಟ
ಪ್ರಭಾಕರ್ ಜೊತೆ ಸರಿಗಮ ವಿಜಿಗೆ ಇತ್ತು ಒಳ್ಳೆಯ ಒಡನಾಟ