ನಟಿ ರವೀನಾ ಟಂಡನ್ (Raveena Tandon) ಅವರು ಬಾಲಿವುಡ್ನ ಬಹುಬೇಡಿಕೆಯ ಕಲಾವಿದೆ. 90ರ ದಶಕದಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಅವರು ಒಪ್ಪಿಕೊಳ್ಳುತ್ತಿದ್ದರು. ಪ್ರತಿ ವರ್ಷ ಐದಾರು ಚಿತ್ರಗಳಲ್ಲಿ ನಟಿಸುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರು ಸಖತ್ ಚ್ಯೂಸಿ ಆಗಿದ್ದಾರೆ. ತಮ್ಮ ಈಗಿನ ಇಮೇಜ್ಗೆ ಸರಿಹೊಂದುವಂತಹ ಪಾತ್ರಗಳನ್ನು ಮಾತ್ರ ರವೀನಾ ಟಂಡನ್ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆ ಪೈಕಿ ‘ಕೆಜಿಎಫ್: ಚಾಪ್ಟರ್ 2’ (KGF 2) ಸಿನಿಮಾ ಬಹಳ ನಿರೀಕ್ಷೆ ಮೂಡಿಸಿದೆ. ಆದರೆ ಆ ಚಿತ್ರ ಬಿಡುಗಡೆ ಆಗುವುದಕ್ಕೂ ಮುನ್ನವೇ ಅಭಿಮಾನಿಗಳನ್ನು ವಿಶ್ವಾದ್ಯಂತ ರಂಜಿಸಲು ರವೀನಾ ಟಂಡನ್ ಬರುತ್ತಿದ್ದಾರೆ. ಆದರೆ ಚಿತ್ರಮಂದಿರದಲ್ಲಿ ಅಲ್ಲ, ಓಟಿಟಿಯಲ್ಲಿ ಎಂಬುದು ವಿಶೇಷ. ಅವರು ನಟಿಸಿದ ಮೊದಲ ವೆಬ್ ಸಿರೀಸ್ ‘ಅರಣ್ಯಕ್’ (Aranyak) ಈಗ ಬಿಡುಗಡೆಗೆ ಸಜ್ಜಾಗಿದೆ. ಡಿ.10ರಂದು ನೆಟ್ಫ್ಲಿಕ್ಸ್ (Netflix) ಮೂಲಕ ಇದು ಬಿಡುಗಡೆ ಆಗಲಿದೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಇಷ್ಟುಹೊತ್ತಿಗಾಗಲೇ ಬಿಡುಗಡೆ ಆಗಿರಬೇಕಿತ್ತು. ರವೀನಾ ಟಂಡನ್ ನಿಭಾಯಿಸಿರುವ ರಮಿಕಾ ಸೇನ್ ಪಾತ್ರ ಧೂಳೆಬ್ಬಿಸಿರಬೇಕಿತ್ತು. ಆದರೆ ಕೊರೊನಾ ವೈರಸ್ ಕಾರಣದಿಂದ ‘ಕೆಜಿಎಫ್ 2’ ಚಿತ್ರದ ಕೆಲಸಗಳು ತಡವಾದ್ದರಿಂದ ಸಿನಿಮಾ ಬಿಡುಗಡೆ ದಿನಾಂಕ ಕೂಡ ಮುಂದೂಡಲ್ಪಟ್ಟಿತು. ಆ ಚಿತ್ರ ರಿಲೀಸ್ ಆಗುವುದಕ್ಕೂ ಮುನ್ನವೇ ಬೇರೊಂದು ಅವತಾರದಲ್ಲಿ ರವೀನಾ ಟಂಡನ್ ಕಾಣಿಸಿಕೊಂಡಿರುವ ‘ಅರಣ್ಯಕ್’ ವೆಬ್ ಸರಣಿ ಬಿಡುಗಡೆ ಆಗುತ್ತಿದೆ.
ಡಿ.10ರಂದು ರಿಲೀಸ್ ಆಗಲಿರುವ ‘ಅರಣ್ಯಕ್’ ಹೇಗಿರಲಿದೆ ಎಂಬುದರ ಝಲಕ್ ತೋರಿಸಲು ಈಗ ಟೀಸರ್ ಬಿಡುಗಡೆ ಆಗಿದೆ. ಭಯಾನಕವಾದ ಒಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಈ ವೆಬ್ ಸರಣಿ ಹೊಂದಿರಲಿದೆ. ಇದರಲ್ಲಿ ರವೀನಾ ಟಂಡನ್ ಅವರಿಗೆ ಪೊಲೀಸ್ ಅಧಿಕಾರಿ ಪಾತ್ರ ಇದೆ. ಅನುಮಾನಾಸ್ಪದವಾಗಿ ಕಾಡಿನಲ್ಲಿ ನಡೆಯುವ ಕೊಲೆಗಳ ರಹಸ್ಯವನ್ನು ಭೇದಿಸುವ ಅಧಿಕಾರಿಯಾಗಿ ಅವರು ಕಾಣಿಸಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ಈ ಟೀಸರ್ ಮೂಲಕ ಬಿಟ್ಟುಕೊಡಲಾಗಿದೆ.
Ek aisi kahaani jiske piche chupe hain kayi aur kahaaniyaan. Jaanna chahte hain aap?
Watch #Aranyak on December 10, only on Netflix. #AranyakOnNetflix@NetflixIndia @ashutoshrana10 @paramspeak @zakirhussain9 @meghna1malik #CharuduttAcharya #SiddharthRoyKapur @rohansippy pic.twitter.com/ZL2aZjj5Av— Raveena Tandon (@TandonRaveena) November 9, 2021
ಬಾಲಿವುಡ್ನ ಅನೇಕ ಸ್ಟಾರ್ ಕಲಾವಿದರು ವೆಬ್ ಸಿರೀಸ್ಗಳಲ್ಲಿ ನಟಿಸಿ ಭಾರಿ ಜನಮೆಚ್ಚುಗೆ ಪಡೆದುಕೊಂಡಿದ್ದಾರೆ. ಸೈಫ್ ಅಲಿ ಖಾನ್, ಅಭಿಷೇಕ್ ಬಚ್ಚನ್, ನವಾಜುದ್ದೀನ್ ಸಿದ್ದಿಕಿ, ರಾಧಿಕಾ ಆಪ್ಟೆ ಮುಂತಾದ ಕಲಾವಿದರಿಗೆ ವೆಬ್ ಸರಣಿಗಳು ಕೈ ಹಿಡಿದಿವೆ. ಈಗ ‘ಅರಣ್ಯಕ್’ ಮೂಲಕ ಓಟಿಟಿ ವೇದಿಕೆಯಲ್ಲಿ ರವೀನಾ ಟಂಡನ್ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ಇದರಲ್ಲಿ ಅವರ ಜೊತೆ ಪರಂಬ್ರತ ಚಟರ್ಜಿ, ಆಶುತೋಶ್ ರಾಣಾ, ಮೇಘನಾ ಮಲಿಕ್, ಜಾಕಿರ್ ಹುಸೇನ್ ಮುಂತಾದವರು ನಟಿಸಿದ್ದಾರೆ. ರೋಹನ್ ಸಿಪ್ಪಿ ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ:
ಮೋಹನ್ಲಾಲ್ ‘ಮರಕ್ಕರ್’ ಚಿತ್ರದ ಕ್ರಾಂತಿಕಾರಕ ನಿರ್ಧಾರ; ‘ಆರ್ಆರ್ಆರ್’, ‘ಕೆಜಿಎಫ್ 2’ ಭವಿಷ್ಯವೇನು?
‘ಸಲಗ’ ಬಗ್ಗೆ ಹಬ್ಬಿದೆ ಸುಳ್ಳು ಸುದ್ದಿ; ಓಟಿಟಿ ರಿಲೀಸ್ ಕುರಿತು ದುನಿಯಾ ವಿಜಯ್ ಸ್ಪಷ್ಟನೆ