ಕರಣ್​ ಜೋಹರ್ ವರ್ತನೆಗೆ ಕಾಜೋಲ್ ಅಸಮಾಧಾನ; ‘ಕಾಫಿ ವಿತ್​ ಕರಣ್​’ ಶೋನಲ್ಲಿ ನಡೆದಿದ್ದೇನು?

|

Updated on: Nov 30, 2023 | 2:48 PM

‘ಕಾಫಿ ವಿತ್​ ಕರಣ್​’ ಶೋನಲ್ಲಿ ಒಂದಲ್ಲಾ ಒಂದು ವಿವಾದ ಆಗೋದು ಗ್ಯಾರಂಟಿ. ಪ್ರತಿ ಬಾರಿಯೂ ಕರಣ್​ ಜೋಹರ್​ ಅವರು ವಿವಾದಾತ್ಮಕ ಪ್ರಶ್ನೆ ಕೇಳುತ್ತಾರೆ. ಈ ಬಾರಿ ಅವರು ‘ಅನ್​ಪ್ರೊಫೆಷನಲ್​’ ಆಗಿ ನಡೆದುಕೊಂಡಿದ್ದಾರೆ ಅಂತ ನಟಿ ಕಾಜೋಲ್​ ಆರೋಪಿಸಿದ್ದಾರೆ ಎಂದು ವರದಿ ಆಗಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಕರಣ್​ ಜೋಹರ್ ವರ್ತನೆಗೆ ಕಾಜೋಲ್ ಅಸಮಾಧಾನ; ‘ಕಾಫಿ ವಿತ್​ ಕರಣ್​’ ಶೋನಲ್ಲಿ ನಡೆದಿದ್ದೇನು?
ಕರಣ್​ ಜೋಹರ್​, ಕಾಜೋಲ್​
Follow us on

ನಿರ್ಮಾಪಕ, ನಿರ್ದೇಶಕ, ನಿರೂಪಕ ಕರಣ್​ ಜೋಹರ್​ (Karan Johar) ಅವರಿಗೆ ಬಾಲಿವುಡ್​ನಲ್ಲಿ ಬಹುತೇಕ ಎಲ್ಲರ ಜೊತೆ ಸ್ನೇಹ ಇದೆ. ಅನೇಕರಿಗೆ ಅವರೇ ಗಾಡ್​ ಫಾದರ್​. ಕಾಜೋಲ್​ ಜೊತೆ ಅವರು ಹಲವು ವರ್ಷಗಳಿಂದ ಸ್ನೇಹ ಹೊಂದಿದ್ದಾರೆ. ಈಗ ಕಾಜೋಲ್ ಅವರು ‘ಕಾಫಿ ವಿತ್​ ಕರಣ್​’ (Koffee With Karan) ಶೋಗೆ ಅತಿಥಿಯಾಗಿ ಆಗಮಿಸಿದ್ದಾರೆ. ಈ ವೇಳೆ ಕರಣ್​ ಜೋಹರ್​ ನಡೆದುಕೊಂಡ ರೀತಿ ಕಾಜೋಲ್​ಗೆ ಇಷ್ಟ ಆಗಿಲ್ಲ. ಹಾಗಾಗಿ ಅವರು ನೇರವಾಗಿ ಟೀಕೆ ಮಾಡಿದ್ದಾರೆ ಎನ್ನಲಾಗಿದೆ. ಇದಕ್ಕೆಲ್ಲ ಕಾರಣ ಆಗಿರುವುದು ರಣವೀರ್​ ಸಿಂಗ್​! ಈ ವಿಷಯದಲ್ಲಿ ರಣವೀರ್​ ಸಿಂಗ್​ (Ranveer Singh) ಯಾಕೆ ಬಂದ್ರು? ಅದಕ್ಕೆ ಇಲ್ಲಿದೆ ಉತ್ತರ..

‘ಕಾಫಿ ವಿತ್​ ಕರಣ್​’ ಕಾರ್ಯಕ್ರಮದ ಲೇಟೆಸ್ಟ್​ ಸಂಚಿಕೆಗೆ ರಾಣಿ ಮುಖರ್ಜಿ ಮತ್ತು ಕಾಜೋಲ್​ ಅವರು ಜೊತೆಯಾಗಿ ಬಂದಿದ್ದಾರೆ. ಈ ವೇಳೆ ಕರಣ್​ ಜೋಹರ್​ಗೆ ರಣವೀರ್​ ಸಿಂಗ್​ ಕಡೆಯಿಂದ ಫೋನ್​ ಕರೆ ಬಂದಿದೆ. ಕಾರ್ಯಕ್ರಮದ ಶೂಟಿಂಗ್​ ನಡುವೆ ಕರೆ ಸ್ವೀಕರಿಸಿದ ಕರಣ್​ ಜೋಹರ್​ ಅವರು ಬಹಳ ಹೊತ್ತು ಮಾತನಾಡಿದ್ದಾರೆ. ಇದರಿಂದ ರಾಣಿ ಮುಖರ್ಜಿ ಮತ್ತು ಕಾಜೋಲ್​ ಕಾಯುವಂತಾಗಿದೆ. ಕರಣ್​ ಜೋಹರ್​ ಅವರ ಈ ವರ್ತನೆಯನ್ನು ಕಾಜೋಲ್​ ಅವರು ‘ಅನ್​ಪ್ರೊಫೆಷನಲ್​’ ಎಂದು ಕರೆದಿದ್ದಾರೆ. ಅಲ್ಲದೇ, ಅವರು ಕೂಗಾಡಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.

ಇದನ್ನೂ ಓದಿ: Kajol Viral Video: ಕ್ಯಾಮೆರಾ ಎದುರಲ್ಲೇ ಡ್ರೆಸ್​ ಚೇಂಜ್​ ಮಾಡಿದ್ರಾ ಕಾಜೋಲ್​? ನೆಟ್ಟಿಗರ ದಾರಿ ತಪ್ಪಿಸಿದ ಡೀಪ್​ಫೇಕ್ ವಿಡಿಯೋ

ನವೆಂಬರ್​ 30ರ ರಾತ್ರಿ ‘ಕಾಪಿ ವಿತ್​ ಕರಣ್​’ ಕಾರ್ಯಕ್ರಮದ ಹೊಸ ಸಂಚಿಕೆ ಪ್ರಸಾರ ಆಗಲಿದೆ. ‘ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​’ ಒಟಿಟಿಯಲ್ಲಿ ಈ ಶೋ ಬಿತ್ತರ ಆಗುತ್ತಿದೆ. ಯಶಸ್ವಿಯಾಗಿ 7 ಸೀಸನ್​ಗಳನ್ನು ಪೂರೈಸಿರುವ ಈ ಕಾರ್ಯಕ್ರಮದ 8ನೇ ಸೀಸನ್​ ಈಗ ಪ್ರಸಾರ ಆಗುತ್ತಿದೆ. ಈ ಶೋನಲ್ಲಿ ಕರಣ್​ ಜೋಹರ್​ ಅವರು ಹಲವು ವಿವಾದಾತ್ಮಕ ಪ್ರಶ್ನೆಗಳನ್ನು ಕೇಳುತ್ತಾರೆ. ಹಾಗಾಗಿ ಕೆಲವು ಸೆಲೆಬ್ರಿಟಿಗಳು ಈ ಶೋಗೆ ಬರಲು ಹಿಂದೇಟು ಹಾಕುತ್ತಾರೆ. ಈ ಮೊದಲು ರಣಬೀರ್​ ಕಪೂರ್​ ಅವರು ಕಟು ಮಾತುಗಳಿಂದ ಟೀಕೆ ಮಾಡಿದ ವಿಡಿಯೋ ವೈರಲ್​ ಆಗಿತ್ತು.

ಇದನ್ನೂ ಓದಿ: ಕಾಜೋಲ್ ಬಟ್ಟೆ ಬದಲಿಸುತ್ತಿರುವ ನಕಲಿ ವಿಡಿಯೋ ವೈರಲ್

8ನೇ ಸೀಸನ್​ನಲ್ಲಿ ರಣವೀರ್​ ಸಿಂಗ್​ ಮತ್ತು ದೀಪಿಕಾ ಪಡುಕೋಣೆ ಅವರು ಜೊತೆಯಾಗಿ ಕಾಣಿಸಿಕೊಂಡರು. ಈ ವೇಳೆ ದೀಪಿಕಾ ಪಡುಕೋಣೆ ಅವರು ತಮ್ಮ ಹಳೇ ರಿಲೇಷನ್​ಶಿಪ್​ ಬಗ್ಗೆ ಬಾಯಿ ಬಿಟ್ಟಿದ್ದರು. ರಣವೀರ್​ ಸಿಂಗ್​ ಜೊತೆ ಡೇಟಿಂಗ್ ಮಾಡುತ್ತಿರುವಾಗಲೇ ಬೇರೆ ಪುರುಷರ ಜೊತೆ ಸಂಪರ್ಕದಲ್ಲಿ ಇದ್ದೆ ಎಂದು ಹೇಳಿಕೊಂಡಿದ್ದಕ್ಕೆ ಅವರನ್ನು ನೆಟ್ಟಿಗರು ಟ್ರೋಲ್​ ಮಾಡಿದ್ದರು. ಹಾಗಂತ ಆ ಟ್ರೋಲ್​ಗಳಿಗೆ ದೀಪಿಕಾ ಅವರಾಗಲಿ, ರಣವೀರ್​ ಸಿಂಗ್​ ಅವರಾಗಲಿ ತಲೆ ಕೆಡಿಸಿಕೊಳ್ಳಲಿಲ್ಲ. ಈಗ ರಾಣಿ ಮುಖರ್ಜಿ ಮತ್ತು ಕಾಜೋಲ್​ ಅವರ ಸಂಚಿಕೆಯಿಂದ ಯಾವ ವಿವಾದ ಹುಟ್ಟಿಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.